ದೇವರಿಗೊಂದು ಪತ್ರ!(29)
ಸೌಖ್ಯ ನಾರಾಯಣ ನಾನು!
ಹೇಳ ಬಂದೆ ಇಂದು ನಾನು!
ಏಕೋ ಇಂದು ನಾಚಿಕೆಯೂ ಕುರಿತು ಎನ್ನನು!
ಕಷ್ಟವಿರಲಿ ಸುಖವೇ ಇರಲಿ ಕೇಳಬರುವೆ ನಿನ್ನನು
ಕೊಡುವೆ ಲಂಚ , ಮಾಡು ನನ್ನ ಕೆಲಸ ಒಂದನು
ಎಲ್ಲಾ ನಿನ್ನದಿರುವಾಗ ನಾ ಮೂರ್ಖಳು ಕೊಡುವೆ ಏನೇನು?
ಯಜ್ಞ ಭಾವದಿಂದ ಕೊಟ್ಟು ನಿನಗೆ ಕೇಳಲು ನಾನು
ನೀ ಕೊಡುವೆ ಎಲ್ಲವ ಬಿಚ್ಚು ಮನದಿಂದಲಿ ಎಲ್ಲವನು
ಮಾಡುವ ಕಾಯಕವೆಲ್ಲ ಕೃಷ್ಣಾರ್ಪಣವೆನಲು ನಾನು
ಚಿತ್ತಶುದ್ಚಿ ಘಳಿಗೆಯಲ್ಲಿ ಮಾಡುವಾತನು ನೀನು!
ಸಮರ್ಪಣಾ ಭಾವವಿರಲು ನಿನ್ನಲಿ, ದಿವ್ಯಜೋತಿ ಬೆಳಗಿಸಿ ಸದಾ ಕಾಯುವವನು ನೀನು
ನಿತ್ಯ ಸ್ಮರಿಸೆ ನಿನ್ನ ನಾಮ ಎಲ್ಲಾ ಬಂಧನಗಳ ಕಳೆವೆ ನೀನು
ಎನ್ನ ಅತ್ಮದೊಳು ನೀನೇ ಇರುವೆ ಎನಲು, ಕ್ಷಣಕೆ ದುಃಖ ದುರಿತ ದೂರಮಾಡುವವನು ನೀನು!
ಕೊಟ್ಟರೆ ಅದರ ದುಪ್ಪಟ್ಟು ಕೊಡುವ ವಿಶಾಲ ಹೃದಯಿ ನೀನು!
ಉಮಾ ಭಾತಖಂಡೆ.
You must log in to post a comment.