ವ್ಯಕ್ತಿಯ ಬದುಕು ಹಾಗೂ ತಾತ್ವಿಕತೆ. ಭಗವದ್ಗೀತೆಯ ಉದ್ದೇಶಗಳಲ್ಲಿ ಅತ್ಯಂತ ಮುಖ್ಯವಾದದ್ದು ವೈಯಕ್ತಿಕ ಬದುಕು ಮತ್ತು ಸಾಮುದಾಯಿಕ ಬದುಕುಗಳ ಮಧ್ಯೆ ಸಾಮರಸ್ಯತೆಯನ್ನು ಉಂಟುಮಾಡುವುದು, ವ್ಯಕ್ತಿ ಮತ್ತು ಸಮಾಜ ಆರೋಗ್ಯದಿಂದಿರಲು ಮತ್ತು ಬದುಕಿನ ಇತಿಮಿತಿಗಳನ್ನು ಮೀರಲು ಸಾಧ್ಯವಾಗುವಂತೆ ಇರಲು ಪ್ರೇರೇಪಿಸುವುದು. ಸಮಾಜದ ಸುಖ ಸಂತೋಷಗಳೊಂದಿಗೇ ವ್ಯಕ್ತಿಯ ಸುಖ ಸಂತೋಷಗಳೂ ತಳುಕುಹಾಕಿಕೊಂಡಿರುತ್ತವೆ. ವ್ಯಕ್ತಿಯನ್ನು ಸಮಾಜದಿಂದ ಪ್ರತ್ಯೇಕಿಸಿ ಅಥವಾ ಸಮಾಜವನ್ನು ವ್ಯಕ್ತಿಯಿಂದ ಪ್ರತ್ಯೇಕಿಸಿ ವ್ಯಕ್ತಿಯ ಮತ್ತು ಸಮಾಜದ ಅಗತ್ಯಗಳನ್ನಾಗಲೀ, ಕೆಲಸಕಾರ್ಯಗಳನ್ನಾಗಲೀ ಅರ್ಥಮಾಡಿಕೊಳ್ಳ ಬಯಸಿದರೆ ಅದಕ್ಕೆ ಯಾವ ಬೆಲೆಯೂ ಇಲ್ಲ. ವ್ಯಕ್ತಿಯ ಮತ್ತು ಸಮಾಜದ […]
