Your Cart

Need help? Call +91 9535015489

📖 Print books shipping available only in India. ✈ Flat rate shipping

ಜಯವಿಜಯರೆಂಬ ಸೋದರರು ದ್ವಾರಪಾಲಕರಾದರು

ಜಯವಿಜಯರೆಂಬ ಸೋದರರು ದ್ವಾರಪಾಲಕರಾದರು ಕನಕದಾಸರು ಉಡುಪಿಯ ಶ್ರೀಕೃಷ್ಣನನ್ನು ತಮ್ಮ ಕಡೆಗೆ ತಿರುಗಿಸಿಕೊಂಡದ್ದು, ಗೋಡೆಯಲ್ಲೊಂದು ಕಿಂಡಿ ಮೂಡಿ ಕೃಷ್ಣ ದರ್ಶನ ನೀಡಿದ್ದು ಜನಜನಿತ. ಹೊರಗಡೆ ನಿಂತು ಬಾಗಿಲನು ತೆರೆದು ಸೇವೆಯನು ಕೊಡೋ ಹರಿಯೇ ಎಂದು ಕನಕದಾಸ ಹಾಡಿದ್ದೂ ಮನೆಮಾತು. ಈ ಭಕ್ತಿಗೀತೆಯಲ್ಲೇ ಬರುವ ಮತ್ತೊಂದು ಸಾಲು ನಿಮಗೆ ನೆನಪಿರಬಹುದು; ಕರಿರಾಜ ಕಷ್ಟದಲಿ ಆದಿಮೂಲ ಎಂದು ಕರೆಯಲಾಕ್ಷಣ ಬಂದು ಒದಗಿದೆಯೋ ನರಹರಿಯೆ ಇಂಥ ಪದಗಳನ್ನು ಹಾಡುವವರಿಗೂ ಕೇಳುವವರಿಗೂ ಕರಿರಾಜನಿಗೆ ಬಂದ ಕಷ್ಟವೇನು? ಅವನ ಕಷ್ಟಕ್ಕೆ ಆದಿಮೂಲ ಬಂದು ಒದಗಿದ್ದಾದರೂ ಹೇಗೆ ಅನ್ನುವುದು […]

ಇಸ್ಲಾಂಪುರವೆಂಬ ಮುಸ್ಲೀಮರೂರು

ಇಸ್ಲಾಂಪುರವೆಂಬ ಮುಸ್ಲೀಮರೂರು ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ “ನೀನಾಸಮ್ ರಂಗ ಸಂಗೀತಗಳ” ದಾಖಲೀಕರಣದ ಇನ್ನೊಂದು ಪ್ರಸ್ತುತಿ ಇಲ್ಲಿದೆ: ನಾಟಕ: ಆಲೀಬಾಬಾ | ನೀನಾಸಮ್ ತಿರುಗಾಟ | ನಾಟಕಕಾರ/ಗೀತಕಾರ: ಚಂದ್ರಶೇಖರ ಕಂಬಾರ | ನಾಟಕ ನಿರ್ದೇಶನ: ಕೆ.ಜಿ. ಕೃಷ್ಣಮೂರ್ತಿ | ಸಂಗೀತ ಸಂಯೋಜನೆ: ಅಕ್ಷರ ಕೆ.ವಿ ಇಸ್ಲಾಂಪುರವೆಂಬ ಮುಸ್ಲಿಮರೂರು, ಅಲ್ಲಾನ ಭಕ್ತರು ಅಲ್ಲಿಯ ಜನರು ಎದ್ದರೆ ಬಿದ್ದರೆ ಅಲ್ಲಾ ಎನ್ನುವರು, ಎದ್ದಾಗ ಶ್ರೀಮಂತರಾದರು ಕೆಲರು ಆ ಊರಿನಲ್ಲೊಬ್ಬ ಆಲೀಬಾಬಾ, ಅಂತಿದ್ದ ಅಲ್ಲಾಗೆ ತೋಬಾತೋಬಾ ಆತನ ಕಂಡರೆ […]

ಕರ್ಮಕಾಂಡ – ಹಣ್ಣು ಹಣ್ಣು – ತಾಯಿಬೇರು – ಎಲೆಲೆ

ಕರ್ಮಕಾಂಡ – ಹಣ್ಣು ಹಣ್ಣು – ತಾಯಿಬೇರು – ಎಲೆಲೆ ತಮ್ಮೆಲ್ಲ ಉತ್ಥಾನ – ಉಡಾನಗಳಿಗೆ ತಾಯಿಬೇರೇ ಕಾರಣವೆಂದು ಈ ಊರ್ಧ್ವ ಶಾಖೆಗಳಿಗೆ ಯಾರು ತಿಳಿಹೇಳಬೇಕು??? ಏನೇ ಹೇಗೇ ಹೇಳಿದರೂ ಹಣ್ಣು ಹಣ್ಣು ಮುದುಕ – ಮುದುಕಿಯರ ವ್ಯರ್ಥಾಲಾಪದ label ಅಂಟಿಸಿದರೆ ಸಹಿಸುವದಾದರೂ ಹೇಗೇ?? ಇದು ನಮ್ಮ ಕರ್ಮಕಾಂಡ ನಾವೇ ಅನುಭವಿಸಬೇಕು ಎಂದುಕೊಂಡರೂ ಮೈಯಲ್ಲಿ ಹರಿಯುವದು ರಕ್ತ ಅಂದಮೇಲೆ ಭಾವನೆಗಳಿಗೆ ಅಂಕುಶ ಸಾಧ್ಯವೇ…..???? ಎಲೆಲೆ ಭಾವನೆಗಳೇ, ಹಣ್ಣಾಗಿರುವ ದೇಹಗಳಲ್ಲಿಯೇ ಇಷ್ಟು ಮಿಡಿಯುವ ನೀವು ಹದಿ-ಹೃದಯಗಳಲ್ಲೇಕೆ ಕಲ್ಲಾಗುತ್ತೀರಾ???

ಫಾಲ್ಗುಣನಿಗೆ ನಮನ

ಫಾಲ್ಗುಣನಿಗೆ ನಮನ ಆಗಮಿಸಿತು ವಿನೂತನ ವರ್ಷ ಮೂಡಿಸುತ ಸರ್ವರಲಿ ಹರ್ಷ ಧರೆಗಿದೋ ತೋರಣಗಳ ಸ್ಪರ್ಷ ಕೆಣಕಿ ಕರೆಯಿತು ಮತ್ತೆ ಋತುಗಳ ರಾಜನ ಶುರುವಾಯಿತು ಕೂ..ಕೂ.. ಕೋಗಿಲೆ ಗಾಯನ ಹಕ್ಕಿಗಳ ಚಿಲಿಪಿಲಿ ಕಲವರದ ಸೋಪಾನ ಕಳೆದ ಕಾಲದ ಕಹಿಯ ಮರೆತು ನವ ವರ್ಷಕೆ ಸಹಜ ಬೆರೆತು ಮೂಡಲಿ ನವೋಲ್ಲಾಸವು ಹೊಸತು ಹೊತ್ತು ಹಲವು ನಿರೀಕ್ಷೆಯ ಕನಸು ಆಗುವುದಿದೆ ಮುಂದೆಲ್ಲವು ನನಸು ಕೂಡಿ ಕುಣಿಯುವುದೇ ಬಲು ಸೊಗಸು

ಪ್ರಭುತ್ವವನ್ನು ಒಪ್ಪಿಕೊಂಡವನು ಸಾಹಿತಿ ಆಗಲಾರ

ಪ್ರಭುತ್ವವನ್ನು ಒಪ್ಪಿಕೊಂಡವನು ಸಾಹಿತಿ ಆಗಲಾರ ಕತೆಗಾರರು ಬಡತನದಲ್ಲಿ ಹುಟ್ಟುತ್ತಾರೆ. ಬಡತನದ ಅನುಭವಗಳನ್ನು ಬರೆದು ಶ್ರೀಮಂತರಾಗುತ್ತಾರೆ. ಆ ಬಡತನದ ಅನುಭವಗಳನ್ನು ಓದಿದ ಶ್ರೀಮಂತರು ತಾವೆಷ್ಟು ಬಡವರು ಅಂದುಕೊಂಡು ಒಳಗೊಳಗೇ ಕೊರಗುತ್ತಾರೆ. ಇದಕ್ಕೆ ಒಳ್ಳೆಯ ಉದಾಹರಣೆ ಗಾಲ್ಸ್ ವರ್ದಿ. ಜಾನ್ ಗಾಲ್ಸ್ ವರ್ದಿ. ಇಂಗ್ಲಿಷ್ ನಾಟಕಕಾರ ಮತ್ತು ಕಾದಂಬರಿಕಾರ. 1932ರಲ್ಲಿ ಅವನಿಗೆ ನೊಬೆಲ್ ಬಂತು. ಮೇಲ್ಮಧ್ಯಮ ವರ್ಗದ ಬ್ರಿಟಿಷರ ಬದುಕನ್ನೂ ಇಂಗ್ಲೆಂಡಿನ ಸಾಮಾಜಿಕ ಸ್ಥಿತಿಗತಿಯನ್ನೂ ತೆಳುವಾಗಿ ಗೇಲಿ ಮಾಡುತ್ತಾ ಬರೆದವನು ಗಾಲ್ಸ್ ವರ್ದಿ. ಆತ ಕಾದಂಬರಿಯೇ ತನ್ನ ಸಾಮಾಜಿಕ ನಿಲುವುಗಳನ್ನು […]

ಶಬ್ದಗಳಿಗೆ ಜೀವ ಬರಲು!

ಶಬ್ದಗಳಿಗೆ ಜೀವ ಬರಲು! ಒಡಲ ದುಃಖ ಕಡಲಗಲವಾಗಿ ಉರುಹಿ ಉರುಹಿ ಬೇಸರವಾಗಿ ದುಃಖ ಉಮ್ಮಳಿಸಿತೆನ್ನ ದೇಹ ಭಾರವಾಯಿತೆನ್ನ ಉಸಿರು ಭಾರವಾಯಿತೆನ್ನ ಭುವಿಗೆ ಭಾರವಾದಂತೆ ಭಾಸ ಕೆಣಕಿ ಕೆಣಕಿ ಅಣಕಿಸಿತ್ತು ಮೌನ ಮುಂದೊಂದು ಕ್ಷಣಕೆ ನೂಪುರದ ರಿಂಘಣವಾಗಿತ್ತು ಮನಕೆ ಮೌನ ಮುರಿದು ಶಬ್ದ ತಡೆಯದಾದೆ ಮಿಂಚಿನ ಸಂಚಾರ ದೇಹಕ್ಕಾಗಿ ಚಿಂತೆ ಚಿಂತನೆಯ ತಿರುವು ಪಡೆಯೆ ಭಾವನೆಗಳು ಬದಲಾಗಿ ಭಾರ ನಾನಾಗಲೊಲ್ಲೆ ಆಭಾರಿಯು ನಾ ಈ ಭುವಿಗೆ ಸಕಲ ಜೀವ ಕೋಟಿಗೆ ಋಣಿಯು ನಾ ಎಲ್ಲರಿಗೆಂದು ಬಗೆದು ಋಣವ ತೀರಿಸಲು […]

ಇಲ್ದಿದ್ದರೇನಂತೆ ಪಾದ್ರಿ ಪುರಾಣ

ಇಲ್ದಿದ್ದರೇನಂತೆ ಪಾದ್ರಿ ಪುರಾಣ ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ “ನೀನಾಸಮ್ ರಂಗಸಂಗೀತಗಳ ದಾಖಲೀಕರಣ” ಯೋಜನೆಯ ಇನ್ನೊಂದು ಪ್ರಸ್ತುತಿ ಇಲ್ಲಿದೆ. ಮೂರು ಕಾಸಿನ ಸಂಗೀತ ನಾಟಕ – ೧೯೮೬ ನೀನಾಸಮ್ ತಿರುಗಾಟ | ನಾಟಕಕಾರ: ಬರ್ಟೋಲ್ ಬ್ರೆಕ್ಟ್ | ಅನುವಾದ, ಗೀತಕಾರ: ಕೆ.ವಿ. ಸುಬ್ಬಣ್ಣ | ನಾಟಕ ನಿರ್ದೇಶನ: ಅಕ್ಷರ ಕೆ.ವಿ | ಸಂಗೀತ ಸಂಯೋಜನೆ:ಶ್ರೀನಿವಾಸ ಭಟ್ (ಚೀನೀ) ಇಲ್ದಿದ್ದರೇನಂತೆ ಪಾದ್ರಿ ಪುರಾಣ ಕಾಲ್ಗೆಜ್ಜೆ ಝಣಝಣ ಮಂಗಳ ತೋರಣ ಯಾರಾದರೇನಂತೆ ನೆಂಟರು ಕುಲಗೋತ್ರ ಯಾರು ಕೊಟ್ಟರು […]

ವಿದೇಶಿ ನೆಲದ ಭಾರತಪ್ರೇಮಿ ಮೇಡ೦ ಭಿಕಾಜಿ ಕಾಮಾ

ವಿದೇಶಿ ನೆಲದ ಭಾರತಪ್ರೇಮಿ ಮೇಡ೦ ಭಿಕಾಜಿ ಕಾಮಾ ಮೇಡ೦ ಭಿಕಾಜಿ ಕಾಮಾ: ಭಾರತದ ಸ್ವಾತ೦ತ್ರ್ಯ ಸ೦ಗ್ರಾಮದ ಇತಿಹಾಸದಲ್ಲಿ ಧ್ರುವತಾರೆಯಾಗಿ ಮೆರೆದ ಮಹಿಳೆಯರಲ್ಲಿ ಒಬ್ಬರು ಮು೦ಬೈನ ಮೇಡ೦ ಭಿಕಾಜಿ ಕಾಮಾ. ಮೇಡಂ ಕಾಮಾ ಚಿಕ್ಕಂದಿನಿಂದಲೂ ಅಪಾರ ದೇಶಾಭಿಮಾನಿ. ತೀವ್ರ ಪ್ಲೇಗ್ ರೋಗಕ್ಕೆ ತುತ್ತಾಗಿ ಆಕೆ ಬಂಧುಗಳ ಒತ್ತಾಯದ ಮೇರೆಗೆ ದೇಶ ತ್ಯಜಿಸಿ ಲಂಡನ್ ಗೆ ಹೋಗಬೇಕಾಯಿತು. ಅಲ್ಲಿ ಗುಣಮುಖಳಾದ ಕಾಮಾ ಅಲ್ಲೇ ತನ್ನ ರಾಷ್ಟ್ರ ಜಾಗೃತಿಯ ಕಾರ್ಯಗಳನ್ನು ಆರಂಭಿಸಿದಳು. ಪರದೇಶದಲ್ಲೇ ಇತರ ದೇಶಭಕ್ತರೊಡಗೂಡಿ ಭಾರತದ ಧ್ವಜವನ್ನು ರೂಪಿಸಿದ ಮೇಡಂ […]

ಕರಿ-ಲಡಕಾಸಿ-ಹಟ-ಬಿಂಕ

ಕರಿ-ಲಡಕಾಸಿ-ಹಟ-ಬಿಂಕ ಮುಖದ ಬಣ್ಣ ಬಿಳಿ ಹೃದಯದ್ದು ಕರಿ… ಸ್ವಭಾವದಲ್ಲಿ ಸಲ್ಲದ ಬಿಂಕ.. ಧ್ವನಿ ಪಾಂಚಜನ್ಯ ಶಂಖ… ಹಟಯೋಗದಲ್ಲಿ ಚಂಡಿ… ಎಲ್ಲರೂ ಊರಲೇಬೇಕು ಮಂಡಿ… ಇಂಥ ಲಡಕಾಸಿ ಹುಡುಗಿಗೆ ಶ್ರೀರಾಮನಂಥ ಗಂಡ…. ಕಾದು ನೋಡಬೇಕಾಗಿದೆ… ವನವಾಸ ಅವನಿಗೋ… ಋಷ್ಯಾಶ್ರಮ ಅವಳಿಗೋ….