ಬುಡಾಪೆಸ್ಟ್ ಡಾನ್ಯೂಬ್ಮ ತ್ತು ನಾಲಿಗೆಯಿಲ್ಲದ ಸಿಂಹಗಳು. ಗಜಗಾತ್ರದ ನಾಲ್ಕು ನಾಲಿಗೆಯಿಲ್ಲದ ಸಿಂಹಗಳು ಡಾನ್ಯೂಬ್ ನದಿಯ ಚೇನ್ ಬ್ರಿಜ್ ಮೇಲಿನ ನಾಲ್ಕೂ ನಿಟ್ಟಿನಲ್ಲಿ ಭವ್ಯವಾಗಿ ಕೂತು ಹೋಗುಬರುವವರನ್ನೇ ದಿಟ್ಟಿಸುತ್ತಿವೆಯಲ್ಲ ಅನಿಸಿ ಇದೇನಿದು? ಆ ಸಿಂಹಗಳ ಜಿಹ್ವಾರಹಿತ ಕಥನದ ಹಿಂದೇನಿರಬಹುದು? ಎಂದು ನಾನು ಕೆದಕಿದೆ. ನದೀತಟದ ಎರಡು ಬದಿಗಳನ್ನು ಬೆಸೆಯಲು ಸೇತುವೆ ಕಟ್ಟೋಣ ಸಹಜ ಅಲ್ಲವೇ? ಹಾಗೆ ಬುಡಾ ಮತ್ತು ಪೆಸ್ಟ್ ಎಂಬ ನಗರಗಳನ್ನು ಒಂದು ಮಾಡಲು ಅಲ್ಲಿನ ಡಾನ್ಯೂಬ್ ನದಿಯ ಮೇಲೆ ಚೇನ್ ಹೆಸರಿನ ಸೇತುವೆ ಎದ್ದು ನಿಂತಿತು. […]
