Your Cart

Need help? Call +91 9535015489

📖 Print books shipping available only in India. ✈ Flat rate shipping

ಹಳಗನ್ನಡ ಕೃತಿಗಳ ಒಳನೋಟ ಮತ್ತು ಪ್ರೋ. ಹಂ . ಪ . ನಾ ಅವರ ಸಾಹಿತ್ಯಲೋಕದ ಒಡನಾಟ

ಹಳಗನ್ನಡ ಕೃತಿಗಳ ಒಳನೋಟ ಮತ್ತು ಪ್ರೋ. ಹಂ . ಪ . ನಾ ಅವರ ಸಾಹಿತ್ಯಲೋಕದ ಒಡನಾಟ | ದಿನಾಂಕ : 22 . 03 . 2020 , ರವಿವಾರ ಸಮಯ : ಬೆಳಿಗ್ಗೆ 9 : 30 ರಿಂದ ಮಧ್ಯಾಹ್ನ 1 : 00 ಗಂಟೆ Brunei Gallary , Room 8103 , School of Oriental and African Studies , University of London ( SOAS ) . […]

ಬೇರು ಮೇಲಾದ ಸಸಿಗೆ ನೀರಿನ ಆರೈಕೆ

ಮರದೊಳಗಣ ಬೆಂಕಿ ತನ್ನ ತಾನೇ ಉರಿಯಬಲ್ಲುದೆ? ಶಿಲೆಯೊಳಗಣ ದೀಪ್ತಿ ಆ ಬೆಳಗ ತನ್ನ ತಾನೇ ಬೆಳಗಬಲ್ಲುದೆ? ಆ ತರನಂತೆ ಕುಟಿಲನ ಭಕ್ತಿ, ಕಿಸುಕುಳನ ವಿರಕ್ತಿ ಮಥನಿಸಿಯಲ್ಲದೆ ದಿಟಹುಸಿಯ ಕಾಣಬಾರದು ಸತ್ಯವನು ಅಸತ್ಯವನು ಪ್ರತ್ಯಕ್ಷ ಪ್ರಮಾಣಿಸಿದಲ್ಲದೆ, ನಿಶ್ಚಯವನರಿಯಬಾರದು ಗುರುವಾದಡೂ, ಲಿಂಗವಾದಡೂ, ಜಂಗಮವಾದಡೂ ಪರೀಕ್ಷಿಸಿ ಹಿಡಿಯದವನ ಭಕ್ತಿ, ವಿರಕ್ತಿ ತೂತಕುಂಭದಲ್ಲಿಯ ನೀರು, ಸೂತ್ರ ತಪ್ಪಿದ ಬೊಂಬೆ, ನಿಜನೇತ್ರ ತಪ್ಪಿದ ದೃಷ್ಟ ಬೇರು ಮೇಲಾದ ಸಸಿಗೆ ನೀರಿನಾರೈಕೆಯುಂಟೆ? ಇಂತು ಆವ ಕ್ರೀಯಲ್ಲಿಯೂ ಭಾವಶುದ್ಧಾತ್ಮನಾಗಿ ಆರೈಕೆ ಬೇಕು ಭೋಗಬಂಕೇಶ್ವರಲಿಂಗದ ಸಂಗದ ಶರಣನ ಸುಖ […]

ಇತಿಹಾಸಕಾರ ಷ.ಶೆಟ್ಟರ್ ನಿಧನ

ಬೆಂಗಳೂರು:  ಅಂತರರಾಷ್ಟ್ರೀಯ ಖ್ಯಾತಿಯ ಇತಿಹಾಸಕಾರ ಷ.ಶೆಟ್ಟರ್ (85) ಶುಕ್ರವಾರ ನಸುಕಿನ 3 ಗಂಟೆಗೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕಳೆದ ಒಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಶ್ವಾಸಕೋಶದಲ್ಲಿ ನೀರು ತುಂಬಿಕೊಂಡು, ಉಸಿರಾಟಕ್ಕೆ ಸಮಸ್ಯೆಯಾಗಿತ್ತು. ಬನ್ನೇರುಘಟ್ಟ ರಸ್ತೆಯ ಸಾಗರ್ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹೆಂಡತಿ ಮತ್ತು ಇಬ್ಬರು ಹೆಣ್ಣುಮಕ್ಕಳು ಇದ್ದಾರೆ. ಭೂಪಸಂದ್ರದ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಂತ್ಯಕ್ರಿಯೆ ಬಗ್ಗೆ ಈವರೆಗೆ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಕುಟುಂಬದ ಮೂಲಗಳು ಹೇಳಿವೆ.ಹೊಸಕೋಟೆಯಲ್ಲಿ ಅವರಿಗೆ ಸೇರಿದ ಜಾಗ ಅಥವಾ ಚಾಮರಾಜಪೇಟೆಯ […]

ದೇವರಿಗೊಂದು ಪತ್ರ-(6)

ದೇವರಿಗೊಂದು ಪತ್ರ(6) ಸೌಖ್ಯವೇ ಮಧುಸೂಧನ? ನನ್ನದೆಲ್ಲವೂ ನೀನೆ ಬಲ್ಲೆ ಓ..ನಂದನ…. ನಿನ್ನುತ್ತರ ಇನ್ನೂ ಬರಲಿಲ್ಲ ಓನನ್ನ ಮಧುಸೂಧನ ಇರಲಿ ಕಾಯುವೆ ಬಿಡದೆ ಪತ್ರಕ್ಕಾಗಿ ಅನುದಿನ ನನ್ನ ಪತ್ರಗಳ ಸತ್ಯ ಮಿಥ್ಯಗಳ ಅವಲೋಕಿಸಿ ಉತ್ತರಿಸಲು ಮನಸ್ಸಾಗದೆ ನಿತ್ಯ ನೀ ತರ್ಕಿಸಿ ಅರಿವಿದೆ ನನಗದರ ನಾನೆಷ್ಟು ನಿನ್ನ ಧ್ಯಾನಿ ಒಳಗಿನ್ನು ಹುದುಗಿಸಿಹೆ ನಾ ಮೌಢ್ಯಗಳ ಅಜ್ಞಾನಿ ಸಂಬಂಧಗಳ ಸರಪಳಿಯಿಂದ ಹೊರಬರುತ್ತಿಲ್ಲ ಕರುಳಬಳ್ಳಿಯೆನ್ನ ಸಹಚರನೆನ್ನನೆಂಬ ಮೋಹ ಅಡಗಿಲ್ಲಾ! ಬೇಕು ಬೇಕೆಂಬ ಆಸೆಗಳ ಗೋಪುರ ಕಟ್ಟುವುದು ನಿಲ್ಲಿಸಿಲ್ಲ ಒಳಿತು ಕೆಡಕನು ಗ್ರಹಿಸದೆ ಕೋಪತಾಪದ […]

ಸಪ್ತಕದಿಂದ ಯಕ್ಷೋತ್ಸವ

ರಾಜಧಾನಿಯ ಕಲಾಪ್ರೇಮಿಗಳಿಗೂ ಕರಾವಳಿಯ ಯಕ್ಷಗಾನ, ತಾಳಮದ್ದಲೆಯ ಸವಿ ಉಣಸುತ್ತಿರುವ ಮಲ್ಲೇಶ್ವರದ ‘ಸಪ್ತಕ’ 15 ವಸಂತಕ್ಕೆ ಕಾಲಿಡುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಜಿ.ಎಸ್‌. ಹೆಗಡೆ ಮತ್ತು ಗೀತಾ ಹೆಗಡೆ 2005ರಲ್ಲಿ ‘ಸಪ್ತಕ’ ಸಂಸ್ಥೆಯನ್ನು ಹುಟ್ಟು ಹಾಕಿದರು. ಅಲ್ಲಿಂದ ಇಲ್ಲಿಯವರೆಗೆ ಒಂದೂವರೆ ದಶಕ ನಿರಂತರವಾಗಿ 400ಕ್ಕೂ ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮ, ಚಟುವಟಿಕೆಗಳ ಮೂಲಕ ಕಲೆ, ಸಂಸ್ಕೃತಿ, ಪರಂಪರೆ ಪಸರಿಸುವ ಕೆಲಸ ಮಾಡುತ್ತಿದೆ. ಯಕ್ಷಗಾನ ಕುಟುಂಬದಿಂದ ಬಂದ ದಂಪತಿಗಳಿಬ್ಬರೂ ಹಲವಾರು ವರ್ಷಗಳಿಂದ ತಪ್ಪದೆ ತಾಳಮದ್ದಳೆ, ಯಕ್ಷಗಾನ ಪ್ರದರ್ಶನ ಏರ್ಪಡಿಸಿದ್ದಾರೆ.ನೂರಾರು […]

ಮಹಿಳೆ ನಡೆದು ಬಂದ ದಾರಿ-1

ಮಹಿಳೆ ನಡೆದು ಬಂದ ದಾರಿ ಗಾಂಧಿ ಯುಗ ಹಾಗೂ ಸ್ವತಂತ್ರ್ಯಾನಂತರದ ದಶಕಗಳ ನಂತರದ ಕಾಲವು ಭಾರತೀಯ ಸಮಾಜದಲ್ಲಿಯ ಮಹಿಳೆಯರ ಸ್ಥಾನಮಾನದಲ್ಲಿ ಬೃಹತ್ ಬದಲಾವಣೆಗೆ ಸಾಕ್ಷಿಯಾಯಿತು. ಸಂವಿಧಾನವು ಲಿಂಗ ಸಮಾನತೆಯನ್ನು ಒಂದು ಮೂಲಭೂತ ಹಕ್ಕನ್ನಾಗಿ ಸಂಸ್ಥಾಪಿಸಿತು. ಆದರೆ 19ನೆಯ ಶತಮಾನದಲ್ಲಿಯ ಅತ್ಯಂತ ಹೀನ ಸ್ಥಿತಿಯಿಂದ, ಆಧೀನತೆಯಿಂದ ಹಾಗೂ ಅವನತಿಯ ಹಾದಿಯಿಂದ 20ನೆಯ ಶತಮಾನದ ಮಧ್ಯ ಭಾಗದಲ್ಲಿಯ ಸಮಾನತೆಯ ಸ್ಥಾನಮಾನ ಪಡೆಯುವವರೆಗಿನ ಮಹಿಳೆಯ ಈಗಿನ ಆಧುನಿಕ ಕಾಲದ ಬದಲಾವಣೆಯ ಪ್ರಕ್ರಿಯೆಯೇನೂ ಅಂಥ ಸರಳವಾದ ಪ್ರಗತಿಯ ಹಾದಿಯಾಗಿರಲಿಲ್ಲ. ಸ್ವಾತಂತ್ರ್ಯಾನಂತರ ಮಹಿಳೆಯ ಸ್ಥಾನಮಾನದಲ್ಲಿ […]

ಗಾಂಧಿ – ಮೌಲ್ಯಗಳ ನಡುವಿನ ಮೌನ

ಮಹಾತ್ಮ ಗಾಂಧೀಜಿ ಕುರಿತು ತಾರ್ಕಿಕವಾಗಿಯೂ ಭಾವುಕವಾಗಿಯೂ ಬರೆಯಬಲ್ಲ ಅರವಿಂದ ಚೊಕ್ಕಾಡಿ ಅವರು ಗಾಂಧೀಜಿಯವರ 150ನೇ ಜನ್ಮದಿನಾಚರಣೆಯ ಭಾಗವಾಗಿ ಬರೆದ ಕೃತಿ ಇದು.ಗಾಂಧೀಜಿ ಬದುಕಿದ್ದುದು 79 ವರ್ಷ. ಹಾಗಾಗಿ ಈ ಪುಸ್ತಕದಲ್ಲಿ 79 ಬಿಡಿ ಲೇಖನಗಳು ಇವೆ ಎಂದು ಚೊಕ್ಕಾಡಿ ಹೇಳಿದ್ದಾರೆ. ಎಷ್ಟು ಓದಿದರೂ ಮುಗಿಯದ ಗಾಂಧೀಜಿಯ ಜೀವನ ಮಾರ್ಗ ಮತ್ತು ಚಿಂತನೆಗಳ ಕೊಲಾಜ್‌ನಂತೆ ಇದೆ ಈ ಕೃತಿ.ಪ್ರತಿ ಬರಹವೂ ಪುಟ್ಟ ಪುಟ್ಟದ್ದಾಗಿದ್ದು, ಅದು ಕೆಲವೇ ನಿಮಿಷಗಳ ಓದಿನಲ್ಲಿ ಮುಗಿಯುತ್ತದೆ. ಆದರೆ, ಪ್ರತಿ ಬರಹದ ಓದು ಕೂಡ ಒಂದಿಷ್ಟು […]

ಚಿಮಣಿ ಬುಡ್ಡಿ!

ಚಿಮಣಿ ಬುಡ್ಡಿ! ವಿದ್ಯುಚ್ಚಿಕ್ತಿ ಇಲ್ಲದ ಕಾಲದಲ್ಲಿ ಬೆಳಕಿಗಾಗಿ ನಮ್ಮ ಹಿಂದಿನವರು ಚಿಮಣಿ ಬುಡ್ಡಿ ಎಂದು ಕರೆಯುವ ಬೆಳಕು ಬೀರುವ ಸಾಧನವನ್ನು ಕಂಡುಕೊಂಡಿದ್ದರು. ರಾತ್ರಿಯ ಸಮಯದಲ್ಲಿ ಅದುಗೆ ಮಾಡಲೂ ಓದಲೂ ಮನೆಯ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಹೋಗಲೂ ಇತರ ಗೃಹ ಕೃತ್ಯದ ಕೆಲಸಗಳಿಗೂ ಈ ಚಿಮಣಿ ಬುರುಡೆಯೇ ಮುಖ್ಯ ಬೆಳಕಿನ ಮೂಲವಾಗಿತ್ತು. ಈ ಚಿಮಣಿ ದೀಪಗಳಲ್ಲೂ ಹಲವಾರು ವೈವಿಧ್ಯತೆ, ವೈಶಿಷ್ಯತೆಗಳಿವೆ. ಚಿತ್ರದಲ್ಲಿ ಕಾಣುವ ಒಂದು ಚಿಮಣಿ ಬುರುಡೆ ಸಂಪೂರ್ಣ ಹಿತ್ತಾಳೆಯಿಂದ ತಯಾರಾಗಿದ್ದರೆ, ಮತ್ತೊಂದು ತಾಮ್ರದಿಂದ ತಯಾರಾಗಿದೆ. ಇದನ್ನು […]

ಪುರಂದರ ತ್ಯಾಗರಾಜ ಕನಕದಾಸರ ಆರಾಧನಾ ಮಹೋತ್ಸವ ವೈಭವ

ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನದ ವತಿಯಿಂದ ಪುರಂದರ–ತ್ಯಾಗರಾಜರ–ಕನಕದಾಸರ ಆರಾಧನಾ ಮಹೋತ್ಸವ, ಶ್ರೀ ವ್ಯಾಸ ಪ್ರಶಸ್ತಿ, ಕನಕಶ್ರೀ ಪ್ರಶಸ್ತಿ, ಶ್ರೀ ಗುರು ರಾಘವೇಂದ್ರ ಸಂಸ್ಮರಣ ಪ್ರಶಸ್ತಿ ಹಾಗೂ ಹಿರಿಯ ಸಾಹಿತಿ ಬೆಳಗೆರೆ ಮಹಾಲಕ್ಷ್ಮಮ್ಮ ಸ್ಮರಣಾರ್ಥ ಪ್ರಶಸ್ತಿ ಪ್ರದಾನ ಸಮಾರಂಭ ಫೆಬ್ರುವರಿ 26 ರಿಂದ 29ರವರೆಗೆ ನಡೆಯಲಿದೆ. ಫೆ. 26ರಂದು ಬುಧವಾರ ವಿದ್ಯಾಸಾಗರ ಮಾಧವ ತೀರ್ಥರು ಹಾಗೂ ವಿದ್ಯಾಸಿಂಧು ಮಾಧವ ತೀರ್ಥರ ಸಾನ್ನಿಧ್ಯದಲ್ಲಿ ಪುರಂದರದಾಸರ ಆರಾಧನಾ ಮಹೋತ್ಸವ ನಡೆಯಲಿದೆ. ಸಂಜೆ 5ಕ್ಕೆ ಕಮಲಾ ಶ್ರೀನಿವಾಸ್‌ ಮತ್ತು ತಂಡದವರಿಂದ ದಾಸಾಮೃತ ಸಂಗೀತ […]