Your Cart

Need help? Call +91 9535015489

📖 Print books shipping available only in India. ✈ Flat rate shipping

ಕನ್ನಡ ಕಥಾ ಲೋಕವನ್ನು ಸಮೃದ್ಧವಾಗಿಸಿದ ಕತೆಗಾರ್ತಿಯರು ಭಾಗ-೧   

ಕನ್ನಡ ಕಥಾ ಲೋಕವನ್ನು ಸಮೃದ್ಧವಾಗಿಸಿದ ಕತೆಗಾರ್ತಿಯರು ಕಥೆಗಳು ಹುಟ್ಟಲು ನಿಶ್ಚಿತ ಸಮಯ-ಸಂದರ್ಭ, ಸಂಭಾಷಣೆ, ವ್ಯವಧಾನಗಳು ಬೇಕಿಲ್ಲ.. ಮೌನದಲ್ಲೂ ನೂರಾರು ಕತೆಗಳು ಅರಳುತ್ತವೆ. ಮನುಷ್ಯನ ಭಾಷೆ, ಲಯ, ಭಾವನೆಗಳು, ಹೊಯ್ದಾಟ, ತುಡಿತ, ತುಮುಲಗಳಷ್ಟೇ ಕಥಾ ಚೌಕಟ್ಟಿಗೆ ಒಳಪಡದೆ, ಈ ಸೃಷ್ಟಿಯ ಚರಾಚರ ವಸ್ತುಗಳೆಲ್ಲವೂ ಕಥೆಗೆ ವಸ್ತುಗಳಾಗಬಲ್ಲವು. ಸಾಮಾಜಿಕ ಮೌಲ್ಯಗಳು, ಸುಧಾರಣೆ ಹಾಗೂ ಜೀವನಾನುಕಂಪದೊಂದಿಗೆ ಬೆಳೆದ ಕನ್ನಡ ಕಥಾ ಪರಂಪರೆ ವಿವಿಧ ಕಾಲಘಟ್ಟಗಳಲ್ಲಿ ಮನೋವಿಶ್ಲೇಷಣಾತ್ಮಕ, ಮಣ್ಣಿನ ವಾಸನೆ, ಗ್ರಾಮ್ಯ ಪರಿಸರ, ವಿಶಿಷ್ಟ ಭಾಷಾ ಪ್ರಯೋಗ, ಸಾಮಾಜಿಕ ಅಸಮಾನತೆ ಅನ್ಯಾಯದ ವಿರುದ್ಧ […]

ಮಹಾಶಿವರಾತ್ರಿ

ಮಹಾಶಿವರಾತ್ರಿ ಸಾಮಾನ್ಯವಾಗಿ ಶಿವನು ಸುಲಭವಾಗಿ ಒಲಿಯುವವನು ಎಂದು ಪ್ರತೀತಿ ಇದೆ. ನನಗಂತೂ ಹಾಗೆ ಎನ್ನಿಸುವುದಿಲ್ಲ. ಭಕ್ತನ ಭಕ್ತಿಯು ಪರಾಕಾಷ್ಠೆಯನ್ನು ತಲುಪಿ, ಆತ ತನ್ನ ಜೀವವನ್ನೇ ಪಣಕ್ಕೆ ಹಚ್ಚಿದಾಗಲೇ ಶಿವನೂ ಒಲಿಯುವುದು! ನೀವೆಲ್ಲ ಅರುವತ ಮೂರು ಶಿವಶರಣರ ಕಥೆಗಳೆಲ್ಲವನ್ನೂ ಓದಿರದಿದ್ದರೂ ಸಿರಿಯಾಳ, ಕಣ್ಣಪ್ಪ, ನಂಬಿಯಕ್ಕ, ತಿರುನೀಲಕಂಠ ಮುಂತಾದವರ ಕಥೆಗಳನ್ನು ಅರಿತೇ ಇರುತ್ತೀರಿ. ಯಾರಿಗಾದರೂ ಶಿವನು ಸುಲಭಕ್ಕೆ ಒಲಿದುದುಂಟೇ? ಇಲ್ಲವೇ ಇಲ್ಲ… ಅವನನ್ನು ಒಲಿಸಲು ನೀರಿನ ಅಭಿಷೇಕ, ಬಿಲ್ವ ಪತ್ರೆಯ ಅರ್ಪಣೆಯೂ ಸಾಕು. ಪ್ರದಕ್ಷಿಣೆ ಬಂದು ನಾಮಜಪ ಮಾಡಿದರಂತೂ ಬಹಳ […]

ಎರಡು ಪತ್ರಗಳು

ಎರಡು ಪತ್ರಗಳು ಮಾಲತೀ ಅಕ್ಕಾ, ನೀವು ಬರದ ಕಾಗದ ತಲುಪೇದ ಮತ್ತ ನೀವು ಹೇಳಿದ ಧಾರವಾಡ ನೆನದ ಮನಸ ಮತ್ತ ಚಿತ್ತೀ ಮಳಿಯಾಂಗ ಅತ್ತು ತೋದ ತೊಪ್ಪೀ ಆಗೇದ. ಸಟ್ಟ ಸರಹೊತ್ತಿನಲ್ಲಿ, ಹೊತ್ತಲ್ಲದ ಹೊತ್ತಿನಲ್ಲಿ ನೆನಪಾಗುವ ನನ್ನ ಧಾರವಾಡದ ನೆತ್ತಿಯ ಮೇಲೆ ಆ ಮೊದಲಿನಂತೆಯೇ ಮಳೆ ಸುರಿಯುತ್ತದೆಯೇ ? ಕರ್ನಾಟಕ ಕಾಲೇಜು ಹಿಂಭಾಗದ ಕಳ್ಳ ಕಿಂಡಿಯಂತಹ ದಾರಿಯ ಮರದ ನೆರಳಿಗೇ ಕತ್ತಲೆಯಾಗುವ ಕಾಲುದಾರಿಯಲ್ಲಿ ಆ ಹುಡುಗಿ ಅಂಜುತ್ತಲೇ ಬಾಟನೀ ಕ್ಲಾಸಿಗೆ ಬಂದು ಹಾಜರೀ ಹಾಕುತ್ತಾಳೆಯೇ ? ಮಿಸ್ಕಿನ್ […]

ಹದಿ ಹರೆಯದ ಸಮಸ್ಯೆಗಳು..

ಹದಿ ಹರೆಯದ ಸಮಸ್ಯೆಗಳು.. ಹದಿ ಹರೆಯ ಎಂಬುದು ಎಲ್ಲರ ಜೀವನದ ಒಂದು ಮಹತ್ವದ ಘಟ್ಟ. ಅಲ್ಲಿ ಆಶೆಗಳಿವೆ, ಕನಸುಗಳಿವೆ, ಅವುಗಳನ್ನು ಕೈಗೂಡಿಸಿಕೊಳ್ಳಲೋಸುಗ ಮಾಡುವ ವಿಫಲ ಹಾಗೂ ಸಫಲ ಯತ್ನಗಳಿವೆ.. ವಿಫಲರಾದಾಗ ಜೀವದ ಮೇಲಿನ ಆಶೆ ತೊರೆಯುವ, ಸಫಲರಾದಾಗ ಪ್ರಪಂಚವನ್ನೇ ಮರೆಯುವ ಘಟ್ಟವದು. ಮಕ್ಕಳ ಸಮಸ್ಯೆಗಳನ್ನು ಪಾಲಕರು ತಮ್ಮದೇ ಆದ ಒಂದು ಅಳತೆಗೋಲಿನಿಂದ ಅಳೆಯುತ್ತಾರೆ. ತಾವು ಆ ಪರಿಸ್ಥಿತಿಯಲ್ಲಿದ್ದಾಗ ತಮ್ಮ ತಂದೆ ತಾಯಿಯರು ಏನು ಮಾಡಿದ್ದರೋ ಅದನ್ನೇ ತಮ್ಮ ಮಕ್ಕಳಿಗೂ ಮಾಡುತ್ತ ತಾವು ಸರಿಯಾದ ಮಾರ್ಗದಲ್ಲಿಯೇ ಮುಂದುವರಿಯುತ್ತಿದ್ದೇವೆ ಎಂದು […]

ತ್ಯಾಜ್ಯ ನಿರ್ವಹಣೆ

ತ್ಯಾಜ್ಯ ನಿರ್ವಹಣೆ “ಕಸಾನ ಅಲ್ಲಿಲ್ಲೆ,ಗಟರದಾಗ ಒಗೀತೀರ್ಯಾಕ? ಅಪಾರ್ಟ್ಮೆಂಟ್ ನ ಬೇಸ್ ಮೆಂಟ್ ದಾಗ ಕಸದ ಡಬ್ಬೀ ಇಟ್ಟೇವಿ. ಅದರಾಗನ ಹಾಕರಿ. ” “ನಾ ಇಲ್ಲೇ ಒಗ್ಯಾಕಿ. ನಿಂಗೇನ ಮಾಡೂದು? ನಿನ್ನ ಮನೀ ಹತ್ರಂತೂ ಚೆಲ್ಲಿಲ್ಲಾ…” “ರಸ್ತೆದಾಗ ಯಾಕ ಊಟಾ ಮಾಡಿದ ಎಲೀ ಛೆಲ್ಲತೀರೀ? ಕಸದ ಡಬ್ಯಾಗ ಹಾಕ್ರೆಲಾ…” “ಯಾಕರೀ ನಿಮಗ ಮಾಡಲಿಕ್ಕೆ ಕೆಲಸಿಲ್ಲೇನು?ಎಲ್ಲಾರಿಗೂ ಫುಕಟ ಉಪದೇಶ ಕೊಟಗೋತ ಹೊಂಟೀರಿ?” “ಮುಗೀತsss ಮಂಗಳಾರತೀ.. ಊರ ಉಸಾಬರಿ ಮಾಡಿ…” ನಮಗ ಇಂಥಾ ಅನುಭವ ಜೀವನದಾಗ ಭಾಳ ಆಗತಾವರೀ. ಅದಕ ಕಾರಬಾರ […]

ಡಾ. ವೀಣಾ ಶಾಂತೇಶ್ವರ ಎಂಬ ಸ್ತ್ರೀಪರ ಚಿಂತಕಿ 

ಡಾ. ವೀಣಾ ಶಾಂತೇಶ್ವರ ಎಂಬ ಸ್ತ್ರೀಪರ ಚಿಂತಕಿ “ಬೆಳೆದದ್ದು ಕನಸು ಕಾಣುತ್ತಲೇ… ಕಂಡ ಕನಸು ಸಾಕಾರಗೊಳಿಸಿಕೊಳ್ಳಲು ಪಟ್ಟ ಪ್ರಯತ್ನ ಅಷ್ಟಿಷ್ಟಲ್ಲ… ಈಗ ಕನಸು ಸಾಕಾರಗೊಂಡಿವೆ… ಆದರೂ ಮತ್ತೇನಾದರೂ ಮಾಡಬೇಕೆಂಬ ಹಂಬಲ, ತುಡಿತ…” ಇದು ಡಾ ವೀಣಾರವರ ಬಗ್ಗೆ ಹೇಳಬಹುದಾದ ಮಾತು. ಸಂತೂಬಾಯಿಯವರ ಶತಮಾನದ ಹಿಂದಿನ ಕನಸಿಗೆ ತಮ್ಮ ಕಥೆ, ಕಾದಂಬರಿಗಳ, ವೈಚಾರಿಕ ಬರಹಗಳ ಮೂಲಕ ಜೀವ ತುಂಬುತ್ತ ಅವರು ನಡೆದ ಕಾಲುದಾರಿಯನ್ನೇ ಹೆದ್ದಾರಿಯಗಿ ವಿಸ್ತರಿಸಲು ಪ್ರಯತ್ನಿಸಿದ ಲೇಖಕಿಯರ ಸಾಧನೆಯಲ್ಲಿ ಡಾ. ವೀಣಾ ಅವರ ಪಾಲು ಗಮನಾರ್ಹವಾದುದು. ಅನನ್ಯ […]

ಹೆಣ್ಣೇಕೆ ಶ್ವೇತಸುಂದರಿಯಾಗಿರಬೇಕು?

ಹೆಣ್ಣೇಕೆ ಶ್ವೇತಸುಂದರಿಯಾಗಿರಬೇಕು? ಸೌಂದರ್ಯವೆನ್ನುವುದು ನೋಡುಗರ ಕಣ್ಣಿನಲ್ಲಿದೆ ಎಂದು ಶೇಕ್ಸಪಿಯರ್ ನಂಥ ಮಹಾನ್ ಸಾಹಿತಿಯೇ ಹೇಳಿದ್ದಾನೆ.. ಆದರೂ ಸೌಂದರ್ಯದ ಅಳತೆಗೋಲುಗಳು ಇದ್ದೇ ಇವೆ. ಅವೇನೂ ಸೌಂದರ್ಯ ಸ್ಪರ್ಧಾಳುಗಳಿಗೆಂದು ಮಾಡಲಾದವುಗಳಲ್ಲ. ಸಾಮಾನ್ಯರ ದೃಷ್ಟಿಯಲ್ಲಿಯ ಅಳತೆಗೋಲುಗಳೇ. ಸೌಂದರ್ಯವೆಂದರೆ ಹಾಲುಬಿಳುಪು ಬಣ್ಣ, ಎತ್ತರವಾದ ಆದರೆ ತೆಳುವಾದ ಹಾಗೂ ಒಳ್ಳೆಯ ಉಬ್ಬು ತಗ್ಗುಗಳನ್ನು ಹೊಂದಿದ ಮೈಕಟ್ಟು, ಸ್ವಚ್ಛವಾದ ಹಾಗೂ ಹೊಳಪುಳ್ಳ ಚರ್ಮ, ಕೂದಲು ಉದ್ದ ಅಥವಾ ಗಿಡ್ಡ ಹೇಗೇ ಇರಲಿ, ಅದರೆ ದಟ್ಟವಾದ ಹಾಗೂ ನಯವಾದ ಕೇಶರಾಶಿ ಇರಬೇಕು… ದೊಡ್ಡ ದೊಡ್ಡ ಕಣ್ಣುಗಳು, ಚೂಪನೆಯ […]

ವೈವಾಹಿಕ ಜೀವನದ ಯಶಸ್ಸಿಗೆ ಹೊಂದಾಣಿಕೆ ಹಾಗೂ ಸಾಮರಸ್ಯ ಮುಖ್ಯ

ವೈವಾಹಿಕ ಜೀವನದ ಯಶಸ್ಸಿಗೆ ಹೊಂದಾಣಿಕೆ ಹಾಗೂ ಸಾಮರಸ್ಯ ಮುಖ್ಯ ಬದುಕಿನ  ಪ್ರಮುಖ ನಿರ್ಧಾರಗಳಲ್ಲಿ ವಿವಾಹವೂ ಒಂದು. ಹೊಸದಾಗಿ ಮದುವೆ ಮಾಡಿಕೊಂಡು ತನ್ನ ಸಂಗಾತಿಯೊಂದಿಗೆ ಜೀವನ ಹಂಚಿಕೊಳ್ಳುವ ಉತ್ಸಾಹ ಒಂದು ಕಡೆಯಾದರೆ, ಮತ್ತೊಂದು ಕಡೆ  ಹೊಸ ಪರಿಸರ, ಹೊಸ ಸಂಗಾತಿಯೊಂದಿಗೆ ಅಪರಿಚಿತ  ವಾತಾವರಣದಲ್ಲಿ ವಾಸಿಸುವುದು ಸವಾಲಿನ ಸಂಗತಿಯಾಗಿರುತ್ತದೆ. ಇದು ಹೆಣ್ಣು ಹಾಗೂ ಗಂಡು ಇಬ್ಬರಿಗೂ ಕೂಡ ಅನ್ವಯವಾಗುತ್ತದೆ. ಆದರೂ ಹೊಸ ಬದುಕಿಗೆ ಹೊಂದಿಕೊಳ್ಳುವುದು ಎಂದರೆ ಗಂಡಿಗಿಂತಲೂ ಹೆಣ್ಣಿಗೇ ತೀವ್ರ ಒತ್ತಡಕರ ವಿಷಯ. ಏಕೆಂದರೆ ಗಂಡಿಗೆ ಕೇವಲ ಹೆಂಡತಿಯೊಬ್ಬಳೇ ಅಪರಿಚಿತಳಾದರೆ […]

ಅನುವಾದ ಸಾಹಿತ್ಯ  ಭಾಗ ೩

ಅನುವಾದ ಸಾಹಿತ್ಯ  ಭಾಗ ೩ ಭಾಷಾವೈಶಿಷ್ಟ್ಯಗಳ ಬಳಕೆಯ ಅಪರೂಪದ, ಆಡುಭಾಷೆಯ ನುಡಿಗಟ್ಟುಗಳು ಒಂದು ರೀತಿಯಲ್ಲಿ ಭಾಷೆಯಿಂದ  ಬೇರ್ಪಡಿಸಲಾಗದ ಅಭಿವ್ಯಕ್ತಿಗಳಾಗಿವೆ.  ಅವುಗಳು ಒಂದು ನಿರ್ದಿಷ್ಟ ಅರ್ಥವನ್ನು ಹೊಂದಿರುತ್ತವೆ, ಅವುಗಳಲ್ಲಿ ಒಳಗೊಂಡಿರುವ ಅಂಶಗಳಿಂದ ಸ್ವತಂತ್ರವಾಗಿರುತ್ತವೆ. ಒಮ್ಮೊಮ್ಮೆ ಈ ನುಡಿಗಟ್ಟುಗಳು ಶಬ್ದಶಃ ಅನುವಾದ ಹೊಂದಿದಾಗ ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತದೆ. ನನಗೆ ಶ್ರೀಮತಿ ಇಂದ್ರಾಯಣಿ ಸಾಹುಕಾರರವರ ಮೇನಕಾ ಹಾಗೂ ಏಕ್ ಹೋತಾ ಸಿಕಂದರ ಕಾದಂಬರಿಗಳನ್ನು ಅನುವಾದ ಮಾಡುವಾಗ ಕೆಲವು ನುಡಿಗಟ್ಟುಗಳನ್ನು ಹೇಗೆ ಅರ್ಥ ಕೆಡದಂತೆ ಅನುವಾದಿಸಬೇಕೆಂಬ ಸಮಸ್ಯೆ ಉಂಟಾಗಿತ್ತು.. ‘ಸೋನ್ಯಾ ಪೇಕ್ಷಾ ಪಿವಳಾ’.. ಬಹಳ […]