ಹೆಣ್ಣೇಕೆ ಶ್ವೇತಸುಂದರಿಯಾಗಿರಬೇಕು? ಸೌಂದರ್ಯವೆನ್ನುವುದು ನೋಡುಗರ ಕಣ್ಣಿನಲ್ಲಿದೆ ಎಂದು ಶೇಕ್ಸಪಿಯರ್ ನಂಥ ಮಹಾನ್ ಸಾಹಿತಿಯೇ ಹೇಳಿದ್ದಾನೆ.. ಆದರೂ ಸೌಂದರ್ಯದ ಅಳತೆಗೋಲುಗಳು ಇದ್ದೇ ಇವೆ. ಅವೇನೂ ಸೌಂದರ್ಯ ಸ್ಪರ್ಧಾಳುಗಳಿಗೆಂದು ಮಾಡಲಾದವುಗಳಲ್ಲ. ಸಾಮಾನ್ಯರ ದೃಷ್ಟಿಯಲ್ಲಿಯ ಅಳತೆಗೋಲುಗಳೇ. ಸೌಂದರ್ಯವೆಂದರೆ ಹಾಲುಬಿಳುಪು ಬಣ್ಣ, ಎತ್ತರವಾದ ಆದರೆ ತೆಳುವಾದ ಹಾಗೂ ಒಳ್ಳೆಯ ಉಬ್ಬು ತಗ್ಗುಗಳನ್ನು ಹೊಂದಿದ ಮೈಕಟ್ಟು, ಸ್ವಚ್ಛವಾದ ಹಾಗೂ ಹೊಳಪುಳ್ಳ ಚರ್ಮ, ಕೂದಲು ಉದ್ದ ಅಥವಾ ಗಿಡ್ಡ ಹೇಗೇ ಇರಲಿ, ಅದರೆ ದಟ್ಟವಾದ ಹಾಗೂ ನಯವಾದ ಕೇಶರಾಶಿ ಇರಬೇಕು… ದೊಡ್ಡ ದೊಡ್ಡ ಕಣ್ಣುಗಳು, ಚೂಪನೆಯ […]
