ಇಂಥ ಪ್ರಶ್ನೆಗಳು ಸಾಮಾನ್ಯವಾಗಿ ಅನೇಕರ ಮನಸ್ಸಿನಲ್ಲಿ ಒಂದಲ್ಲ ಒಂದು ಕಾಲದಲ್ಲಿ, ಕಾಣಿಸಿಕೊಂಡಿರುತ್ತವೆ. ಆದರೆ ಅವುಗಳಿಗೆ ಸರಿಯಾದ ಉತ್ತರ ಕಾಣದೆ ಹಲುಬುವರು ಬಹುಮಂದಿ. ಹೀಗೆ ಮನುಷ್ಯನ ಮನದಲ್ಲಿ ಸಾಮಾನ್ಯವಾಗಿ ಉದ್ಭವಿಸುವ ಈ ಗಹನವಾದ ಪ್ರಶ್ನೆಗಳಿಗೆ ಸಾಧ್ಯವಾದ ಮಟ್ಟಿಗೂ ಸರಳವಾದ ಮಾತುಗಳಲ್ಲಿ ಸಮಾಧಾನ ಹೇಳಲು ಶ್ರೀ ಡಿ.ವಿ.ಜಿ ಪ್ರಯತ್ನಪಟ್ಟಿರುತ್ತಾರೆ. ಇಲ್ಲಿನ ಉತ್ತರಗಳಲ್ಲಿ ಎರಡು ಎಳೆಗಳನ್ನು ಕಾಣಬಹುದು: ಒಂದು ವಿಚಾರಪರವಾದದ್ದು, ತತ್ತ್ವಪ್ರಾಯವಾದದ್ದು; ಇನ್ನೊಂದು ಅವನ್ನು ಸ್ಥಿರಪಡಿಸುವ ಋಷಿವಾಕ್ಯಗಳು; ಕೊನೆಯಲ್ಲಿ ಸಿದ್ಧಾಂತ, ಈ ಪುಟ್ಟ ಪುಸ್ತಕವನ್ನು ಓದುವ ವಾಚಕನು ಇಲ್ಲಿನ ಅಲ್ಪಾವಕಾಶದಲ್ಲಿ ಎಷ್ಟು ವಿಷಯಗಳು ಅಡಕವಾಗಿವೆಯೆಂದು ಅಚ್ಚರಿಪದಿರಲಾರನು. ಭಾವದ ಸ್ಪಷ್ಟತೆಯೂ ಮಾತಿನ ಸರಳತೆಯೂ ಬೆರಗುಪಡಿಸುತ್ತವೆ. ಇಲ್ಲಿನ ಬರವಣಿಗೆ ಮುಖ್ಯವಾಗಿ, ಮನಸ್ಸಿಗೆ ಸಮಾಧಾನವನ್ನು ಕೊಡುವಂತಹುದು.

ದೇವರು
Sale!
ದೇವರು
$0.54 $0.49
ದೇವರು ಇದ್ದಾನೆಯೇ?
ದೇವರು ಎಂಬ ವಸ್ತು ನಿಜವಾಗಿ ಉಂಟೆ?
ದೇವರು ಎಂದರೆ ಏನು?
ಅದರ ಸ್ವರೂಪ ಎಂಥದು?
ಅದರಿಂದ ನಮಗೆ ಆಗಬೇಕಾದದ್ದೇನು?
ಈ ಜಗತ್ತು ಏಕೆ ಸೃಷ್ಟಿಯಾಯಿತು?
ಇದರ ವ್ಯವಸ್ಥೆಯ ತತ್ತ್ವವೇನು?
ನಾನಾ ಮತಧರ್ಮಗಳ ಮೂಲತತ್ತ್ವವೇನು?
- Book Format: Printbook
- Category: spiritual
- Language: Kannada
- Publisher: Sahitya Prakashana
Only logged in customers who have purchased this product may leave a review.
Reviews
There are no reviews yet.