Your Cart

Need help? Call +91 9535015489

📖 Print books shipping available only in India. ✈ Flat rate shipping

‘ಅಮೃತವರ್ಷಿಣಿ’ಯಲ್ಲಿ ಗ್ರಂಥಗಳ ಕಲರವ

‘ಅಮೃತವರ್ಷಿಣಿ’ಯಲ್ಲಿ ಗ್ರಂಥಗಳ ಕಲರವ ಮಂಗಳ ಗಂಗೋತ್ರಿಯ ಹತ್ತಿರದಲ್ಲೇ ಇರುವ ಅಸೈಗೋಳಿಯ ಈ ನಿವಾಸಕ್ಕೆ ನೀವು ಬಂದಿದ್ದಾದರೆ 15 ಸಾವಿರ ಪುಸ್ತಕಗಳು ನಿಮ್ಮನ್ನು ಸ್ವಾಗತಿಸುತ್ತವೆ. ರಾಷ್ಟ್ರಕವಿ ಗೋವಿಂದ ಪೈಗಳ ಪುಸ್ತಕ ಸಂಗ್ರಹದ ಹವ್ಯಾಸ ಎಂಥದ್ದು ಎನ್ನುವುದು ಎಲ್ಲರಿಗೂ ಗೊತ್ತು. ಅವರ ಎಲ್ಲಾ ಪುಸ್ತಕಗಳನ್ನು ಕು.ಶಿ. ಹರಿದಾಸ ಭಟ್ಟರು ಉಡುಪಿಯ ಎಂಜಿಎಂ ಕಾಲೇಜಿಗೆ ಸಾಗಿಸಿ, ಅಲ್ಲಿ ಗೋವಿಂದ ಪೈ ಸಂಶೋಧನಾ ಕೇಂದ್ರವನ್ನೂ ಸ್ಥಾಪಿಸಿ, ಪೈಗಳ ಎಲ್ಲಾ ಪುಸ್ತಕಗಳಿರುವ ಗ್ರಂಥಾಲಯದ ವ್ಯವಸ್ಥೆ ಮಾಡಿದ್ದಾರೆ. ಹಾಗೆಯೇ ಹಾ.ಮಾ.ನಾಯಕರ ಪುಸ್ತಕಗಳು ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ […]

ಮಧುರ – ಮಧುರ – ಮಧುರ – ಪುನಃ

ಮಧುರ – ಮಧುರ – ಮಧುರ – ಪುನಃ “ಈ ಸಂಭಾಷಣೆ… ಈ ಪ್ರೇಮ ಸಂಭಾಷಣೆ… ಅತಿ ನವ್ಯ….ರಸಕಾವ್ಯ… ಮಧುರಾ ಮಧುರಾ ಮಧುರಾ….” ……….. …………. …….. ಎಷ್ಟೇ ಪ್ರಯತ್ನಿಸಿದರೂ ಆ ಹಳೆಯ ಗ್ರಾಮೋಫೋನ್ ನಲ್ಲಿ ಹಳೆಯ ಚಿತ್ರಗೀತೆ ತುಂಡು ತುಂಡಾಗಿ ಇಷ್ಟೇ ಪುನಃ ಪುನಃ ಬರುತ್ತಿತ್ತು… ನಂತರ cut…cut…cut.. ಸಂಗೀತವೆಂದರೇನೇ ಮಧುರ ಎಂಬ ಒಂದು ಕಾಲವಿತ್ತು… ಧ್ವನಿಗೆ ಹಿನ್ನೆಲೆಯಾಗಿ ವಾದ್ಯವಿರುತ್ತಿತ್ತು… ಈಗ ವಾದ್ಯಗಳ ಭರಾಟೆಗೆ ಅಲ್ಲಲ್ಲಿ ಒಂದಿಷ್ಟು ಧ್ವನಿ….ಅದೂ ಕರ್ಕಶ…. ಹೀಗಾಗಿ ಗ್ರಾಮೋಫೋನೂ ತುಂಡಾಗಿ “ಗ್ರ್ಯಾಮಿ”ಯಾಗಿ […]

‘ರಂಗಪರಿಕರ ನಿರ್ವಹಣೆ ವಸ್ತು ಕಾಯೋದು ಅಲ್ಲ’

‘ರಂಗಪರಿಕರ ನಿರ್ವಹಣೆ ವಸ್ತು ಕಾಯೋದು ಅಲ್ಲ’ ನೇಪಥ್ಯ ಕಲಾವಿದ ಚಂದ್ರಕಾಂತ ಅವರಿಗೆ ರಂಗಭೂಮಿಯೊಂದಿಗೆ ನಾಲ್ಕು ದಶಕಗಳ ಒಡನಾಟ. ಹೊಸ ತಲೆಮಾರಿನ ರಂಗಚಟುವಟಿಕೆಯನ್ನು ಕೂತೂಹಲದಿಂದ ನೋಡುತ್ತಾ ಇರುವ ಚಂದ್ರಕಾಂತ್‌ ಅವರೊಂದಿಗೆ ‘ವಿಶ್ವರಂಗಭೂಮಿ’ ದಿನದ (ಮಾರ್ಚ್‌ 27) ಹಿನ್ನೆಲೆಯಲ್ಲಿ ನಡೆಸಿದ ಮಾತಿನ ಮಂಥನ ಇಲ್ಲಿದೆ. ಮೈಸೂರಿನ ಒಂಟಿಕೊಪ್ಪನಲ್ಲಿ ಲಗೋರಿ, ಮರಕೋತಿ ಆಟಗಳಲ್ಲಿ ಮೈಮರೆತು ಬಾಲ್ಯವನ್ನು ಸವಿಯುತ್ತಿದ್ದ ರಸಗಳಿಗೆಯ ಸಮಯ 1969ರ ಕಾಲಘಟ್ಟ. ಆಗ ಮೈಸೂರಿನಲ್ಲಿ ಚಿತ್ರೀಕರಣಗೊಳ್ಳುತ್ತಿದ್ದ ‘ಚೌಕದ ದ್ವೀಪ’ ಎನ್ನುವ ಸಿನಿಮಾದಲ್ಲಿ ಬಾಲ ನಟನಾಗಿ ಸಣ್ಣ ಪಾತ್ರದಲ್ಲಿ ಅಭಿನಯಿಸುವ ಅವಕಾಶದಿಂದ ಬಣ್ಣದ […]

‘ಅತಿಯಾದ ಆಸೆಗಳೇ ಒತ್ತಡಕ್ಕೆ ಕಾರಣ’

‘ಅತಿಯಾದ ಆಸೆಗಳೇ ಒತ್ತಡಕ್ಕೆ ಕಾರಣ’ ಮನಸ್ಸು ವಾಸ್ತವಸ್ಥಿತಿ ಒಪ್ಪಿಕೊಳ್ಳದೆ ಪ್ರತಿರೋಧ ತೋರಿದಾಗ ಒತ್ತಡ ಉಂಟಾಗುತ್ತದೆ. ಮನುಷ್ಯ ಹೆಚ್ಚು ಹೆಚ್ಚು ಚಿಂತನಶೀಲನಾದಷ್ಟು ಬದುಕಿನಾಳದಲ್ಲಿ ಇಳಿದು ಬದುಕಿನ ಒಳಗುಟ್ಟನ್ನು ಅರಿಯಬಹುದು. ಇದರಿಂದ ಒತ್ತಡದ ಪ್ರಮಾಣವೂ ಕಡಿಮೆಯಾಗುತ್ತದೆ ಎನ್ನುವುದು ನೇತ್ರತಜ್ಞ ಡಾ. ಕೆ. ಭುಜಂಗ ಶೆಟ್ಟಿ ಅವರ ಅಭಿಪ್ರಾಯ. ಯಾವುದೇ ಪರಿಸ್ಥಿತಿ ಅಥವಾ ಎಂಥದ್ದೇ ಸಂದರ್ಭವಾಗಲಿ ಮನಸ್ಸು ವಾಸ್ತವವನ್ನು ಅರಿತುಕೊಂಡು ಒಪ್ಪಿಕೊಳ್ಳುವುದನ್ನು ಕಲಿಯಬೇಕು. ಅದರ ಬದಲಾಗಿ ಪ್ರತಿರೋಧವನ್ನು ತೋರಿದರೆ ಒತ್ತಡ ಉಂಟಾಗುತ್ತದೆ. ವಾಸ್ತವ ಒಳ್ಳೆಯದಾಗಲಿ, ಕೆಟ್ಟದಾಗಲಿ  – ಅದನ್ನು ಒಪ್ಪಿಕೊಳ್ಳುವ ಮನೋಭಾವ […]

ಯಜ್ಞ ಎಂದರೇನು?

ಯಜ್ಞ ಎಂದರೇನು? ‘‘ಲೌಕಿಕರಂತೆ ಅನಗತ್ಯ ಕರ್ಮಗಳ ಜಾಲದಲ್ಲಿ ಸಿಲುಕಬೇಡ, ಮಾಡಬೇಕಾದ ಧರ್ಮಕರ್ಮಗಳನ್ನು ‘ಯಜ್ಞ’ಭಾವದಿಂದ ಮಾಡು. ಆಗ ಬಂಧನವಾಗದು’’ ಎಂದು ಕೃಷ್ಣನು ತಿಳಿಹೇಳುತ್ತಿದ್ದಾನಷ್ಟೆ? ‘ಯಜ್ಞ’ದ ಕುರಿತಾಗಿ ಮುಂದೆ ಹೀಗೆ ಹೇಳುತ್ತಾನೆ: ಸಹಯಜ್ಞಾಃ ಪ್ರಜಾಃ ಸೃಷ್ಟಾ ಪುರೋ ವಾಚಾ ಪ್ರಜಾಪತಿಃ | ಅನೇನ ಪ್ರಸವಿಷ್ಯಧ್ವಂ ಏಷವೊಸ್ತಿಷ್ಟಕಾಮಧುಕ್ || ದೇವಾನ್ ಭಾವಯತಾನೇನ ತೇ ದೇವಾಃ ಭಾವಯಂತು ವಃ | ಪರಸ್ಪರಂ ಭಾವಯಂತಃ ಶ್ರೇಯಃ ಪರಮವಾಪ್ಸ್ಯ || (ಭ.ಗೀ. 3.10-11) ಪ್ರಜಾಪತಿಯು (ಬ್ರಹ್ಮನು) ‘ಯಜ್ಞ’ದ ಮೂಲಕ ಸೃಷ್ಟಿಯನ್ನು ಮಾಡಿ ಎಲ್ಲರಿಗೂ ಹೇಳಿದನು; ‘ನೀವು […]

ರಂಗ ಸಂಗೀತವೇ ನನ್ನುಸಿರು…

ರಂಗ ಸಂಗೀತವೇ ನನ್ನುಸಿರು… ವರ್ಷಗಟ್ಟಲೇ, ದಶಕಗಟ್ಟಲೆ ಒಂದೇ ಕ್ಷೇತ್ರದಲ್ಲಿ ಕಾಯಕಯೋಗಿಗಳಾಗಿ ದುಡಿದ ಎಷ್ಟೋ ಸಾಧಕರು ನಮ್ಮ ನಡುವೆ ಇದ್ದಾರೆ. ತಮ್ಮ ಕರ್ಮಭೂಮಿ ಮತ್ತು ಬದುಕಿನ ಆಪ್ತ ಕ್ಷಣಗಳನ್ನು ‘ ನಾ ಕಂಡ ಬದುಕು’ ಅಂಕಣದಲ್ಲಿ ಮೆಲುಕು ಹಾಕಿದ್ದಾರೆ. ಹಿರಿಯ ರಂಗಕರ್ಮಿ ಆರ್. ಪರಮಶಿವನ್ ಈ ವಾರ ನಮ್ಮೊಂದಿಗೆ… ನಾನು ಹುಟ್ಟಿದ್ದು 1931ರಲ್ಲಿ. ನಮ್ಮ ತಂದೆಮೈಸೂರಿನಲ್ಲಿ ದೇವಸ್ಥಾನದ ಅರ್ಚಕರಾಗಿದ್ದರು. ಮನೆಯಲ್ಲಿ ಬಡತನ. ಸೋದರಮಾವ ಸೀನ ಮಾಮನ ಭಿಕ್ಷಾನ್ನದಿಂದ ಒಂದು ಹೊತ್ತಿನ ಹಸಿವು ನೀಗುತ್ತಿತ್ತು. ನನ್ನ ತಂದೆಗೆ ನಾಟಕದ ಬಗ್ಗೆ […]

ಸಹಿ ಇದ್ದರೆ ಮಾತು

ಸಹಿ ಇದ್ದರೆ ಮಾತು ಇತ್ತೀಚಿನ ಘಟನೆಗಳನ್ನು, ಮಾರ್ಚ್ ಮಾಸದ ಒತ್ತಡಗಳನ್ನ, ಭಾಗ್ಯಗಳ ಮೂಟೆ ಮುಗಿದಾಗ, ಖಜಾನೆಗಳೆಲ್ಲ ಖಾಲಿಯಾಗುತ್ತಿದ್ದಂತೆಯೇ ಚುನಾವಣೆ ಹೊಸ್ತಿಲಲ್ಲಿ ಬಂದು ನಿಂತಾಗ, ಎಲ್ಲವನ್ನು ಗಮನಿಸುತ್ತಿದ್ದ ಹಾಗೆಯೇ ಮರಾಠಿ ಮತ್ತು ಕನ್ನಡದಲ್ಲಿ ಸಾಕಷ್ಟು ಹೆಸರು ಮಾಡಿದ ಯಶವಂತರ ಸಹಿ ರೆ ಸಹಿ ನಾಟಕದ ಹೆಸರು ನೆನಪಾಯಿತು. ಮಾರ್ಚ್ ಮಾಸವೇ ಹೀಗೆ ಸರ್ಕಾರ್ ಮಾರ್ಚ್ ಫಾಸ್ಟ್ ಆಗಿ ಪ್ರಗತಿ ಅನ್ನುವ ಅಳೆಯಬಹುದಾದ ಕೆಲಸಗಳು ಆಗುವ ತಿಂಗಳು. ಪ್ರತಿ ತಿಂಗಳೂ ಸರಕಾರ ಮತ್ತು ನೌಕರಶಾಹಿ ಮಾರ್ಚ್‍ದಂತೆ ಕೆಲಸ ಮಾಡಿದರೆ ಒಂದೇ […]

ಕನಲಿಕೆ – ಕಾಲುನೋವು – ಅಂಗೈ – ಉರಿ

ಕನಲಿಕೆ – ಕಾಲುನೋವು – ಅಂಗೈ – ಉರಿ ವಾರವೊಂದರಿಂದ ಕೆಲವರ ಅಂಗೈಯಲ್ಲಿ ತಡೆಯಲಾರದ ಉರಿ… ಅದನ್ನು ತಂಪಾಗಿಸುವ ಮುಲಾಮು ಪೇಟೆಯಲ್ಲಿ Q ನಿಂತರೂ ಸದ್ಯಕ್ಕೆ ಲಭ್ಯವಿಲ್ಲ…. ಮನೆಯಲ್ಲಿ ಹಳೆಯ ಔಷಧಿಗಳ Stock ಇದೆ… ಆದರೆ date expire ಆಗಿದೆ…. ಇದ್ದೂ ಉಪಯೋಗಿಸುವಂತಿಲ್ಲ… ಸಂಪೂರ್ಣ ಕನಲಿ ಹೋಗಿದ್ದಾರೆ…. ಪರಿಹಾರಕ್ಕೆ ಅಲೆದು ಅಲೆದು ಬಂದ ಕಾಲುನೋವು ತಲೆನೋವನ್ನೂ ಹೆಚ್ಚಿಸಿದೆ… “ಕನಿಷ್ಠ ಒಂದು ತಿಂಗಳಾದರೂ ಬೇಕಾಗಬಹುದೆಂಬುದು” ಬಲ್ಲವರ ಉವಾಚ….ಅಲ್ಲಿಯವರೆಗೂ ಕಾಯಬೇಕು ಇಲ್ಲವೇ ಇಂಚಿಂಚಾಗಿ ಸಾಯಬೇಕು…..

ನಗೆಯುಕ್ಕಿಸಿದ ‘ಗುಗ್ಗು’ವಿಗೆ ನೂರು…

ನಗೆಯುಕ್ಕಿಸಿದ ‘ಗುಗ್ಗು’ವಿಗೆ ನೂರು… ಸದಾ ನೆನಪಿನಲ್ಲಿ ಇರಿಸಿಕೊಳ್ಳಬೇಕಾದ ಹಲವು ನಟರನ್ನು ಕನ್ನಡ ಚಿತ್ರರಂಗ ನೀಡಿದೆ. ಅಂಥವರಲ್ಲಿ ಒಬ್ಬರು ‘ಗುಗ್ಗು’. ತಂದೆಯ ಅಂಗಡಿಯ ಗಲ್ಲಾಪೆಟ್ಟಿಗೆಯಿಂದ ಚಿತ್ರರಂಗದವರೆಗಿನ ಅವರ ಯಾನವನ್ನು ಈ ಬರಹದಲ್ಲಿ ಕಟ್ಟಿಕೊಡಲಾಗಿದೆ. ಕನ್ನಡ ಚಿತ್ರಗಳನ್ನು ನೋಡುತ್ತ ಬಳೆದ ಒಂದು ತಲೆಮಾರಿನವರಿಗೆ ‘ಗುಗ್ಗು’ವಿನ ನೆನಪನ್ನು ಮತ್ತೆ ತರಿಸುವಂತಿದೆ ಈ ಲೇಖನ… ತಮಾಷೆ ಮಾತು, ಮುಗ್ಧತೆ, ಪೆದ್ದು ಪೆದ್ದಾದ ಮುಖ್ಯ ಮಹತ್ವದ ಪಾತ್ರಗಳಲ್ಲಿ ಕಾಣಿಸಿಕೊಳ್ಳದಿದ್ದರೂ ಕನ್ನಡ ಚಿತ್ರರಂಗದಲ್ಲಿ ಪ್ರಸಿದ್ಧಿ ಪಡೆದ ಕಲಾವಿದ ’ಕಾಮೆಡಿಯನ್‌ ಗುಗ್ಗು’ಗೆ ಈಗ ನೂರು ವರ್ಷ. ಗುಡೇಮಾರನಹಳ್ಳಿ ಬೆಂಗಳೂರು ಸೆರಗಿನಲ್ಲಿರುವ ಮಾಗಡಿ ಸಮೀಪದ ಪುಟ್ಟಹಳ್ಳಿ. ಇಲ್ಲಿನ […]