Your Cart

Need help? Call +91 9535015489

📖 Print books shipping available only in India. ✈ Flat rate shipping

ಊರ ಅನುಭೂತಿ ಮೂಡಿಸುವ ಧಾರವಾಡ ಬ್ರಾಂಡ್‌ ಪರಿಕಲ್ಪನೆ

ಊರ ಅನುಭೂತಿ ಮೂಡಿಸುವ ಧಾರವಾಡ ಬ್ರಾಂಡ್‌ ಪರಿಕಲ್ಪನೆ- ಶೈಲಜಾ ಹೂಗಾರ ಇಂಟ್ರೊ: ಹುಬ್ಬಳ್ಳಿ–ಧಾರವಾಡದವರು ವರ್ಗವಾಗಿ ಬೇರೆ ಯಾವುದಾದರೂ ರಾಜ್ಯ ಅಥವಾ ದೇಶಕ್ಕೆ ಹೋದಾಗಲೂ ಇಲ್ಲಿನ ಏನೆಲ್ಲವನ್ನು ಮಿಸ್‌ ಮಾಡಿಕೊಳ್ಳುವುದು ಇದೆ. ಹಾಗೇ ಹಳೆಯ ಸಂಗ್ಯಾಬಾಳ್ಯಾ ನಾಟಕದ ಝಲಕ್‌ಅನ್ನು ನಮ್ಮ ಮುಂದಿನ ಪೀಳಿಗೆಗೂ ತೋರಬಯಸಿದರೆ ಅದೂ ಸಾಧ್ಯ. ಬರೀ ಈ ವೆಬ್‌ಸೈಟ್‌ಗೆ ಹೋಗಿ ನಾಟಕ ಡೌನ್‌ಲೋಡ್‌ ಮಾಡಿ. ನಾವು ಮರೆತ ನಮ್ಮ ದೇ ಭಾಷೆಯ ಸೊಗಡಿನ ಡೈಲಾಗ್‌ ಕೇಳುತ್ತ ದೃಶ್ಯಗಳ ಸೊಬಗು ಸವಿಯುತ್ತ, ಪೂರ್ತಿ ಅರ್ಥವಾಗದೆ ಕಣ್‌ ಕಣ್‌ಬಿಡುವ […]

ವಾಸ್ತು ಅಂದ್ರ ಮನೆ-ಮನಸ್ಸು ಮುರಿಯುದಲ್ಲ

ವಾಸ್ತು ಅಂದ್ರ ಮನೆ-ಮನಸ್ಸು ಮುರಿಯುದಲ್ಲ                                                                        – ರಘೋತ್ತಮ್ ಕೊಪ್ಪರ್ ವಾಸ್ತು ಶಾಸ್ತ್ರ ಹಾಗೂ ಅದರ ಅನ್ವಯಿಕೆಯ ನಿಯಮ, ವಿಧಿ ವಿಧಾನಗಳನ್ನು ಕುರಿತು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜಿಜ್ಞಾಸೆ ನಡೆದಿದೆ. ಈಗಾಗಲೇ ಎಷ್ಟೋ ಜನರು ಇಮಾರತುಗಳನ್ನು ಕಟ್ಟಿದ ಮೇಲೆ ಕೆಡವಿದ್ದಾರೆ. ಅದಕ್ಕೆ ಕಾರಣ ವಾಸ್ತು ಕುರಿತು ಅನೇಕ ಆತಂಕಕಾರಿ ಭಾವನೆಗಳನ್ನು ಬೆಳೆಸಿಕೊಂಡು ಕಳವಳ, ಭೀತಿಗೊಂಡು ಯಾರೋ ಏನೋ ಹೇಳಿದರೆಂದು ಮನ ಕೆಡಿಸಿಕೊಂಡು ಮನೆ ಕೆಡವಿದವರು ಹಲವರು.  ತಮ್ಮ ವೃತ್ತಿಯಲ್ಲಿ ಕಂಟಕ ಬರುತ್ತಿದೆ, ವ್ಯಾಪಾರದಲ್ಲಿ ನಷ್ಟವಾಗಿದೆ, ಆರೋಗ್ಯದಲ್ಲಿ ಸಮಸ್ಯೆಯುಂಟಾಗಿದೆ […]

ಸುಂದರ ನಟಿ ಸಾಧನಾ ಇನ್ನು ಬರಿ ನೆನಪು

ಸುಂದರ ನಟಿ ಸಾಧನಾ ಇನ್ನು ಬರಿ ನೆನಪು ಕಳೆದ ಶತಮಾನದ ಆರನೆ ದಶಕದಲ್ಲಿ ತನ್ನ ಸೌಂದರ್ಯ ಮತ್ತು ಅಭಿನಯದಿಂದ ಮೋಡಿ ಮಾಡಿದ ಹಿಂದಿ ಚಲನಚಿತ್ರರಂಗದ ಸುಂದರಿ ಸಾಧನಾ ಇನ್ನು ಬರಿ ನೆನಪು ಮಾತ್ರ. ತೀವ್ರವಾದ ಕ್ಯಾನ್ಸರ್ ಕಾಯಿಲೆಯಿಂದಾಗಿ ನಿಧನಳಾಗಿದ್ದಾಳೆ. ತನ್ನ ೭೪ ವರ್ಷದ ಸುಧೀರ್ಘ ಪಯಣದಲ್ಲಿ ಕಾಯಿಲೆಯ ತೀವ್ರತೆಯಿಂದಾಗಿ ತನ್ನ ಫ್ಲಾಟ್ ನಲ್ಲಿ ಏಕಾಂಗಿಯಾಗಿ ಜೀವಿತಾವಧಿ ಕಳೆದು ಬದುಕಿಗೆ ವಿದಾಯ ಹೇಳಿದ್ದಾಳೆ. ತನ್ನ ರೊಮ್ಯಾಂಟಿಕ್ ಪಾತ್ರಗಳಿಂದ ಅಭಿಮಾನಿಗಳನ್ನು ರಂಜಿಸಿದ್ದ ಆಕೆ ಹಿಂದಿ ಚಿತ್ರರಂಗದ ದುರಂತ ನಾಯಕಿಯ ಪಾತ್ರದಂತೆ […]

ಸಂಗೀತ ವಿಶಾರದ ಆರ್. ಟಿ. ಹೆಗಡೆ

ಸಂಗೀತ ವಿಶಾರದ ಆರ್. ಟಿ. ಹೆಗಡೆ ಆಧ್ಯಾತ್ಮಿಕ ಶಕ್ತಿಯ ತಪೋಭೂಮಿ ಶೀಗೇಹಳ್ಳಿಯಲ್ಲಿ ಜನಿಸಿ ಸಂಗೀತ ಸಾಧಕರಾಗಿ ಬೆಳೆದವರು ಆರ್.ಟಿ.ಹೆಗಡೆ. ತಾನು ಬೆಳೆಯುತ್ತ ತನ್ನ ಸುತ್ತ ಸಂಗೀತದ ಹೊಸ ತಲೆಮಾರು ಬೆಳೆಸಿದವರು. ಇತ್ತಿಚಿಗೆ ಇಹಲೋಕ ತ್ಯಜಿಸಿದ ಶ್ರೀಯುತರ ಸಾಧನೆಯ ಅವಲೋಕನ ಇಲ್ಲಿದೆ ಸ್ವಾತಂತ್ರ್ಯ ಹೋರಾಟದಲ್ಲಿ ಜಿಲ್ಲೆ ಬಸವಳಿದ ಕಾಲವದು, ೬೦ರ ದಶಕದಲ್ಲಿಯೂ ನಮ್ಮ ಹಳ್ಳಿಗಳಿಗೆ ರಸ್ತೆ, ಸೇತುವೆ, ವಾಹನ, ವಿದ್ಯುತ್ ಸೌಕರ್ಯವಿರಲಿಲ್ಲ. ಶಾಲೆಗಳು ಆಗಷ್ಟೇ ಆರಂಭವಾಗಿದ್ದವು. ಎತ್ತಿನಗಾಡಿ ಅವಲಂಬಿತ ಜನಜೀವನ. ಕಾಲದ ಕಷ್ಟ ಏನೇ ಇರಲಿ, ಬದುಕಿಗೆ ಖುಷಿ […]

ವೈರಾಗ್ಯ ರಹಸ್ಯ

(ರಸನ=ನಾಲಗೆ) ಸಾರ ಸಂಸಾರದಾ ಸವಿದಿರುವೆ ಮೋದದಿ ಸಾಸಿರವು ಸಾರವು ಹಲವಿಹವು ರಸನವು ಮನಕುಂಟು ರಸನ ತ್ವಚೆಗುಂಟು ರಸನ ಕಿವಿಗುಂಟು ರಸನ ನಾಸಿಕಕು ರಸನ ಕಣ್ಗಳಿಗೂ ಇಹುದು ಮತ್ತೊಂದು ರಸನ ಉದರದಾ ಸ್ನೇಹಿತನು ಬಾಯಲಿಹ ರಸನ ಜಗದೆಲ್ಲ ಸಾರಕ್ಕೆ ದ್ವಾರ ಸಂಸಾರವು ಸವಿಯಲೊದಗಿದೆ ದೇಹ ರಸನ ಸೌ ಭಾಗ್ಯವು ಸಾರತೀರುವುದೋ ರಸನದಾಮತಿಯು ಕೆಡುವುದೋ ಮಾಯೆ ತಿಳಿದವನವನೆ ವೈರಾಗ್ಯ ವೀರನು

ರಜೆಯೋ ರೆಜೆ

ರಜೆಯೆನಗೆ ರಜೆಯೆನಗೆ ರಜೆಯ ನಗೆ ಹೊಮ್ಮಿದೆ ಹೇಗೆ ಉರುಳಿತೊ ಗಂಟೆ ರಜೆ ಮುಗಿದುಹೋಗಿದೆ ಕೇಶ ತೀಡುವುದಿತ್ತು ಬಣ್ಣ ನೀಡುವುದಿತ್ತು ಅಂಗಡಿಗೆ ಹೋಗಲು ಬೇಸರವು ಬಂದಿತ್ತು ಹೇಗೊ ಸಾವರಿಸಿ ನಾ ಕ್ಷೌರಿಗೆ ತಲೆಬಾಗಿ ಬಂದು ಮಜ್ಜನ ಮಾಡೆ ಹೊಟ್ಟೆ ಹಸಿದಿತ್ತು ಸದ್ದಿರದ ಅಡಿಗೆಮನೆ ಅದರೊಡತಿಯಾ ರಜೆಗೆ ತುಂಬು ಮೌನದೆ ಇಂದು ಮಂಕಾಗಿ ಕಂಡಿತ್ತು ಹತ್ತಿರದ ಹೋಟೆಲಿನ ಇಡ್ಲಿವಡೆ ಬಂದಾಯ್ತು ಕಾಪಿಮಾಡುವ ಕೆಲಸ ನನಗೆಂದೆ ಕಾದಿತ್ತು

ಕಿವಿಯಾದಳು ಹುಡುಗಿ

ನನ್ನ ಮಡದಿಯ ಕಿವಿಯು ಎನಗಾಗಿ ತೆರೆದಿಹುದು ಉಸುರುವೆನು ನಾ ಎಲ್ಲ ಉದ್ವೇಗವನ್ನು ಹೋಗಲೀ ಬಿಡು ಎಂಬ ಒಮ್ಮಾತಿನಲ್ಲೇ ಕಳೆದಿಡುವಳವಳೆಲ್ಲ ಬೇಗುದಿಯನು ಭುಜತಟ್ಟಿ ಕರಪಿಡಿದು ರಪ್ಪೆಯಲುಗಿನಲೇ ಬೇಸರವ ಹೊರಗೆಳೆದು ಗುಡಿಸಿಡುವಳು ಹೇಗೆ ಹೇಳಲಿ, ಅವಳ ಸ್ನೇಹದಾ ಮಾತುಗಳು ಉರಿವ ಮಾನಸವನ್ನು ತಣ್ಣಗಾಗಿಪುದು ಎಲ್ಲ ಗಂಡಾಳುಗಳ ಪತ್ನಿಯರು ಇಂತಿರಲಿ ಕಿಚ್ಚೊತ್ತಿ ಇರುವುದು ಸಗ್ಗದಾ ಚಾವಣಿಯು