ಸಮಯದ ಬೆನ್ನತ್ತಿ…

ಮೊನ್ನೆ ಒಂದಿನ ಸಂಜೆ ಕೆಲಸ ಮುಗಿದು ಮನೆಗೆ ತಲುಪುವುದರ ಹೊತ್ತಿಗೆ ಬಾಲ್ಯದ ಗೆಳೆಯ ನನ್ನ ಮುಂದೆ ಪ್ರತ್ಯಕ್ಷನಾಗಿದ್ದ. ಅವನನ್ನು ಮನೆಗೆ ಕರೆದೋಯ್ದು ಬೈಟುಕಾಫಿ ಕುಡಿಯುತ್ತ ಅಮ್ಮನಿಗೆ ರಾತ್ರಿಯ ಊಟದ ತಯಾರಿ ಮಾಡುವಂತೆ ತಿಳಿಸಿ, ನಾವು ಹರಟೆಯಲ್ಲಿ ತಲ್ಲೀನರಾಗಿದ್ದೇವು. ಬಾಲ್ಯದ ತುಂಟತನದ ದಿನಗಳನ್ನ ನೆನಪಿಸಿಕೊಳ್ಳುತ್ತ ಚಿತ್ರಪಟ ಗಳನ್ನು ಕೆಳಗಿಂದ ಮೇಲೆ, ಮೇಲಿಂದ ಕೆಳಗೆ ಮೆಲಕು ಹಾಕುತ್ತ ಚಿತ್ರಗಳು ನಮ್ಮನ್ನು ಒಂದು ಕ್ಷಣ ನಮ್ಮನ್ನು ಹಳೆಯ ದಿನಗಳನ್ನು ನೆನಪಿಸಿಕೊಳ್ಳುವಂತೆ ಮಾಡಿದ್ದವು.

</

ಮಾತನಾಡುತ್ತ ಕುಳಿತ ಗೆಳೆಯನಿಗೆ ಸಂದರ್ಭಕ್ಕೆ ತಕ್ಕಂತೆ ಟೈಮ್ ಸಾಲುತ್ತಿಲ್ಲ ಎಂಬ ವಿಷಯ ಪ್ರಸ್ತಾಪವಾಯ್ತು. ಅಷ್ಟರಲ್ಲಿ ನಾನು ಹೌದು ನನಗೂ ಕೆಲಸಮಾಡಲು ಸಮಯಾನೇ ಸಾಲುತ್ತಿಲ್ಲ, ಎಲ್ಲ ಕೆಲಸಗಳು ಅಪೂರ್ಣ ಅಂತ ಅವನ ಮುಂದೆ ಹೇಳಿಕೊಂಡಿದ್ದೆ. ಇದಕ್ಕೆ ಪೂರಕವೆಂಬಂತೆ ನನ್ನ ಗೆಳೆಯ ನನಗೂ ಕೂಡ ಸಮಯ ಹೋಗಿದ್ದೆ ಗೊತ್ತಾಗುತ್ತಿಲ್ಲ. ಸಾಮಾನ್ಯವಾಗಿ ಕೆಲಸಗಳನ್ನು ಮಾಡಲು ಸಮಯವೇ ಸಾಲುತ್ತಿಲ್ಲ. ಅಂತೆಲ್ಲ ನನ್ನ ಮುಂದೆ ಗೋಳು ಹೇಳಲು ಶುರುಮಾಡಿದ್ದ.

ಇವೆಲ್ಲದರ ಮಧ್ಯೆ ವಿಷಯವನ್ನು ತುಸು ಗಂಭಿರವಾಗಿ ತೆಗೆದುಕೊಂಡು ಚರ್ಚೆ ಮಾಡುತ್ತ ಕುಳಿತ ನಮಗೆ ಹಲವಾರು ಗೊಂದಲಗಳು ಮನದಲ್ಲಿ ಮನೆಮಾಡಲೂ ಆರಂಭಿಸಿದ್ದವು ಅಷ್ಟರಲ್ಲಾಗಲೇ ಅಮ್ಮ ಬಂದು ಅಡುಗೆ ತಯಾರಾಗಿದೆ ಅನ್ನುತ್ತಲೇ ಆ ವಿಷಯವನ್ನು ಅಲ್ಲಿಯೇ ಬಿಟ್ಟು ಊಟಕ್ಕೆ ಅಣಿಯಾದೇವು. ಊಟದ ನಂತರ ಬಹಳವೇ ಸಮಯವಾಗಿದ್ದರಿಂದ ಗೆಳೆಯನನ್ನು ಶುಭಹಾರೈಕೆಗಳೊಂದಿಗೆ ಕಳುಹಿಸಿಬಂದೆ.

ಗೆಳೆಯನನ್ನು ಕಳಿಸಿ ನನ್ನ ಕೋಣೆಗೆ ಹೋಗಿ ಮಲಗಲು ಅಣಿಯಾದ ನನಗೆ ನಿದ್ದೆ ಬರಲೇ ಇಲ್ಲ. ಇನ್ನೇನು ಮಲಗುತ್ತಲೇ ದಿನಪ್ರತಿ ನಿದ್ರಾದೇವಿ ನನ್ನನ್ನು ಆವರಿಸಿಕೊಂಡು ಬಿಡುತ್ತಿದ್ದಳು, ಆದ್ರೆ ಅವತ್ತು ಏನಾಗಿತ್ತು ನಿದ್ರೆ ಮಾತ್ರ ಒಂದುಗಂಟೆ ಕಳೆದರೂ ಬರಲಿಲ್ಲ, ನನ್ನಲ್ಲಿ ಆಗ ಎಲ್ಲರಿಗೂ ಸಾಲುವ ಸಮಯ ನನಗೇಕೆ ಸಾಲುತ್ತಿಲ್ಲ ಸಮಯ ಎಲ್ಲರಿಗೂ ಇಪ್ಪತ್ನಾಲ್ಕು ಗಂಟೆ ಅಷ್ಟೇ ಅಲ್ವಾ ಅಂತ ಅನಿಸಲು ಶುರುವಾಗಿತ್ತು. ಆಗ ನಾನು ಪುಸ್ತಕದಲ್ಲಿ ಓದಿದ ನಾಡು-ನುಡಿಯನ್ನು ಕಂಡ ಶ್ರೇಷ್ಠ ಮಹನೀಯರ ಚಿತ್ರಣಗಳು ಒಂದು ಕ್ಷಣ ಕಣ್ಣುಮುಂದೆ ಬಂದೋದವು.

ನಾಡಿನ ಪ್ರಖ್ಯಾತ ಇಂಜೀನಿಯರ್‌ಗಳಲ್ಲಿ ಒಬ್ಬರಾದ ಸರ್,ಎಮ್,ವಿಶ್ವೇಶ್ವರಯ್ಯನವರು ಅಂದು ಕನ್ನಂಬಾಡಿಕಟ್ಟೆ ನಿರ್ಮಿಸಲೂ ಸಮಯವೇ ಇಲ್ಲ ಅಂತ ಸುಮ್ಮನೇ ಕುಳಿತುಬಿಟ್ಟಿದ್ದರೆ ಇಂದು ನಮಗೆ ನೋಡಲು ಸೀಗುತ್ತಿತ್ತೆ? ವಿಜ್ಞಾನಿ, ಶಿಕ್ಷಕ, ಅಜಾತಶತ್ರು ಎಂದೆಲ್ಲ ಕರೆಸಿಕೊಳ್ಳುವ ಡಾ.ಎ.ಪಿ.ಜಿ ಅಬ್ದುಲ್ ಕಲಾಂರು ಚಿಂತನೆ ಮಾಡಲೂ ಸಮಯವೇ ಇಲ್ಲ ಅಂತ ಸುಮ್ಮನೇ ಕುಳಿತುಕೊಂಡು ಬಿಟ್ಟಿದ್ದರೆ ವಿಜ್ಞಾನ ಜಗತ್ತಿನಲ್ಲಿ, ರಾಜಕೀಯ ಲೋಕದಲ್ಲಿ ಸಾಧನೆಮಾಡಲೂ ಸಾಧ್ಯವಾಗುತ್ತಿತ್ತೆ? ವಿವಿಧ ಕ್ಷೇತ್ರದಲ್ಲಿ ತಮ್ಮ ಛಾಪನ್ನು ನೀಡುತ್ತ ಇಂದಿನ ಯುವ ಜನತೆಗೆ ಪ್ರೇರಣೆ ನೀಡಲೂ ಸಾಧ್ಯವಾಗುತ್ತಿತ್ತೆ.

ಇವಷ್ಟೇ. ಉದಾಹರಣೆಗಳಲ್ಲ ಶ್ರೇಷ್ಠವಿಜ್ಞಾನಿ ಎಂದು ಕರೆಸಿಕೊಳ್ಳುವ ಥಾಮಸ್ ಆಲ್ವಾ ಎಡಿಸನ್ ಸಮಯವಿಲ್ಲ ಅಂತ ಬಲ್ಬನ್ನು ಕಂಡು ಹಿಡಿಯದೇ ಹೋಗಿದ್ದರೆ ಇಂದು ನಮ್ಮ ಮನೆಗಳಲ್ಲಿ ಬೆಳಕನ್ನು ಕಾಣುವುದೇ ಕಷ್ಟಕರವಾಗುತ್ತಿತ್ತು. ಹೀಗೆ ಹತ್ತು ಹಲವಾರು ಉದಾಹರಣೆಗಳು ನಮ್ಮ ಕಣ್ಣಮುಂದಿವೆ ಯಾದರೂ ಯಾಕೆ ನಮಗೆ ಸಮಯ ಸೀಗುತ್ತಿಲ್ಲ ಅಂತ ಯೋಚನೆ ಮಾಡುವುದು ಮುಖ್ಯ

ಪ್ರಸ್ತುತ ಆಧುನಿಕ ದಿನಮಾನಗಳಲ್ಲಿ ಮೋಬೈಲ್ ವಿಕ್ಷೀಸಲು ತಮ್ಮ ಸಮಯವನ್ನು ಕೆಲವರು ಮೀಸಲಿಟ್ಟರೆ, ಇನ್ನೂ ಕೆಲವರು ಸುಮಧುರ ಸಂಗೀತವನ್ನು ಆಲಿಸಲೂ ಸಮಯ ವನ್ನೂ ಮೀಸಲಿಡುತ್ತಿದ್ದಾರೆ. ಇನ್ನೂ ಹಲವರು ಹತ್ತಿರದ ಆತ್ಮೀಯರೊಂದಿಗೆ ಸಂಭಾಷಣೆಯಲ್ಲಿಯೇ ಕಾಲ ಕಳೆದರೆ, ಮತ್ತು ಕೆಲವರು ಪುಸ್ತಕಗಳನ್ನು ಓದುವುದರಲ್ಲಿ ತಮ್ಮನ್ನು ತೊಡಗಿಸಿ ಕೊಂಡಿರುತ್ತಾರೆ. ಭೂಮಿಯಲ್ಲಿ ವಾಸಿಸುವ ಪ್ರತಿಯೊಂದು ಜೀವರಾಶಿಗಳಿಗೂ ಕೂಡ ದಿನಕ್ಕೆ ಇಪ್ಪತ್ನಾಲ್ಕು ಗಂಟೆಯೇ ಮಾತ್ರ ಎನ್ನುವುದು ಕಟುಸತ್ಯ ಕೆಲವರೂ ಸಮಯವನ್ನು ಸದುಪಯೋಗ ಪಡೆಸಿಕೊಂಡು ಜೀವನದಲ್ಲಿ ಯಶಸ್ಸು ಸಾಧಿಸಿದರೆ, ಇನ್ನೂ ಕೆಲವರು ಜೀವನದಲ್ಲಿ ಸಮಯವನ್ನು ಅನಾವಶ್ಯಕವಾಗಿ ವ್ಯರ್ಥ ಮಾಡುತ್ತಿದ್ದಾರೆ. ಕೆಲವರಿಗೆ ಕಡಿಮೆ ಸಮಯ ಕೆಲವರಿಗೆ ಹೆಚ್ಚು ಸಮಯ ಸೀಗುತ್ತದೆ ಅಂತೆನಿಲ್ಲ. ಸಿಕ್ಕ ಸಮಯವನ್ನು ಸದುಪಯೋಗ ಪಡೆಸಿಕೊಂಡವರು ಜೀವನದಲ್ಲಿ ಗುರಿ ಸಾಧಿಸಬೇಕೆನ್ನುವ ತುಡಿತ ಹೊಂದಿದವರು, ದೃಢವಾದ ನಿರ್ಧಾರವನ್ನು ಹೊಂದಿದವರು. ಸಮಯವಿಲ್ಲ ಅಂತ ಎಂದಿಗೂ ಉದ್ಗರಿಸುವುದಿಲ್ಲ. ಸಮಯವನ್ನು ಸದುಪಯೋಗ ಪಡೆಸಿಕೊಂಡು ಯಶಸ್ವಿಯಾಗವುದರಲ್ಲಿ ಮುಂದಾಗುತ್ತಾರೆ.

ಹಿಂದಿನ ಕಾಲದ ಹಿರಿಯರ ವಾಣಿಯಂತೆ “ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವೇನೂ” ಎಂಬಂತೆ ನಮ್ಮ ಅವಶ್ಯಕತೆ ತಕ್ಕಂತೆ ಬಳಸುವ ಹಣದ ಹಾಗೇ, ನಮ್ಮ ಜೀವನದಲ್ಲಿ ಯಶಸ್ಸನ್ನು ಕಾಣಲೂ ಸಕಾರಾತ್ಮಕವಾಗಿ ಸಮಯವನ್ನು ಬಳಸಿಕೊಂಡಾಗ ಉತ್ತಮ ಜೀವನವನ್ನು ರೂಪಿಸಿಕೊಳ್ಳುವುದರ ಜೊತೆಗೆ ಉನ್ನತ ಮಟ್ಟದ ಯಶಸ್ಸನ್ನು ಕಾಣುವುದಕ್ಕೆ ಸಾಧ್ಯವಾಗುತ್ತದೆ.

Leave a Reply