Your Cart

Need help? Call +91 9535015489

📖 Print books shipping available only in India. ✈ Flat rate shipping

ದೇವರಿಗೊಂದು ಪತ್ರ!- 41

ದೇವರಿಗೊಂದು ಪತ್ರ!( 41) ಓ ಯಶೋದಾ ನಂದನ ಈ ಪತ್ರ ಓದಿ ನೀ ನಗಬಹುದು ಇಂದು ಹೇಳುವೆ ಕೇಳು ರಾಧರಮಣ ನಾನಾಚರಿಸಿದ ಪರಿ ನಿನ್ನ ಜನ್ಮದಿನ ಮೊದಲೆರಡು ದಿನದಿಂದ ಅಮಿತ ಆನಂದ ಹರಿ ಮನದೊಳಗೆ ಸಾಲು ಯೋಚನೆ ಹತ್ತು ಹಲವು ಯೋಜನೆ ಏನ ಮಾಡಲಿ ಹರಿಯ ಜನ್ಮದಿನಕ್ಕೆ ಅಂದುಕೊಂಡಿದ್ದೆಲ್ಲ ದೇಹದೊಳಗಿನ ಆತ್ಮ ಮಾಡಿ ಮುಗಿಸಿತ್ತು ಕ್ಷಣಕ್ಕೆ ಇರಲಿ ಕೇಳು ಬಾಹ್ಯ ಆಡಂಬರವು ಮಾಡಲಿಚ್ಚಿಸಿತು ಮನವು ಪೋದೆ ಹುಡುಕುತ ನಿನಗಿಷ್ಟದ ಸುಘಂದ ಭರಿತ ಪುಷ್ಪ ಆಯ್ದು ತರಲು ಮತ್ತೆ […]

ಆ ಸಮಯ…ಆನಂದಮಯ…

ಆ ಸಮಯ…ಆನಂದಮಯ… “ಎಷ್ಟೊತ್ತಾಯ್ತು ಬಂದು?’ ” ಚಹ ಅಥವಾ ಕಾಫಿ?” “ಇಲ್ಲ , ಇಲ್ಲ, ಬೇಡ…” “ಮಜ್ಜಿಗೆಯಾದರೂ ತೆಗೆದುಕೊಳ್ಳಿ” “ನಾಯಿಗೆ ಹೆದರುತ್ತೀರಾ? ಇಲ್ಲಾಂದ್ರೆ ‘ಗೋಪೀ’ನ ಇಲ್ಲಿಗೇ ಕರೆಸಿಕೊಳ್ಳುತ್ತೇನೆ’ ‌‌ ಹೀಗೆ ಪ್ರಾರಂಭವಾದ , ನಮ್ಮ ಮಾತುಕತೆಯನ್ನು ನಿರಾಳವಾಗಿ ಮುಗಿಸಿ ಹೊರಬಂದಾಗ ಅರ್ಧ ಗಂಟೆ ಮೀರಿತ್ತು. “ದೊಡ್ಡವರ ಭೇಟಿ, ಹೇಗೆ ನಡೆದುಕೊಂಡರೆ ಹೇಗೋ ಏನೋ ಎಂಬ ಅಳುಕು ಅದಾಗಲೇ ಮಾಯವಾಗಿ ಹೋಗಿತ್ತು. ಅಲ್ಲಿದ್ದಷ್ಟು ಹೊತ್ತೂ ಒಂದೇ ಒಂದು ನಿಮಿಷ ಅವರ ಸ್ಥಾನಮಾನದ ಅರಿವು ಮೂಡದಂತೆ, ಎಷ್ಟೋ ವರ್ಷಗಳ ಪರಿಚಯವಿದ್ದವರ […]

ಅಮ್ಮ ಕಲಿಯಲೇ ಇಲ್ಲ!

ಅಮ್ಮ ಕಲಿಯಲೇ ಇಲ್ಲ! ಜನ್ಮ ಕೊಟ್ಟ ಕ್ಷಣದಿಂದ ಮೊಲೆಯುಣಿಸಿದಳು ವರ್ಷಗಟ್ಟಲೆ ಶಕ್ತಿವಂತನಾಗಲಿ ಕೂಸೆಂದೆನಿಸಿ ಬೆಳೆಸಿದಳು ನೋವಾಗುವುದು ಸಾಕು ಬಿಡು ಎನ್ನುವುದ ಕಲಿಯಲಿಲ್ಲ ಅವಳು! ಜಾತ್ರೆ ಉತ್ಸವಗಳಿಗೆ ಬಿಡದೆ ಟೊಂಕದಿ ಹೊತ್ತು ಮೆರೆದಳು ಆ ಕೈಗೊಮ್ಮೆ ಈ ಕೈಗೊಮ್ಮೇ ರಟ್ಟೆ ಬಿಗಿದು ಸೋತರೂ ಹುಸಿನಗುವಳು ಬಿಟ್ಟು ಹೋಗುವೆನಿಲ್ಲೇ ಬಾರದಿರು ಎನ್ನುವುದ ಕಲಿಯಲೇ ಇಲ್ಲ ಅವಳು ಹಾಡಿ ಪಾಡಿ ಅಂಗಳವೆಲ್ಲ ಸುತ್ತಾಡಿ ಚಂದಿರನ ತೋರಿ ತುತ್ತಿಟ್ಟಳು ಜೋಗುಳವ ಹಾಡಿ ತೊಟ್ಟಿಲ ತೂಗಿ ತೂಗಿ ಮಲಗಿಸಿದಳು ಕೂಸು ಉಣ್ಣದೆ ಮಲಗದೆ ಹಸಿವು […]

ದೀಪ

ದೀಪ ಕತ್ತಲೆಯ ಬೆತ್ತಲಾಗಿಸಿ ಕಿರುನಗೆಯ ಸೂಸಿ ತನ್ನಿರುವಿಕೆಯಾ ಮೆರೆಯುತಿದೆ ಹಣತೆಯ ದೀಪ ಸುತ್ತಲೂ ಬೆಳದಿಂಗಳ ಬೆಳಕು ಚೆಲ್ಲಿ ಲಾಸ್ಯವಾಡುತಿದೆ ಅಲ್ಲಿ ತಾನೇ ಕೊರಗೀ ಕರಗೀ ಬೆಳಕ ನೀಡಿ ಸಂಭ್ರಮಿಸುತಿದೆ ಮೇಣದಾ ದೀಪ ನಕ್ಷತ್ರ ಪುಂಜಗಳೂ ತಮ್ಮ ಪರಿಧಿಯಲಿ ಮಿಣುಮಿಣುಕ ಬೆಳಕ ಹರಡಿ ಪಯಣಿಗನಿಗೆ ದಾರಿದೀಪವಾಗಿವೆ ಚಂದ್ರ ಚಕೋರನೂ ಭಾವನೆಗಳ ಏರಿಳಿತಕ್ಕೊಳಗಾಗಿ ನಾಡಿನ ಕಾಡಿನ ತುಂಬೆಲ್ಲ ಬೆಳದಿಂಗಳ ಬೆಳಕೊಮ್ಮೆ ಕತ್ತಲೆಯ ಮುಸುಕೊಮ್ಮೆ ಹೊದ್ದು ಮೆರೆಯುತಿಹ ಜಗದಕಲಕೂ ತನ್ನ ಪ್ರತಿಭೆ ಮೂಡಿಸಿ ಜೀವ ಜೀವಕೂ ಆಧಾರವಾಗಿಹ ರವಿ ತಾ ಆಕಾಶದಿ […]

ನನ್ನ ಮೆಚ್ಚಿನ ತ್ರಿ -ವೇಣಿ

ನನ್ನ ಮೆಚ್ಚಿನ ತ್ರಿ -ವೇಣಿ ಕನ್ನಡ ಸಿನಿಮಾ ಪ್ರಪಂಚದಲ್ಲಿ ಕಲ್ಪನಾ ಎಂಬ ಮಿನುಗುತಾರೆಯನ್ನು ಸೃಷ್ಟಿ ಮಾಡಿದ್ದೇ  ಕನ್ನಡ ಸಾಹಿತ್ಯದ ಸಾರಸ್ವತ ಲೋಕದ ಮಿನುಗುತಾರೆ ನಮ್ಮ ತ್ರಿವೇಣಿಯವರು. … ತ್ರಿವೇಣಿಯವರ ಲೇಖನಿಯ ಶಕ್ತಿಯೇ ಮನೋವಿಜ್ಞಾನ… ಅವರ ಶರಪಂಜರದ ಕಾವೇರಿ, ಬೆಕ್ಕಿನ ಕಣ್ಣಿನ ಕುಸುಮಾ… ಒಂದೇ, ಎರಡೇ ಎಲ್ಲದರಲ್ಲೂ ಮನಸ್ಸಿನ ಎಳೆಎಳೆಗಳನ್ನು ನವಿರಾಗಿ ಬಿಡಿಸುವ ನಯವಂತಿಕೆ ಅವರದು. ತ್ರಿವೇಣಿಯವರ ಕಥಾನಾಯಕಿಯರು ನೋವುಂಡವರು… ಜಗದ ರೀತಿಗೆ ವಿರುದ್ಧವಾಗಿ ಹೋರಾಡಿದವರು… ಅವರ ಬೆಳ್ಳಿ ಮೋಡ. ಚಲನಚಿತ್ರವಾದ ಕಾದಂಬರಿ… ಇಲ್ಲಿ ಇಂದಿರಾಳ ಪಾತ್ರಕ್ಕೆ ಜೀವ […]

ಹಲಗೆ ಹಣ್ಣು

ಹಲಗೆ ಹಣ್ಣು ಬೇಸಿಗೆಯೆಂದರೆ ಮಲೆನಾಡಿನಲ್ಲಿ ಕಾಡುಹಣ್ಣುಗಳ ಸುಗ್ಗಿ, ನಾನಾ ತರಹದ ಹಣ್ಣುಗಳ ಖಜಾನೆ, ಮುಳ್ಳುಣ್ಣು, ಕೌಳಿಹಣ್ಣು, ಗುಡ್ಡೇಗೇರು, ಕಾಡುಮಾವು, ಕಾಕೇ ಹಣ್ಣು, ಬುಕ್ಕೆ, ನೇರಳೆ, ಹಲಸು, ತುಂಬ್ರಿ, ಸಂಪಿಗೆ ಹಣ್ಣು, ಕೇಪುಳ ಹಣ್ಣು, ನೆಲ್ಲಿ, ರಂಜಲು, ಪುನ್ನೇರಲು-ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈ ಪ್ರಕೃತಿದತ್ತ ಹಣ್ಣುಗಳಿಗೆ ಅವುಗಳದ್ದೇ ಆದ ವಿಶಿಷ್ಟ ರುಚಿ, ವಿಶೇಷವಾದೊಂದು ಪರಿಮಳ, ಕೆಲವು ಸಿಹಿ, ಕೆಲವು ಹುಳಿ, ಅತ್ತ ಸಿಹಿಯೂ ಅಲ್ಲದ, ಇತ್ತ ಹುಳಿಯೂ ಅಲ್ಲದ ಮಿಶ್ರ ರುಚಿಯ ಹಣ್ಣೊಂದಿದೆ. ಅದು ಹಲಗೆ ಹಣ್ಣು. […]

ಪರಾಜಯ…

ಪರಾಜಯ… (ಅಲ್ಲಗಳೆಯಲಾಗದ ಒಂದು ವಾಸ್ತವ) ನನ್ನ ಬದುಕಿದು, ನನ್ನದು- ನಾನೇ ಆಳುವವ ಅಂದೆ, ಕಾಣದ ಕೈಯೊಂದು ಹೊಸಕಿ ಹಾಕಿದೆ… ನನ್ನ ಜನ, ನನ್ನ ಆಪದ್ಬಂಧುಗಳು ಅಂದುಕೊಂಡೆ, ಕೈಬೀಸಿ ತಿರುಗಿ ನೋಡದೇ- ಮರೆಯಾಗುತ್ತಿದ್ದಾರೆ… ನನ್ನ ಗಳಿಕೆ, ನನ್ನ ಉಳಿಕೆ, ನನ್ನದೇ ಸಂತಸಕ್ಕೆಂದು ಕನಸು ಕಂಡೆ, ಬೋರಲು ಬಿದ್ದ ತುಂಬು ಬಿಂದಿಗೆ ಬರಿದಾಗುತ್ತಿದೆ… ನನ್ನ ವಿದ್ಯೆ, ನನ್ನ ಹೆಮ್ಮೆ ಎಂದೆಣಿಸಿದ್ದೆ… ಎಷ್ಟಿದ್ದರೂ ದಕ್ಕುವುದು ‘ಅಂಗೈ ಗೆರೆ’ಯಷ್ಟೇ… ಸಾಬೀತಾಗಿದೆ… ನನ್ನ ಮಕ್ಕಳೆನ್ನ ಅಂತ್ಯ ಕಾಲಕ್ಕೆ- ಅಂದುಕೊಂಡೆ… ” ಯಾರಿಗೆ ಯಾರೋ ಪುರುಂದರ […]

ನನ್ನ ಮಾಲಿ ಸಹ ರಾಣಿಯ ಪದಕ ಧಾರಿ!

ನನ್ನ ಮಾಲಿ ಸಹ ರಾಣಿಯ ಪದಕ ಧಾರಿ! ”ನಮ್ಮ ಮನೆಗೆಲಸ ಮತ್ತು ತೋಟದ ಕೆಲಸ ಮಾಡಲು ಕೆಲಸಗಾರರು ಯಾರೂ ಸಿಗುತ್ತನೇ ಇಲ್ಲ,” ಎನ್ನುವ ಗೊಣಗು ಕೇಳಿಸದ ಊರು, ದೇಶ, ಕಾಲವೇ ಇಲ್ಲ. ಈಗಂತೂ ಕೊರೋನಾ ಮಾರಿಯ ಕಾಲದಲ್ಲಿ ಅದು ಇನ್ನೂ ಉಲ್ಬಣಗೊಳ್ಳುತ್ತಿದೆ, ನಮ್ಮ ಊರಾದ ಯು ಕೆ ದ ಡೋಂಕಾಸ್ಟರ್ ನಲ್ಲಿ ಸಹ. ಯಂತ್ರಗಳ ಸೌಲಭ್ಯವಿರುವ ಪಾಶ್ಚಿಮಾತ್ಯ ದೇಶಗಳಲ್ಲಿ ನಮ್ಮ ಕೆಲಸ ಹೆಚ್ಚಾಗಿ ನಾವೇ ಮಾಡಿಕೊಳ್ಳುತ್ತೇವೆಯಾದರೂ ನನ್ನಂಥ ವಯಸ್ಸಾದವರ ಮನೆಯಲ್ಲಿ ಕಷ್ಟದಾಯಕ ತೋಟದ ಕೆಲಸಕ್ಕೆ ಸಹಾಯ ಬೇಕಲ್ಲ […]

ಪೆಟ್ಲು ಎಂಬ ಆಟಿಕೆ

ಪೆಟ್ಲು ಎಂಬ ಆಟಿಕೆ ಗ್ರಾಮೀಣ ಮನರಂಜನೆಯ ಆಟಿಕೆಗಳಲ್ಲಿ ‘ಪೆಟ್ಲು’ಎಂಬ ಆಟದ ಸಾಮಾನು ಮಕ್ಕಳಿಗೆ ಬಹಳ ಖುಷಿ ಕೊಡುವ ಒಂದು ಪರಿಕರ. ಒಂದು ಅಡಿ ಉದ್ದ, ನಾಲ್ಕು, ನಾಲ್ಕೂವರೆ ಇಂಚು ವ್ಯಾಸದ ಚಿಕ್ಕ ಬಿದಿರು ಅಚಿಡಿಯಿಂದ ತಯಾರಾಗುವ ಪೆಟ್ಲು ಒಂದು ರೀತಿಯಲ್ಲಿ ಬಂದೂಕಿನಂತೆ ಕೆಲಸ ಮಾಡುತ್ತದೆ. ಇದರಲ್ಲಿ ಎರಡು ಭಾಗಗಳಿರುತ್ತವೆ. ಒಂದು, ಬಿದಿರಿನ ಕೊಳವೆಯ ಭಾಗ, ಮತ್ತೊಂದು, ಮರದಿಂದ ತಯಾರಾದ ಜಗ ಎಂದು ಕರೆಯುವ, ಒಂದು ತೆಳುವಾದ ಕಡ್ಡಿ. ಇದಕ್ಕೆ ಹಿಡಿಕೆಯನ್ನು ಅಳವಡಿಸಿರುತ್ತಾರೆ. ಮೊದಲು ಬಿದಿರಿನ ಕೊಳವೆಯ ಮುಂಭಾಗದಲ್ಲಿ […]