ಶಾಸನಗಳ, ಗುಡಿ ಗೋಪುರಗಳ ನಾಡು-ಗದಗು ನಮ್ಮ ಕರ್ನಾಟಕವು ಸುಂದರ ಗುಡಿಗೋಪುರಗಳ ನಾಡು. ಪ್ರಾಚೀನ ಐತಿಹಾಸಿಕ ಗುಡಿಗೋಪುರಗಳಿಗಂತೂ ಲೆಕ್ಕವೇ ಇಲ್ಲ. ಆಯಾ ಕಾಲದ ರಾಜರುಗಳ ಕುಲದೇವರುಗಳ ಮೇಲಿನ ಭಕ್ತಿಯಿಂದಲೇ ದೇವಸ್ಥಾನಗಳನ್ನು ಕಟ್ಟಿಸಿರಬಹುದು. ಆದರೆ ಇಂದು ಅವು ಪ್ರಸಿದ್ಧಿ ಹೊಂದಿರುವುದು ಕೇವಲ ಭಕ್ತಿಗಾಗಿಯೊಂದೇ ಅಲ್ಲ, ಅಲ್ಲಿನ ಪ್ರತಿಯೊಂದು ಕಲ್ಲೂ ಕಥೆ ಹೇಳುತ್ತವೆ… ಆಯಾ ಕಾಲದ ವಾಸ್ತು ಶಿಲ್ಪ, ಜನಜೀವನ, ಸಾಮಾಜಿಕ ಪದ್ಧತಿಗಳು ಈ ಕಲೆಯಿಂದಲೇ ಅರಿವಾಗುತ್ತವೆ. ಪ್ರತಿಯೊಂದು ದೇವಸ್ಥಾನಕ್ಕೂ ಒಂದೊಂದು ಕಥೆಯಿದೆ. ನಾನು ಈಗ ಹೇಳುತ್ತಿರುವುದು ಗದಗ್ನಿಂದ ಆಗ್ನೇಯಕ್ಕೆ 12 […]
