Your Cart

Need help? Call +91 9535015489

📖 Print books shipping available only in India. ✈ Flat rate shipping

ಹಳೇ ಹಾಡು

ಹಳೇ ಹಾಡು ತೇಲಿ ಹೋಗುವುದು ಮನ ಹಳೇ ನೆನಪುಗಳ ಸುತ್ತ ಅನುರಣಿಸುತಿರೆ ತನನ ಎದೆಯ ಮೀಟಿ ಮೆತ್ತ ಭಾವನೆಗಳ ಚಿತ್ರಪಟ ಕೆದಕಿ ಬಿಚ್ಚಿದೆ ಪರದೆಯ ತೋರಿದೆ ವಿರಹದ ನೋಟ ಮರೆಯದ ಅಪೂರ್ವ ಸಮಯ ಕೇಳಿದಷ್ಟು ಕೇಳಬೇಕೆನ್ನುವ ಅರ್ಥಪೂರ್ಣ ಕವಿತೆ ಕವನ ಫಲ್ಲವಿಸುವುದು ರಾಗ ಭಾವ ಬೆಸೆವುದು ಮಧುರ ಬಂಧನ ಮನಸ್ಸಿಗೆ ಹಗುರ ಕಿವಿಗೆ ಇಂಪು ಚಿತ್ತಕ್ಕೆ ತಂಪು ಹಳೇ ಹಾಡು ಕಂಪು ಸೊಂಪು. ಉಮಾ ಭಾತಖಂಡೆ

ಶ್ರೀ ಎಸ್ ಎಲ್ ಭೈರಪ್ಪ – ಯು.ಕೆ. ಕನ್ನಡಿಗರೊಂದಿಗೆ ಸಾಹಿತ್ಯ ಚರ್ಚೆ

ಯು.ಕೆ – ಅಕ್ಟೋಬರ್ ೬, ೨೦೧೯ ರಂದು ನಡೆದ “ಶ್ರೀ ಎಸ್.ಎಲ್.ಭೈರಪ್ಪ ಹಾಗೂ ಯು.ಕೆ. ಕನ್ನಡಿಗರೊಂದಿಗಿನ ಸಾಹಿತ್ಯ ಚರ್ಚೆ” ಸಂವಾದ –  ಶ್ರೀ. ಎಸ. ಎಲ್. ಭೈರಪ್ಪ ಅವರೊಂದಿಗೆ ಶ್ರೀ. ಶತಾವಧಾನಿ ಗಣೇಶ್ ಅವರಿಂದ ಶ್ರೀ. ಎಸ. ಎಲ್. ಭೈರಪ್ಪ ಮತ್ತು ಅವರ ಕೃತಿಗಳ ಬಗ್ಗೆ ಮಾತು ಶ್ರೀ. ಗಿರೀಶ್ ಭಟ್ ಅವರಿಂದ ಕೃತಿಗಳ ಅವಲೋಕನ ಲಂಡನ್ ಕನ್ನಡ ಸಾಹಿತ್ಯ ಪ್ರೇಮಿಗಳಿಂದ ಶ್ರೀ. ಎಸ. ಎಲ್. ಭೈರಪ್ಪ ಕೃತಿಗಳ ಒಳನೋಟ

ಕಲಾವಿದನ ಕಣ್ಣಲ್ಲಿ ನೆರೆ ಕರ್ನಾಟಕ

ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ಬವಣೆಗಳನ್ನು ಕಲಾವಿದ ಬಾಲಚಂದ್ರ ಚಿತ್ರಗಳಲ್ಲಿ ಪ್ರಸ್ತುತ ಪಡಿಸಿದ್ದಾರೆ. ಪತ್ನಿ, ತಲೆಮೇಲೆ ಪುಟ್ಟಿ ಹೊತ್ತುಕೊಂಡು, ಕೊಂಕಳಲ್ಲಿ ಮಗು ಎತ್ತಿಕೊಂಡು, ಕೈಯಲ್ಲಿ ಪಾತ್ರೆ, ಪಗಡಿ ಹಿಡಿದು ಸಾಗುತ್ತಿದ್ದರೆ, ಪತಿ ಒಂದು ಕೈಯಲ್ಲಿ ಜಾನುವಾರ ಹಿಡಿದುಕೊಂಡು, ಉಳಿದ ಮಕ್ಕಳ ಕೈ ಹಿಡಿದುಕೊಂಡು ಮಂಡಿಯುದ್ದ ನೀರಿನಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಹಾಕುತ್ತಿದ್ದಾರೆ..! ಒಂದು ಕಡೆ ಬಸ್ಸು ಅರ್ಧ ನೀರಿನಲ್ಲಿ ಮುಳುಗುತ್ತಲೇ ಸಾಗುತ್ತಿದೆ, ಇನ್ನೊಂದು ಕಡೆ ಜನರು ಬೋಟ್‌ನಲ್ಲಿ ಕುಳಿತು, ಊರಿನ ನಡುವಿರುವ ನೀರಿನಲ್ಲಿ ತೇಳುತ್ತಾ ಸಾಗುತ್ತಿದ್ದಾರೆ..! ಹೆಲಿಕಾಪ್ಟರ್‌ವೊಂದು ಮೇಲೆ […]

ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವೆ

ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವೆ ನಿಜ. ಮದುವೆಗಳೇನೋ ಸ್ವರ್ಗ ದಲ್ಲೇ ನಡೆಯುತ್ತವೆ.. ಅಂದರೆ ದೇವರು ನಮ್ಮ ಜೊತೆಗಾರನನ್ನು ಅಲ್ಲಿಯೇ ಜೋಡಿಸಿಯೆ ಕಳಿಸಿದ್ದರೂ ಇಲ್ಲಿ ಅವನನ್ನು ಈ ಕೋಟಿಗಟ್ಟಲೆ ಜನರಲ್ಲಿ ಹುಡುಕುವ ಪ್ರಕ್ರಿಯೆ ನಡೆಯಬೇಕಲ್ಲ… ಅದೇ ಕಷ್ಟದ ಕೆಲಸ. ಜಾತಕ ಹೊಂದಿಸಿ, ಮನೆ ಮನೆತನಗಳನ್ನು ಪರೀಕ್ಷಿಸಿ ಮಾಡುವ ಮದುವೆಗಳೂ ಕೂಡ ಒಮ್ಮೊಮ್ಮೆ ತಪ್ಪು ಅಡ್ರೆಸ್ಗೆ ಹೋಗಿ ಮಿಸ್ಡ್ ಮೇಲ್ ಡೆಲಿವರಿ ಆಗುವುದುಂಟು. ಇದೊಂದು ಮಧುರ ಬಂಧ. ಇಲ್ಲಿ ಮನಸ್ಸುಗಳು ಹೊಂದಬೇಕೇ ಹೊರತು ಜಾತಕಗಳಲ್ಲ. ಅದನ್ನು ನಾವು ತಿಳಿಯುವ ಅಥವಾ ತಿಳಿಹೇಳುವ […]

ಗೊರಬು

ಗೊರಬು ಗೊರಬು, ಗೊರಗ ಅಥವಾ ಕೊರಂಬು ಎಂದೆಲ್ಲಾ ಹೆಸರಿಸುವ ಈ ಪರಿಕರ, ಮಲೆನಾಡಿನ ಜಡಿ ಮಳೆಯ ಸಂದರ್ಭಗಳಲ್ಲಿ ಉಳುಮೆ ಮಾಡುವಾಗ, ಗದ್ದೆ ನಾಟಿ ಮಾಡುವಾಗ, ತೋಟದ ಕೆಲಸ ಮಾಡುವಾಗ ರಭಸವಾಗಿ ಅಪ್ಪಳಿಸುವ ಮಳೆಯಿಂದ ರಕ್ಷಿಸಿಕೊಳ್ಳಲು ಬಳಕೆಯಾಗುತ್ತಿತ್ತು. ಬೆಳಿಗ್ಗೆಯಿಂದ ಸಂಜೆವರೆಗೆ ರೈತಾಪಿ ಜನರನ್ನು ಬೆಚ್ಚಗಿಡುತ್ತಿದ್ದ ಗೊರಬು ಶತ ಶತಮಾನಗಳ ಇತಿಹಾಸ ಹೊಂದಿದ್ದು, ಒಂದು ಕಾಲದಲ್ಲಿ ಬೇಸಾಯ ಬದುಕಿನ ಒಂದು ಅವಿಭಾಜ್ಯ ಅಂಗವೇ ಆಗಿತ್ತು. ಗೊರಗ ಅಥವಾ ಗೊರಬನ್ನು ತಾಳೆ ಅಥವಾ ಈಚಲು ಮರದ ಒಣಗಿದ ಎಲೆಗಳನ್ನು (ಕೆಲವು ಭಾಗದಲ್ಲಿ […]

ಬಿಂಗಿಯ ಭಂಗಿ

ಹೊಲದಲ್ಲಿ ಸಮೃದ್ಧ ಬೆಳೆಯಾಗಲೆಂದು ದೇವರನ್ನು ಅರುಹಿಕೊಳ್ಳಲು ದೀಪಾವಳಿ ಸಂದರ್ಭದಲ್ಲಿ ಕರೆವಕ್ಕಲಿಗರು ಆಚರಿಸುವ ಸಾಂಪ್ರದಾಯಿಕ ಕಲೆ ‘ಬಿಂಗಿ ಕುಣಿತ’. ಇತ್ತೀಚೆಗೆ ಭಾಗವತಿಕೆ ಕೊರತೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ, ಈ ಆಚರಣೆ ಅಳಿವಿನಂಚಿನಲ್ಲಿದೆ. ‘ವರ್ಷಕ್ಕೊಮ್ಮೆ ಬರುವ ಬಲೀಂದ್ರರಾಯ… ದಿನಕ್ಕೊಮ್ಮೆ ಬರುವ ಭೀಮsssರಾಯ….’ ಯಂಕಣ್ಣ ರಾಗವಾಗಿ ಈ ಹಾಡನ್ನು ಹಾಡುತ್ತಿದ್ದರೆ, ಶಿಣ್ಣು ಗೌಡರು, ಶಾಂತು ಗೌಡರು ಅದಕ್ಕೆ ದನಿಯಾಗುತ್ತಿದ್ದರು. ಕೃಷ್ಣ ಗೌಡರು ಪಲ್ಲವಿಯನ್ನು ಮುಂದುವರಿಸಿದರೆ, ದೇವು ಗೌಡರು ಅವರಿಗೆ ಜೊತೆಯಾಗುತ್ತಿದ್ದರು. ಸುತ್ತ ಕುಳಿತ ಪ್ರೇಕ್ಷಕರ ಕಿವಿಯಷ್ಟೇ ಈ ಭಾಗವತರೆಡೆಗಿತ್ತು. ಅವರ ಕೌತುಕದ […]

ಹಬ್ಬಗಳು ನಡೆದು ಬಂದ ದಾರಿ…

ಹಬ್ಬಗಳು ನಡೆದು ಬಂದ ದಾರಿ… ಹೆಂಗಿತ್ತು, ಹೆಂಗಾತು ಗೊತ್ತಾ…? ಆದಿ ಕಾಂಡ… ಒಂದು ಕಾಲವಿತ್ತು…ದೀಪಾವಳಿ ಹಬ್ಬದ ತಯಾರಿ ಪಕ್ಷಮಾಸ ಮುಗಿಯುತ್ತಲೇ ಸಣ್ಣದಾಗಿ ಶುರುವಾಗುತ್ತಿತ್ತು..ಶಾವಿಗೆ ,ಚಕ್ಕಲಿ,ಅನಾರಸದ ಹಿಟ್ಟು ಮಾಡಿಟ್ಟುಕೊಳ್ಳುವದು,ಬಟ್ಟೆ ಖರೀದಿಸಿ ಹೊಲಿಯಲು ಕೊಡುವದು,ಎಲ್ಲರೂ ಪರಸ್ಪರರ ಮನೆಗೆ ಹೋಗಿ ಹಬ್ಬದ ಕೆಲಸಗಳಲ್ಲಿ ಕೈಗೂಡಿಸುವದು,ಬಂಧು ಬಾಂಧವರಿಗೆ ಮುಂಚಿತ ಆಹ್ವಾನ ಕೊಡುವದು ಏನೆಲ್ಲ ಯೋಜನೆಗಳು…ವಾರ ಮೊದಲೇ ಉಂಡಿ,ಚಕ್ಕಲಿ,ಅನಾರಸ,ಅವಲಕ್ಕಿ ಚೂಡಾ,ಸೇಂಗಾಉಂಡಿ,ಬೇಸನ್ ಲಾಡುಗಳ ದಾಸ್ತಾನು ದೊಡ್ಡ,ದೊಡ್ಡ ಡಬ್ಬಿಗಳಲ್ಲಿ ಸಂಗ್ರಹವಾಗುತ್ತಿದ್ದವು,ನೀರು ತುಂಬುವ ದಿನವಂತೂ ತಾಮ್ರ,ಹಿತ್ತಾಳೆ ಹಂಡೆಗಳು ಇದೀಗ ಅಂಗಡಿಯಿಂದ ಬಂದಂತೆ ಥಳಥಳಿಸುತ್ತಿದ್ದವು…ರಸ್ತೆಯಲ್ಲಿ ಕೂಗುತ್ತ ಎಲ್ಲರ ಮನೆಗೂ ಉಚಿತವಾಗಿ […]

ಶ್ರದ್ಧಾವಂತನಿಗಷ್ಟೇ ಪವಿತ್ರ ಜ್ಞಾನ ಲಭ್ಯ

ಶ್ರದ್ಧಾವಂತನಿಗಷ್ಟೇ ಪವಿತ್ರ ಜ್ಞಾನ ಲಭ್ಯ ‘ಜ್ಞಾನವೆಂಬ ದೋಣಿಯನ್ನೇರಿ ಪಾಪಸಾಗರವನ್ನು ದಾಟಿಹೋಗು’ ಎಂದು ಕೃಷ್ಣನು ಅರ್ಜುನನಿಗೆ ತಿಳಿಹೇಳಿದ್ದನ್ನು ನೋಡಿದ್ದೇವೆ. ಕೃಷ್ಣ ಹೇಳುತ್ತಾನೆ; ‘ಜ್ಞಾನದಂತಹ ಪವಿತ್ರವಾದದ್ದು ಬೇರೊಂದಿಲ್ಲ, ಅದು ಕಾಲಾಂತರದಲ್ಲಿ ಸ್ವಯಂ ಅಂತರಂಗದಲ್ಲಿ ಯೋಗಸಂಸಿದ್ಧಿಯ ಮೂಲಕ ಸಿದ್ಧಿಸುವಂತಹದ್ದು.’ (ಭ.ಗೀ.: 04.38) ಜ್ಞಾನವು ಪವಿತ್ರ, ಪಾವಕ. ಪವಿತ್ರತೆಯಲ್ಲಿ ಅದಕ್ಕೆ ಸಾಟಿಯಿಲ್ಲ. ಕಾಮ-ಭೋಗಪ್ರವೃತ್ತಿಗಳ ಮಲವು ಅಂತರಂಗದಲ್ಲಿ ಇರುವ ತನಕ, ಮನುಷ್ಯನನ್ನು, ಅವನ ಪಾಪಪ್ರವೃತ್ತಿಯನ್ನೂ ಕೇವಲ ತಿಳಿಹೇಳುವುದರಿಂದಾಗಲಿ, ಬಾಹ್ಯ ನಿಯಮಗಳಿಂದಾಗಲೀ ಶಿಕ್ಷೆಯ ಬೆದರಿಕೆಯಿಂದಾಗಲಿ ಸಂಪೂರ್ಣ ನಿಯಂತ್ರಿಸಲಾಗದು. ಪಾಪದ ಕೊಳೆ ಸಂಪೂರ್ಣ ತೊಲಗಿ ಆತ ಶುದ್ಧನಾಗಬೇಕಾದರೆ, […]

ಎಲ್ಲೆಲ್ಲೂ ಹಬ್ಬದ ಡಿಸ್ಕೌಂಟ್‌!

ಆರ್ಥಿಕ ಹಿಂಜರಿತದ ಬಿಸಿ ಮತ್ತು ಸುರಿಯುತ್ತಲೇ ಇರುವ ಮಳೆಯ ನಡುವೆ ಅಂಗಡಿಗಳ ಮುಂದೆ ದೀಪಾವಳಿಯ ಬಣ್ಣದ ಆಕಾಶಬುಟ್ಟಿಗಳು ನೇತಾಡುತ್ತಿವೆ. ನಗರದ ಮಾಲ್‌ಗಳು ಎಲ್‌ಇಡಿ ಮತ್ತು ವಿದ್ಯುತ್‌ ದೀಪಗಳ ಅಲಂಕಾರದೊಂದಿಗೆ ಜನರನ್ನು ಸೆಳೆಯುತ್ತಿವೆ. ಎಲ್ಲೆಲ್ಲೂ ಹಬ್ಬದ ಡಿಸ್ಕೌಂಟ್‌ ಸೇಲ್‌. ಇ–ಕಾಮರ್ಸ್‌ ತಾಣಗಳ ವಹಿವಾಟು ಕಮ್ಮಿ ಏನಿಲ್ಲ. ಫ್ಲಿಪ್‌ಕಾರ್ಟ್‌ನ ಬಿಗ್‌ ದಿವಾಲಿ ಸೇಲ್‌ ಮತ್ತು ಅಮೆಜಾನ್‌ನ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ನಲ್ಲಿ ಡಿಸ್ಕೌಂಟ್‌ ಸೇಲ್‌ಗಳಿಗೆ ಗ್ರಾಹಕರು ಸ್ಪಂದಿಸಿದ್ದಾರೆ. ಮಿಂತ್ರಾ, ಸ್ನಾಪ್‌ಡೀಲ್‌ ಕೂಡ ಹಿಂದೆ ಬಿದ್ದಿಲ್ಲ. ಮೊಬೈಲ್‌ ಫೋನ್‌, ಟಿ.ವಿ, ವಾಷಿಂಗ್‌ ಮಷಿನ್‌, […]