ಸತ್ಸಂಗದಲ್ಲಿದ್ದು ಜ್ಞಾನ ಪಡೆದುಕೊ ‘ಅಧ್ಯಯನ, ಯಾಜನ. ದೇವತಾಪೂಜನ. ಕರ್ತವ್ಯಕರ್ಮ, ಯಜ್ಞಶೇಷವನ್ನು ಉಣ್ಣುವುದು (ಪರಿಣಾಮವಾಗಿ ಏನು ಸಿಕ್ಕರೆ ಅದನ್ನೇ ಮಹಾಪ್ರಸಾದವೆಂದು ಸ್ವೀಕರಿಸುವುದು), ಧ್ಯಾನ. ಮುಂತಾದ ಹಲವು ವಿಧಗಳಲ್ಲಿ ಕರ್ಮಯೋಗವನ್ನಾಚರಿಸುವ ವಿವರಗಳು ವೇದದಿಂದಲೇ ಬಂದಿವೆ, ಅದನ್ನು ಅರಿತು ಆಚರಿಸಬಲ್ಲವನು ಮುಕ್ತನಾಗುತ್ತಾನೆ’ ಎನ್ನುವ ವಿಷಯವನ್ನು ಶ್ರೀಕೃಷ್ಣನು ವಿವರಿಸುತ್ತಿದ್ದನು. ಮುಂದುವರಿಸುತ್ತ ಹೇಳುತ್ತಾನೆ; ‘‘ಕೇವಲ ದ್ರವ್ಯಗಳನ್ನು ಬಳಸಿ ಮಾಡುವ ಯಜ್ಞಕ್ಕಿಂತ, ಜ್ಞಾನಯಜ್ಞವು ಹೆಚ್ಚು ಶ್ರೇಯಸ್ಕರ, ಎಲ್ಲ ಕರ್ಮಗಳೂ ಕೊನೆಗೆ ಜ್ಞಾನದಲ್ಲೇ ಪರಿಸಮಾಪ್ತಿಯಾವುದು’’ ಎಂದು. (ಭ.ಗೀ.: 4.33) ‘ದ್ರವ್ಯಯಜ್ಞ’ ಎಂದರೆ ಭೌತಿಕವಸ್ತುಗಳನ್ನು ಬಳಸಿ ಮಾಡುವ ಪೂಜೆ, […]