ಕಲೆ…ಮನೋರಂಜನೆ

ಕಲೆ…ಮನೋರಂಜನೆ….ಎಲ್ಲಾದರೂ ಓದಿದಾಗ, ಕೇಳಿದಾಗ ನನ್ನ ಮನಸ್ಸಿನಲ್ಲಿ ಮೂಡುವ ಮೊದಲ ಪ್ರಶ್ನೆ ….ಕಲೆ ಮತ್ತು ಮನೋರಂಜನೆ ಇವೆರಡರ ವ್ಯತ್ಯಾಸ ಹೇಗೆ ಸರಳ ರೀತಿಯಲ್ಲಿ ವಿವರಿಸುವುದು?

ಈ ಪ್ರಶ್ನೆ ಪದೇಪದೇ ಮನಸ್ಸಿನಲ್ಲಿ ಮೂಡಿದಾಗ ನಮ್ಮ ಬ್ರಹಸ್ಪತಿ ಗೂಗಲ್ಅನ್ನು ಕೇಳಿದೆ…..ಬಂದ ಉತ್ತರ ತಮ್ಮೊಡನೆ ಹಂಚಿಕೊಳ್ಳಲು ಮತ್ತು ಚರ್ಚಿಸಲು ಈ ಲೇಖನ ಬರೆಯುತ್ತಿರುವೆ.

ಅಂತರ್ಜಾಲದ ಸಂಕ್ಷಿಪ್ತ ಅಭಿಪ್ರಾಯ – ಮನೋರಂಜನೆ ನಮ್ಮಗೆ ಊಹಿಸಬಹುದಾದ ಆನಂದ ಕೊಟ್ಟರೆ ಕಲೆ ನಮ್ಮಲ್ಲಿ ಪರಿವರ್ತನೆಗೆ ಕಾರಣವಾಗುತ್ತದೆ……ಮನೋರಂಜನೆಯಿಂದ ನಮ್ಮ ಮನಸ್ಸು ಕ್ಷಣಕಾಲ ಸಂತೋಷದ ಲೋಕದಲ್ಲಿ ವಿಹರಿಸುವುದು ಆದರೆ ಕಲೆ ನಮ್ಮ ವಿಚಾರಗಳ ಪರಿವರ್ತನೆಗೆ ಪೂರಕವಾಗುವುದು.

ಇದನ್ನು ಉದಾಹರಣೆಯೊಂದಿಗೆ ನೋಡೋಣ –

ಯಕ್ಷಗಾನ ಒಂದು ಕಲೆ, ನೀವೆಲ್ಲರೂ ಒಪ್ಪುವಿರೆಂದು ನಂಬಿದ್ದೇನೆ. ಯಕ್ಷಗಾನದ ಆಟದಿಂದ ಜನರು ಸಂತೋಷ ಪಡುತ್ತಾರೆ ….ಅಂದರೆ ಯಕ್ಷಗಾನದಿಂದ ಮನೋರಂಜನೆ ಕೂಡ ಪಡೆಯಬಹುದು.
“ಪ್ರತಿಯೊಂದು ಕಲೆ ಪ್ರತಿಯೊಬ್ಬರಿಗೂ ಸಂತೋಷ ಕೊಡುವದಿಲ್ಲ…….ಹಾಗೆಯೇ ಪ್ರತಿಯೊಂದು ಮನೋರಂಜನೆಯು ಕಲೆಯಲ್ಲ”.

ಯಕ್ಷಗಾನದಿಂದ ಮನೋರಂಜನೆ ಸಿಗುತ್ತದೆ ಎಂದು ಸರಳವಾಗಿ ಸಾಬೀತುಪಡಿಸಬಹುದು, ಆಟ ನೋಡಿದ ಜನರಲ್ಲಿ ಎಷ್ಟು ಜನರು ಸಂತೋಷಪಟ್ಟರು ಎಂಬುದು ಅಳತೆಗೋಲು…. ಕಲೆಯನ್ನು ಅಳೆಯುವುದು ಹೇಗೆ?

ಸದ್ಯಕ್ಕೆ ಜನರ ಉತ್ತರಕ್ಕೆ ಕಾಯುತ್ತೇನೆ….ಈ ವಿಷಯದ ವಿಚಾರ ಮತ್ತೆ ಮುಂದುವರೆಸುತ್ತೇನೆ.

Leave a Reply