ಅಣ್ಣಾ ನಿನಗ ಎಷ್ಟ ಮಿರ್ಚಿ ಅಕ್ಕಾರ ನಿಮಗ ಗಿರಮಿಟ್ ಕೊಡಲಿ..ಲೆ ಗಿಡ್ಡ ಒಂದ ಬಳ್ಳೊಳ್ಳಿ ಚುರಮರಿ ತಾ ಇಲ್ಲೆ ..ಚಹಾ ಹಾಕ..ನಾಲ್ಕನೇ ಶ್ರಾವಣ ಸೋಮವಾರ ಬಂತಂದ್ರ ಇಷ್ಟ ಅಳತಿ ಗದ್ದಲಾ ಧಾರವಾಡ ಉಳವಿ ಬಸಪ್ಪನ ಜಾತ್ರ್ಯಾಗ ಸಿಗ್ತದ ಹುಡುಗುರಗೇ ಸಾಲಿ ಸೂಟಿ,ನಡಿ ಮೂರು ಸಂಜಿ ಆತ ಅಂದ್ರ ನಡಿ ಮಾಳಮಡ್ಡಿ ಬಸಪ್ಪನ ಜಾತ್ರಿ ಸಡ್ಲ ಇಲ್ಲದ ಗುಡಿಗೂ ಪಾಳಿ ಮಿರ್ಚಿ ಟೆಂಟಗೂ ಪಾಳಿ….ಬಿಟ್ರ ಹಾರು ಪುಗ್ಗಾದ ಮಜಾ. ತಿರಗೂ ಜೋಕಾಲಿ, ಹೇ ಅಂದಂಗ ಮರತ ಬಿಟ್ಟಿದ್ದೆ ಸಣ್ಣ ಬಾಟಲ್ಯಾಗ ಕೊಳವಿ ಎದ್ದಿ ಊದಿದರ ಗುಳ್ಳೀ ಹಾರಸುದ. ಈಗೀಗ ಪಾನಿಪುರಿ ಗಾಡಿ ವ್ಯಾಪಾರ ಜೋರ್ರ…ನಾ ವಿಜು ಗೆಳ್ಯಾರ ಜೊತಿ ಹೋಂಟಿನಿ ಬರ್ರಿ ನೀವು ಮುಂದಿನ ವಾರ ಜಾತ್ರಿಗೆ ನಮ್ಮ ಧಾರ್ಮಿಕ ಧಾರವಾಡಕ್ಕ …
ವಿಜಯ ಇನಾಮದಾರ
#ಧಾರವಾಡ
#ನಮ್ಮಧಾರವಾಡ
#ಜಾತ್ರೆ
#ಹಬ್ಬ
#ಉಳವಿಬಸಪ್ಪನಜಾತ್ರಿ
#ಸಂಸ್ಕೃತಿ
#NammaDharwad
#Dharwad
You must log in to post a comment.