Your Cart

Need help? Call +91 9535015489

📖 Print books shipping available only in India. ✈ Flat rate shipping

ಜಯಶ್ರೀ ದೇಶಪಾಂಡೆಯವರ “ಮಾಯಿ ಕೆಂದಾಯಿ”

ಜಯಶ್ರೀ ದೇಶಪಾಂಡೆಯವರ “ಮಾಯಿ ಕೆಂದಾಯಿ” ಜಯಶ್ರೀ ದೇಶಪಾಂಡೆಯವರ ಹೆಸರು ಕೇಳಿರದ ಕನ್ನಡ ಸಾಹಿತ್ಯಾಸಕ್ತರೇ ಇಲ್ಲವೆಂದೇ ಹೇಳಬಹುದು. ಅವರ ಹರಟೆಗಳೇ ಇರಲಿ, ಲಲಿತ ಪ್ರಬಂಧಗಳೇ ಇರಲಿ, ಕವನಗಳೇ ಇರಲಿ, ಕಥೆಗಳೇ ಇರಲಿ, ಕಾದಂಬರಿಗಳೇ ಇರಲಿ, ಎಲ್ಲದರಲ್ಲೂ ಒಂದು ಹೊಸತನವಿರುತ್ತದೆ, ಇವರ ಲೋಕಾನುಭವದ, ಜಗತ್ತಿನ ಮೂಲೆ ಮೂಲೆಗಳಲ್ಲಿಯೂ ತಿರುಗಿ, ಅಲ್ಲಿಯ ಜನಜೀವನ, ಆಚಾರ-ವಿಚಾರಗಳನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡಿದ ಹಾಗೂ ಅವುಗಳನ್ನು ಅನೇಕ ಸಾಹಿತ್ಯ ಪ್ರಕಾರಗಳ ಮೂಲಕ ಜನಮಾನಸವನ್ನು ತಲುಪಿಸುವ ಗುರಿ ಹೊಂದಿರುವ ಕೃತಿಗಳನ್ನು ಓದುವುದೆಂದರೆ ಓದುಗರಿಗೆ ಒಂದು ರಸದೌತಣವಿದ್ದಂತೆ ಎಂದರೆ […]

“ನಿಲ್ಲಿ, ನೆನಪುಗಳೇ , ಎಲ್ಲಿ ಹೋಗುವಿರಿ, ಗುರುತನೊಂದ ಬಿಟ್ಟು…‌”???

“ನಿಲ್ಲಿ, ನೆನಪುಗಳೇ , ಎಲ್ಲಿ ಹೋಗುವಿರಿ, ಗುರುತನೊಂದ ಬಿಟ್ಟು…‌”??? ಒಂದು ಪದ್ಯವನ್ನು ಭಾಮಿನಿ ಷಟ್ಪದಿಯಲ್ಲಿ ಬರೆಯಲು ಪ್ರಯತ್ನಿಸುತ್ತಿದ್ದೆ. ಅದೇ ಆಗ ಆ ಕಾವ್ಯ ಪ್ರಕಾರ ಕಲಿಯುತ್ತಿರುವ ನನಗೆ ಅದರಲ್ಲಿ ತಿದ್ದುಪಡಿಗಳು ಜಾಸ್ತಿ ಇರುತ್ತಿದ್ದವು . ನಾನು direct type ಮಾಡುವದೇ ಹೆಚ್ಚು, ಆದರೆ ಈ ಪದ್ಯ ಪ್ರಕಾರ ಕಠಿಣವಾದುದರಿಂದ ಹಾಳೆಯ ಮೇಲೆ ಬರೆದು, ಬೇಕಾದ ತಿದ್ದು ಪಡಿಗಳು ಮುಗಿದಮೇಲೆ post ಮಾಡುವದನ್ನು ಮಾಡಬೇಕಿತ್ತು .ಇಂದು ಬರೆದಾದಮೇಲೆ ನೋಡುತ್ತೇನೆ , ಕೈಯ ಬೆರಳು ಸಂದುಗಳಲ್ಲಿ ಪೆನ್ನು ಸೋರಿ ಮಸಿ […]

ಕಲಾವಿದೆಯ ಕೈಚಳಕ

ಕಲಾವಿದೆಯ ಕೈಚಳಕ ಕೆಲವು ಸಮುದಾಯದ ಮದುವೆ, ವರಪೂಜೆಯ ಕಾರ್ತಕ್ರಮಗಳಲ್ಲಿ ನಡೆಯುವ ಶಾಸ್ತ್ರಗಳಲ್ಲಿ ಬಾಗಿನ ಅಥವಾ ಆರತಿ ತಟ್ಟೆಯ ಜೊತೆಗೆ ಕೆಲವು ಅಲಂಕಾರಿಕ ವಸ್ತುಗಳನ್ನು ಇಡುವುದನ್ನು ಕಾಣಬಹುದು. ಇಂತಹ ಬಗೆ ಬಗೆಯ ಅಲಂಕಾರಿಕ ವಸ್ತುಗಳನ್ನು ವಧು ಅಥವಾ ವರನ ಕಡೆಯವರೇ ಸ್ವತಃ ಕೈಯಿಂದ ತಯಾರಿಸಿಡುತ್ತಾರೆ. ಹಿಂದಿನ ಕಾಲದಲ್ಲಿ ಹಳ್ಳಿಗಾಡಿನಲ್ಲಿರುವವರಿಗೆ ತಮ್ಮ ಕಲೆಗಾರಿಕೆಯನ್ನು ಪ್ರದರ್ಶಿಸುವ ವೇದಿಕೆಗಳು ಇರಲಿಲ್ಲ. ಮದುವೆ, ಮುಂಜಿ, ಹಬ್ಬಗಳ ಸಮಯದಲ್ಲಿ ನಡೆಯುವ ಕಾರ್ಯಕ್ರಮಗಳು ಇವರಲ್ಲಿ ಸುಪ್ತವಾಗಿದ್ದ ತಮ್ಮ ಕಲೆಗಾರಿಕೆಯನ್ನು ಹೊರ ಜಗತ್ತಿಗೆ ತೋರಿಸಲೂ ಪ್ರದರ್ಶಿಸಲೂ ಅವಕಾಶ ಒದಗಿಸುತ್ತಿದ್ದವು. […]

ಉತ್ತರಾರ್ಧ- ಪುಸ್ತಕ_ಪರಿಚಯ

ಉತ್ತರಾರ್ಧ- ಪುಸ್ತಕ_ಪರಿಚಯ ಜಯಶ್ರೀ ದೇಶಪಾಂಡೆಯವರ ಹೆಸರು ಕೇಳಿರದ ಕನ್ನಡ ಸಾಹಿತ್ಯಾಸಕ್ತರೇ ಇಲ್ಲವೆಂದೇ ಹೇಳಬಹುದು. ಅವರ ಹರಟೆಗಳೇ ಇರಲಿ, ಲಲಿತ ಪ್ರಬಂಧಗಳೇ ಇರಲಿ, ಕವನಗಳೇ ಇರಲಿ, ಕಥೇಗಳೇ ಇರಲಿ, ಕಾದಂಬರಿಗಳೇ ಇರಲಿ ಎಲ್ಲದರಲ್ಲೂ ಒಂದು ಹೊಸತನವಿರುತ್ತದೆ, ಅವರಿಗೆ ಇರುವ ಲೋಕಾನುಭವದ, ಜಗತ್ತಿನ ಮೂಲೆ ಮೂಲೆಗಳಲ್ಲಿಯೂ ತಿರುಗಿ, ಅಲ್ಲಿಯ ಜನಜೀವನ, ಆಚಾರ ವಿಚಾರಗಳನ್ನು ಆಮೂಲಾಗ್ರವಾಗಿ ಅಧ್ಯಯನ ಮಾಡಿದ ಹಾಗೂ ಅವುಗಳನ್ನು ಅನೇಕ ಸಾಹಿತ್ಯ ಪ್ರಕಾರಗಳ ಮೂಲಕ ಜನಮಾನಸವನ್ನು ತಲುಪಿಸುವ ಗುರಿ ಹೊಂದಿರುವ ಇವರ ಕೃತಿಗಳನ್ನು ಓದುವುದೆಂದರೆ ಓದುಗರಿಗೆ ಒಂದು ರಸದೌತಣವಿದ್ದಂತೆ […]

ಹೀಗೊಬ್ಬ ‘ಕನಸು’ಗಾರ ಶಿಕ್ಷಕನಾದ ಕಥೆ..

ಹೀಗೊಬ್ಬ ‘ಕನಸು’ಗಾರ ಶಿಕ್ಷಕನಾದ ಕಥೆ.. ಅದೊಂದು ಕಾಲವಿತ್ತು.ಆಸಕ್ತಿ,ಅರ್ಹತೆ,ಅನುಕೂಲಗಳು ಇದ್ದವರು ಮಾತ್ರ ಶಿಕ್ಷಣದ ಬಗ್ಗೆ ಯೋಚಿಸುತ್ತಿದ್ದರು.ಬಹುತೇಕ ಜನ ಕುಲಕಸುಬನ್ನು ಅಲಿಖಿತ ಒಪ್ಪಂದದಂತೆ ಸ್ವೀಕರಿಸಿ ಬದುಕುವವರೇ ಜಾಸ್ತಿ.ನಮ್ಮ ಮನೆಯಲ್ಲಿ ಬಹಳಷ್ಟು ಆಸಕ್ತಿ, ಒಂದಿಷ್ಟು ಅರ್ಹತೆ ಬಿಟ್ಟರೆ ಅನುಕೂಲಗಳು ಶೂನ್ಯ. ‌”ಒಂದೂರಿನಲ್ಲಿ ಒಬ್ಬ ಬಡ ಬ್ರಾಮ್ಹಣನಿದ್ದ.. ಅವನಿಗೆ ಮನೆತುಂಬ ಮಕ್ಕಳು” ಎಂದು ಕಥೆ ಸುರುವಾದರೆ ” ನಮ್ಮದಲ್ಲ ತಾನೇ” ಅನಿಸಿಬಿಡುವಷ್ಟು ಸಾಮ್ಯತೆ. ನಮ್ಮ ಅಣ್ಣನಿಗೋ ಹೇಗಾದರೂ ಕಲಿಯಲೇ ಬೇಕು ಎಂಬ ಹಟ. ಊರಲ್ಲಿ ಹೈಸ್ಕೂಲ್ ಇರಲಿಲ್ಲವಾದ್ದರಿಂದ ಪರ ಊರುಗಳಲ್ಲಿ ಇರಬೇಕು. ಅವನು […]

ಕೂರ್ಮಾಸನ

ಕೂರ್ಮಾಸನ ಮಣೆಗಳ ಮೇಲೆ ಕೂರುವ ಅಭ್ಯಾಸವೇ ಕಡಿಮೆಯಾಗಿರುವಾಗ ಮುಖ ನೋಡಿ ಮಣೆ ಹಾಕುವ ಗಾದೆಯೂ ನೇಪಥ್ಯಕ್ಕೆ ಸರಿಯುತ್ತಿದೆ. ಇಷ್ಟಕ್ಕೂ ಮಣೆ ಕೂರುವ ಆಸನ ಮಾತ್ರವಲ್ಲ, ಅದು ನಮ್ಮ ಸಾಮಾಜಿಕ ಸ್ಥಾನಮಾನಗಳನ್ನೂ ತೋರುತ್ತಿತ್ತು. ಗುರುಗಳಿಗೆ ಕೊಡುವ ಮಣೆ ಯಾವಾಗಲೂ ಎತ್ತರವಾಗಿರುತ್ತಿತ್ತು. ಗುರುಗಳಿಗೆ ಕೊಡುವ ಮಣೆ ಯಾವಾಗಲೂ ಎತ್ತರವಾಗಿರುತ್ತಿತ್ತು. ಮದುಮಕ್ಕಳು ಕೂರುವ ಮಣೆ ಗಾತ್ರದಲ್ಲಿ ಡಬಲ್ ಆಗಿರುತ್ತಿತ್ತು. ಹುಲಿಚರ್ಮದ ಹಾಸು ತ್ಯಾಗ ಮತ್ತು ವಿರಕ್ತಭಾವವನ್ನು ಸೂಚಿಸುತ್ತಿತ್ತು. ಹಾಗೆಯೇ ಆಮೆಯ ಆಸನವೂ ಒಂದಿದೆ. ಇದು ಸಂಸಾರದಲ್ಲಿದ್ದೂ, ಮನದಲ್ಲಿ ವಿಷ್ಣುವಿನ ಜಪವನ್ನು ಮಾಡುವ […]

ಪ್ರಕೃತಿ ಹೆಣ್ಣು

ಪ್ರಕೃತಿ  ಹೆಣ್ಣು ಪ್ರಕೃತಿ ಮಾತೆಯೇ ಹೆಣ್ಣಾಗಿ ಬಂದಿಳಿದಿಹಳು ಈ ಇಹದಲಿ ಕಷ್ಟಕೋಟಲೆ ನಿಷ್ಠೂರ ಕಾಟಗಳಲೇ ಹಣ್ಣಾಗಿ ಸಣ್ಣಾಗಿ ಮನಮಿಡಿಯುತಿಹಳು ಬಿರುಸಿನಾ ಬೇಗುದಿಗೆ ಮನವ ತಲ್ಲಣಿಸಿ ಇನಿತು ಇನಿತಾಗಿ ತನ್ನ ತಾನೇ ಕರಗುತಿಹಳು ಕಾರುಣ್ಯದ ನೋಟಕೆ ಹಪಹಪಿಸಿ ಪ್ರೇಮದಾ ಸಿಂಚನಕೆ ಪರಿತಪಿಸಿ ತನ್ನೊಡಲ ಕುಡಿಗೆ ಉಣಬಡಿಸಿ ತಾನಿರುತಿಹಳು ಉಪವಾಸ ವನವಾಸದಲಿ ಹೆಣ್ಣಿಗೆ ರಜ ಎಂಬುದಿಲ್ಲ ಒಳಹೊರಗೂ ದುಡಿದು ಒಳಹೊರ ಉಸಿರು ಒಂದಾಗಿಸೆ ಬಾಳ ಬೆಳಗಬೇಕೆಂಬಾಸೆ ಹೆಣ್ಣು ಹುಟ್ಟಿ ತಾ ಎರಡು ಮನೆಯ ಬೆಳಗುವಳು ತನ್ನ ಬಾಳ ಕಹಿ ಮರೆತು […]

ಮಕ್ಕಳು…

ಮಕ್ಕಳು… ನಿಮ್ಮ ಮಕ್ಕಳು ನಿಮ್ಮವಲ್ಲ… ನಿಮ್ಮ ‘ಬಯಕೆ’ಯ ಕೂಸುಗಳು… ನಿಮ್ಮ ಮುಖಾಂತರ ಬಂದಿರಬಹುದು… ನಿಮಗಾಗಿಯೇ ಅಲ್ಲ, ನಿಮ್ಮ ಜೊತೆಗಿರಬಹುದು, ಆದರೂ ನಿಮ್ಮವರಲ್ಲ. ಅವರಿಗೆ ನಿಮ್ಮ ಪ್ರೀತಿ ಕೊಡಬಲ್ಲಿರಿ… ನಿಮ್ಮ ಯೋಚನೆಗಳನ್ನಲ್ಲ… ಅವರಿಗೆ ತಮ್ಮವೇ ವಿಚಾರಗಳುಂಟು. ನೀವವರ ಶರೀರಗಳಿಗೆ ಆಸರೆ ಕೊಡಬಲ್ಲಿರಿ…ಮನಸ್ಸುಗಳಿಗಲ್ಲ. ಅವರ ಆತ್ಮ/ ಮನಸ್ಸುಗಳು ಅವರ ‘ನಾಳೆ’ ಗಳಲ್ಲಿವೆ… ನೀವು ತಪ್ಪಿಯೂ ಕನಸಿನಲ್ಲಿಯೂ ಅವುಗಳನ್ನು ಮುಟ್ಟಲಾರಿರಿ. ಅವರಂತೆ ನಿಮಗೆ ಆಗಬೇಕೆನಿಸುವಷ್ಟು ಚಂದದ ಬದುಕು ಅವರದಾಗಬಹುದು. ಬದುಕೆಂದೂ ಹಿಮ್ಮುಖವಾಗಿ ಹರಿಯಲಾರದು, ಅದಕ್ಕೆ ಕಿಂಚಿತ್ತೂ ‘ನಿನ್ನೆ’ಯ ಹಂಗಿಲ್ಲ… ಮುಂದೆ ಚಿಮ್ಮುವ […]

ನವರಾತ್ರಿ

ನವರಾತ್ರಿ ನವರಾತ್ರಿಯು ನಮ್ಮ ಭಾರತದಲ್ಲಿ ಎಲ್ಲ ಕಡೆಗೂ ಆಚರಿಸುವಂಥ ಹಬ್ಬ. ಕೆಲವರು  ವೆಂಕಟೇಶ ದೇವರ ಮದುವೆಯ ಒಂಬತ್ತು ದಿನಗಳ ಸಂಭ್ರಮವನ್ನು  ನವರಾತ್ರಿಯ ಹೆಸರಿನಲ್ಲಿ ಆಚರಿಸುತ್ತಾರೆ. ಘಟಸ್ಥಾಪನೆ ಮಾಡಿ, ತುಪ್ಪ ಹಾಗೂ ಎಣ್ಣೆಯ ಎರಡು ನಂದಾದೀಪಗಳನ್ನು ಒಂಬತ್ತು ದಿನಗಳ ವರೆಗೂ ಸತತವಾಗಿ ಉರಿಸುತ್ತಾರೆ. ಐದನೆಯ ದಿನದಿಂದ ಪುಸ್ತಕ ಪೂಜೆ ಎಂದು ಆಚರಿಸುತ್ತಾರೆ. ಮುಂದೆ ಅಷ್ಟಮಿಯಂದು ದುರ್ಗೆಯ ರೂಪವನ್ನು ಪೂಜಿಸಿದರೆ, ನವಮಿಯಂದು ಮಹಾನವಮಿ ಎಂದೂ, ದಶಮಿಯಂದು ವಿಜಯದಶಮಿಯಾಗಿಯೂ ಆಚರಿಸುತ್ತಾರೆ. ಇನ್ನೂ ಕೆಲವು ಕಡೆಗಳಲ್ಲಿ ಮುಖ್ಯವಾಗಿ ಬಂಗಾಲದಲ್ಲಿ ದುರ್ಗಾ ಪೂಜೆಯ ಹೆಸರಿನಲ್ಲಿ […]