Need help? Call +91 9535015489

📖 Print books shipping available only in India. ✈ Flat rate shipping

ಊರಿನ ಹೆಸರಿನಲ್ಲೇನಿದೆ?

ಹೆಸರಿನಲ್ಲೇನಿದೆ?…..ಈ ಜನಪ್ರಿಯ ಉಲ್ಲೇಖ ಎಲ್ಲರೂ ಕೇಳಿರಬಹುದು.
ಹೆಸರು ಕೇವಲ ಮನುಷ್ಯನನ್ನು, ವಸ್ತುವನ್ನು ಅಥವಾ ಸ್ಥಳ ಗುರುತಿಸಲು ಬಳಸುವ ನಾಮಪದವಲ್ಲ. ಗುಲಾಬಿ ಹೂವನ್ನು ಬೇರೊಂದು ಹೆಸರಿನಿಂದ ಕರೆದರೂ ಅದರ ಸುವಾಸನೆ ಬದಲಾಗಲ್ಲ……ಆದರೆ ಯಾರಿಗಾದರು ಗುಲಾಬಿ ಹೂವು ಎಂದ ಕೂಡಲೇ ನೆನಪಾಗುವ ಸುವಾಸನೆ ಒಂದೇ…..ಇದು ಹೆಸರಿನ ಪ್ರಭಾವ.

ಹೆಸರು ಸರಿಯಾಗಿ ಬಳಸದಿದ್ದರೆ ಕ್ರಮೇಣ ಅದರ ಬಳಕೆ ಮತ್ತು ಅರ್ಥ ಎರಡೂ ಬದಲಾಗಿ ಅಪಾರ್ಥಕ್ಕೆ ಎಡೆ ಮಾಡಿಕೊಡುತ್ತದೆ. ನಮ್ಮ ಕನ್ನಡದ ಹೆಸರಾಂತ ಹಾಸ್ಯ ಕಲಾವಿದ ಪ್ರಾಣೇಶ್ ಅವರು ತಿಳಿಸುವ ಹಾಸ್ಯ ಪ್ರಸಂಗ ಎಲ್ಲರಿಗೂ ಗೊತ್ತಿರಬಹುದು, ಅವರು ಹೆಸರಿನ ಬಗ್ಗೆ ಮಾತಾಡುತ್ತ ಕೊಡುವ ಉದಾಹರಣೆ – ಮಂದಾಕಿನಿ ಹೆಸರು ಮೊಟಕು ಆಗಿ ‘ಮಂದಿ’ ಆದದ್ದು ಹಾಗು ಜನ ಅವಳ ಮಕ್ಕಳನ್ನು ‘ಮಂದಿ ಮಕ್ಕಳು’ ಎನ್ನುವದು ಎಲ್ಲರೂ ಕೇಳಿರಬಹುದು. ಹಾಗೆಯೇ ಮಹಾತ್ಮಾ ಗಾಂಧಿ ರಸ್ತೆ ಎಂ ಜಿ ರಸ್ತೆ ಎಂದೇ ಪ್ರಸಿದ್ಧ. ಗಾಂಧಿ ಅವರ ಹೆಸರು ಶತಮಾನಗಳ ತನಕ ಜನರಿಗೆ ನೆನಪಿರಲು, ಅವರ ಆದರ್ಶ ಪಾಲಿಸಲು ರಸ್ತೆಗೆ ಅವರ ಹೆಸರು ಇಟ್ಟಿರುವುದು ಆದರೆ ಕೆಲವೇ ದಶಕಗಳಲ್ಲಿ ನಾವು ಅವರ ಹೆಸರನ್ನು ಮರೆತು ಅದನ್ನು ಎಂ ಜಿ ರಸ್ತೆ ಎನ್ನುತ್ತಿದ್ದೇವೆ.

ಇಷ್ಟು ಪೀಠಿಕೆಗೆ ಕಾರಣ, ಇತ್ತೀಚಿಗೆ ಐರ್ಲೆಂಡ್ ದೇಶದ ಡಬ್ಲಿನ್ ನಗರಕ್ಕೆ ಹೋಗುತ್ತಿದ್ದೆ ಆಗ ಕಂಡ ಸಂಕೇತದ ಮೇಲೆ ಬರೆದ ಊರಿನ ಹೆಸರಿನ ಚಿತ್ರ ಈ ಲೇಖನದಲ್ಲಿ ಲಗ್ಗತಿಸಿದ್ದೇನೆ. ‘ಕಿಲ್’ ಊರಿನ ಹೆಸರು..ಈ ಊರಿನ ವಿಚಿತ್ರ ಹೆಸರು ನೋಡಿ ವಿಚಾರ ಮಾಡಿದೆ.. ..ಊರಿನ ಹೆಸರಿನಲ್ಲೇನಿದೆ? ಒಂದು ಸ್ಥಳದ ಹೆಸರಿನ ಹಿನ್ನಲೆ ಏನು?

ಇತ್ತೀಚೆಗೆ ಕರ್ನಾಟಕದ ನಗರಗಳ ಹೆಸರನ್ನು ಬದಲಿಸಿದರು, ಹಾಗೆಯೇ ಭಾರತದ ಕೆಲವು ಮಹಾನಗರಗಳ ಹೆಸರನ್ನೂ ಬದಲಿಸಿದ್ದಾರೆ, ಬದಲಾದ ಮಹಾನಗರದ ಹೆಸರಿನ ಹಿನ್ನಲೆ ತಿಳಿಯಲು ಪ್ರಯತ್ನಿಸೋಣ

ಬಾಂಬೆ ಇಂದ ಮುಂಬೈ – ಭಾರತದ ಪ್ರಮುಖ ನಗರಗಳಲ್ಲಿ ಒಂದು ಮುಂಬೈ. ಇದಕ್ಕೆ ಮುಂಬೈ ಹೆಸರು ಬರುವ ಮುನ್ನ ಇದರ ಹೆಸರು ಬಾಂಬೆ ಎಂದಿತ್ತು. ಬಾಂಬೆ ಹೆಸರು ಬೊಮ್ಬೈಮ್ (Bombaim) ಇಂದ ಬಂದದ್ದು, ಇದರ ಅರ್ಥ ‘ಒಳ್ಳೆಯ ಕೊಲ್ಲಿ ‘. ಸ್ವಾತಂತ್ರದ ಪೂರ್ವದ ಈ ಆಂಗ್ಲ ಹೆಸರನ್ನು ಬದಲಿಸಿ ಇದನ್ನು ಮುಂಬೈ ಎಂದು ಬದಲಿಸಿದರು, ಮುಂಬೈ ಬಂದದ್ದು ಮುಂಬಾ ದೇವಿಯ ಹೆಸರಿನಿಂದ.

ಹಾಗೆಯೇ ಚೆನ್ನೈ, ಕೋಲ್ಕತ್ತಾ ಬದಲಾದ ನಗರಗಳ ಹೆಸರುಗಳು.

ಇತ್ತೀಚೆಗೆ ಊರಿನ ಹೆಸರು ಬದಲಿಸಿ ಇಂಗ್ಲಿಷ್ ಉಚ್ಛಾರದ ಹೆಸರಿನಿಂದ ಕನ್ನಡದ ಹೆಸರನ್ನು ಇಡುತ್ತಿದ್ದಾರೆ..
ಉದಾಹರಣೆ:

ಬಿಜಾಪುರ – ವಿಜಾಪುರ (ವಿಜಯಪುರದ ಇನ್ನೊಂದು ಪ್ರಕಾರ ಇರಬಹುದು)
ಗುಲ್ಬರ್ಗ – ಕಲಬುರ್ಗಿ
ಶಿಮೊಗ್ಗ – ಶಿವಮೊಗ್ಗ

ಊರಿನ ಹೆಸರು ಅದರ ಇತಿಹಾಸ, ಪ್ರಾಮ್ಯುಖ್ಯತೆ ಇಲ್ಲವೇ ಬೇರೆ ಯಾವುದೇ ರೀತಿ ಇಂದ ಅದರ ವೈಶಿಷ್ಟ್ಯ ತೋರಿಸುತ್ತಿದ್ದರೆ ಅದರ ಬದಲಾವಣೆ ಸಂತೋಷ ತರುತ್ತದೆ….

ಎಂ ಜಿ ರಸ್ತೆ ಇಲ್ಲವೇ ಡಿ ವಿ ಜಿ ರಸ್ತೆ ಹಣೆಬರಹ ಯಾವ ಊರಿಗೂ ಅಥವಾ ರಸ್ತೆಗೂ ಬಾರದಂತೆ ಇರಲಿ….

4 comments

  1. ಲೇಖನ ಅರ್ಥವತ್ತಾಗಿದೆ, ಪ್ರಮೋದರೇ.
    ಹೆಸರಿನಲ್ಲೂ ಏನೋ ಇದೆ ಎಂದು ತೋರಿಸಲು ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಕುಲಪರೋಹಿತ ‘ಅಲೂರು ವೆಂಕಟರಾಯರ ರಸ್ತೆ’ಯನ್ನು ಟಿಪ್ಪು ಸುಲ್ತಾನ್ ಅರಮನೆ ರಸ್ತೆ ಎಂದು ಈಗ ಸದ್ದಿಲ್ಲದೆ ಬದಲಾಯಿಸಲಾಗುತ್ತಿದೆ.

  2. Sheshgiri

    ಬಿಜಾಪುರ ಈಗ ವಿಜಯಪುರ ಎಂದು ಸರಕಾರಿ ದಾಖಲೆಗಳಲ್ಲಿ ಬದಲಾವಣೆ ಆಗಿದೆ. ಇದೆ ರೀತಿ ಅನೇಕ ಸ್ಥಳಗಳ ಹೆಸರುಗಳನ್ನು ಸ್ಥಳಿಯ ಕರಣಗಳಿಂದಗಿಯು ಬದಲಾಯಿಸುತ್ತಿದ್ದಾರೆ.

  3. ಪ್ರಮೋದರವರಿಗೆ ವಂದನೆಗಳು
    ಹೆಸರನಲ್ಲೇನಿದೆ ಚಿತ್ರ ಮತ್ತು ಅದರ ಮಾಹಿತಿ ಸರಳವಾಗಿ ಚೆನ್ನಾಗಿ ನಿರೂಪಿತವಾಗಿದೆ, ಅವರವರ ಊರಿನ ಕುರಿತು ಕೆಲವರೆ ಬರೆದರೂ ಅದೊಂದು ಬೃಹತ್ತಾದ ಹೊತ್ತಿಗೆಯಾಗಬಹುದು.

  4. ಧನ್ಯವಾದಗಳು

Leave a Reply

This site uses Akismet to reduce spam. Learn how your comment data is processed.