Your Cart

Need help? Call +91 9535015489

📖 Print books shipping available only in India. ✈ Flat rate shipping

ಮುಖಾ-ಮುಖಿ

ಮುಖಾ-ಮುಖಿ ( ನಾ ಮೆಚ್ಚಿದ ಇಂಗ್ಲಿಷ ಕವಿತೆಯೊಂದರ ಅನುವಾದ __ನನ್ನಿಂದ..) ಮನದಾಳದ ಕತ್ತಲಿನಲ್ಲಿ ದಿನದಿನಕ್ಕೆ ಕೊನೆಯುಸಿರೆಳೆವ ನನ್ನಂತರಂಗದ ಸಾಕ್ಷಿ ಪ್ರಜ್ಞೆಗೆ ಆಗಾಗ ಮುಖಾಮುಖಿಯಾಗುತ್ತೇನೆ. ಸುಸಜ್ಜಿತ, ಐಷಾರಾಮಿ ಹೊಟೆಲ್ಗಳಲ್ಲಿ ಬಾಗಿಲು ತೆರೆದು ಸ್ವಾಗತಿಸಿದ ಬಂಟನ ತಿಂಗಳವೇತನದಷ್ಟು ಮೊತ್ತವನ್ನು ಟೇಬಲ್ಮೇಲೆ ಇಟ್ಟು ಬರುವಾಗ… ತರಕಾರಿ ಪೇಟೆಯಲ್ಲಿ ಅಪ್ಪನ ಜೊತೆಯಲ್ಲಿ ಕುಳಿತು ನಗುನಗುತ್ತ ತರಕಾರಿ ತೂಗುವ ಚಿಣ್ಣನೊಬ್ಬ ತನ್ನ ಶಾಲಾದಿನಗಳಾಗ- ಬಹುದಾಗಿದ್ದ ಹಗಲುರಾತ್ರಿಗಳನ್ನು ಬಯಲಿನಲ್ಲಿ ಕರಗಿಸು- ವದನ್ನು ಕಂಡಾಗ… ಕೂಡುರಸ್ತೆಯಲ್ಲಿ ದಾಟಿಹೋಗುತ್ತಿರುವ ಹೆಣ್ಣಮಗಳೊಬ್ಬಳು ಮೈಮುಚ್ಚಿ ಮರ್ಯಾದೆಯುಳಿಸಿ- ಕೊಳ್ಳಲು ಹರಕು ಸೀರೆಯನ್ನು ಹಿಂದೆಮುಂದೆ […]

ಅಹಲ್ಯ

ಅಹಲ್ಯ ಕಾರ್ಗತ್ತಲಿನ ಮರೆಯಲಿ ಬೀಸುತಿಹ ಸುಳಿಗಾಳಿಯಲಿ ಗೌತಮನ ಶಾಪ ಶಿಲೆಯಾಗಿಸಿಹುದು ಬಿರುಬಿಸಿಲಿಗೂ ಮಳೆಗಾಳಿಗೂ ಕಡು ಚಳಿಗೂ ಅಲುಗಾಡದೆ ನಿಂತಲ್ಲೇ ನಿಂತಿಹಳು ತಾ ಮಾಡದ ಪಾಪಕೆ ಇಂದ್ರನ ಕುಟೀಲತೆಗೆ ಮನ ಮಿಡುಕುತಿಹಳು ರಾಮನ ಬರುವಿಗೆ ಇದಿರು ನೋಡುತ್ತಿರೆ ಯುಗಗಳೇ ಕಳೆದಿವೆ ಪ್ರತೀಕ್ಷೆ ಹುಸಿಯಾಗದೇ ಪರೀಕ್ಷೆ ಎದುರಾಗಿದೆ ಕಾಲನ ಅಣತಿಗೆ ಕೊನೆಎಂಬುದಿದೆ ತನ್ನ ಸತಿಯ ವಿರಹ ಸಹಿಸದೆ ರಾಮ ಬಂದಿಳಿದ ಕಾಡಿಗೆ ಶಿಲೆಯಲ್ಲೂ ಪ್ರತಿಮೆ ಇದೆ ಎಂಬುದ ಮನಗಾಣದೆ ಸ್ಪರ್ಶಿಸಿದ ಹರ್ಷಿಸಿದ ಶಿಲೆಯು ಪ್ರತಿಮೆಯಾಯ್ತು ಪ್ರತಿಮೆ ಜೀವ ತಳೆಯಿತು ಜೀವದ […]

ದೇವರಿಗೊಂದು ಪತ್ರ (39)

ದೇವರಿಗೊಂದು ಪತ್ರ (39) ಹರಿ “ಮನ” ದ ಮಾತೊಂದು ಹೇಳುವುದಿದೆ ನಿನ್ನಲ್ಲಿ ಹಿಂದೆ ನೊಂದಿರಲಿಲ್ಲ ಈ “ಮನ” ಇಂದು ನೊಂದಿದೆ ನೋವಿನಲಿ ದಿನ ದಿನದ ಮುಖವಾಡ ಅರಿಯುವುದು ಹೇಗೆ ಹೇಳು ನನ್ನಲ್ಲಿ ಯಾರ ಹೇಗೆ ನಂಬುವುದು ಅರಿಯದಾದೆ ನಾ ಈ ಜಗದಲ್ಲಿ ಮುಂದೆ ಹಾಡಿ ಹಿಂದಾಡಿಕೊಳುವರಯ್ಯ ಏನ ಹೇಳಲಿ ಎತ್ತಿ ಹಿಡಿವರು ಒಮ್ಮೆ ಮತ್ತೆ ಎತ್ತಿ ಒಗೆವರು ಕೆಳಗೆ ನೆಲದಲ್ಲಿ ಕಣ್ಣ ಒರೆಸುವರು ಮುಂದೆ, ವ್ಯಂಗ್ಯ ನಗುವರು ಹಿಂದೆ ಏನ ಹೇಳಲಿ ಹೊಗಳುವರು ಹೊಗಳು ಭಟ್ಟರಂತೊಮ್ಮೆ ಮಗದೊಮ್ಮೆ […]

ಚೈತ್ರದ ಚಿತ್ತಾರ

ಚೈತ್ರದ ಚಿತ್ತಾರ ಚೈತ್ರದ ಚಿಗುರಿನ ಮರೆಯಲಿ ಅವಿತೊಂದು ಹಕ್ಕಿ ಹಾಡು ಹೇಳುತಲಿ ಮನಕೆ ಎಂಥದೋ ಆನಂದ ಪ್ರಕೃತಿ ಸೌಂದರ್ಯದ ಆಹ್ಲಾದ. ಮುಗಿಲ ಮಾಳಿಗೆಯಲಿ ಬೆಳ್ಳಕ್ಕಿಗಳ ಸಾಲು ಭೂ ತಾಯಿಯ ಧೂಳು ಗೋವಿನ ಪಾಲು ಕೆಂಪಡರಿದ ಮುಗಿಲು ಎಲ್ಲೆಲ್ಲೂ ಹರಸೀತು ಚೆಲುವಿನ ಹೊನಲು. ಚೈತ್ರದ ಚಿತ್ತಾರದಿ ಹೊಸಚಿಗುರು ಮರದಿ ಇಣುಕೀತು ಸವಿನೆನಪು ಕಾಡೀತು ಮನದಿ ಒನಪು. ಕೋಗಿಲೆಯ ತಾರುಣ್ಯ ನವಿಲಿನಾ ಲಾವಣ್ಯ ಕಾಡಿನ ಗಂಧ ಅರಳಿದಾ ಹೂವಿನ ಸುಗಂಧ. ಸ್ವಚ್ಛಂದ ಗಗನ ಮೂಡಿಸಿದೆ ಅಲ್ಲಿ ತನ್ನಯ ನಯನ ಎಲ್ಲೆಲ್ಲೂ […]

ಮಾನವೀಯತೆಯ ಮೆರೆಯೋಣ

ಮಾನವೀಯತೆಯ ಮೆರೆಯೋಣ ಹುಣ್ಣಿಮೆಯ ಬೆಳ್ಳಬೆಳದಿಂಗಳಿನಲಿ ಸೂರ್ಯರಶ್ಮಿಯ ತುಣುಕೊಂದು ಮಾಯಾದೇವಿಯ ಮಡಿಲಲಿ ಬಂದಾಕ್ಷಣ ಯಾರಿಗರಿವಿತ್ತು ರಾಜನಾಗಿ ಮೆರೆಯಬೇಕಾದ ಹೊತ್ತು ಮಡಿಯುಟ್ಟು ವೈರಾಗ್ಯವೇ ಮೈಮೆತ್ತು ಕಾಡಲಿ ಅಡಿ ಇಡುವನೆಂದು ಜಗಕೆ ಶಾಂತಿಯ ಬೆಳಕಾಗುವನೆಂದು ದುಃಖವೆಂದರಿಯದ ಮನನೊಂದು ಶಾಂತಿಯನರಸುತ ನಡೆದ ವೀರ ಯಾಕಾಗಿ? ಯಾಕಾಗಿ? ತನ್ನಂತರಂಗದ ಕದವ ತೆರೆದು ಹೊಸಗಾಳಿ ಮೈಮನದಿ ಹೊಸ ಯುಗದಿ ಅಡಿಯನಿಡುತ ಬೋಧಿಯಡಿ ಬುದ್ಧನಾದ ಅನವರತ ಶಾಂತಿಯಾ ಚಿಲುಮೆಯಾದ ಜಗದ ಉದ್ದಾರವಾಯಿತೇ? ಜನರ ಬವಣೆ ಅಳಿಯಿತೇ? ಸಿದ್ದಾರ್ಥ ಬುದ್ಧನಾದ ಬುದ್ಧ ಮಹಾಪುರುಷನಾದ ಧರ್ಮಗಳ ಸಮಷ್ಠಿಗಳಲಿ ಮತ್ತೊಂದು ಧರ್ಮದ […]

ಇರುಳ ಬೆಳಕಿನ ಮಗ್ಗುಲಲ್ಲಿ

ಇರುಳ ಬೆಳಕಿನ ಮಗ್ಗುಲಲ್ಲಿ ಕನಸುಗಳ ಕೊಂದು ಇರಳಲಿ ಮನನೊಂದು ಬೆಳಕಿನ ಬಸಿರಲಿ ನಿಡುಸುಯ್ಯುತಲಿ ಭಾವನೆಗಳೇ ಇಲ್ಲವಾಗಿ ನೀರಸ ಬದುಕಿನಲಿ ನೆನಪುಗಳೇ ಮುತ್ತಿ ಬದುಕಿನ ಭಾಗವೇ ಬತ್ತಿ ಕಾಲನ ಸುಳಿಯಲಿ ಸತ್ತ ಹೆಣದಂತೆ ಬೇಯುತ ನಿಡುಸುಯ್ಯುತಲಿ ದೂರದಿಗಂತದಿ ಆಸೆಯ ಕಿರಣವೊಂದು ದೂರದಿಂದಲೇ ಸನ್ನೆ ಮಾಡಿ ಹತ್ತಿರ ಸುಳಿದು ಮನಸ್ಪರ್ಶಿಸುತ ನಿರಾಶೆಯ ಕಣ ಇಲ್ಲವಾಗಿಸುತ ಬದುಕಿನ ಬಯಕೆ ಹೆಚ್ಚಿಸುತ ಹರ್ಷದ ಹೊನಲು ಹರಿದಾಗ ಇರುಳ ಕನಸು ಕರಗಿ ಮನದ ಬೆಳಕು ಮುದವಾಗಿ ಜೀವನದ ಅಗಾಧತೆ ಅರಿವಾಗಿ ಎಲೆಲ್ಲೂ ಸೌಂದರ್ಯದ ಒರತೆ […]

ಸಹಜ ಕೃಷಿ

ಸಹಜ ಕೃಷಿ ಭೂಮಿ ಒಗೆಯುತ್ತಾ ಹೋದಂತೆ ನೇಗಿಲು ಆಳದಿಂದ ಮೇಲೆದ್ದ ಮಣ್ಣು ಎರಡೂ ಬದಿಗೆ ಹೊರಳಿ ಹೊರ ವಾತಾವರಣಕ್ಕೆ ಅನಾವರಣಗೊಳ್ಳುತ್ತಾ ಹೊಸ ಚೇತನದ ನಿರ್ಮಿತಿಗೆ ಜೀವ ತಳೆವಂತೆ, ಬಯಕೆಗಳೇ ಬಲೆಯಾಗಿ ಬಿಗಿಗೊಂಡ ಮನವನುತ್ತುತ್ತ ಅಷ್ಟೇ ಉತ್ಸಾಹ ಸ್ಪೂರ್ತಿ, ನಂಬಿಕೆ ಕನಸುಗಳ ಬೀಜಬಿತ್ತಿ ದಿಗಿಲು, ಹಠ, ಗೊಂದಲ, ನಿರಾಶಾಭಾವಗಳ ಕಳೆಕಿತ್ತು ಮನದ ತಿಳಿಬಿಳಿಯ ಕಳೆಯದೇ ಭಾವನಾತ್ಮಕ ಸೆಲೆ ಚಿಮ್ಮುವ ನೈರ್ಸಗಿಕ ಕೃಷಿಯು ಒಡಮೂಡಿ ಬರಲಿ ಹೊಸ್ಮನೆ ಮುತ್ತು

ಚೌಕಟ್ಟಿನ ಚಿತ್ರ

ಚೌಕಟ್ಟಿನ ಚಿತ್ರ ಹರಿದು ಮೀರುತಲಿ ಸಿದ್ಧ ಅಳತೆಯ ಚೌಕಟ್ಟ ಬೆಳಿಸಬೇಕಿದೆ ಕಂದಾ… ಈ ನಿನ್ನ ಘನ ವ್ಯಕ್ತಿತ್ವ ಹಿಂದೆ ಯಾರೋ ಎಂದೋ ಕೊರೆದಿಟ್ಟ ಈ ಕಿರಿಯ ಚೌಕಟ್ಟಿಗೆಂದೇ ಕಿರಿದಾಗಿಸುವಿ ಏಕೆ…? ಈ ನಿನ್ನ ಭವ್ಯ ಭವಿತವ್ಯ ಚೆಂದದೀ ಚೌಕಟ್ಟಿಗೆ ಅಂದ ಚಿತ್ರವೇ ತಾನೆನುತ ಬೋನ್ಸಾಯ್ ತೆರದಿ ಕುಬ್ಜಗೊಳಿಸುವುದು ತರವೇ…? ಬೆಳೆವ ಈ ನಿನ್ನ ಹಿರಿ ವ್ಯಕ್ತಿತ್ವ ಕ ಣ್ಣು ಮುಚ್ಚುವಾಟ ಸಾಕಿನ್ನು. ಬಿಗಿಗೊಂಡ ಮನವನುತ್ತುತ್ತ ಉತ್ಸಾಹ, ನಂಬಿಕೆ. ಕನಸುಗಳ ಬೀಜ ಬಿತ್ತಿ. ಬೆಳೆಸಬೇಕಿದೆ ನೀನೆ ನಿನ್ನ ವ್ಯಕ್ತಿತ್ವ […]

ಭೂರಮೆ ಅದೆಷ್ಟು ನಿಟ್ಟುಸಿರು ಬಿಟ್ಟಿಹಳಿಂದು

ಭೂರಮೆ ಅದೆಷ್ಟು ನಿಟ್ಟುಸಿರು ಬಿಟ್ಟಿಹಳಿಂದು ಇಡೀ ಜಗವನ್ನೇ ಸ್ತಬ್ಧವಾಗಿಸಿ ತಾನೂ ಮೌನವಾಗಿಹಳು ಜನಸಂದಣಿಯ ಗದ್ದಲಕ್ಕೆ ತಲೇಶೂಲೆ ಅನುಭವಿಸಿದಳು ಅದೆಷ್ಟು ಆಕೆ ವಾಹನಗಳ ಶಬ್ಧಕ್ಕೆ ನಲುಗಿದ್ದಳು ನಿಮಿಷ ನಿಮಿಷಕ್ಕೂ ಅದೆಷ್ಟು ಹೋಗೆ ತುಂಬಿಕೊಂಡಿದ್ದಳು ಅದೆಷ್ಟು ಬಾರಿ ಕೊಡಲಿ ಪೆಟ್ಟಿಗೆ ಹಸಿರು ರವಿಕೆ ಕುಪ್ಪಸ ಕಳಚಿದಳು ಸಹನಮೂರ್ತಿ ಧರೆ ಮತ್ತೂ ಮಳೆ ಬೆಲೆ ಸಕಾಲಕ್ಕೆ ಕೊಟ್ಟವಳು ಎಷ್ಟಾದರೂ ಕೆರೆ ಬಾವಿ ಕಾನನ ನದಿ ಒಂದೂ ಬಿಡದೆ ಮುಚ್ಚಿ ಮರೆದೆವು ನಾವು ಆದರೂ ಬರಡಾಗಿಸದೆ ಬಿಡಲಿಲ್ಲ ಉಳಿಸಲಿಲ್ಲ ನಿರ್ದಯಿ ಮನುಜ ಭಾರ […]