ಅಂತರಂಗದ ಮಾತು
ತೆರೆದಿಡೆನ್ನ ಹೃದಯ
ಪ್ರೇಮದ ಹೊನಲಾಗಲು ಪರರಿಗೆ
ಲೇಸ ಬಯಸಲು ಹಲವರಿಗೆ
ಹೊತ್ತಿಸೆನ್ನ ಚಿತ್ತದಲಿ ಬೆಳಕ ಹಣತೆ
ದಾರಿದೀಪವಾಗಲು ಕೆಲವರಿಗೆ
ಬೆಳಗಿಸಲು ಬಾಳ ದೀವಿಗೆ
ಕರುಳ ಬಳ್ಳಿಯಲಿ ಕೊಡು ಕರುಣೆ
ಕರುಣಿಸಲು ಅನುಕಂಪ ಕನಿಕರ ಅನ್ಯರಲಿ
ನೀಡಲು ಮಮತೆ ಏನೂ ಅರಿಯದವರಲಿ
ನಯನದಲಿ ನೀಡು ನ್ಯಾಯ
ಕಂಡರಿಯಲು ನಿಜ ಸರಿ ತಪ್ಪುಗಳ
ಸದಾ ಜಯಿಸಲು ಸತ್ಯವ
ಆಲಿಸುವ ಕಿವಿಗಿದೋ ನೀಡು ಸೌಜನ್ಯ
ಕೇಳಲು ದುಃಖ ಸಂಕಷ್ಟಗಳ ಪರರ
ಭರವಸೆಯಾಗಲು ನೊಂದವರ
You must log in to post a comment.