ಭಾಷಣ ಕಲೆ ಸಿದ್ಧಿಸುವುದು ಹೇಗೆ? ಮಾನವನ ತಲೆಯು ಕಂಪ್ಯೂಟರಿಗಿಂತಲೂ ಶಕ್ತಿಯುತವಾದದ್ದೆಂದು ಸ್ವತಃ ವಿಜ್ಞಾನಿಗಳೇ ಹೇಳಿದ್ದಾರೆ. ನಮ್ಮ ತಲೆಯಲ್ಲಿ ಸಾಕಷ್ಶಟು ವಿಷಯಗಳ ಬಗ್ಗೆ ಜ್ಞಾನವಿದೆ. ಜಗತ್ತಿನಲ್ಲಿ ಹಂಚಿದಷ್ಟೂ ಹೆಚ್ಚುವುದು ಜ್ಞಾನ ಒಂದೇ! ತನ್ನ ಜ್ಞಾನವನ್ನು ಹಂಚಬೇಕಾದಲ್ಲಿ ವ್ಯಕ್ತಿಗೆ ಭಾಷಣಕಲೆಯ ಸಿದ್ಧಿ ಅವಶ್ಯಕವಾಗಿದೆ. ನಾವು ಮಾತನಾಡುವಾಗ ಉತ್ಸುಕತೆಯನ್ನು ಹೊಂದಿದಂಥ ಕೇಳುಗರನ್ನೇ ಬಯಸುತ್ತೇವೆ. ನಮ್ಮ ಅನುಭವಗಳನ್ನು ಹೇಳುವಾಗ, ನಗೆಯ ಸಂದರ್ಭಗಳನ್ನು ಹೇಳುವಾಗ ಕೇಳುಗರು ಅದನ್ನು ಮನಸಾರೆ ಆಸ್ವಾದಿಸಬೇಕು, ಮನದುಂಬಿ ನಗಬೇಕು ಎಂದೂ ಬಯಸುತ್ತೇವೆ. “ಸಭೆ” ಎಂದರೆ ಕೇಳುಗರು ಒಂದಿಷ್ಟು ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. […]
