Your Cart

Need help? Call +91 9535015489

📖 Print books shipping available only in India. ✈ Flat rate shipping

ಬಣ್ಣಿಸಲಾಗದ ಸಂತೆ

ಬಣ್ಣಿಸಲಾಗದ ಸಂತೆ ಒಂದು ಗೊತ್ತಾದ ಸ್ಥಳದಲ್ಲಿ ವಾರದ ಒಂದು ನಿರ್ದಿಷ್ಟ ದಿನ, ಒಂದು ದಿನ, ಒಂದು ನಿರ್ದಿಷ್ಟ ಸ್ಥಳದಲ್ಲಿ ಜನರು ಒಂದುಗೂಡಿ ತಾವು ಬೆಳೆದ ಅಥವಾ ಉತ್ಪಾದಿಸಿದ ಉತ್ಪನ್ನಗಳನ್ನು ಮಾರುವ, ಇಲ್ಲವೇ ಕೊಳ್ಳುವ ಆರ್ಥಿಕ ವ್ಯವಸ್ಥೆಯೇ ಸಂತೆ. ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಸಂತೆ ಜರುಗುತ್ತಿದ್ದುದಕ್ಕೆ ಶಾಸನಾಧಾರಗಳಿವೆ. ‘ಸಂತೆ ಹೊತ್ತಿಗೆ ಮೂರು ಮೊಳ ನೇದ ಹಾಗೆ….!’ ‘ಚಿಂತಿಲ್ಲದ ಮುಕ್ಕನಿಗೆ ಸಂತೇಲೂ ನಿದ್ದೆ…! ಎಂಬ ಗಾದೆಗಳಂತೆ, ‘ಸಂತೆ ಜನಕೆಲ್ಲ ಒಂದೇ ಹಾಸಿಗೆ ಒಂದೇ ಹೊದಿಕೆ’ (ಭೂಮಿ-ಆಕಾಶ), ‘ಸಂತ್ಯಾಗ್ ತರ್ತಾರೆ ಮನ್ಯಾಗ್ […]

ಬೆಚ್ಚಿಸಿದ ಬೆಂಕಿಯುಂಡೆ

ಬೆಚ್ಚಿಸಿದ ಬೆಂಕಿಯುಂಡೆ ಕಲ್ಲಾರೆ ಏರು…! ಹೀಗೆಂದರೆ ಎಂಥಾ ಧೈರ್ಯಸ್ಥನ ಎದೆಯಲ್ಲೂ ಭತ್ತ ಕುಟ್ಟಿದ ಅನುಭವ, ಪೇಟೆಗೆ ಹೋಗುವ ಏರು ದಾರಿ; ಸುತ್ತ ಕಲ್ಲು ಬಂಡೆಯ ಹಾಸಿನಿಂದ ಕೂಡಿ ಕಲ್ಲಾರೆ ಏರು ಎಂದೇ ಹೆಸರಾಯಿತು. ಇದು ಪ್ರಸಿದ್ಧಿಗೆ ಬಂದದ್ದು ತನ್ನ ವಿಶಿಷ್ಟ ಕಲ್ಲು ಬಂಡೆಯ ಹಾಸಿನಿಂದಲ್ಲ; ಬದಲಿಗೆ ತನ್ನ ಒಡಲಿಗೆ ಅಡಗಿಸಿಕೊಂಡಿದ್ದ ಭೂತ-ದೆವ್ವಗಳ ರೋಚಕ ಕಥೆಗಳಿಂದ ಜೊತೆಗೆ ಒಬ್ಬೊಬ್ಬರಿಗೆ ಒಂದೊಂದು ತೆರನಾದ ವಿನೋದ ಹಾಗೂ ವಿಚಿತ್ರ ಎನ್ನಿಸುವ ಅನುಭವ ಅಲ್ಲಿ ಉಂಟಾದ್ದರಿಂದ ಎಂದರೆ ಅದು ಸುಳ್ಳಲ್ಲ. ನೆರಳಿಗೆ ಅಂಜುವ […]

ಹಲಗೆ ಹಣ್ಣು

ಹಲಗೆ ಹಣ್ಣು ಬೇಸಿಗೆಯೆಂದರೆ ಮಲೆನಾಡಿನಲ್ಲಿ ಕಾಡುಹಣ್ಣುಗಳ ಸುಗ್ಗಿ, ನಾನಾ ತರಹದ ಹಣ್ಣುಗಳ ಖಜಾನೆ, ಮುಳ್ಳುಣ್ಣು, ಕೌಳಿಹಣ್ಣು, ಗುಡ್ಡೇಗೇರು, ಕಾಡುಮಾವು, ಕಾಕೇ ಹಣ್ಣು, ಬುಕ್ಕೆ, ನೇರಳೆ, ಹಲಸು, ತುಂಬ್ರಿ, ಸಂಪಿಗೆ ಹಣ್ಣು, ಕೇಪುಳ ಹಣ್ಣು, ನೆಲ್ಲಿ, ರಂಜಲು, ಪುನ್ನೇರಲು-ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈ ಪ್ರಕೃತಿದತ್ತ ಹಣ್ಣುಗಳಿಗೆ ಅವುಗಳದ್ದೇ ಆದ ವಿಶಿಷ್ಟ ರುಚಿ, ವಿಶೇಷವಾದೊಂದು ಪರಿಮಳ, ಕೆಲವು ಸಿಹಿ, ಕೆಲವು ಹುಳಿ, ಅತ್ತ ಸಿಹಿಯೂ ಅಲ್ಲದ, ಇತ್ತ ಹುಳಿಯೂ ಅಲ್ಲದ ಮಿಶ್ರ ರುಚಿಯ ಹಣ್ಣೊಂದಿದೆ. ಅದು ಹಲಗೆ ಹಣ್ಣು. […]

ಪೆಟ್ಲು ಎಂಬ ಆಟಿಕೆ

ಪೆಟ್ಲು ಎಂಬ ಆಟಿಕೆ ಗ್ರಾಮೀಣ ಮನರಂಜನೆಯ ಆಟಿಕೆಗಳಲ್ಲಿ ‘ಪೆಟ್ಲು’ಎಂಬ ಆಟದ ಸಾಮಾನು ಮಕ್ಕಳಿಗೆ ಬಹಳ ಖುಷಿ ಕೊಡುವ ಒಂದು ಪರಿಕರ. ಒಂದು ಅಡಿ ಉದ್ದ, ನಾಲ್ಕು, ನಾಲ್ಕೂವರೆ ಇಂಚು ವ್ಯಾಸದ ಚಿಕ್ಕ ಬಿದಿರು ಅಚಿಡಿಯಿಂದ ತಯಾರಾಗುವ ಪೆಟ್ಲು ಒಂದು ರೀತಿಯಲ್ಲಿ ಬಂದೂಕಿನಂತೆ ಕೆಲಸ ಮಾಡುತ್ತದೆ. ಇದರಲ್ಲಿ ಎರಡು ಭಾಗಗಳಿರುತ್ತವೆ. ಒಂದು, ಬಿದಿರಿನ ಕೊಳವೆಯ ಭಾಗ, ಮತ್ತೊಂದು, ಮರದಿಂದ ತಯಾರಾದ ಜಗ ಎಂದು ಕರೆಯುವ, ಒಂದು ತೆಳುವಾದ ಕಡ್ಡಿ. ಇದಕ್ಕೆ ಹಿಡಿಕೆಯನ್ನು ಅಳವಡಿಸಿರುತ್ತಾರೆ. ಮೊದಲು ಬಿದಿರಿನ ಕೊಳವೆಯ ಮುಂಭಾಗದಲ್ಲಿ […]

ಎಲೆಲೇ ಎಲೆ ಕೀಟ…!

ಎಲೆಲೇ ಎಲೆ ಕೀಟ…! ಪ್ರಕೃತಿಯ ಒಡಲೊಳಗೆ ಅನೇಕ ಅಚ್ಚರಿಗಳು ಅಡಗಿಕೊಂಡಿವೆ. ಆಗೀಗ ಅವು ನಮ್ಮ ಕಣ್ಣಿಗೆ ಬಿದ್ದು ನಮ್ಮನ್ನು ವಿಸ್ಮಯಗೊಳಿಸುತ್ತವೆ. ಈ ಚಿತ್ರದಲ್ಲಿ ಎಲೆಯಂತೆ ತೋರುವ ವಸ್ತು ಎಲೆಯಲ್ಲ. ಇದೊಂದು ಹಸಿರು ಎಲೆ ಕೀಟ. (ಆಂಗ್ಲ ಭಾಷೆಯಲ್ಲಿ ಇದಕ್ಕೆ ವಾಕಿಂಗ್ ಲೀಫ್ ಎನ್ನುತ್ತಾರೆ) ಮೊದಲ ನೋಟಕ್ಕೆ ಎಲೆಯೆಂಬ ಭ್ರಮೆ ಹುಟ್ಟಿಸುತ್ತದೆ. ಅನೇಕ ಕೀಟಗಳಿಗೆ ತಾವು ವಾಸಿಸುವ ಪರಿಸರಕ್ಕೆ ಬೇಕಾದ ರೂಪ ಪಡೆದು ಅಲ್ಲೇ ಬೆರೆತು ಜೀವಿಸುವ ಕಲೆ ಸಿದ್ಧಿಸಿರುತ್ತದೆ. ಹೀಗಾಗಿ ಎಲೆಗಳಿಗೂ ಇವಕ್ಕೂ ವ್ಯತ್ಯಾಸ ತಿಳಿಯುವುದಿಲ್ಲ. ಎಲೆಯಂತೆ […]

ದೂರದೊಂದು ತೀರದಿಂದ ತೇಲಿ ಪಾರಿಜಾತ ಗಂಧ

ದೂರದೊಂದು ತೀರದಿಂದ ತೇಲಿ ಪಾರಿಜಾತ ಗಂಧ…! ಪಾರಿಜಾತ; ನಮ್ಮ ಪುರಾಣೇತಿಹಾಸಗಳಲ್ಲಿ ಪ್ರಸ್ತಾಪಗೊಂಡಿರುವ ಒಂದು ವೃಕ್ಷ. ಸಮುದ್ರ ಮಂಥನ’ದ ಸಮಯದಲ್ಲಿ ಉದ್ಭವಿಸಿದ್ದು ಅಂತ ಪ್ರತೀತಿ. ಇಂತಿಪ್ಪ ಪಾರಿಜಾತದ ಬಗ್ಗೆ ಅನೇಕ ಸ್ವಾರಸ್ಯಕರ ಕಥೆಗಳಿವೆ. ಅದರಲ್ಲಿ ಒಂದು ಕಥೆ ಹೀಗಿದೆ; ಹಿಂದೆ ಅಂದರೆ ಬಹು ಹಿಂದೆ, ಪಾರಿಜಾತಕ ಎಂಬ ಹೆಸರಿನ ಒಬ್ಬ ರಾಜಕುಮಾರಿ ಸೂರ್ಯನನ್ನು ಪ್ರೀತಿಸುತ್ತಿದ್ದಳು, ಒಮ್ಮೆ ತನ್ನ ಪ್ರೀತಿಯನ್ನು ಆತನಲ್ಲಿ ನಿವೇದನೆ ಮಾಡಿಕೊಂಡಾಗ ಸೂರ್ಯ ಆಕೆಯ ಪ್ರೀತಿಯನ್ನು ನಿರಾಕರಿಸಿದನಂತೆ ನೊಂದ ಆಕೆ ತನ್ನನ್ನೇ ಅಗ್ನಿಗೆ ಆಹುತಿಮಾಡಿಕೊಂಡಳಂತೆ ಆ ಬೂದಿಯಿಂದ […]

ಸಂಕಟ ಮರೆಯಬೇಕೆಂದರೆ ಕೆಲಸದಲ್ಲಿ ಮೈಮರೆಯಬೇಕು!

ಸಂಕಟ ಮರೆಯಬೇಕೆಂದರೆ ಕೆಲಸದಲ್ಲಿ ಮೈಮರೆಯಬೇಕು! ಕುರುಕ್ಷೇತ್ರದ ಮಹಾ ಯುದ್ಧದಲ್ಲಿ ಅಪಾರ ಸೈನಿಕರು ಸೇನಾಧಿಪತಿಗಳು ಹಾಗೂ ಅನೇಕ ಸಾಮಂತ ರಾಜರು ಸತ್ತು ಧರೆಗುರುಳಿದ್ದರು. ಕುರುಕುಲದವರ ಶವಗಳನ್ನು ಅಂತಿಮ ಸಂಸ್ಕಾರಕ್ಕೋಸ್ಕರ ಹುಡುಕುತ್ತಿದ್ದ ಯುಧಿಷ್ಟಿರನಿಗೆ ಯುಧ್ಧದ ಭೀಭತ್ಸ ದೃಶ್ಯ ಕಂಡು ಕರುಳು ಕಿವಿಚಿದಂತಾಯಿತು. ಯುದ್ಧದಲ್ಲಿ ಭಳಕೆಯಾದ ಆನೆ, ಕುದುರೆ ಮುಂತಾದ ಪ್ರಾಣಿಗಳ ದೇಹಗಳು ಛಿದ್ರ ಛಿದ್ರವಾಗಿ ಎಲ್ಲೆಡೆ ಬಿದ್ದಿದ್ದವು. ಯಾರ ದೇಹ ಯಾರದ್ದೆಂದು ಗುರುತಿಸಲಾಗದಷ್ಟು ವಿಕಾರಗೊಂಡು ನೆತ್ತರ ಕೆಸರಲ್ಲಿ ಹೂತ್ತಿದ್ದವು. ರಥದ ಪತಾಕೆಗಳು ಹರಿದು ಹೋಗಿ ಭೋರೆಂದು ಬೀಸುವ ಗಾಳಿಗೆ ಅತ್ತಿಂದಿತ್ತ […]

ಹಳದಿ ಪಟ್ಟಿಯ ಹಾರ್ನೆಟ್

ಹಳದಿ ಪಟ್ಟಿಯ ಹಾರ್ನೆಟ್….! ಪ್ರಾಣಿ-ಪಕ್ಷಿಗಳು ವಾಸಕ್ಕಾಗಿ ವಸತಿಯನ್ನು ನಿರ್ಮಿಸಿಕೊಳ್ಳುವುದು ಸಹಜ.  ಹೀಗೆ ವಸತಿ ನಿರ್ಮಿಸಿಕೊಳ್ಳುವ ಕೀಟ ಜಗತ್ತಿನ ಕಣಜದ ಗೂಡು ವಿಸ್ಮಯಕಾರಿಯಾದ್ದು! ಗೀಜಗನ ಹಕ್ಕಿಯ ಗೂಡಿನಷ್ಟೇ ಸೋಜಿಗ ಅರ್ಧದಿಂದ ಮೂರು ಅಡಿ ಸುತ್ತಳತೆಯ ಗೂಡು ನಿರ್ಮಿಸುವ ಕಣಜ ತನ್ನ ಕುಟುಂಬದ ಸಂಖ್ಯೆಗನುಗುಣವಾಗಿ ಗೂಡನ್ನು ನಿರ್ಮಿಸಿಕೊಳ್ಳುತ್ತದೆ. ಸಗಣಿ, ಸೂಕ್ತವಾದ ಮೆದು ಮಣ್ಣನ್ನು ಉಂಡೆಯ ರೂಪದಲ್ಲಿ ಕಟ್ಟಿ ಹೊತ್ತು ತಂದು, ಬಾಯಿ ಮೂಲಕ ಹೊರಡುವ ಜೊಲ್ಲನ್ನು ಬಳಸಿ ಕಟ್ಟಿದ ಗೂಡು ನೋಡಲು ಚೆಂದ. ನೆಲ ಮನೆಯ ಮಾಡು ಎತ್ತರದ ಮರದ […]

ಸದ್ಯದ ಜರೂರತ್ತು

ಸದ್ಯದ ಜರೂರತ್ತು….. ಹಿಂದೆ ಒಂದು ಸಂದರ್ಭದಲ್ಲಿ ಗಂಧರ್ವರ ಜತೆಗಿನ ಕಾದಾಟದಲ್ಲಿ ಕೌರವರು ಸೋತು ಸೆರೆಸಿಕ್ಕಿ ಸಂಕಷ್ಟದಲ್ಲಿದ್ದರು. ಸುದ್ದಿ ತಿಳಿದ ಧರ್ಮರಾಯ ತಕ್ಷಣ ತನ್ನ ತಮ್ಮಂದಿರನ್ನು ಕರೆದು ಕೌರವರ ಪರವಹಿಸಿ ಹೋರಾಡಿ ಅವರನ್ನು ಸೆರೆಯಿಂದ ಬಿಡಿಸಿ ತರುವಂತೆ ಹೇಳಿದ. ‘ಕೌರವರಾದರೋ ನಮ್ಮ ವಿರೋಧಿಗಳು, ಸ್ವಯಂ ಕೃತ ಅಪರಾಧದಿಂದ ಅವರಾಗಿಯೇ ಸಂಕಷ್ಟಕ್ಕೆ ಸಿಲುಕಿಕೊಂಡಾಗ ಅವರ ಪರ ವಹಿಸುವುದು ಎಷ್ಟು ಸರಿ?’ ಎಂಬ ಜಿಜ್ಞಾಸೆ ತಮ್ಮಂದಿರಾ ಕೇಳಿ. ನಮ್ಮ ನಮ್ಮಲ್ಲೇ ಕಲಹ ಬಂದಾಗ ನಾವು ಐದು ಜನ, ಕೌರವರು ನೂರು ಜನ […]