Your Cart

Need help? Call +91 9535015489

📖 Print books shipping available only in India. ✈ Flat rate shipping

ಪಾರ್ಥನನ್ನಾವರಿಸಿತು ‘ಪ್ರಾಕೃತಕಾರುಣ್ಯ’

ಪಾರ್ಥನನ್ನಾವರಿಸಿತು ‘ಪ್ರಾಕೃತಕಾರುಣ್ಯ’ ‘ತನ್ನವರು’ ಎನ್ನುವ ಮೋಹ ಆವರಿಸಿದ ಕಾರಣ ಅರ್ಜುನನಿಗೆ ಅಕ್ಷಮ್ಯ ಅಪರಾಧಿಗಳಲ್ಲೂ ‘ಅನುಕಂಪ’ ಮೂಡುತ್ತಿದೆ! ಆತ ಹೇಳುತ್ತಾನೆ – ನ ಕಾಂಕ್ಷೇ ವಿಜಯಂ ಕೃಷ್ಣ , ನ ಚ ರಾಜ್ಯಂ ಸುಖಾನಿ ಚ—-“ಕೃಷ್ಣ ! ನನಗೆ ಗೆಲುವೂ ಬೇಡ , ರಾಜ್ಯವೂ ಸುಖಭೋಗಗಳೂ ಬೇಡ! ನನ್ನ ಬಂಧುಬಾಂಧವರೇ ಸತ್ತ ಮೇಲೆ ಈ ರಾಜ್ಯಭೋಗಗಳಿಂದ ಏನಾಗಬೇಕು? ದುಷ್ಟರಾದ ಈ ಧಾರ್ತರಾಷ್ಟ್ರರು ಎಷ್ಟಾದರೂ ನನ್ನ ’ಸ್ವಜನರು’ “. ಅರ್ಜುನನ ಮಾತುಗಳು ಮೇಲ್ನೋಟಕ್ಕೆ ಅಹುದಹುದು ಎಂದೆನಿಸೀತು. ತಮಾಷೆಯೇನೆಂದರೆ ಆತನಿಗೆ ಕಷ್ಟವೆನಿಸುತ್ತಿರುವುದು […]

ಸಣ್ಣ ಹಕ್ಕಿಗಳ ದೊಡ್ಡ ಕೆಲಸ

ಸಣ್ಣ ಹಕ್ಕಿಗಳ ದೊಡ್ಡ ಕೆಲಸ ಬಹಳ ಹಿಂದಿನ ಕಾಲದ ಕತೆ ಇದು. ಒಂದು ಊರಲ್ಲಿ ಒಬ್ಬ ರಾಜ ಇದ್ದ. ಬಹಳ ಒಳ್ಳೆಯ ರಾಜ. ಪ್ರಜೆಗಳನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಿದ್ದ. ಅವರ ಸುಖಕ್ಕಾಗಿ ಶ್ರಮಿಸುತ್ತಿದ್ದ. ಒಂದು ದಿನ ಊರ ರೈತರೆಲ್ಲ ರಾಜನ ಬಳಿಗೆ ಬಂದು, ‘ಮಹಾಸ್ವಾಮಿ, ಊರಲ್ಲಿ ಗುಬ್ಬಿಗಳು ಬಹಳ ಹೆಚ್ಚಾಗಿವೆ. ಸಾವಿರ ಸಾವಿರ ಸಂಖ್ಯೆಯಲ್ಲಿ ಅವು ಹೊಲಗಳನ್ನು ಮುತ್ತುತ್ತಿವೆ. ನಮಗೆ ಕಷ್ಟನಷ್ಟ ಉಂಟು ಮಾಡುತ್ತಿವೆ. ಈ ಗುಬ್ಬಿಗಳನ್ನೆಲ್ಲ ಕೊಲ್ಲಿಸಿ ನಮ್ಮ ಸಂಕಟವನ್ನು ಪರಿಹರಿಸಿ’ ಎಂದು ಬೇಡಿಕೊಂಡರು. ಅರಸನು […]

ಕನ್ನಡ ಇ- ಪುಸ್ತಕಗಳ ಪ್ರಕಟನೆ, ಖರೀದಿ , ಓದುವುದು ಹೇಗೆ?

Kannada ebooks ( ಇ- ಪುಸ್ತಕಗಳ ಪ್ರಕಟನೆ, ಖರೀದಿ , ಓದುವುದರ ಬಗ್ಗೆ ಮಾಹಿತಿ): ಇತ್ತೀಚಿನ ದಿನಗಳಲ್ಲಿ ಎಲ್ಲಾ ಭಾಷೆಗಳಲ್ಲಿ – ಇ ಪುಸ್ತಕಗಳ ಖರೀದಿ/ ಜನಪ್ರಿಯತೆ/ ಲಭ್ಯತೆ ಹೆಚ್ಚಾಗಿದೆ. ಮುಂಚಿನಿಂದ ಹಾರ್ಡ್ ಕಾಪಿ ಪುಸ್ತಕಗಳು, ಪತ್ರಿಕೆಗಳು ನಮಗೆ ಪರಿಚಿತವಾದರೂ, ಪ್ರಿಯವಾದರೂ ಅವನ್ನು ಕೊಳ್ಳಲು ಅಂಗಡಿಗಳಿಗೆ ಹೋಗಿ ವಿಚಾರಿಸಿ ಕೊಳ್ಳಬೇಕು. ಈಗಿನ ಕಾಲದಲ್ಲಿ ಈ ಚಟುವಟಿಕೆಗೆ ಪ್ರತ್ಯೇಕ ಸಮಯ/ ಅವಕಾಶದ ಅಭಾವ ಇತ್ಯಾದಿ ಹಲವು ನಿರ್ಬಂಧಗಳು ನಮಗೆ ಕಾಡುತ್ತವೆ. ಅದರಲ್ಲೂ ಎಲ್ಲ ಲೇಖಕರ /ಎಲ್ಲ ವಿಷಯದ ಕನ್ನಡ […]

ಮಳೆನಿಂತ ಹಗಲಿನ ಜೊತೆಗೆ ನಾಲ್ಕಾರು ಕನ್ನಡ ಮಾತು

ಮಳೆನಿಂತ ಹಗಲಿನ ಜೊತೆಗೆ ನಾಲ್ಕಾರು ಕನ್ನಡ ಮಾತು ಹನ್ನೆರಡನೆಯ ಶತಮಾನದ ವಚನಕಾರರು ಬರೆದರು ನಡೆದಡೆ ನಡೆಗೆಟ್ಟ ನಡೆಯ ನಡೆವುದಯ್ಯ ನುಡಿದಡೆ ನುಡಿಗೆಟ್ಟ ನುಡಿಯ ನುಡಿವುದಯ್ಯ ಒಡಲ ಹಿಡಿದಡೆ ಹಿಡಿಯದೆ ಹಿಡಿವುದಯ್ಯ ಕೂಡುವೆಡೆ ಕೇಡಿಲ್ಲದೆ ಕೂಟವ ಕೂಡುವುದಯ್ಯ ಆಮೇಲೆ ಬಂದ ದಾಸರು ಬರೆದರು; ಅನ್ಯರಲಿ ಜನಿಸಿರ್ದ ಅಂಗನೆಯ ಕರೆತಂದು ತನ್ನ ಮನೆಗವಳ ಯಜಮಾನಿ ಎನಿಸಿ ಭಿನ್ನವಿಲ್ಲದೆ ಅರ್ಧದೇಹವೆನಿಸುವ ಸತಿಯು ಕಣ್ಣಿನಲಿ ನೋಡಲಮ್ಮಳು ಕಾಲವಶದಿ ಇದೇ ಸುಮಾರಿಗೆ ಬಂದ ಕುಮಾರವ್ಯಾಸ ಬರೆದ; ಹಿರಿಯರಿಲ್ಲದ ಸಭೆ ಮನುಷ್ಯರ ನೆರವಿಯದು ಸಭೆಯಲ್ಲ ಮೂರ್ಖರು […]

ನೈವೇದ್ಯ

ನೈವೇದ್ಯ ಹಚ್ಚಲು ಬೇಸರಿಸುತೆ ಸುಣ್ಣಬಣ್ಣಗಳ ಗೋಡೆಗೆ ಫಲವೇನು? ಮಿಂದು ಮಿಂದು ಮಡಿಯುಟ್ಟು ಹಳಿದು ಪರರ ಫಲವೇನು? ಮುಟ್ಟದಿರೆನ್ನ ಮಡಿ ಮಡಿ ಎಂದು ಅಡಿಗಡಿಗೆ ಕೆಟ್ಟ ಯೋಚನೆ ಮಾಡಿ ಫಲವೇನು? ಸ್ವಾರ್ಥದಿಂದಲಿ ಮೂರ್ತಿಯ ಪುಷ್ಪ ಗಂಧದಿಂದಲಿ ಅರ್ಚನೆ ಮಾಡಿ ಫಲವೇನು? ಉಣ್ಣದ ದೇವನಿಗೆ ಮೃಷ್ಟಾನ್ನವನೇ ಮಾಡಿ ನೈವೇದ್ಯ ಮಾಡಲು ಫಲವೇನು? ಹಚ್ಚು ಬಣ್ಣವನು ನಿನ್ನಂತರಾತ್ಮನಿಗೆ ಶುಭ್ರ ನಿಶ್ಚಲವಾಗಿಸು ಮನವನು ತೊಡಿಸು ನುಡಿಗಳ ಆಭರಣ ಅಪಶಬ್ದವಿರದಂತೆ ಮಡಿ ಇರಲಿ ಮಾತುಗಳಲಿ ಸಕಲರಲಿ ದಯೆ ಅನುಕಂಪಗಳೇ ಪುಷ್ಪ ಗಂಧಗಳ ಅರ್ಚನೆಯಾಗಿರಲಿ ಉಣ್ಣುವ […]

ಚಂಚಲಕ್ಕಾ

ಚಂಚಲಕ್ಕಾ ಛಂಗ ಛಂಗನೆ ಕುಣಿಯುತ ಮಾಯದ ಕೋಡಗ ಬಂದಿತ್ತು ಎದುರಿಗೆ ನಿಂತು ನಕ್ಕು ನಲಿದು ಮೋಡಿಯ ಮಾಡಿತ್ತು ಒಡನೆ ಗೆಳೆತನ ಬೆಳೆಸಿತ್ತು ಮನದಲಿ ನೂರು ಆಮಿಷ ಒಡ್ಡಿ ಮನವನು ಚಂಚಲ ಮಾಡಿತ್ತು. ಬೇಕು ಬೇಕುಗಳ ಸುಂದರ ಗೋಪುರ ದಿನೆ ದಿನೆ ಏರಿಸಿ ಹುಚ್ಚದೊ ಹಿಡಿಸಿತ್ತು ಎಲ್ಲೆಡೆ ಗರಗರ ಓಲಾಡಿಸಿ ತಾ ಒಳಗೆ ಮನೆಯನೆ ಕಟ್ಟಿತ್ತು. ಸ್ವಾರ್ಥದ ಕುಟಿಲತೆ ಬೆಳೆಸಿತ್ತು ಮನುಜನ ಜುಟ್ಟನೆ ಹಿಡಿದಿತ್ತು. ಆಸೆಯ ಮದದಲಿ ಚಂಚಲನಾದರೆ ಕೋಡಗ ಸೌಧವ ಕಟ್ಟುವುದು ಇದ್ದುದರಲ್ಲಿ ಸುಖವನು ಕಾಣುವವಗೆ ಕೊಡಗ […]

ಪುಣೆಯ ಕ್ರಾಂತಿಕಿಡಿಗಳು : ಚಾಪೇಕರ್ ಸಹೋದರರು

ಪುಣೆಯ ಕ್ರಾಂತಿಕಿಡಿಗಳು : ಚಾಪೇಕರ್ ಸಹೋದರರು ಚಾಪೇಕರ್ ಸಹೋದರರು: ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಮೈಲಾರ ಮಹಾದೇವರ ಕುಟುಂಬ ಸೆರೆವಾಸ ಅನುಭವಿಸಿದರೆ ವಿವೇಕಾನಂದರ ಕುಟುಂಬ ರಾಷ್ಟ್ರಜಾಗೃತಿಯಲ್ಲಿ ತೊಡಗಿಕೊಂಡ ಸ್ಫೂರ್ತಿದಾಯಕ ಕಥೆಯನ್ನು ಓದಿದ್ದೇವೆ. ಪುಣೆಯ ಚಾಪೇಕರ್ ಕುಟುಂಬ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬಲಿದಾನಗೈದು ಭಾರತಮಾತೆಯ ದಾಸ್ಯ ವಿಮುಕ್ತಿ ಆಂದೋಲನದಲ್ಲಿ ಸಂಪೂರ್ಣವಾಗಿ ತನ್ನನ್ನು ಸಮರ್ಪಿಸಿಕೊಂಡ ಕಥೆ ರೋಮಾಂಚನಕಾರಿ. ಒಂದೇ ತಾಯಿಯ ಮಡಿಲಲ್ಲಿ ಜನಿಸಿದ ಮೂವರು ದಾಮೋದರ ಚಾಪೇಕರ್, ಬಾಲಕೃಷ್ಣ ಚಾಪೇಕರ್ ಮತ್ತು ವಾಸುದೇವ್ ಚಾಪೇಕರ್ ತಮ್ಮ ಅಪ್ರತಿಮ ಶೌರ್ಯ […]

ಪಾರ್ಥನ ಪ್ರಜ್ಞೆ ಪರವಶ !

ಪಾರ್ಥನ ಪ್ರಜ್ಞೆ ಪರವಶ ! ‘ಧರ್ಮಕ್ಷೇತ್ರ’ವೆನಿಸಿದ ಕುರುಕ್ಷೇತ್ರ ಭೂಮಿಯ ವಿಚಾರವನ್ನು ನೋಡಿದ್ದೇವೆ. ಧೃತರಾಷ್ಟ್ರನು ಕೇಳಲಾಗಿ ಸಂಜಯನು ಕೃಷ್ಣಾನುಗ್ರಹದಿಂದ ಪಡೆದಿದ್ದ ದಿವ್ಯದೃಷ್ಟಿಯಿಂದ ಯುದ್ಧಭೂಮಿಯಲ್ಲಿನ ಆಗುಹೋಗುಗಳನ್ನು ಕುಳಿತಲ್ಲಿಂದಲೇ ನೋಡುತ್ತ ವಿವರಿಸುತ್ತಾನೆ. ಅಲ್ಲಿ ನೆರೆದ ಉಭಯಸೈನ್ಯಗಳು, ಅವುಗಳ ಪ್ರಮುಖರು, ಇತರ ಯುಯುತ್ಸುಗಳು, ಯುಧಿಷ್ಠಿರನು ಆಚಾರ್ಯ ದ್ರೋಣರಲ್ಲಿ ನಿವೇದನೆ ಮಾಡಿಕೊಂಡಿದ್ದು, ಶಂಖನಾದದ ಮೂಲಕ ಭೀಷ್ಮಾಚಾರ್ಯರು ಯುದ್ಧಘೋಷ ಮಾಡಿದ್ದು, ಅದನ್ನು ಅನುಸರಿಸಿ ಇತರ ವೀರರು ಮಾಡಿದ ಭಯಂಕರ ಶಂಖನಾದಗಳು, ಶ್ವೇತಾಶ್ವಗಳ ರಥದಲ್ಲಿ ಶ್ರೀಕೃಷ್ಣನ ಸಾರಥ್ಯದಲ್ಲಿ ಶಸ್ತ್ರಸಜ್ಜಿತನಾಗಿ ಬಂದಿದ್ದ ಅರ್ಜುನ ಹಾಗೂ ಅವರಿಬ್ಬರು ಮಾತುಕತೆ ಇತ್ಯಾದಿಗಳನ್ನು […]

ಜಾಣ ಬಾಲಕ

ಜಾಣ ಬಾಲಕ ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ. ಅವನೊಬ್ಬ ನುರಿತ ಚಿತ್ರ ಕಲಾವಿದ ಆಗಿದ್ದನು. ಅವನು ಸುಂದರವಾದ ಜಾಗಗಳಿಗೆ ಹೋಗಿ ಅಲ್ಲಿ ಚಿತ್ರಗಳನ್ನು ಬರೆಯುತ್ತಿದ್ದನು. ಒಂದು ದಿನ ರಾಜನು ಬೆಟ್ಟಗುಡ್ಡಗಳಿರುವ ಜಾಗಕ್ಕೆ ಹೋದನು. ಸುತ್ತಲಿನ ಬೆಟ್ಟಗಳು, ಮರಗಳು, ಹುಲ್ಲುಗಾವಲಿನ ಅಂದವನ್ನು ನೋಡುತ್ತಾ ಅವನು ಚಿತ್ರ ಬರೆಯಲು ತೊಡಗಿದನು. ತುಂಬಾ ಹೊತ್ತಿನವರೆಗೆ ರಾಜನು ಬೆಟ್ಟದ ತುದಿಯಲ್ಲಿ ನಿಂತು ಚಿತ್ರ ಬರೆಯುತ್ತಿದ್ದನು. ಕೊನೆಗೆ ಅವನು ಚಿತ್ರವನ್ನು ಪೂರ್ಣ ಮಾಡಿದನು. ಬಳಿಕ ಅರಸನು ಹಿಂದೆ ಹಿಂದೆ ಹೋಗುತ್ತಾ ಚಿತ್ರವನ್ನು ಪರೀಕ್ಷಿಸತೊಡಗಿದನು. ದೂರದಿಂದ […]