ಮುಮುಸ್ಲಿಮರು ಆಚರಿಸುವ ಹಬ್ಬಗಳು ಎರಡು ಮಾತ್ರ. ರಂಜಾನ್ ತಿಂಗಳ ಉಪವಾಸದ ಕೊನೆಯಲ್ಲಿ ಆಚರಿಸುವ ‘ಈದುಲ್ ಫಿತ್ರ್’ ಮತ್ತು ಇಸ್ಲಾಮಿಕ್ ಕ್ಯಾಲೆಂಡರಿನ ಕೊನೆಯ ತಿಂಗಳು ದುಲ್ ಹಜ್ಜ್ 10ರಂದು ಆಚರಿಸುವ ‘ಈದುಲ್ ಅಝ್ಹಾ’ ಅಥವಾ ಬಕ್ರೀದ್.ಇದೀಗ ರಂಜಾನ್ ತಿಂಗಳು ಕೊನೆಯ ಹಂತ ತಲುಪಿದ್ದು, ಜಗತ್ತಿನಾದ್ಯಂತ ಮುಸ್ಲಿಮರು ಜೂನ್ 5 ಅಥವಾ 6ರಂದು ‘ಈದುಲ್ ಫಿತ್ರ್’ ಆಚರಿಸಲಿದ್ದಾರೆ. ರಂಜಾನ್ ತಿಂಗಳ 30 ದಿನಗಳನ್ನು ಉಪವಾಸ, ಪ್ರಾರ್ಥನೆ, ಅಧ್ಯಾತ್ಮದಲ್ಲೇ ಕಳೆದು ಕೊನೆಯಲ್ಲಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುವರು.ಮಸೀದಿ ಅಥವಾ ಈದ್ಗಾಗಳಲ್ಲಿ ನಡೆಯುವ ‘ಈದ್ […]
Month: May 2019
ದುಷ್ಟತನದ ಸ್ನೇಹಫಲ!”,
ಇಬ್ಬರು ಸ್ನೇಹಿತರು; ಒಬ್ಬರು ಇನ್ನೊಬ್ಬರನ್ನು ಮೀರಿಸುವಷ್ಟು ಪರಮಲೋಭಿಗಳು.ಇಬ್ಬರೂ ತಪಸ್ಸಿಗೆಂದು ಕುಳಿತರು. ಕಠಿಣವಾದ ತಪಸ್ಸು ಮುಂದುವರಿಯಿತು. ಪೈಪೋಟಿಯಲ್ಲೇ ನಡೆಯಿತು. ದೇವರಿಗೂ ಸಂತೋಷವಾಯಿತು; ಮೊದಲ ಸ್ನೇಹಿತನ ಮುಂದೆ ಪ್ರತ್ಯಕ್ಷನಾದ. ‘ನಿನ್ನ ತಪಸ್ಸಿಗೆ ಮೆಚ್ಚಿರುವೆ; ನಿನಗೆ ಏನು ವರ ಬೇಕೋ ಕೇಳಿಕೋ. ಆದರೆ ಇಲ್ಲೊಂದು ಗುಟ್ಟು! ನೀನು ಏನನ್ನು ಕೇಳಿಕೊಳ್ಳುವೆಯೋ ಅದರ ಎರಡಷ್ಟನ್ನು ನಿನ್ನ ಆ ಸ್ನೇಹಿತ ಪಡೆಯುತ್ತಾನೆ’ ಎಂದ ದೇವರು.ಈಗ ಅವನಿಗೆ ಸಮಸ್ಯೆ ಎದುರಾಯಿತು. ‘ನಾನು ಏನನ್ನು ಕೇಳಿದರೂ ಅವನಿಗೆ ಅದರ ಎರಡರಷ್ಟು! ಒಂದು ಕೋಟಿ ಕೇಳಿದರೆ ಅವನಿಗೆ ಎರಡು […]
“ರಾತ್ರಿಗಳು”
ರಾತ್ರಿ ಒಂದು ಗಂಟೆಯಾಗಿರಬೇಕು. ಯಾರದೋ ಮನೆಯಲ್ಲಿ ಮಗು ಶೃತಿ ಹಿಡಿದಂತೆ ಬಿಡದೆ ಅಳುತ್ತಿದೆ. ಮಗುವಿನ ಅವ್ವ ಅದನ್ನು ರಮಿಸಲು ಜೋಗುಳ ಪದ ಹಾಡುತ್ತಿದ್ದಾಳೆ. ನೀರವ ರಾತ್ರಿಯಲ್ಲಿ ಆ ಪದ ಊರ ಕಿವಿಯ ತುಂಬಿ ಊರಿನಂಥ ಊರ ಜನರ ಮೈಯನ್ನು ಲಯವಾಗಿ ತಟ್ಟಿ ಅವರ ಕಣ್ಣುಗಳಿಗೆ ನಿದ್ದೆ ಸುರಿಯುವಂತೆ ಮಾಡಿದೆ. ಮಗುವಿಗೆ ಏನು ಅರ್ಥವಾಯಿತೋ ಏನೋ. ಅಳುವಿನ ಶೃತಿ ನಿಲ್ಲಿಸಿತು. ಊರ ಕಣ್ಣಿನ ರೆಪ್ಪೆಗಳು ಮಾತ್ರ ಒಂದಕ್ಕೊಂದು ಅಂಟಿಕೊಂಡು ಮಿಲನದ ಅವಸ್ಥೆ ತಲುಪಿವೆ. ಬೀದಿಗಳ ತುಂಬಾ ಜಡಿ ಮಳೆಯಂತೆ […]
“ಯಾವ ನಾನು?”,
“ನನ್ನ ಮಾತು ಇಲ್ಲಿ ಯಾರಿಗೂಅರ್ಥವಾಗುವುದಿಲ್ಲ.ನನ್ನ ಮಾತು ಇಲ್ಲಿ ಯಾರಿಗೂಅರ್ಥವಾಗುವುದಿಲ್ಲ.ಬಹುಶಃ ಬೆಳೆದ ಜಾಗದಿಂದ ಹೊರಹಾಕಿ,‘ಬೇರೆಲ್ಲೋ ಬದುಕುತ್ತಾರೆ ಬಿಡು’ ಎಂದುನಿಮ್ಮ ಬೇರುಗಳನ್ನು ಕತ್ತರಿಸಿದ ಅವರಉದ್ಧಟತನದ ಬಗ್ಗೆ ನಿಮಗೆ ಅರಿವಿಲ್ಲ.ನೀವೀಗ ಯೋಚಿಸುತ್ತಿರಬಹುದುಇಲ್ಲಿ ನೀರು ಕುಡಿಯುವುದಕ್ಕೆ ನನ್ನ ಹಕ್ಕಾದರೂ ಏನು?ಈ ನೆಲವನ್ನೇ ಮನೆಯೆಂದುಕೊಂಡರೂ‘ನೀನು ಇಲ್ಲಿಯವನಲ್ಲ’ ಎಂದು ಸಾರಿ ಹೇಳುವದೇಶದವರನ್ನು ಮನುಷ್ಯರೆನ್ನಲು ಹೇಗೆ ಸಾಧ್ಯ?ಸಹಪಾಠಿಗಳು ಪರದೇಸಿ ಎಂದು ಕರೆದಾಗಅವರಾಡುವ ಮಾತು ನನಗೂ ತಿಳಿಯುತ್ತದೆ”, ನನ್ನ ಮಾತು ಇಲ್ಲಿ ಯಾರಿಗೂಅರ್ಥವಾಗುವುದಿಲ್ಲ.ಬಹುಶಃ ಬೆಳೆದ ಜಾಗದಿಂದ ಹೊರಹಾಕಿ,‘ಬೇರೆಲ್ಲೋ ಬದುಕುತ್ತಾರೆ ಬಿಡು’ ಎಂದುrನಿಮ್ಮ ಬೇರುಗಳನ್ನು ಕತ್ತರಿಸಿದ ಅವರಉದ್ಧಟತನದ ಬಗ್ಗೆ ನಿಮಗೆ […]
“ಶ್ರೇಯಾ ಸಿರಿಕಂಠಕ್ಕೆ ಮನಸೋತ ಪ್ರೇಕ್ಷಕ”
ಮಳೆ ಸುರಿಸುವ ಮೋಡಗಳು ಸಂಜೆಯ ಹೊತ್ತಿಗೆ ಒಂದೆಡೆ ಸೇರುತ್ತಿದ್ದಂತೆ;ಮಹದೇವಪುರ ರಸ್ತೆಯ ಫೀನಿಕ್ಸ್ ಮಾಲ್ ಒಳಗೆ ಸಂಗೀತಾಸಕ್ತರು ಒಂದುಗೂಡಿದ್ದರು. ಅತ್ತ ಸುಳಿಗಾಳಿ ತೇಲುತ್ತಿದ್ದಂತೆ, ಇತ್ತ ಬಾಲಿವುಡ್ ಹಾಗೂ ಕನ್ನಡ ಗೀತೆಗಳೂ ಅಲೆ ಅಲೆಯಾಗಿ ತೇಲಿಬಂದವು.ಸುನ್ರಹಾ ಹೈ.., ಮನವಾ ಲಾಗೇ.., ಬರಸೋರೆ ಮೇಘಾ.. – ಹೀಗೆ ಒಂದಿನಿತೂ ಬಿಡುವು ಕೊಡದಂತೆ ತಮ್ಮದೇ ಗೀತೆಗಳಿಗೆ ಮತ್ತೆ ದನಿಯಾದರು ಶ್ರೇಯಾ ಘೋಷಾಲ್. ಜೇನಿನ ಕಂಠದ ಅವರ ಹಾಡುಗಳನ್ನು ಕೇಳಿದ ಅಭಿಮಾನಿಗಳಲ್ಲಿ ಸಂಭ್ರಮವೋ ಸಂಭ್ರಮ.ಫೀನಿಕ್ಸ್ ಮಾರ್ಕೆಟ್ಸಿಟಿ ಮಾಲ್ನಲ್ಲಿ ಗಾಯಕಿ ಶ್ರೇಯಾ ಘೋಷಾಲ್ ಅವರು;ಇತ್ತೀಚೆಗೆ ನಡೆಸಿಕೊಟ್ಟ […]
“ಬೌದ್ಧಿಕ ಚೈತನ್ಯ ಕೊಟ್ಟ ರಂಗಭೂಮಿ”
ಹುಟ್ಟಿದ್ದು ಬಾಗಲಕೋಟೆ, ಬೆಳೆದದ್ದು, ವಿದ್ಯಾಭ್ಯಾಸ ಮಾಡಿದ್ದು ಧಾರವಾಡ. ಬಾಳ ಸಂಗಾತಿಯ ಆಯ್ಕೆ ಹಾಗೂ ಜೀವನ ಸಾಗಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ. ನದಿ ಎಲ್ಲಿಯೋ ಹುಟ್ಟಿ, ಮತ್ತೆಲ್ಲಿಯೋ ಹರಿದು ಸಮುದ್ರ ಸೇರುವ ತೆರದಿ ಮಹಿಳೆಯರ ಬದುಕು. ಹೀಗೆಂದು ಹೇಳಿದವರು ಲೇಖಕಿ, ರಂಗ ನಿರ್ದೇಶಕಿ, ನಟಿ ಜಯಶ್ರೀ ಹೆಗಡೆ.ತಮ್ಮ ಪತಿ ಪ್ರೊ.ಶ್ರೀಪಾದ ಹೆಗಡೆಯವರ ಜತೆ ಬಾಳಿನ ಸಂಧ್ಯಾಕಾಲದಲ್ಲಿ ವಾಸಿಸಲು ಆಯ್ಕೆ ಮಾಡಿಕೊಂಡದ್ದು ಮೈಸೂರು, ಇಲ್ಲಿಯೇ ಅಂತರಂಗದ ಆಶಯಗಳಿಗೆ ಮೂರ್ತ ಸ್ವರೂಪ ಕೊಡುವುದರ ಜತೆಗೆ, ರಂಗಭೂಮಿಯಲ್ಲಿ ನೆಲೆ ಕಂಡುಕೊಂಡವರು.ಆಡಿದ ಮೊದಲ […]
“ಕಂಚಿನ ಕುದುರೆ ಸವಾರ”
ಕಂಚಿನ ಕುದುರೆ ಸವಾರನ ಪ್ರತಿಮೆ ಇರುವುದು ರಷ್ಯಾದ ಸೇಂಟ್ ಪೀಟರ್ಸ್ಬರ್ಗ್ನಲ್ಲಿ. ಇದನ್ನು ಆ ನಗರದ ಸ್ಥಾಪಕ ಪೀಟರ್ ದಿ ಗ್ರೇಟ್ನ ನೆನಪಿಗೆ ನಿರ್ಮಿಸಲಾಗಿದೆ. ಈ ಪ್ರತಿಮೆಯು ನೇವಾ ನದಿಯತ್ತ ಮುಖ ಮಾಡಿ ನಿಂತಿದೆ.ಕ್ಯಾಥರೀನ್ ದಿ ಗ್ರೇಟ್, ತನ್ನ ಪೂರ್ವಿಕ ಪೀಟರ್ನಿಗಾಗಿ ಈ ಪ್ರತಿಮೆಯ ನಿರ್ಮಾಣ ಆರಂಭಿಸಿದಳು. ಕ್ಯಾಥರೀನ್ ಹುಟ್ಟಿನಿಂದ ಜರ್ಮನ್ ಆಗಿದ್ದ ಕಾರಣ, ಆಕೆಗೆ ರಷ್ಯಾದ ಹಿಂದಿನ ಮಹಾರಾಜರ ಜೊತೆ ನಂಟು ಬೆಸೆದುಕೊಳ್ಳುವ ಆಸೆ ಹೊಂದಿದ್ದಳು. ಈ ಸ್ಮಾರಕದಲ್ಲಿ ಇರುವ ಒಂದು ಶಾಸನದಲ್ಲಿ ರಷ್ಯನ್ ಹಾಗೂ ಲ್ಯಾಟಿನ್ […]
“”ಸಾಹಿತ್ಯದ ಅನನ್ಯ, ವೈವಿಧ್ಯಮಯ ಚಿಂತನೆ”,
ಬೆಳಗಾವಿ ಜಿಲ್ಲೆ ಅಥಣಿಯ ಶ್ರೀ ಶಿವಯೋಗಿ ಮುರುಘೇಂದ್ರ ಸ್ವಾಮೀಜಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಎಚ್.ಎಂ.ಚನ್ನಪ್ಪಗೋಳಅವರು ಅಧ್ಯಾಪನದೊಂದಿಗೆ ಅಧ್ಯಯನ-ಚಿಂತನೆಯಲ್ಲಿ ತೊಡಗಿಕೊಂಡಿರುವುದಕ್ಕೆ ಸಾಕ್ಷಿ ಈ ಕೃತಿ. ಇಲ್ಲಿರುವ 25 ಲೇಖನಗಳನ್ನು ಚಿಂತನ ಮತ್ತು ಸಾಹಿತ್ಯ ವಿಮರ್ಶೆ ಎಂದು ಎರಡಾಗಿ ವಿಂಗಡಿಸಬಹುದು. ಹೆಚ್ಚಿನ ಪಾಲು ವಿಮರ್ಶೆಗೆ ಮೀಸಲಾಗಿದೆ. ವಿಮರ್ಶಾ ಲೇಖನಗಳು ಹಳಗನ್ನಡ, ವಚನ, ತ್ರಿಪದಿ ಮತ್ತು ಆಧುನಿಕ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದವು.ತುಂಬ ದೀರ್ಘವಲ್ಲದ ಇಲ್ಲಿನ ಬಿಡಿ ಲೇಖನಗಳನ್ನು ಒಂದೇ ಓದಿಗೆ ಮುಗಿಸಬಹುದಾಗಿದೆ. ವಿಷಯ ವೈವಿಧ್ಯತೆ ಇರುವುದರಿಂದ ಕೃತಿಯುದ್ದಕ್ಕೂ ಏಕತಾನತೆ ಅಡ್ಡಿಯಾಗುವುದಿಲ್ಲ. ಹಳೆಯ […]
“ಶಾಂತಿ ಬೇಕೇ? ದೋಷ ಕಾಣಬೇಡ!”
‘ಮಗು, ನಿನಗೊಂದು ಮಾತು ಹೇಳುತ್ತೇನೆ ಕೇಳು, ನಿನಗೇನಾದರೂ ಮನಶ್ಶಾಂತಿ ಎನ್ನುವುದು ಬೇಕಿದ್ದರೆ ಇನ್ನೊಬ್ಬರಲ್ಲಿ ದೋಷವನ್ನು ಕಾಣಬೇಡ. ಒಂದು ವೇಳೆ ದೋಷ ಕಾಣುವುದಾದರೆ ನಿನ್ನ ದೋಷವನ್ನೇ ನೋಡಿಕೋ. ಈ ಇಡೀ ಜಗತ್ತನ್ನೇ ನಿನ್ನದನ್ನಾಗಿ ಮಾಡಿ ಕೊಳ್ಳುವುದಕ್ಕೆ ಕಲಿತುಕೋ. ನೋಡು ಪರಕೀಯರು ಎಂಬುದು ಯಾರೂ ಇಲ್ಲ; ಈ ಇಡೀ ಜಗತ್ತೇ ನಿನ್ನದು.’ ಶ್ರೀಶಾರದಾದೇವಿಶಾಂತಿಯೆಂಬುದು ಮನುಷ್ಯ ಜೀವದ ಆತ್ಯಂತಿಕ ಬಯಕೆ. ಬದುಕಿನ ಎಲ್ಲ ಹಪಹಪಿಗಳ ಹಿಂದೆ ಈ ಸಮತೋಲನ (Equilibrium) ಸ್ಥಿತಿ ಮುಟ್ಟುವ ಪ್ರಯತ್ನವಿದೆ. ಅಶಾಂತಿ ಎಂದರೆ ತುಮುಲ, ತಾಕಲಾಟ. ಇದರ […]