ಹೆಣ್ಣೇಕೆ ಶ್ವೇತಸುಂದರಿಯಾಗಿರಬೇಕು?

ಹೆಣ್ಣೇಕೆ ಶ್ವೇತಸುಂದರಿಯಾಗಿರಬೇಕು?

ಸೌಂದರ್ಯವೆನ್ನುವುದು ನೋಡುಗರ ಕಣ್ಣಿನಲ್ಲಿದೆ ಎಂದು ಶೇಕ್ಸಪಿಯರ್ ನಂಥ ಮಹಾನ್ ಸಾಹಿತಿಯೇ ಹೇಳಿದ್ದಾನೆ.. ಆದರೂ ಸೌಂದರ್ಯದ ಅಳತೆಗೋಲುಗಳು ಇದ್ದೇ ಇವೆ. ಅವೇನೂ ಸೌಂದರ್ಯ ಸ್ಪರ್ಧಾಳುಗಳಿಗೆಂದು ಮಾಡಲಾದವುಗಳಲ್ಲ. ಸಾಮಾನ್ಯರ ದೃಷ್ಟಿಯಲ್ಲಿಯ ಅಳತೆಗೋಲುಗಳೇ. ಸೌಂದರ್ಯವೆಂದರೆ ಹಾಲುಬಿಳುಪು ಬಣ್ಣ, ಎತ್ತರವಾದ ಆದರೆ ತೆಳುವಾದ ಹಾಗೂ ಒಳ್ಳೆಯ ಉಬ್ಬು ತಗ್ಗುಗಳನ್ನು ಹೊಂದಿದ ಮೈಕಟ್ಟು, ಸ್ವಚ್ಛವಾದ ಹಾಗೂ ಹೊಳಪುಳ್ಳ ಚರ್ಮ, ಕೂದಲು ಉದ್ದ ಅಥವಾ ಗಿಡ್ಡ ಹೇಗೇ ಇರಲಿ, ಅದರೆ ದಟ್ಟವಾದ ಹಾಗೂ ನಯವಾದ ಕೇಶರಾಶಿ ಇರಬೇಕು… ದೊಡ್ಡ ದೊಡ್ಡ ಕಣ್ಣುಗಳು, ಚೂಪನೆಯ ಮೂಗು, ಪುಟ್ಟ ಬಾಯಿ, ದುಂಡು ಮುಖ… ಇತ್ಯಾದಿ ಇತ್ಯಾದಿ… ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇದು ಕೇವಲ ಬಾಹ್ಯ ಸೌಂದರ್ಯ.. ಅಂಥವರು ಸುಜ್ಞಾನಿಗಳಾಗಿರಬೇಕು ಎಂಬುದು ಕಡ್ಡಾಯವೇನಲ್ಲ..! ಅವಳು ಹೆಣ್ಣಾದ ಮಾತ್ರಕ್ಕೆ ಅವಳ ವ್ಯಕ್ತಿತ್ವಕ್ಕೆ ಬಾಹ್ಯ ಆಕರ್ಷಣೆಯೇ ಅಗತ್ಯವೆಂದು ಏಕೆ ಭಾವಿಸುವರೋ ಅರಿಯದು.
ಇದಕ್ಕೆ ಪೂರಕವಾಗಿ ನಾವು ಪ್ರತಿದಿನವೂ ಕುಟುಂಬದ ಎಲ್ಲ ಸದಸ್ಯರ ಜೊತೆಗೆ ಕುಳಿತು ವೀಕ್ಷಿಸುವ ಟಿ.ವಿ.ಗಳ ಜಾಹೀರಾತುಗಳಲ್ಲಿ, ಸೀರಿಯಲ್ಲುಗಳಲ್ಲಿ ಹಾಗೂ ಎಂದೋ ಒಮ್ಮೆ ನೋಡುವ ಸಿನೆಮಾಗಳಲ್ಲಿ ಅರೆಬೆತ್ತಲೆಯ ಹುಡಿಗೆಯರು ಅಶ್ಲೀಲವಾದ ಪೋಜು ಕೊಡುವುದನ್ನು ನೋಡಿದಾಗ ಒಂದು ಪ್ರಶ್ನೆ ಮಹಿಳೆಯ ಮನದಲ್ಲಿ ಏಳುವುದು ಸ್ವಾಭಾವಿಕವೇ._ಸ್ತ್ರೀ ಯಾವಾಗಲೂ ಪುರುಷನನ್ನು ತನ್ನ ಸೌಂದರ‍್ಯದಿಂದಲೇ ಆಕರ್ಷಿಸಬೇಕೆ? ಅಥವಾ ಈ ಆಕರ್ಷಣೆಯೇ ಜೀವನದ ತತ್ವವೇ? ಎನ್ನುವುದು. ದೂರದರ್ಶನದಲ್ಲಿ ಬರುವ ಆರುವಾರಗಳಲ್ಲಿ ಬೆಳ್ಳಗಾಗಿಸುವ, ಚರ್ಮದ ಸುಕ್ಕುಗಳನ್ನು ಏಳು ದಿನಗಳಲ್ಲಿ ಹೋಗಲಾಡಿಸುವ, ಮುಖದ ಕಲೆಗಳನ್ನು ಕೆಲವೇ ಬಾರಿಯ ಲೇಪನದಿಂದ ಸ್ವಚ್ಛಗೊಳಿಸುವ ಜಾಹೀರಾತುಗಳನ್ನು ನೋಡಿದಾಗ ಸ್ತ್ರೀಯ ಬಾಹ್ಯ ಸೌಂದರ್ಯ ಅದರಲ್ಲೂ ಬಿಳಿಯ ಬಣ್ಣವೇ ಸೌಂದರ್ಯದ ಮುಖ್ಯ ಅಳತೆಗೋಲುಗಳಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ ಎಂದೆನ್ನಿಸುತ್ತದೆ. ಏಕೆ, ಕಪ್ಪು ಸುಂದರಿಯರಾದ ದ್ರೌಪದಿ, ಕ್ಲಿಯೋಪಾತ್ರಾ ಇವರ ಸೌಂದರ್ಯದ ಖ್ಯಾತಿಯನ್ನು ಇತಿಹಾಸದಲ್ಲಿ, ಪುರಾಣಗಳಲ್ಲಿ ಓದಿಲ್ಲವೇ? ಕೇಳಿಲ್ಲವೇ? ಇವರಿಗಾಗಿ ದೇಶಗಳೇ ನಶಿಸಿ ಹೋಗಿಲ್ಲವೇ? ರಾಜ್ಯಗಳೇ ಉರುಳಿಲ್ಲವೇ?
ಒಬ್ಬ ವ್ಯಕ್ತಿ ಸುಂದರವಾಗಿ ಕಾಣುವುದು ಆವಳ ಅಥವಾ ಅವನ ಬಾಹ್ಯ ವ್ಯಕ್ತಿತ್ವದಿಂದಷ್ಟೇ ಅಲ್ಲ, ಅಂತರಂಗದ ಕೆಲವು ಅಂಶಗಳಿಂದಲೂ ಎಂಬುದು ಎಲ್ಲರೂ ತಿಳಿದಿರಲೇಬೇಕಾದ ಮಹತ್ವದ ವಿಷಯ. ನಗುಮುಖ,ನಿರರ್ಗಳವಾದ ಶುದ್ಧ ಹಾಗೂ ವಿನಯ ತುಂಬಿದ ಭಾಷಾ ಪ್ರೌಢಿಮೆ, ಒಳ್ಳೆಯ ಜ್ಞಾನ ಇವು ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಗುರುತಿಸಲು ಸಹಾಯಕವಾಗುತ್ತವೆ. ಸುಂದರವಾದ ವಸ್ತುವನ್ನು ನೋಡಿದಾಗ ಅದರಿಂದ ನಾವು ಆಕರ್ಷಿತರಾಗಿ ಅವುಗಳನ್ನು ಹೊಂದಲು ಕಾತರಿಸುತ್ತೇವೆ, ದುಡ್ಡು, ಶ್ರಮ ಖರ್ಚು ಮಾಡುತ್ತೇವೆ. ಒಮ್ಮೆ ಅದನ್ನು ಹೊಂದಿದ ಮೇಲೆ ಅದರ ಆಕರ್ಷಣೆ ಅಲ್ಲಿಗೆ ಮುಗಿಯಿತು. ಮನಸ್ಸು ಅದನ್ನು ಮರೆತುಬಿಡುತ್ತದೆ. ಆದರೆ ಸ್ತ್ರೀ ಒಂದು ವಸ್ತುವಲ್ಲ. ಅವಳು ನಮಗೆ ಸೇರಬೇಕೆಂದು ನಾವು ಅಧಿಕಾರ ಸ್ಥಾಪಿಸಬೇಕಿಲ್ಲ. ಹತ್ತು ವರ್ಷ ಯುದ್ಧ ಮಾಡಿ ತನ್ನ ಹೆಂಡತಿ ಹೆಲೆನ್ ಳನ್ನು ಮರಳಿ ಪಡೆದ ಟ್ರಾಯ್ ನಗರದ ಅರಸು ಅವಳನ್ನು ಭೆಟ್ಟಿಯಾದಾಗ “ಛೇ, ಇಂಥವಳಿಗಾಗಿ ನಾನು ಇಷ್ಟು ಹಾಳಾದೆನೇ?” ಎಂದುಕೊಂಡನಂತೆ… ಇದು ಅವನ ಮನದ ಮಾತಲ್ಲ… ಯಾರೋ ಒಬ್ಬ ಬಾಹ್ಯಸೌಂದರ್ಯದ ದಾಸನು ಹೇಳಿದ್ದನೇನೋ.. ಪ್ರೀತಿಯ ಕೊಂಡಿ ಬೆಸೆಯಬೇಕಾದರೆ ಬಾಹ್ಯವಲ್ಲ,
ಅಂತರಂಗದ ಸೌಂದರ್ಯವಾದ ಹೊಂದಾಣಿಕೆಯ ಮನೋಭಾವ, ಸಭ್ಯತೆ, ಸುಸಂಸ್ಕೃತತೆ, ಸೌಜನ್ಯಯುತ ನಡೆವಳಿಕೆ, ಪ್ರಾಪಂಚಿಕಪ್ರಜ್ಞೆ, ಪರಸ್ಪರ ಅನ್ಯೋನ್ಯತೆ ಇತ್ಯಾದಿಗಳ ಅಗತ್ಯವಿದೆ.
ಆಫ್ರಿಕನ್ ರಾಷ್ಟ್ರಗಳಲ್ಲಿಯ ಜನರೆಲ್ಲರೂ ಕಪ್ಪು ಚರ್ಮದವರೇ..  ಮೊಂಡು ಮೂಗು, ದಪ್ಪ ತುಟಿ.. ಹೊಂದಿದವರು. ಬಣ್ಣವೇ ಅಳತೆಗೋಲಾಗಿದ್ದರೆ ಅವರ‍್ಯಾರೂ ವಿಶ್ವಸುಂದರಿಯರಾಗಿ ಆಯ್ಕೆಯಾಗುತ್ತಿರಲಿಲ್ಲ..!
ಆದ್ದರಿಂದ ಕಪ್ಪು ಬಣ್ಣವನ್ನು ಹೊಂದಿರುವವರು ತಮ್ಮ ಬಣ್ಣಕ್ಕಾಗಿ ಕೊರಗದೆ, ಬೆಳ್ಳಗಾಗಿಸುವುದಕ್ಕಾಗಿ ನಾನಾ ತರದ ಕೆಮಿಕಲ್ಸಗಳನ್ನು ಉಪಯೋಗಿಸಿ ಚರ್ಮದ ಆರೋಗ್ಯವನ್ನು ಹಾಳುಮಾಡಿಕೊಳ್ಳದೆ ಸುಂದರವಾದ ನಗು, ಸರಳ ನಡೆ-ನುಡಿ, ಬೌದ್ಧಿಕ ಸೌಂದರ‍್ಯಗಳಿಂದ ತಮ್ಮ ವ್ಯಕ್ತಿತ್ವವನ್ನು ಪರಿಪೂರ್ಣಗೊಳಿಸಿಕೊಳ್ಳಬೇಕು…
**

ಅವ್ವ ಯಾವಾಗಲೂ ನನ್ನನ್ನು ಮುದ್ದಿನಿಂದ ಕರೆಯುತ್ತಿದ್ದುದು “ಕಾಮಕಸ್ತೂರಿ ನೀ ಶ್ಯಾಮ ಕಸ್ತೂರಿ” ಎಂದು.. ನಾನು ಸಾದುಗಪ್ಪಿನ ತೆಳುವಾದ ಆದರೆ ಎತ್ತರದ ಕಾಯದ, ನೀಳ ಮೂಗಿನ, ದೊಡ್ಡದೊಡ್ಡ ಕಣ್ಣುಗಳ ಹುಡುಗಿ. ಸುಂದರಿಯರ ಸಾಲಿಗೆ ಸೇರದಿದ್ದರೂ ತೀರ ಕಳಪೆಯೇನಲ್ಲ. ಆದರೂ ನನ್ನ ಬಳಗದಲ್ಲಿ ಎಲ್ಲರೂ ನನ್ನನ್ನು ಕಪ್ಪು ಎಂದೇ ಗಣಿಸುತ್ತಿದ್ದರು. ಇದರಿಂದಾಗಿ ನಾನು ನನ್ನ ಬಗ್ಗೆ ಒಂದು ರೀತಿಯ ಕೀಳರಿಮೆಯನ್ನು  ಬೆಳೆಸಿಕೊಂಡುಬಿಟ್ಟಿದ್ದೆ. ಕೇವಲ ಮಬ್ಬು ಮಬ್ಬಾದ ಬಣ್ಣದ ಬಟ್ಟೆ ಹಾಕಿಕೊಂಡು ತಿರುಗಾಡುತ್ತಿದ್ದೆ. ಯಾವಾಗಲೂ ಓದುವುದು, ಬರೆಯುವುದು.. ಕಪ್ಪು ಬಣ್ಣ… ಮೇಲಾಗಿ ಈ ಪರಿ ಓದೋದು… ಚಾಳೀಶಿ ಬರತದ ಹಿಂಗಾದರ.” ಎಂದು ಎಲ್ಲರೂ ಹೀಗಳೆದು ಮಾತಾಡುತ್ತಿದ್ದರು. “ಇವಳ ಮದುವೆ ಹೇಗಾಗುತ್ತದೋ ಎಂದು ನನಗೆ ಚಿಂತೆಯಾಗಿದೆ”ಎಂದು ಅಪ್ಪ! ಅಂದು ನಮ್ಮ ಕಾಲೇಜಿನಲ್ಲಿ ಒಂದು ಡಿಬೇಟ್ ಇತ್ತು…
“ಕಪ್ಪು ಬಣ್ಣ..’
ನಾನು ಅಂದು ಈ ಬಗ್ಗೆ ಮಾತಾಡಲಿದ್ದೆ..
“ಕಪ್ಪು ಬಣ್ಣವೂ ಎಲ್ಲ ಬಣ್ಣಗಳಂತೆಯೇ ಒಂದು ಬಣ್ಣ ಮಾತ್ರ. ಹೆಣ್ಣೇಕೆ ಶ್ವೇತಸುಂದರಿಯಾಗಿರಬೇಕು?

ಸೌಂದರ್ಯವೆನ್ನುವುದು ನೋಡುಗರ ಕಣ್ಣಿನಲ್ಲಿದೆ ಎಂದು ಶೇಕ್ಸಪಿಯರ್ ನಂಥ ಮಹಾನ್ ಸಾಹಿತಿಯೇ ಹೇಳಿದ್ದಾನೆ.. ಆದರೂ ಸೌಂದರ್ಯದ ಅಳತೆಗೋಲುಗಳು ಇದ್ದೇ ಇವೆ. ಅವೇನೂ ಸೌಂದರ್ಯ ಸ್ಪರ್ಧಾಳುಗಳಿಗೆಂದು ಮಾಡಲಾದವುಗಳಲ್ಲ. ಸಾಮಾನ್ಯರ ದೃಷ್ಟಿಯಲ್ಲಿಯ ಅಳತೆಗೋಲುಗಳೇ. ಸೌಂದರ‍್ಯವೆಂದರೆ ಹಾಲುಬಿಳುಪು ಬಣ್ಣ, ಎತ್ತರವಾದ ಆದರೆ ತೆಳುವಾದ ಹಾಗೂ ಒಳ್ಳೆಯ ಉಬ್ಬು ತಗ್ಗುಗಳನ್ನು ಹೊಂದಿದ ಮೈಕಟ್ಟು, ಸ್ವಚ್ಛವಾದ ಹಾಗೂ ಹೊಳಪುಳ್ಳ ಚರ್ಮ, ಕೂದಲು ಉದ್ದ ಅಥವಾ ಗಿಡ್ಡ ಹೇಗೇ ಇರಲಿ, ಅದರೆ ದಟ್ಟವಾದ ಹಾಗೂ ನಯವಾದ ಕೇಶರಾಶಿ ಇರಬೇಕು… ದೊಡ್ಡ ದೊಡ್ಡ ಕಣ್ಣುಗಳು, ಚೂಪನೆಯ ಮೂಗು, ಪುಟ್ಟ ಬಾಯಿ, ದುಂಡು ಮುಖ… ಇತ್ಯಾದಿ ಇತ್ಯಾದಿ… ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇದು ಕೇವಲ ಬಾಹ್ಯ ಸೌಂದರ್ಯ.. ಅಂಥವರು ಸುಜ್ಞಾನಿಗಳಾಗಿರಬೇಕು ಎಂಬುದು ಕಡ್ಡಾಯವೇನಲ್ಲ..! ಅವಳು ಹೆಣ್ಣಾದ ಮಾತ್ರಕ್ಕೆ ಅವಳ ವ್ಯಕ್ತಿತ್ವಕ್ಕೆ ಬಾಹ್ಯ ಆಕರ್ಷಣೆಯೇ ಅಗತ್ಯವೆಂದು ಏಕೆ ಭಾವಿಸುವರೋ ಅರಿಯದು.
ಇದಕ್ಕೆ ಪೂರಕವಾಗಿ ನಾವು ಪ್ರತಿದಿನವೂ ಕುಟುಂಬದ ಎಲ್ಲ ಸದಸ್ಯರ ಜೊತೆಗೆ ಕುಳಿತು ವೀಕ್ಷಿಸುವ ಟಿ.ವಿ.ಗಳ ಜಾಹೀರಾತುಗಳಲ್ಲಿ, ಸೀರಿಯಲ್ಲುಗಳಲ್ಲಿ ಹಾಗೂ ಎಂದೋ ಒಮ್ಮೆ ನೋಡುವ ಸಿನೆಮಾಗಳಲ್ಲಿ ಅರೆಬೆತ್ತಲೆಯ ಹುಡಿಗೆಯರು ಅಶ್ಲೀಲವಾದ ಪೋಜು ಕೊಡುವುದನ್ನು ನೋಡಿದಾಗ ಒಂದು ಪ್ರಶ್ನೆ ಮಹಿಳೆಯ ಮನದಲ್ಲಿ ಏಳುವುದು ಸ್ವಾಭಾವಿಕವೇ._ಸ್ತ್ರೀ ಯಾವಾಗಲೂ ಪುರುಷನನ್ನು ತನ್ನ ಸೌಂದರ್ಯದಿಂದಲೇ ಆಕರ್ಷಿಸಬೇಕೆ? ಅಥವಾ ಈ ಆಕರ್ಷಣೆಯೇ ಜೀವನದ ತತ್ವವೇ? ಎನ್ನುವುದು. ದೂರದರ್ಶನದಲ್ಲಿ ಬರುವ ಆರುವಾರಗಳಲ್ಲಿ ಬೆಳ್ಳಗಾಗಿಸುವ, ಚರ್ಮದ ಸುಕ್ಕುಗಳನ್ನು ಏಳು ದಿನಗಳಲ್ಲಿ ಹೋಗಲಾಡಿಸುವ, ಮುಖದ ಕಲೆಗಳನ್ನು ಕೆಲವೇ ಬಾರಿಯ ಲೇಪನದಿಂದ ಸ್ವಚ್ಛಗೊಳಿಸುವ ಜಾಹೀರಾತುಗಳನ್ನು ನೋಡಿದಾಗ ಸ್ತ್ರೀಯ ಬಾಹ್ಯ ಸೌಂದರ್ಯ ಅದರಲ್ಲೂ ಬಿಳಿಯ ಬಣ್ಣವೇ ಸೌಂದರ‍್ಯದ ಮುಖ್ಯ ಅಳತೆಗೋಲುಗಳಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ ಎಂದೆನ್ನಿಸುತ್ತದೆ. ಏಕೆ, ಕಪ್ಪು ಸುಂದರಿಯರಾದ ದ್ರೌಪದಿ, ಕ್ಲಿಯೋಪಾತ್ರಾ ಇವರ ಸೌಂದರ್ಯದ ಖ್ಯಾತಿಯನ್ನು ಇತಿಹಾಸದಲ್ಲಿ, ಪುರಾಣಗಳಲ್ಲಿ ಓದಿಲ್ಲವೇ? ಕೇಳಿಲ್ಲವೇ? ಇವರಿಗಾಗಿ ದೇಶಗಳೇ ನಶಿಸಿ ಹೋಗಿಲ್ಲವೇ? ರಾಜ್ಯಗಳೇ ಉರುಳಿಲ್ಲವೇ?
ಒಬ್ಬ ವ್ಯಕ್ತಿ ಸುಂದರವಾಗಿ ಕಾಣುವುದು ಆವಳ ಅಥವಾ ಅವನ ಬಾಹ್ಯ ವ್ಯಕ್ತಿತ್ವದಿಂದಷ್ಟೇ ಅಲ್ಲ, ಅಂತರಂಗದ ಕೆಲವು ಅಂಶಗಳಿಂದಲೂ ಎಂಬುದು ಎಲ್ಲರೂ ತಿಳಿದಿರಲೇಬೇಕಾದ ಮಹತ್ವದ ವಿಷಯ. ನಗುಮುಖ,ನಿರರ್ಗಳವಾದ ಶುದ್ಧ ಹಾಗೂ ವಿನಯ ತುಂಬಿದ ಭಾಷಾ ಪ್ರೌಢಿಮೆ, ಒಳ್ಳೆಯ ಜ್ಞಾನ ಇವು ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಗುರುತಿಸಲು ಸಹಾಯಕವಾಗುತ್ತವೆ. ಸುಂದರವಾದ ವಸ್ತುವನ್ನು ನೋಡಿದಾಗ ಅದರಿಂದ ನಾವು ಆಕರ್ಷಿತರಾಗಿ ಅವುಗಳನ್ನು ಹೊಂದಲು ಕಾತರಿಸುತ್ತೇವೆ, ದುಡ್ಡು, ಶ್ರಮ ಖರ್ಚು ಮಾಡುತ್ತೇವೆ. ಒಮ್ಮೆ ಅದನ್ನು ಹೊಂದಿದ ಮೇಲೆ ಅದರ ಆಕರ್ಷಣೆ ಅಲ್ಲಿಗೆ ಮುಗಿಯಿತು. ಮನಸ್ಸು ಅದನ್ನು ಮರೆತುಬಿಡುತ್ತದೆ. ಆದರೆ ಸ್ತ್ರೀ ಒಂದು ವಸ್ತುವಲ್ಲ. ಅವಳು ನಮಗೆ ಸೇರಬೇಕೆಂದು ನಾವು ಅಧಿಕಾರ ಸ್ಥಾಪಿಸಬೇಕಿಲ್ಲ. ಹತ್ತು ವರ್ಷ ಯುದ್ಧ ಮಾಡಿ ತನ್ನ ಹೆಂಡತಿ ಹೆಲೆನ್ ಳನ್ನು ಮರಳಿ ಪಡೆದ ಟ್ರಾಯ್ ನಗರದ ಅರಸು ಅವಳನ್ನು ಭೆಟ್ಟಿಯಾದಾಗ “ಛೇ, ಇಂಥವಳಿಗಾಗಿ ನಾನು ಇಷ್ಟು ಹಾಳಾದೆನೇ?” ಎಂದುಕೊಂಡನಂತೆ… ಇದು ಅವನ ಮನದ ಮಾತಲ್ಲ… ಯಾರೋ ಒಬ್ಬ ಬಾಹ್ಯಸೌಂದರ್ಯದ ದಾಸನು ಹೇಳಿದ್ದನೇನೋ.. ಪ್ರೀತಿಯ ಕೊಂಡಿ ಬೆಸೆಯಬೇಕಾದರೆ ಬಾಹ್ಯವಲ್ಲ,
ಅಂತರಂಗದ ಸೌಂದರ್ಯವಾದ ಹೊಂದಾಣಿಕೆಯ ಮನೋಭಾವ, ಸಭ್ಯತೆ, ಸುಸಂಸ್ಕೃತತೆ, ಸೌಜನ್ಯಯುತ ನಡೆವಳಿಕೆ, ಪ್ರಾಪಂಚಿಕಪ್ರಜ್ಞೆ, ಪರಸ್ಪರ ಅನ್ಯೋನ್ಯತೆ ಇತ್ಯಾದಿಗಳ ಅಗತ್ಯವಿದೆ.
ಆಫ್ರಿಕನ್ ರಾಷ್ಟ್ರಗಳಲ್ಲಿಯ ಜನರೆಲ್ಲರೂ ಕಪ್ಪು ಚರ್ಮದವರೇ..  ಮೊಂಡು ಮೂಗು, ದಪ್ಪ ತುಟಿ.. ಹೊಂದಿದವರು. ಬಣ್ಣವೇ ಅಳತೆಗೋಲಾಗಿದ್ದರೆ ಅವರ‍್ಯಾರೂ ವಿಶ್ವಸುಂದರಿಯರಾಗಿ ಆಯ್ಕೆಯಾಗುತ್ತಿರಲಿಲ್ಲ..!
ಆದ್ದರಿಂದ ಕಪ್ಪು ಬಣ್ಣವನ್ನು ಹೊಂದಿರುವವರು ತಮ್ಮ ಬಣ್ಣಕ್ಕಾಗಿ ಕೊರಗದೆ, ಬೆಳ್ಳಗಾಗಿಸುವುದಕ್ಕಾಗಿ ನಾನಾ ತರದ ಕೆಮಿಕಲ್ಸಗಳನ್ನು ಉಪಯೋಗಿಸಿ ಚರ್ಮದ ಆರೋಗ್ಯವನ್ನು ಹಾಳುಮಾಡಿಕೊಳ್ಳದೆ ಸುಂದರವಾದ ನಗು, ಸರಳ ನಡೆ-ನುಡಿ, ಬೌದ್ಧಿಕ ಸೌಂದರ್ಯಗಳಿಂದ ತಮ್ಮ ವ್ಯಕ್ತಿತ್ವವನ್ನು ಪರಿಪೂರ್ಣಗೊಳಿಸಿಕೊಳ್ಳಬೇಕು…”
ನಿಮಗೆ ಹೇಗನಿಸ್ತು?

Leave a Reply