ದೇಹದಾನ – ಕೆಲವು ಮಾಹಿತಿಗಳು, ನನ್ನ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳು

ದೇಹದಾನ ಕುರಿತ ನನ್ನ ಲೇಖನಕ್ಕೆಬಂದ ಪ್ರತಿಕ್ರಿಯೆಗಳು ವಿಚಾರಾರ್ಹವಾಗಿರುವುದರಿಂದ ನಿಮ್ಮೊಡನೆ ಹಂಚಿಕೊಳ್ಳುತ್ತಿರುವೆ:
‘ಸಂಪದ’ ತಾಣದಲ್ಲಿ:
ಕವಿನಾಗರಾಜರೆ,
ನೂರಾರು ವರ್ಷ ಆರೋಗ್ಯವಂತರಾಗಿ ಬಾಳಿ ಎಂದು ಮೊದಲಿಗೆ ಹಾರೈಸುವೆ. ನಿಮ್ಮ ಅಂಗಾಂಗ ದಾನ,ದೇಹದಾನದ ನಿರ್ಧಾರಕ್ಕೆ ಜೈ. ಕೊನೆಯಲ್ಲಿ ಹೇಳಿದ ಮಾತು ತುಂಬಾ ಚೆನ್ನಾಗಿದೆ-“…ವಾಸ್ತವತೆ ಅರಿತಲ್ಲಿ, ಬದುಕಿನ ಮಹತ್ವ ತಿಳಿದಲ್ಲಿ ನನ್ನ ಈ ಬಯಕೆ ನಿಜವಾಗಿ ಬದುಕುವ ಬಯಕೆ ಎಂಬುದು ಅರ್ಥವಾಗಬಹುದು.” ನಿಮ್ಮ ಮುಕ್ತಕಗಳು ನಾಗರತ್ನಮ್ಮನವರು ಹೇಳಿದಂತೆ ಅನರ್ಘ್ಯ ರತ್ನಗಳು.
ಮೈಲಾರ ಶರ್ಮ ಹಾಗೂ ಅವರ ಕುಟುಂಬದವರು ಇತರರಿಗೆ ಆದರ್ಶಪ್ರಾಯರು.
-ಗಣೇಶ.
****************
‘ದೇಹದಾನ’
“ಕಳೆದ ವರ್ಷ ಮಾರ್ಚ್‌ನಲ್ಲಿ ನನ್ನ ತಾಯಿಯವರು ಆಸ್ಪತ್ರೆಯಲ್ಲಿ ನಿಧನರಾದಾಗ ನಡೆದ ಘಟನೆ : ೫೨ ವರ್ಷ ತಾಯಿಯನ್ನು ಹೆಚ್ಚು ಕಮ್ಮಿ ಕ್ಷಣವೂ ಬಿಟ್ಟಿರದ ತಂದೆಯವರು, ತಾಯಿಯ ಬಳಿ ಸ್ವಲ್ಪ ಹೊತ್ತು ನಿಂತು ನೋಡಿ, ಹೊರಬಂದು, ನನ್ನನ್ನು ಕರೆದು, “ಅಮ್ಮನ ದೇಹದಾನ ಮೆಡಿಕಲ್ ಕಾಲೇಜ್‌ಗೆ ಮಾಡುವಂತೆ ಡಾಕ್ಟ್ರಿಗೆ ತಿಳಿಸು” ಎಂದರು. ನನಗೆ ಆಗ ಏನು ಹೇಳುವುದು, ಏನು ಮಾಡುವುದು ತೋಚಲೇ ಇಲ್ಲ. ” ಈ ದೇಹದಲ್ಲಿ ಏನಿದೆ? ಅವಳು ನಮ್ಮೆಲ್ಲರ ಹೃದಯದಲ್ಲಿರುವಳು. ನಾಳೆ ಹೇಗೂ ಸುಡುವರು,ಅದರ ಬದಲು…”ಎಂದೆಲ್ಲಾ ತಮ್ಮ ದುಃಖ ನುಂಗಿ ಹೇಳುತ್ತಲೇ ಇದ್ದರು. ಸಿನೆಮಾ ನಟ ಲೋಕೇಶ್‌ರ ನಿಧನಾನಂತರ ಅವರ ದೇಹವನ್ನು ಮೆಡಿಕಲ್ ಕಾಲೇಜ್‌ಗೆ ದಾನ ನೀಡಿದ್ದು ಗೊತ್ತಿತ್ತು. http://www.chitraloka.com/flash-back/137-memories-tragedies/1754-body-donated-to-hospital.html ಮನಸ್ಸನ್ನು ಎಷ್ಟು ಗಟ್ಟಿ ಮಾಡಿದರೂ ನನ್ನಿಂದ ಒಪ್ಪಲು ಸಾಧ್ಯವಾಗಲಿಲ್ಲ. ತಮ್ಮ ತಂಗಿಯ ಅಭಿಪ್ರಾಯ ಕೇಳಿ ಬರುವೆ ಎಂದು ತಂದೆಯ ಬಳಿ ಹೇಳಿ ಬಂದೆ. ಎಲ್ಲರೂ ಬೇಡ ಎಂದು ಒತ್ತಾಯಿಸಿದ್ದರಿಂದ ಅಪ್ಪ ಸುಮ್ಮನಾದರು.
ನಂತರವೂ ಪ್ರತಿದಿನ ನಮ್ಮಲ್ಲಿ ನಡೆಯುವ ಕ್ರಿಯಾಕರ್ಮಗಳ ಬಗ್ಗೆ ತಂದೆಯವರು ವಿರೋಧಿಸುತ್ತಲೇ ಇದ್ದರು. “ಬದುಕಿರುವಾಗ ನೀನು ಚೆನ್ನಾಗಿ ನೋಡಿರುವೆ. ಅದು ಮುಖ್ಯ. ಇದೆಲ್ಲಾ ವ್ಯರ್ಥ…” ಎಂದು ಹೇಳುತ್ತಿದ್ದರು.
ಒಂದೆರಡು ತಿಂಗಳ ನಂತರ ತಂದೆಯವರು ಒಂದು ಅರ್ಜಿ ತಂದು ಸಹಿ ಹಾಕಲು ಹೇಳಿದರು. ನೋಡಿದರೆ ಅವರ ದೇಹದಾನದ ಅರ್ಜಿ. ಒಬ್ಬ ಡಾಕ್ಟರ್ ಮಗ ತನ್ನ ತಂದೆಯ ದೇಹವನ್ನೇ ಬಗೆದು ಮಕ್ಕಳಿಗೆ ಪಾಠ ಮಾಡಿದರೆ,
http://www.bbc.co.uk/news/world-south-asia-11710741 ನಾನು ದೇಹದಾನದ ಅರ್ಜಿಗೇ ಸಹಿ ಹಾಕಲು ಹಿಂದೇಟು ಹಾಕಿದೆ.
ಆರೋಗ್ಯವಂತರಾಗೇ ಇದ್ದ ನನ್ನ ತಂದೆಯವರು ಎಪ್ರಿಲ್ ೨೫ರಂದು ನಮ್ಮಲ್ಲಿ (ಕೊನೆಯ) ಊಟಮಾಡಿ, ತಂಗಿ ಮನೆಗೆ ಹೋದವರು, ಎಪ್ರಿಲ್ ೨೯ರಂದು ಮನೆಯಲ್ಲಿ ಮಲಗಿದ್ದಂತೆ ತೀರಿದರು. ದುಃಖದಲ್ಲಿದ್ದವನಿಗೆ ದೇಹದಾನವಾಗಲಿ, ಅಂಗಾಂಗ ದಾನವಾಗಲೀ ನೆನಪಾಗಲೇ ಇಲ್ಲ. ತೀರಿಹೋದ ೪೧ ದಿನದ ಮಗುವಿನ ಹೃದಯದ ಕವಾಟ ದಾನದಿಂದಾಗಿ ೨ ಮಕ್ಕಳಿಗೆ ಜೀವದಾನ ಎಂಬ ಪತ್ರಿಕಾ ವರದಿ ಇದೇ ೨೨ನೇ ತಾರೀಕಿನಂದು ಓದಿದೆ.
http://www.manipalworldnews.com/news_local.asp?id=3249 ಕವಾಟ ದಾನದ ಬಗ್ಗೆ ಮಗುವಿನ ತಂದೆತಾಯಿಯ ಮನವೊಲಿಸಿದ Mohan (Multi Organ Harvesting Aid Network) foundation ಪ್ರಯತ್ನ ನಿಜಕ್ಕೂ ಪ್ರಶಂಸನೀಯ. http://www.mohanfoundation.org/ ಆದರ್ಶ ಅಧ್ಯಾಪಕರಾಗಿದ್ದ ತಂದೆಯವರು ಸಾವಲ್ಲೂ ಆದರ್ಶರಾಗಲು ನಾನು ಬಿಡಲಿಲ್ಲ..
-ಗಣೇಶ
*******
nagarathnavinay… on May 29, 2011 – 8:47pm.
ನಾಗರಾಜ್ ರವರೇ, ದಾರ್ಶನಿಕ ಚಿತ್ರಣ. ವ್ಯಾಪಕವಾದ ಚಿಂತನೆಯ ಆಳದಿಂದ ಹೊರ ಹೊಮ್ಮಿದ ಅನರ್ಘ್ಯ ರತ್ನಗಳು ನಿಮ್ಮ ಈ ಪದ್ಯಗಳೆಂದರೆ ತಪ್ಪಾಗಲಾರದು. ಅಭಿನಂದನೆಗಳು
************
partha1059 on June 1, 2011 – 10:15pm.
ನಾಗರಾಜರೆ,
ಅತ್ಯುತ್ತಮ ಬರಹ ಮತ್ತು ಅಷ್ಟೆ ಉತ್ತಮ ವಿಷಯ. ವೇದಾಂತದಿಂದ ಹೊರತು ಪಡಿಸಿದರೆ ದೇಹ ನಮ್ಮ ಸ್ವತ್ತು, ತಂದೆ ತಾಯಿಯ ಸ್ವತ್ತು ಎನ್ನುವದನ್ನು ಒಪ್ಪಬಹುದು ಏಕೆಂದರೆ ಅವರ ದೇಹದ ಬಾಗವೆ ನಾವಾಗಿರುತ್ತೇವೆ. ಎರಡನ್ನು ಮೀರಿದಾಗ ಇದು ಪ್ರಕೃತಿಯ ಸ್ವತ್ತು ಎನ್ನುವದಂತು ಒಪ್ಪಲೆ ಬೇಕು. ಏಕೆಂದರೆ ದೇಹದ ಪ್ರತಿ ಅಣುವು ಪ್ರಕೃತಿಯ ಬಾಗದಿಂದಲೆ ಆಗಿದೆ, ಅಲ್ಲದೆ ಭೂಮಿಗೆ ಬಂದ ದಿನದಿಂದ ಪ್ರಕೃತಿಯೆ ನಮ್ಮನ್ನು ಸಲಹಿದೆ, ಹೀಗಾಗಿ ತಂದೆ ತಾಯಿಯರು ಬೀಜ ರೂಪರಾದರೆ, ಪ್ರಕೃತಿ ನೀರು ಅಹಾರ ಕೊಟ್ಟು ಪೊರೆದಿದೆ, ಅದಕ್ಕಾಗಿ ದೇಹದಾನವನ್ನು ಪುಣ್ಯದ ಕಾರಣದ ಹೊರತಾಗಿಯು ಮಾಡಬಹುದು. ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬಂತೆ , ನಮ್ಮದಲ್ಲದ ದೇಹ ಯಾರಿಗೊ ಉಪಯೋಗವಾಗಲಿ ಎಂಬಂತೆ.
ಪಾರ್ಥಸಾರಥಿ
***********
partha1059 on June 1, 2011 – 10:23pm.
ದೇಹದಾನ” ದಾನ ಮಾಡುವ ವ್ಯಕ್ತಿಯ ಸ್ವತಂತ್ರ ಅನ್ನುವುದು ನಿಜ. ಆದರೆ ಪ್ರಾಮಾಣಿಕವಾಗಿ ನೋಡಿದಾಗ ನಿರ್ದಾರ ತೆಗೆದುಕೊಳ್ಳುವ ಕಠಿಣ ಸಂಧರ್ಪ ಎದುರಿಸಬೇಕಾಗುವುದು ಅವರ ಮಕ್ಕಳು ಅಥವ ಬಂದುಗಳು. ಈ ಸಂಧರ್ಪದಲ್ಲಿ ಮೃತವ್ಯಕ್ತಿಯ ನಿರ್ದಾರಕಿಂತ ಬಂದುಗಳ ಮನೋಸ್ಥಿಥಿಯೆ ಪ್ರಮುಖ ಪಾತ್ರ ವಹಿಸುತ್ತದೆ ಅನ್ನುವುದು ಸತ್ಯ.
-ಪಾರ್ಥಸಾರಥಿ. (ಗಣೇಶರ ಲೇಖನಕ್ಕೆ ಬರೆದ ಪ್ರತಿಕ್ರಿಯೆ ಇಲ್ಲಿಗು ಹೊಂದುತ್ತದೆ ಎಂದು ಹಾಕಿದ್ದೇನೆ)
***********
‘ವೇದಸುಧೆ’ ತಾಣದಲ್ಲಿ ಬಂದ ಪ್ರತಿಕ್ರಿಯೆಗಳು:
ಹರಿಹರಪುರ ಶ್ರೀಧರ್ :
[ಪತ್ನಿಯ ಸ್ವತ್ತಲ್ಲ ಮಕ್ಕಳ ಸ್ವತ್ತಲ್ಲ] ನನಗೆ ಒಪ್ಪಿಗೆ ಯಾಗಿಲ್ಲ. ಅಂದಮಾತ್ರಕ್ಕೆ ನನ್ನ ಅಭಿಪ್ರಾಯವು ನಿಮಗೆ ಒಪ್ಪಿಗೆ ಯಾಗಬೇಕೆಂದೇನೂ ಅಲ್ಲ. ಅಲ್ಲಾ! ಸಂಸಾರವೆಂದರೇನು? ಸಂಬಂಧವೆಂದರೇನು? ನಮ್ಮ ಶರೀರದ ಮೇಲೆ ನಮಗೇನು ಅಧಿಕಾರ? ಮದುವೆಯಾಗುವವರೆಗೂಒಂದು ಬಗೆ. ಮದುವೆಯಾದನಂತರ ಪತಿ-ಪತ್ನಿಯರು ಏನೆಲ್ಲಾ ಹಂಚಿಕೊಳ್ಳುವುದಿಲ್ಲಾ! ನನ್ನ ಅನುಭವದಲ್ಲಿ ಯಾರೊಡನೆ ಎಷ್ಟೇ ಗೆಳೆತನ-ಬಾಂಧವ್ಯವಿದ್ದರೂ ನಮ್ಮ ಮೊದಲ ಸರ್ಕಲ್ ಪತಿಪತ್ನಿ, ನಂತರ ಮಕ್ಕಳು, ನಂತರ ಉಳಿದೆಲ್ಲಾ. ಅನೇಕಭಾರಿ ಸ್ನೇಹಿತರು ನಮ್ಮ ಪತ್ನಿ-ಮಕ್ಕಳಿಗಿಂತಲೂ ಹತ್ತಿರವಾಗಿ ಕಾಣುತ್ತಾರೆ. ಆದರೂ ನನ್ನ ದೃಷ್ಟಿಯಲ್ಲಿ ಅವರೆಲ್ಲಾರೂ ನಮ್ಮ ಕುಟುಂಬದ ನಂತರವೇ.ಹೀಗಿದ್ದರೇನೇ ಚೆನ್ನಾ.ನಮ್ಮ ಶರೀರವು ಪ್ರಾಣ ಇರುವವರೆಗೂ ನಮ್ಮ ಸ್ವತ್ತು. ನಂತರ ಅದು ಪತಿ/ಪತ್ನಿ ಮಕ್ಕಳಿಗೆ ಬಿಟ್ಟ ವಿಚಾರ. ಒಂದು ದೇಹವು ಸಾವನಪ್ಪಿದ ಕೂಡಲೇ ಅದು ಹೆಣವೆಂದು ಯಾರೂ ಕೂಡ ಜಡವಸ್ತುವಿನಂತೆ ಕಾಣುವುದಿಲ್ಲ.ಆತ್ಮವು ದೇಹದಿಂದ ದೂರವಾದಮೇಲೆ ಅದರಲ್ಲೇನಿದೆ? ಅದೊಂದು ಹೆಣ ಎಂಬುದು ಸತ್ಯವಾದರೂ ಸುಮಾರು ೪೦-೫೦ ವರ್ಷಗಳು ಜೊತೆಗಿದ್ದ ಪತಿ/ಪತ್ನಿ/ಅಪ್ಪ/ಅಮ್ಮ [ದೇಹ+ಆತ್ಮ] ಸತ್ತಕೂಡಲೇ ಆತ್ಮ ವಿಲ್ಲವಾದರೂ ಜಡದೇಹವು ಅದರ ಅಂತ್ಯಸಂಸ್ಕಾರವಾಗುವವರೆಗೂ ಅದನ್ನು ನೋಡಬೇಕೆನಿಸುತ್ತದೆ. ಕಡೆಯಬಾರಿಗೆ ಕಣ್ತುಂಬ ನೋಡಿ ಬಿಡೋಣವೆನಿಸುತ್ತದೆ. ಇದು ಎಲ್ಲಾ ಮನುಷ್ಯರ ಸಹಜ ಸ್ವಭಾವ.ಹೀಗಿರುವಾಗ ನನ್ನ ಅಪ್ಪ/ಅಮ್ಮ/ಪತಿ/ಪತ್ನಿಯ ದೇಹವನ್ನು ಪಂಚಭೂತಗಳಲ್ಲಿ ಲೀನಮಾಡುವವರೆಗೂ ನಮ್ಮ ಮನಸ್ಸು ಒಪ್ಪುವುದಿಲ್ಲ. ಪಂಚಭೂತಗಳಿಂದ ಬಂದ ದೇಹವು ಪಂಚಭೂತಗಳಿಗೇ ಸೇರಬೇಕು. ಇದು ಧರ್ಮ.ಒಮ್ಮೆ ಅದು ಬೂದಿಯಾಯ್ತೆಂದ ಮೇಲೆ ಅದು ಮುಗಿದಕಥೆ. ಅನಂತರ ಸತ್ತವರ ನೆನಪು ಮಾತ್ರ.
ಅಲ್ಲಾ, ಎಲ್ಲರೂ ಸತ್ತನಂತರ ತಮ್ಮ ಶರೀರವನ್ನು ದಾನಮಾಡುವುದೇ ಆದರೆ ಅದನ್ನು ಸ್ವೀಕರಿಸಲು ಮುಂದೊಂದು ದಿನ ಆಸ್ಪತ್ರೆಯವರೂ ಮುಂದೆಬರಲಾರರು. ತಿಳಿದಿರಲಿ.ನಾನಂತೂ ದೇಹವನ್ನು ದಾನಮಾಡುವ ವಿಚಾರದಲ್ಲಿ ಅದರ ವಿರೋಧಿ. ಇದೇ ಪ್ರವೃತ್ತಿ ಬೆಳೆದು ಬಂದರೆ ನಮ್ಮ ಶರೀರವು ಮಾರಾಟ/ದಾನ ಮಾಡುವ ಒಂದು ವಸ್ತುವಾಗಿಬಿಡಿತ್ತದೆ. ಅಲ್ಲಿಗೆ ನಮ್ಮ ಭಾವನೆಗಳೆಲ್ಲಾ ನುಚ್ಚುನೂರು.ನಾವು ಭಾವನೆಗಳೇ ಇಲ್ಲದ ಜಡವಸ್ತುವಿನಂತೆ. ಕ್ಷಮಿಸಿ. ನನಗೆ ಮನಸ್ಸಿಗೆ ದು:ಖವಾದಾಗ ಮನದೊಳಗೆ ಇರುವುದನ್ನೆಲ್ಲಾ ಹೊರಹಾಕಿ ಬಿಡುತ್ತೇನೆ.
May 29, 2011 8:50 PM
***************
bkjagadish :
ಶರೀರ ಮಾತ್ರಮ್ ಖಲು ಧರ್ಮ ಸಾಧನಂ !!… I beg to differ ಕವಿ ನಾಗರಾಜ್ !!.. This body has been given to us by God as a GIFT according to our past Karmas, for fulfillment of ultimate liberation ( Moksha )!!…Certainly we have no right to DONATE the GIFT which incidently still does not belong to us …Mind you , it belongs to Him !!… And btw let me tell you that I cannot tolerate if somebody punctured the eyes of my Father – IN A PHOTO !!…It hurts me !!…Will you say ಕವಿ ನಾಗರಾಜ್ that after all IT’S ONLY A PHOTO ??? !!…Sorry to find that the vast majority of people are getting carried away by the so called lofty ideals, which is nothing but MISLEADING a kind of ‘ playing to the gallery ‘ !!….ನನ್ನ ಅನಿಸಿಕೆಯೆಂದರೆ ಇಂಥಹ ಬಾಲಿಶ ಹೇಳಿಕೆಗಳು ಕೇಳುವುದಕ್ಕೆ , ಹೇಳುವುದಕ್ಕೆ ಮಾತ್ರ ಚೆನ್ನ , ಆಚರಣೆಯಲ್ಲಲ್ಲ !! ಮನಸ್ಸು ನೋಯಿಸಿದ್ದರೆ ಕ್ಷಮೆ ಇರಲಿ ,ಉದ್ದ್ಹೇಶಪೂರ್ವಕವಲ್ಲ !…ಸವಿನಯ ವಂದನೆಗಳು !!
May 30, 2011 12:20 PM
**************
bkjagadish :
ಶ್ರೀಧರ್ Sir , I was dilighted to read your views which resonates with mine !!…Deep Bows !!…THANK YOU for sharing it !!!
May 30, 2011 12:22 PM
**************
ಮಹೇಶ ಪ್ರಸಾದ ನೀರ್ಕಜೆ :
ಹ್ಮ್.. ಲೋಕೋ ಭಿನ್ನರುಚಿ:… ನನಗಂತೂ ನಾಗರಾಜರು ಬರೆದಿದ್ದಕ್ಕೆ ಸಮ್ಮತಿಯಿದೆ. ಶ್ರೀಯುತ ಶ್ರೀಧರರು ಭಾವನೆ ಬಗ್ಗೆ ಹೇಳಿದರು. ಯಾರ ಭಾವನೆ ಅಂತ ಯೋಚಿಸುತ್ತಿದ್ದೇನೆ ನಾನು. ಸತ್ತವನ ಭಾವನೆ (ಸಾಯುವುದಕ್ಕೆ ಮೊದಲಿದ್ದ) ಯೋ ಅಥವಾ ಸತ್ತವನ ಮನೆಯವರ ಭಾವನೆಯೋ? ಸಾಯುವವನು ಸತ್ತ ಮೇಲೆ ತನ್ನ ದೇಹವನ್ನು ದಾನ ಮಾಡಬೇಕೆಂದು ಮೊದಲೇ ಹೇಳಿದ್ದರೆ ಅವನ ಮನೆಯವರು ಹಾಗೆ ಮಾಡಲೇ ಬೇಕು. ಮಾಡದಿದ್ದಲ್ಲಿ ಅದು ದ್ರೋಹ. ಸತ್ತ ಮೇಲೆ ದೇಹ ಹೊತ್ತಿಸಬೇಕೆಂದೆಣಿಸಿದವನ ದೇಹ ಸುಡಬೇಕು. ಅದನ್ನು ದಾನ ಮಾಡಿದಲ್ಲಿ ಅದು ದ್ರೋಹ. ಸಾಯುತ್ತಿರುವವನ/ಸತ್ತವನ ಭಾವನೆಗೆ ಮೊದಲು ಬೆಲೆ ಕೊಡಬೇಕೆಂದು ನಾನು ಹೇಳುತ್ತೇನೆ. ಸಾಯದೆ ಉಳಿದವರ ಭಾವನೆಗಳ ಪ್ರಶ್ನೆ ನಂತರದ್ದು.
May 30, 2011 2:06 PM
***********
ಮಹೇಶ ಪ್ರಸಾದ ನೀರ್ಕಜೆ :
ಬಿಕೆ ಜಗದೀಶ್ ಅವರಿಗೆ… ಶರೀರ ಮಾತ್ರಂ ಖಲು ಧರ್ಮಸಾಧನಂ ಅಂದಿರಿ.. ಸತ್ತ ಮೇಲೆ ದೇಹ ಅದೇನು ಧರ್ಮ ಸಾಧನೆ ಮಾಡುತ್ತದೆ ಹೇಳಿ ಸ್ವಾಮಿ! ಈ ಶ್ಲೋಕ ಹೇಳಿರುವುದು ಜೀವ ಇರುವ ದೇಹದ ಬಗ್ಗೆ. ಜೀವ ಇರುವಾಗಲೇ ಅಧ್ಯಾತ್ಮದ ಹೆಸರಿನಲ್ಲಿ ಶರೀರರದ ಬಗ್ಗೆ ಅಸಡ್ಡೆ ತೋರಿಸುವವರನ್ನು ಉದ್ದೇಶಿಸಿ ಬರೆದಿದ್ದು. ಇನ್ನು ಒಂದು ಕಡೆ ಮೋಕ್ಷ ಅನ್ನುತ್ತೀರಿ.. ಇನ್ನೊಂದು ಕಡೆ Hurts ಎನ್ನುತ್ತೀರಿ.. ನೋವಾಗುವಷ್ಟು ದುರ್ಬಲ ಮನಸ್ಸಿರುವವನು ಮೋಕ್ಷ ಪಡೆಯುವುದು ಅಷ್ಟರಲ್ಲೇ ಇದೆ! ಇನ್ನು ಶರೀರ ದಾನ ಮಾಡಲು ಹಕ್ಕಿಲ್ಲ ಎಂದಿದ್ದೀರಿ. ಹಾಗಿದ್ದಲ್ಲಿ ಅದನ್ನು ಸುಡಲು ಹಕ್ಕು ಇದೆಯೇ? ಇದ್ದರೆ ಅದೆಲ್ಲಿಂದ ಬಂತು! ದಾನ ಮಾಡಿದರೂ ಕೊನೆಗೆ ಅದು ಪಂಚಭೂತಗಳಲ್ಲೇ ಸೇರುತ್ತೆ ತಾನೆ! ಪಂಚಭೂತಗಳನ್ನು ಬಿಟ್ಟು ಆ ದೇಹ ಈ ಪ್ರಪಂಚದಲ್ಲಿ ಅದೆಲ್ಲಿ ಅಡಗಿ ಕುಳಿತೊಕೊಳ್ಳಬಹುದು ಎಂದು ಸ್ವಲ್ಪ ಯೋಚಿಸಿ. ಅಂತಹ ಜಾಗವೇ ಇಲ್ಲ. ಸುಟ್ಟರೋ ಬಿಸಾಕಿದರೂ ದಾನ ಮಾಡಿದರೂ ಅಥವಾ ಗೊಬ್ಬರ ಮಾಡಿದರೂ ಅದು ಸೇರುವುದು ಪಂಚಭೂತಗಳಿಗೆಯೇ! ಶ್ರೀ ನಾಗರಾಜರು ಹೇಳಿದ್ದು ಮಿಸ್ ಲೀಡಿಂಗ್ ಅನಿಸುತ್ತಿಲ್ಲ! ನಿಮ್ಮ ಯೋಚನಾಲಹರಿ, ನಿಮ್ಮ ಸಿಧ್ಧಾಂತ ಮಾತ್ರ ಸರಿ, ಉಳಿದದ್ದೆಲ್ಲ “lofty ideas” ಎನ್ನುವ ಮನಸ್ಥಿತಿ ಇದೆಯಲ್ಲ, ಅದು ಎಲ್ಲರನ್ನೂ ಮಿಸ್ ಲೀಡ್ ಮಾಡುವಂಥಾದ್ದು!
ಶ್ರೀ ನಾಗರಾಜರವರ ಹೇಳಿಕೆಯನ್ನು ತಾವು ಬಾಲಿಶ ಎಂದು ಹೇಳಿದ್ದಕ್ಕೆ ಸ್ವಲ್ಪ ಖಾರವಾಗಿ ಪ್ರತಿಕ್ರಿಯಿಸಿದೆ.. ಅದು ಬಿಟ್ಟು ಯಾರನ್ನೂ ನೋಯಿಸುವ ಉದ್ದೇಶವಿಲ್ಲ. ನಾನು ಎಲ್ಲರೂ ದೇಹ ದಾನ ಮಾಡಬೇಕೆನ್ನುತ್ತಿಲ್ಲ. ನಾಗರಾಜರವರೂ ಹೇಳಿದಂತಿಲ್ಲ. ಮಾಡಬೇಕೆನ್ನುವವರು ಮಾಡಲಿ. ಬೇಡದಿರುವವರು ಬಿಡಲಿ. ಅಲ್ಲಿಗೆ ಎಲ್ಲರಿಗೂ ಸುಖ ಶಾಂತಿ!
May 30, 2011 2:21 PM
****************
bkjagadish :
Respected Mahesh , I just wish to humbly say in reply that you need to ‘ STUDY MORE ‘ in this context . As for your views ,I do respect the diversity in thinking !…
May 30, 2011 3:06 PM
***********
bkjagadish :
In this world of sin and sorrow there is always something to be thankful for; as for me, I rejoice that I am not a supporter of ‘ Body Donation ‘!! .
May 30, 2011 3:09 PM
**************8
ಮಹೇಶ ಪ್ರಸಾದ ನೀರ್ಕಜೆ :
Dear Jagadish, In reply I humbly say that I am open to any kind of study in any regard. Please suggest me the books/websites.. which contain more details of what you referred to. I am more than willing to study. Om Shanti!
May 30, 2011 3:12 PM
**************
bkjagadish :
I have approximate answers and possible beliefs and different degrees of certainty about different things, but I’m not absolutely sure of anything, and many things I don’t know anything about, such as whether it means anything to ask why we’re here, and what the question might mean. I might think about it a little bit, but if I can’t figure it out, then I go on to something else. But I don’t have to know an answer…. I don’t feel frightened by not knowing things, by being lost in the mysterious universe without having any purpose, which is the way it really is, as far as I can tell, possibly. It doesn’t frighten me!!.
May 30, 2011 3:12 PM
*****************
ಮಹೇಶ ಪ್ರಸಾದ ನೀರ್ಕಜೆ :
No one can know absolute of anything. Everything is relative to one another in physical domain. That is the reason I criticize (or rather question) the people who ridicule other view points.
And there is no reason to be frightened for not knowing something! In fact, it is to be frightened if one happen to feel that he knows everything.
May 30, 2011 3:19 PM
****************
ಹರಿಹರಪುರ ಶ್ರೀಧರ್ :
ಶ್ರೀ ಮಹೇಶ್,
ಮೊದಲಿಗೇ ಒಂದು ಮಾತು ಹೇಳಿಬಿಡುತ್ತೇನೆ. ನಾನು ಶಾಸ್ತ್ರಗಳನ್ನು ಅಧ್ಯಯನ ಮಾಡಿದವನಲ್ಲ. ನನಗೆ ಸತ್ತ ದೇಹವನ್ನು ಸುಡಬೇಕೆ? ದಾನ ಮಾಡಬೇಕೆ? ಮಣ್ಣಲ್ಲಿ ಹೂಳಬೇಕೆ? ಎಂದು ಯಾವ ಶಾಸ್ತ್ರದಲ್ಲಿ ಏನು ಬರೆದಿದೆಯೋ ಗೊತ್ತಿಲ್ಲ. ಆದರೆ ಈ ಭೂಮಿಯಲ್ಲಿ ಐದು ದಶಕಗಳಿಗೂ ಹೆಚ್ಚು ಕಾಲ ಬದುಕಿರುವೆ.ಒಂದಿಷ್ಟು ಸಾವು ನೋವು ಗಳನ್ನು ಕಂಡಿರುವೆ. ಸತ್ತಾಗ ಹತ್ತಿರದವರ ಸಂಕಟವನ್ನು ಕಂಡು ನಾನೂ ದು:ಖಿಸಿರುವೆ. ಒಂದು ತಾಜಾ ಉಧಾಹರಣೆ ಕೊಡುವೆ. ನನ್ನ ಸ್ನೇಹಿತರೊಬ್ಬರ ತಂದೆಯವರು ಇದ್ದಕ್ಕಿದ್ದಂತೆ ಹೊಳೇನರಸೀಪುರದಲ್ಲಿ ಒಂದು ಮದುವೆ ಮನೆಯಲ್ಲಿ ಕುಸಿದು ಬಿದ್ದು ಕೊನೆಯುಸಿರೆಳೆದರು.ಆ ಸ್ಥಳದಲ್ಲಿ ಅವರ ಪರಿಚಿತರು ನಾನೊಬ್ಬನೇ. ನನ್ನ ಸ್ನೇಹಿತರು ಹಾಸನದಲ್ಲಿದ್ದರು. ಅವರ ಮನೆಗೆ ಮೃತ ದೇಹವನ್ನು ತೆಗೆದುಕೊಂಡು ಹೋಗಬೇಕು.ಇಲ್ಲಿ ಉದ್ಧೇಶ ಹೆಣವನ್ನು ಸಾಗಿಸುವುದು ತಾನೇ? ಹೇಗೋ ಸಾಗಿಸಿದರಾಗಿತ್ತು. ಆದರೆ ಹಾಗೆ ಮಾಡಲಿಲ್ಲ. ಅವರ ಕರುಳುಕುಡಿಗೆ ಈಗಾಗಲೇ ಅಪ್ಪನ ಸಾವಿನಿಂದ ಆಗಿರುವ ದು:ಖದ ಜೊತೆಗೆ ಇನ್ನೂ ಹೆಚ್ಚು ದು:ಖವಾಗಬಾರದೆಂದು ಯೋಚಿಸಿ ಒಂದು ಕಾರ್ ನಲ್ಲಿ ಜೋಪಾನವಾಗಿ ತೆಗೆದುಕೊಂಡು ಹೋದೆವು. ಅದು ಹೆಣ. ಹೇಗೆ ತೆಗೆದುಕೊಂಡು ಹೋಗಿದ್ದರೂ ಅದಕ್ಕೇನೂ ಆಗುತ್ತಿರಲಿಲ್ಲ. ಆದರೆ ನಾವು ಗಮನದಲ್ಲಿಟ್ಟುಕೊಂಡಿದ್ದು ಅವರ ಮಕ್ಕಳನ್ನು ಮತ್ತು ಪತ್ನಿಯನ್ನು.
ಇದೆಲ್ಲಾ ಭಾವನೆಗೆ ಸಂಬಂಧಿಸಿದ್ದು.ಸತ್ತವನು ಗೆದ್ದು ಬಿಡುತ್ತಾನೆ.ಇದ್ದ ಅವನ/ಅವಳ ಕರುಳ ಬಳ್ಳಿಗಳ ಬಗ್ಗೆಯೇ ಯೋಚಿಸಬೇಕಾದ್ದು. ಅವನು ಸತ್ತಾಗ ತನ್ನ ದೇಹದ ಮೇಲಿನ ಅಧಿಕಾರವನ್ನು ಕಳೆದುಕೊಂಡು ಬಿಟ್ಟ. ಅವನ/ಅವಳ ಕರುಳು ಬಳ್ಳಿಗಳದ್ದೇ ಅಧಿಕಾರ ಮತ್ತು ಕರ್ತವ್ಯ. ಮೆಡಿಕಲ್ ಕಾಲೇಜುಗಳಿದೆ ಪ್ರಯೋಗ ಮಾಡಲು ಎಷ್ಟು ಹೆಣ ಬೇಕು? ಎಲ್ಲರೂ ದೇಹವನ್ನು ದಾನಮಾಡುತ್ತೇನೆಂದರೆ ನಂತರದ ಪರಿಸ್ಥಿತಿಯನ್ನು ಊಹಿಸಿ ನೋಡಿ!! ಹೇಗೂ ಪಂಚಭೂತಗಳಲ್ಲಿ ಲೀನವಾಗುತ್ತದೆಂದು ಮೃತದೇಹವನ್ನು ತುಂಡರಿಸಲು ಸಾಧ್ಯವೇ?
ಬದುಕು ಮತ್ತು ಭಾವನೆಗಳಿಗೆ ಅವಿನಾಭಾವ ಸಂಬಂಧವಿದೆ.ಭಾವನಾರಹಿತ ಜೀವನವು ಬದುಕೇ ಅಲ್ಲ.ಒಮ್ಮೆ ಭಾವನೆಗಳು ನಾಶವಾಗುತ್ತಾ ಬಂದರೆ ಬದುಕು ಯಾಂತ್ರಿಕ. ಇಂತಹ ಬದುಕು ಬೇಕೆ? ಅಥವಾ ಭಾವನೆಗಳ ಜೊತೆಗೆ ಪ್ರೀತಿವಾತ್ಸಲ್ಯ ಮಮಕಾರಗಳಿಂದ ಕೂಡಿದ ಜೀವನ ಬೇಕೆ? ಒಂದು ಆರೋಗ್ಯಕರ ಕುಟುಂಬವೆಂದರೆ ಇವೆಲ್ಲಾ ಅಂಶಗಳೂ ಗಣನೆಗೆ ಬರುತ್ತದೆ. ಯಾಂತ್ರಿಕ ಬದುಕಿಗೆ ಇವಲ್ಲಾ ಬೇಡ.
ಸಾಯುವವನು ತನ್ನ ದೇಹವನ್ನು ದಾನಮಾಡುತ್ತೇನೆಂದು ವಾಗ್ದಾನ ಮಾಡಿದ್ದರೆ ದಾನ ಮಾಡದೇ ಹೋದಾಗ ದ್ರೋಹವಾಗುವುದಿಲ್ಲವೇ? ಎಂದಿರಿ. ಆದರೆ ವಾಗ್ದಾನ ಮಾಡುವ ಮುಂಚೆ ಪತಿ/ಪತ್ನಿ/ಮಕ್ಕಳು ಸೇರಿ ಸಮಾಲೋಚಿಸಿ ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ಭಾವನಾರಹಿತವಾದ ಪತಿ/ಪತ್ನಿ/ಮಕ್ಕಳು ಮಾತ್ರ ದೇಹದಾನ ಮಾಡಲು ಒಪ್ಪ ಬಲ್ಲರು ಅಥವಾ ಆ ಮಟ್ಟಕ್ಕೆ[ಅದು ಅತ್ಯುನ್ನತ ಸ್ಥಿತಿ ಎಂದು ನಾನು ತಿಳಿಯುವೆ] ಕುಟುಂಬದವರೆಲ್ಲಾ ಬೆಳೆದಿರಬೇಕು. ಹೌದಲ್ಲವೇ?
ಇದೆಲ್ಲಾ ನನ್ನ ಭಾವನೆಗಳು, ಒಪ್ಪಬೇಕೆಂದೇನೂ ಇಲ್ಲ.
May 30, 2011 4:25 PM
************
bkjagadish :
Nice one Sridharji , I still feel , on propriety ground , that one has NO RIGHT to donate the thing which DOES NOT BELONG TO HIM/HER !!…
May 30, 2011 4:41 PM
**************
padmanabha rao :
Of course in an emotional moment a person feels to hand over his body to a Hospital, or his Eyes. But the feelings of Family members need to be respected. The person who is dead is gone, but those who belonged to him, will not discard his remains with love. It is a controversial topic which does not come under Law, or Fundamental Rights.
May 30, 2011 8:55 PM
****************
ಮಹೇಶ ಪ್ರಸಾದ ನೀರ್ಕಜೆ :
{one has NO RIGHT to donate the thing which DOES NOT BELONG TO HIM/HER}
– If one has not right to donate it, how come he has right to burn it! That is my basic question.. Any way, I am not interested in this kind of arguments. So I am not seeking any answers.. THank you
May 30, 2011 9:41 PM
***************
bkjagadish :
“The most difficult requirement of becoming knowledgable is that you must give up certainty.” !!!!…
*****************
ಫೇಸ್ ಬುಕ್ಕಿನಲ್ಲಿ:
raju
ಹೌದು “ದೇಹದಾನ ಮಹಾದಾನ”
ನನ್ನ ಈ ದೇಹವೂ ಉಪಯೋಗವಾಗಲಿ
https://www.facebook.com/photo.php?fbid=230959333631020&set=a.230959306964356.58956.100001508660835&type=3&ಥಿಯೇಟರ್

Shurpali Arvind
https://fbcdn-sphotos-e-a.akamaihd.net/hphotos-ak-frc1/1001568_647914511887822_597836031_n.jpg
https://fbcdn-sphotos-e-a.akamaihd.net/hphotos-ak-frc1/1001568_647914511887822_597836031_n.jpg
fbcdn-sphotos-e-a.akamaihd.net

Shurpali Arvind
ನೇತ್ರದಾನ-ಮಹಾದಾನ 1
ನಿಮ್ಮ ಪ್ರೀತಿ ಪಾತ್ರರ ಕಣ್ಣುಗಳ ಜೋಡಿ
ಅವರ ನಂತರವೂ ಅವನ್ನ ಜೀವಿಸಲಿ ಬಿಡಿ
ಹೀಗೆ ಮಾಡಲು ದಯವಿಟ್ಟು ನೇತ್ರದಾನ ಮಾಡಿ.
2
ದೇವ ತನ್ನ ಅನಂತ ಕರುಣೆಯಿಂದ
ನಮ್ಮೆಲ್ಲರಿಗೂ ಕೊಟ್ಟ ಕಣ್ಣು ನೋಡಲೆಂದು
ಕ್ಷಣದಲ್ಲಿ ಅವನೂ ಕೂಡ ಮೈಮರೆತು ,
ಕೆಲವರನ್ನು ಮಾಡಿದ ಇದಕ್ಕೆ ಹೊರತು

ಆ ಅದ್ರಷ್ಟಹೀನ ದ್ರಷ್ಟಿಹೀನರು
ನೋಡೋದು ಬೆಳಕನ್ನಲ್ಲ,ಬರೀ ಕತ್ತಲು ,
ನಷ್ಟವಾಗಿದ್ರೂ ಧೈರ್ಯ ತೋರಿಸ್ತಾರೆ
ಪ್ರಯತ್ನಿಸಿ ನಮ್ಮ ಹಾಗೆನೇ “ಜೀವಿಸ್ತಾರೆ”

ಮಾಡೋಣ ಬನ್ನಿ ದೃಢ ನಿರ್ಧಾರ
ಕೊನೆಗೊಳಿಸೋಣ ಅವರ ದುರ್ದೆಸೆ
ಮರಣೋತ್ತರ ಮಾಡೋಣ ಹಾರೈಕೆ
ಅದರಿಂದಾಗಿ ಆಗಲಿ ಕುರುಡರ ಆರೈಕೆ

ಉದಾತ್ತವಿದು ಈ ನೇತ್ರ ದಾನ ಕಾರ್ಯ
ಎಲ್ಲ್ರೂಗೆ ಬರಬೇಕಿದೆ ಮಾಡಲಿದನ್ನು- ಧೈರ್ಯ
ದೇವರೇ ಇವರ ಈ ಕುರುಡು ನಿವಾರಿಸು
ಮಾಡಿ ಹಾಗೆ ಅಂಧರಿಗೆ ದ್ರಷ್ಟಿ ಪಾಲಿಸು

Shurpali Arvind
ಸಧ್ಯಕ್ಕೆ ಬರೆದದ್ದು ನೇತ್ರ ದಾನದ ಬಗ್ಗೆ ಮಾತ್ರವಿದ್ದರೂ ,ದೇಹ ದಾನದ ಬಗ್ಗೆಯೂ ನನಗೆ ತುಂಬಾ ಆಸಕ್ತಿ.
ಅಂದ ಹಾಗೆ ಧಾರವಾಡದಲ್ಲಿ ನನ್ನ ಮಿತ್ರರೊಬ್ಬರು ಇತ್ತೀಚಿಗೆ ಹೃದಯಾಘಾತದಿಂದ ನಿಧನರಾದರೂ ,ವೈದ್ಯಕೀಯ ಮಹಾವಿದ್ಯಾಲಯಕ್ಕೆ ದೇಹದಾನ ಮಾಡಿ ಅಮರರಾಗಿ, ನಮ್ಮೆಲ್ಲರಿಗೂ ದಾರಿದೀಪವಾಗಿರುವರು. ದೇವರು ಅವರ ಆತ್ಮಕ್ಕೆ ಖಂಡಿತವಾಗಿಯೂ ಚಿರ ಶಾಂತಿ ದಯಾ ಪಾಲಿಸಿರಲಿಕ್ಕೆ ಸಾಕು

Leave a Reply