ಜಯಶ್ರೀ

ಸಂಗೀತಕ್ಕೆ ಭಾಷೆಯ ಹಂಗಿಲ್ಲ ಮತ್ತು ಗಡಿಇಲ್ಲ ಅಂತಾರೆ. ಅದು ನಿಜವೂ ಹೌದು ಆದರೆ ಅದೇ ಸಂಗೀತಗಾರ್ತಿಗೆ ಪ್ರದೇಶ ಅಥವಾ ಭಾಷೆಯ ನೆಲೆ ಕಲ್ಪಿಸಿ ಅವರನ್ನು ಉಪೇಕ್ಷಿಸಲಾಗುತ್ತದೆ ಎನ್ನಲು ಜಯಶ್ರೀ ಪಾಟ್ನೇಕರ್ ಒಂದು ಉತ್ತಮ ಉದಾಹರಣೆ. ಜನ್ಮಭೂಮಿ ಮಹಾರಾಷ್ಟ್ರವಾದರೂ ಕರ್ಮಭೂಮಿ ಕರ್ನಾಟಕ. 3 ದಶಕಗಳ ಕಾಲ ಧಾರವಾಡ ಆಕಾಶವಾಣಿ ಎ ಗ್ರೇಡ್ ಕಲಾವಿದೆಯಾಗಿರುವ ಜಯಶ್ರಿಗೆ ಸಿಕ್ಕ ಮನ್ನಣೆ ಅಷ್ಟಕ್ಕಷ್ಟೇ. ಕರ್ನಾಟಕದವರು ಅಂತಾ ಮಹಾರಾಷ್ಟ್ರದವರು ಮಹಾರಾಷ್ಟ್ರದವರು ಅಂತ ಕರ್ನಾಟಕದವರು ಉಪೇಕ್ಷಿಸುತ್ತ ಬಂದ ಪರಿಣಾಮ ಸಂಗೀತಲೋಕದ ಅನಘ್ರ್ಯ ರತ್ನದ ಮೇಲೆ ಬೆಳಕು ಚೆಲ್ಲುವ ಯತ್ನ ಇಲ್ಲದಾಗಿದೆ.
ಸರಳ ವ್ಯಕ್ತಿತ್ವದ ಶ್ರೇಷ್ಠ ಸಂಗೀತಗಾರ್ತಿ
-ಪ್ರಸನ್ನ ಕರ್ಪೂರ
ಆನ್ ಫಸಿ ಹೂಂ ಭವಸಾಗರ ಮೇ ದಯಾ ಕರೋ ಹೇ ರಾಮ್ ಹೀಗಂತ ತಮ್ಮ ಸುಮಧುರ ಕಂಠದಿಂದ ಸುಶ್ರಾವ್ಯವಾಗಿ ಹಾಡಿದವರು ಮತ್ತು ಹಾಡುವವರು ಜಯಶ್ರೀ ಪಾಟ್ನೇಕರ. ಭಗವಂತ ಕೊಟ್ಟ ಸುಮಧುರ ಕಂಠದ ಕಂಪನ್ನು ಪಸರಿಸಿದವರು ಈ ಜಯಶ್ರೀ . ಜಯಶ್ರೀ ಪಾಟ್ನೇಕರ್ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ಶ್ರೇಷ್ಠ ಸಂಗೀತಗಾರ್ತಿ ಅಂತ ಹಲವರಿಗೆ ಗೊತ್ತು. ಆದರೆ ಇದರಾಚೆ ಈ ಸಂಗೀತಗಾರ್ತಿಯ ವಿಶಿಷ್ಟಗಳು ಹಲವಿವೆ. ಸರಳತೆ ಮತ್ತು ಸಜ್ಜನಿಕೆ ಇವರ ಆಭರಣಗಳು. ಮುಗ್ಧತೆ ಇವರಲ್ಲಿ ಮನೆಮಾಡಿದೆ. ಕೀರ್ತಿಶನಿ ಮತ್ತು ಕಾಂಚಾಣದಿಂದ ಬಲುದೂರವಿರುವ ಈ ಸಾಧಕಿಗೆ ಸಂಗೀತ ಒಂದು ಭಗವಂತನ ಉಪಾಸನಾ ಕ್ರಮ. ಅದೊಂದು ಸೇವೆ.
ಎಲೆ ಮರೆಯ ಕಾಯಿಯಂತಿರುವ ಇಂತಹ ಒಬ್ಬ ಶ್ರೇಷ್ಠ ಸಂಗೀತ ಸಾಧಕಿ ಮೊನ್ನೆ ಹುಬ್ಬಳ್ಳಿಗೆ ಕಾರ್ಯಕ್ರಮ ನಿಮಿತ್ತ ಬಂದಾಗ ಸಿಕ್ಕಿದ್ದರು. ಕಳೆದ ಮೂರು ದಶಕಕ್ಕೂ ಹೆಚ್ಚು ಕಾಲದಿಂದ ಧಾರವಾಡ ಆಕಾಶವಾಣಿ ಎ ಗ್ರೇಡ್ ಕಲಾವಿದೆಯಾಗಿರುವ ಜಯಶ್ರೀ ಇವರೇನಾ ಎನಿಸಿತು. ಹಾಗನಿಸಲು ಕಾರಣ ಅವರ ಸರಳ ವೇಷಭೂಷ ಮತ್ತು ಮುಗ್ಧ ಮಾತುಗಳು.ಎದುರಾಗುವ ಎಲ್ಲರಿಗೂ ನಮಸ್ಕಾರ ಅಂತ ಎರಡೂ ಕೈ ಜೋಡಿಸಿ ಆದರದಿಂದ ಮಾತನಾಡುವ ಆ ಮಾತೆಯ ಸರಳತೆ ಬಣ್ಣಿಸಲು ಪದಗಳು ಸಾಲದು. ಇನ್ನೂ ಕಲಿಕಾ ಹಂತದಲ್ಲಿರುವ ಅನೇಕ ಯುವ ಸಂಗೀತಗಾರರ ಗಮ್ಮತ್ತು , ಠೀವಿ ಎಲ್ಲಿ ಈ ಮಾತೆಯ ಪರಿಪೂರ್ಣ ವ್ಯಕ್ತಿತ್ವವೆಲ್ಲಿ. ಸರಳತೆ ಅಳವಡಿಸಿಕೊಂಡ ಸಂಗೀತಗಾರರೂ ಇರ್ತಾರೆ ಎನ್ನಲು ಇದೊಂದು ತಾಜಾ ನಿದರ್ಶನ.
ಬಾಲ್ಯದಲ್ಲೇ ಸೆಳೆತ
ಜಯಶ್ರೀಗೆ ಸಂಗೀತದ ಗೀಳು ಬಾಲ್ಯದಿಂದಲೇ ಇತ್ತು.ಹುಟ್ಟಿದ್ದು ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯ ಸಾವಂತವಾಡಿಯಲ್ಲಿ.ತಂದೆಗೆ ಮಗಳ ಸಂಗೀತಾಸಕ್ತಿ ಗೊತ್ತಿತ್ತು. ಅದಕ್ಕೆ ನೀರೆರೆದು ಪೆÇೀಷಿಸಿದರು. ಹೆಚ್ಚಿನ ಸಂಗೀತಾಭ್ಯಾಸಕ್ಕೆ ಮುಂಬೈಗೆ ಕರೆದೊಯ್ದರು. ದೊಡ್ಡ ಊರು ಒಬ್ಬಳೇ ಅಭ್ಯಾಸಕ್ಕೆ ದೂರ ದೂರದ ಗುರುವಿನ ಹತ್ತಿರ ಹೋಗೋದು ಹೇಗೆ ಎಂಬ ಪ್ರಶ್ನೆ ಬಂದಾಗ ಸ್ವತ: ತಂದೆಯೇ ಕೈಹಿಡಿದು ಗುರುವಿನ ಬಳಿಗೆಕರೆದೊಯ್ದು ಪೆÇ್ರೀತ್ಸಾಹಿಸಿದರು. ಮುಂದೆ ಖ್ಯಾತ ವಾಯಲಿನ್ ವಾದಕ ಗಜಾನನರಾವ್ ಬುವಾ ಜೋಶಿ ಬಳಿ ಉನ್ನತಾಭ್ಯಾಸ ಮಾಡಿದ ಜಯಶ್ರಿ ಹಿಂದಿರುಗಿ ನೋಡಿದ್ದೇ ಇಲ್ಲ. ಹತ್ತು ಹಲವು ವೇದಿಕೆ, ಕಚೇರಿಗಳಲ್ಲಿ ಇವರ ಕಂಠಸಿರಿ ಅನಾವರಣಗೊಳ್ಳುತ್ತಾ ಹೋಯಿತು. 18 ನೇ ವಯಸ್ಸಿನಲ್ಲಿಯೇ ಸ್ಟೇಜ್ ಶೋ ನಿಡದ ಖ್ಯಾತಿ ಇವರದು.
ನಿಸ್ವಾರ್ಥ ತ್ಯಾಗಜೀವಿ
ಇರಲಾರದೆ ಆಸೆ ಹರೆಯದ ಹುಡುಗಿಯರಿಗೆ
ಆಗಸದಿ ಹಾರಾಡಲು ಹಕ್ಕಿಯ ಹಾಗೆ
ಏಕೆ ಕಟ್ಟುವಿರಿ ಜವಾಬ್ದಾರಿಯ ದಾರ
ಹಾರಲಾಗದಂತೆ ದೂರ ದೂರ ಎಂಬ ಸ್ಥಿತಿ ಜಯಶ್ರೀ. 1977ರಲ್ಲಿ ಮದುವೆಯಾದ ನಂತರ ಜಯಶ್ರೀ ಬಂದದ್ದು ಬೆಳಗಾವಿಗೆ. ಸಾಂಸಾರಿಕ ಜವಾಬ್ದಾರಿಯತ್ತ ಗಮನ ಹರಿಸಿದರ ಪರಿಣಾಮ ಇಲ್ಲಿ ಸ್ವಲ್ಪ ಇವರ ಕಛೇರಿಗಳಿಗೆ ಬ್ರೇಕ್ ಬಿದ್ದಿತೆನ್ನಬಹುದಾದರೂ ಇವರ ಸಂಗೀತ ಸಾಧನೆಗಲ್ಲ. ಚಿಕ್ಕ ವಯಸ್ಸಿನಲ್ಲೇ ಅತ್ತೆ ಮಾವ ತೀರಿ ಹೋದ ಕಾರಣ ಮನೆ ಜವಾಬ್ದಾರಿ ಹೊತ್ತವರು ಜಯಶ್ರೀ.ಸರಳತೆಯನ್ನು ಬಾಲ್ಯದಿಂದಲೇ ಮೈಗೂಡಿಸಿಕೊಂಡಿರುವ ಜಯಶ್ರೀ ನಿಜ ಜೀವನದಲ್ಲಿ ನಿಸ್ವಾರ್ಥ ತ್ಯಾಗಜೀವಿ. ಬಾಲ್ಯದಿಂದಲೇ ಕಲಿತಿದ್ದ ಉಸಿರಾಗಿಸಿಕೊಂಡಿದ್ದ ಸಂಗೀತ ಸಾಧನೆಗೆ ಎಂದೂ ಚ್ಯುತಿ ತರದೇ ಸಂಸಾರದ ಬಂಡಿಯನ್ನೂ ಅಷ್ಟೇ ಸಮರ್ಥವಾಗಿ ಎಳೆದ ಮಹಾತಾಯಿ. ಪತಿ ರಮೇಶರದು ಬೆಣ್ಣೆ ವ್ಯಾಪಾರ. ಮೈದುನ ಬುದ್ಧಿಮಾಂದ್ಯ. ಹೆತ್ತ ಮಗನಿಗಿಂತಲೂ ಹೆಚ್ಚು ಆತನ ಸೇವೆ ಮಾಡಿದ ಜಯಶ್ರೀ ಕರುಣಾಮೂರ್ತಿ. ಮನೆ ಮಂದಿಗೆಲ್ಲಾ ಪ್ರೀತಿಯ ಪ್ರವಾಹವನ್ನೇ ಹರಿಸಿದ ವಾತ್ಸಲ್ಯಮಯಿ ಈ ಜಯಶ್ರೀ. ಹಳೆ ತಲೆಮಾರಿನ ಅತ್ತೆ ಮಾವ. ಮನೆಗೆಲಸ ಇದೆಲ್ಲದರ ಮಧ್ಯೆ ಬಿಡುವಿನ ವೇಳೆ ಸಂಗೀತ ಆರಾಧನೆ. ಬೆಳಗ್ಗೆ ಬೇಗ ಎದ್ದು ಮನೆಗೆಲಸ ಮಾಡಿ ಪತಿಯನ್ನು ಅಂಗಡಿಗೆ ಕಳುಹಿಸಿ ಅಡುಗೆ ನಂತರದ ಸಮಯ ಸಂಗೀತಕ್ಕೆ ಮೀಸಲು. ಮನೆಯಲ್ಲಿ ಇಂತಹ ಒಂದು ಅನಘ್ರ್ಯ ರತ್ನ ಇಟ್ಟುಕೊಂಡಿದ್ದ ಅತ್ತೆ ಮನೆಯವರಿಗೆ ಅದರ ಮಹತ್ವ ಗೊತ್ತಿರಲಿಲ್ಲ. ಇದಕ್ಕೆ ಕಾರಣ ವರಿಗೆ ಭಕ್ತಿ ಸಂಗೀತ ಮಾತ್ರ ಗೊತ್ತಿತ್ತು. ಶಾಸ್ತ್ರೀಯ ಸಂಗೀತದ ಮಹತ್ವ ಮತ್ತು ಪರಿಚಯವಿರಲಿಲ್ಲ. ಪರಿಣಾಮ ಸೊಸೆಯ ಪ್ರತಿಭೆಯ ಅರಿವು ಅವರಿಗಿರಲಿಲ್ಲ. ಅರಿಯುವ ಪ್ರಯತ್ನವೂ ಅವರಿಂದಾಗಲಿಲ್ಲ.ಹಾಗಂತ ಜಯಶ್ರೀ ಎಂದೂ ಅದಕ್ಕೆ ಬೇಸರಪಟ್ಟಿದ್ದಿಲ್ಲ. ಸಂಗೀತ ಸಾಧನೆ ಜತೆಗೆ ಸಂಸಾರದ ಭಾರ ಹೊರಬೇಕಾದ ಅನಿವಾರ್ಯತೆ ಮತ್ತು ಕರ್ತವ್ಯಪ್ರಜ್ಞೆ ಅವರಲ್ಲಿತ್ತು. ಮೊದಲೇ ಅವಿಭಕ್ತ ಕುಟುಂಬ ಮನೆ ತುಂಬಾ ಮಂದಿ. ವೈಚಾರಿಕ ಹಾಗೂ ಆಚರಣೆಯಲ್ಲಿ ಭಿನ್ನತೆ ಸಹಜ ಎಂಬಂತೆ ಪತಿ ಮನೆಯಲ್ಲಿ ಸಂಗೀತದ ಪರಿಸರ ಜಯಶ್ರೀಯವರಿಗೆ ಸಿಗಲಿಲ್ಲ.
ಪ್ರತಿಭೆಯ ಖಣಿ
ಜಯಶ್ರೀ ನಿಡಿದ ಸಂಗೀತ ಕಛೇರಿಗಳು ಹಲವು. ತಾನಸೇನ ಮಹೋತ್ಸವ, ಜೈಪುರ, ಆಗ್ರಾ, ಗ್ವಾಲಿಯರ್, ಕೊಲ್ಕತ್ತಾ ಹೀಗೆ ದೇಶದ ಹಲವೆಡೆ ನಡೆದ ಸಂಗೀತ ಮಹೋತ್ಸವಗಳಲ್ಲಿ ಭಾಗವಹಿಸಿ ಪ್ರೇಕ್ಷಕರ ಮನಗೆದ್ದ ಶ್ರೇಷ್ಠ ಸಂಗೀತಗಾರ್ತಿ. ಇವರ ಲಯಕಾರಿ, ಬಂದಿಶ್ ಹೇಳುವ ರೀತಿ ಅನನ್ಯ.ಹಾಡಲು ಕುಳಿತರೆಂದರೆ ಸಾಕು ಸಂಪೂರ್ಣವಾಗಿ ಅದರಲ್ಲಿ ತೊಡಗಿಬಿಡುತ್ತಾರೆ. ತಮಗೆ ಗೊತ್ತಿಲ್ಲದ ಅವ್ಯಕ್ತಶಕ್ತಿಯೊಂದು ಅವರಲ್ಲಿ ಮನೆಮಾಡುತ್ತದೆ. ರಾಗದÀ ಸುಂದರ ನಿರೂಪಣೆಯಿಂದ ಶ್ರೋತೃಗಳ ಮನಸೂರೆಗೊಳ್ಳುವ ಜಯಶ್ರೀ ಅಪರೂಪದ ಗಾಯಕಿ. ಯಾರ ಅನುಕರಣೆ ಇಲ್ಲದೇ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಹಾಡೋದೇ ಇವರ ಹೆಗ್ಗಳಿಕೆ. 1964ರಲ್ಲಿ ರಾಧಾಕೃಷ್ಣನ್ ಪ್ರಶಸ್ತಿ ಹಾಗೂ ಕೆ.ಡಿ.ಸಾವರ್ಕರ್ ಪ್ರಶಸ್ತಿ ಮುಡಿಗೇರಿಸಿಕೊಂಡ ಜಯಶ್ರೀ ನಮ್ಮವರೇ ಆದ ಪಂ. ಮಲ್ಲಿಕಾರ್ಜುನ ಮನಸೂರ ಹೆಸರಿನಲ್ಲಿರುವ ಪ್ರಶಸ್ತಿ ಪಡೆದ ಪ್ರಪ್ರಥಮ ಸಂಗೀತಗಾರ್ತಿ. ಜಯಶ್ರೀ ಬರೀ ಹಾಡುಗಾರ್ತಿ ಅಷ್ಟೇ ಅಲ್ಲ ಒಳ್ಳೆಯ ತಬಲಾ ಕೂಡ ಬಾರಿಸಬಲ್ಲರು. ಬೆರಳಂಚಿನಲ್ಲಿ ತಾಲ್‍ಗಳ ಪಕ್ಕಾ ಲೆಕ್ಕಾಚಾರ ಹಾಕುವಲ್ಲಿ ಇವರದು ಎತ್ತಿದ ಕೈ.
ಮನೆಗೆ ಬಂದ ಉಸ್ತಾದ ಝಾಕೀರ್ ಹುಸೇನ್
1998ರಲ್ಲಿ ಕಾರ್ಯಕ್ರಮಕ್ಕೆಂದು ಬೆಳಗಾವಿಗೆ ಸಾರಂಗಿ ವಾದಕ ಖಾನಸುಲ್ತಾನ್ ಸಾಬ್ ಬಂದಿದ್ದ ರು. ಅವರ ಜತೆ ತಬಲಾ ಪಟು ಉಸ್ತಾದ್ ಝಾಕೀರ್ ಹುಸೇನ್ ಖಾನ್ ಕೂಡ ಬಂದಿದ್ದರು. ಜಯಶ್ರೀ ಬೆಳಗಾವಿಯಲ್ಲಿದ್ದಾರೆ ಎಂಬ ಸುದ್ದಿ ತಿಳಿದದ್ದೇ ತಡ ಅವರ ಮನೆ ಹುಡುಕಿಕೊಂಡು ಬಂದಿದ್ದರಂತೆ. ಝಾಕೀರನನ್ನು ನೋಡಿ ಮನೆ ಮಂದಿಗೆ ಅರೆ ವಾಹ್ ತಾಜ್ ಬೋಲಿಯೇ ಖ್ಯಾತಿಯ ಹುಸೇನ್ ಬಂದಾಗ ಸಂತಸವೇ ಸಂತಸ. ಅವರು ಬಂದಿದ್ದು ತಮ್ಮ ಮನೆಯಲ್ಲಿನ ಅಮೂಲ್ಯ ರತ್ನ ಭೇಟಿಯಾಗಲು ಎಂಬುದರ ಅರಿವಿಲ್ಲ. ಬದಲಾಗಿ ಅವರ ಜತೆ ಫೆÇಟೋ ತೆಗೆಸಿಕೊಳ್ಳುವುದರಲ್ಲಿ ನಿರತರಾಗಿದ್ದರು ಮನೆ ಮಂದಿ. ಖಾನ್ ಸಾಬ್ ಬಂದವರೇ ಜಯಶ್ರೀ ಪಾದವೆರಗಿ ಅರೆ ಜಯಶ್ರೀಜಿ ಕಹಾಂ ಹೋ ತುಮ್. ಗಾನಾ ಛೊಡ್ ದಿಯಾ ಕ್ಯಾ ಎಂದಾಗ ಜಯಶ್ರೀ ಕಣ್ಣಲ್ಲಿ ಆನಂದಭಾಷ್ಪ. ಅಂತಹ ಒಬ್ಬ ಸಾರಂಗಿ ವಾದಕ ಜಯಶ್ರೀ ಪ್ರಾಮುಖ್ಯತೆ ಅರಿತು ಮನೆವರೆಗೆ ಬಂದು ಭೇಟಿಯಾಗೋದು ಅಂದರೆ ಜಯಶ್ರೀ ಖ್ಯಾತಿ ಮತ್ತು ಶಕ್ತಿಯ ಊಹೆ ನಮಗಾಗುತ್ತದೆ.
ಅಪಾರ ಶಿಷ್ಯಬಳಗ
ಜಯಶ್ರೀ ಅವರ ಬಳಿ ಸಂಗೀತ ಕಲಿಯುವುದು ಸುಲಭದ ಮಾತಲ್ಲ. ಹಾಗಂತ ಕಷ್ಟಸಾಧ್ಯವಲ್ಲ. ಶಿಷ್ಯರು ಎಷ್ಟು ತಪ್ಪಿದರೂ ಅಷ್ಟೇ ನಯವಾಗಿ ಮನದಟ್ಟಾಗಿ ಬರುವವರೆಗೆ ಬಿಡದೆ ಹೇಳಿಕೊಡುವ ಜಾಯಮಾನ ಅವರದು. ದುಡ್ಡಿನ ಮುಖ ನೋಡಿ ಸಂಗೀತ ಕಲಿಸುವವರಿಗೆ ಇವರೊಂದು ಅಪವಾದ. ಜಯಶ್ರಿ ಅಂತರಂಗದ ಸೌಂದರ್ಯಕ್ಕೆ ಮಹತ್ವ ಮನ್ನಣೆ ಕೊಟ್ಟು ಸಾಧನೆಯತ್ತ ಹೆಜ್ಜೆ ಹಾಕುತ್ತಿರುವ ಅನುಕರಣೀಯ ಸಂಗೀತಗಾರ್ತಿ. ಸುತ್ತಮುತ್ತಲಿನವರ ಅಸಮ್ಮತಿಗೆ ಸೊಪ್ಪು ಹಾಕದೇ ಸಮಾಜದ ಕುಹಕಕ್ಕೆ ತಲೆಬಾಗದೇ ನಾದೋಪಾಸನೆಯಲ್ಲಿ ತೊಡಗಿರುವ ಪ್ರತಿಭಾವಂತ ಮಹಿಳೆ.
ಸಿಗದ ಮನ್ನಣೆ, ಅವಕಾಶ
ಜಯಶ್ರೀಯಂತಹ ಶ್ರೇಷ್ಠ ಗಾಯಕಿಯಿಗೆ ನಮ್ಮ ರಾಜ್ಯ ಸರಕಾರ ಮನ್ನಣೆ , ಅವಕಾಶ ನೀಡೇ ಇಲ್ಲ ಎನಬಹುದು. 2010ರಲ್ಲಿ ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಯಿತು. ಆಗ ಅನೇಕ ಹೊರರಾಜ್ಯದ ಸಂಗೀತಗಾರರಿಗೆ ಅವಕಾಶ ಕಲ್ಪಿಸಲಾಯಿತು. ಆದರೆ ಅದೇ ಊರಲ್ಲಿದ್ದ ಜಯಶ್ರೀ ಸರಕಾರದ ಕಣ್ಣಿಗೆ ಬೀಳಲೇ ಇಲ್ಲ. ಪ್ರತಿವರ್ಷ ನಡೆಯುವ ದಸರಾ ಉತ್ಸವದಲ್ಲಿ ಹಲವರಿಗೆ ಅವಕಾಶ ನೀಡಲಾಗುತ್ತದೆ. ಆದರೆ ಇಂಥವರಿಗೆ ಇನ್ನೂ ಅವಕಾಶ ಸಿಕ್ಕಿಲ್ಲ. ಇದು ನಮ್ಮ ವ್ಯವಸ್ಥೆಯ ಜಾಣಕುರುಡೋ ಅಥವಾ ಕಾರ್ಯವೈಖರಿಯ ಪ್ರಮಾದವೋ ಗೊತ್ತಿಲ್ಲ . ನೆರೆಯ ಮಹಾರಾಷ್ಟ್ರ ಸರಕಾರ ನಮ್ಮವರೇ ಆದ ಭೀಮಸೇನ ಜೋಶಿಯವರಿಗೆ ಆಶ್ರಯವಿತ್ತು ಔದಾರ್ಯತೆ ಮೆರೆದರೆ ಕರ್ನಾಟಕ ತಮ್ಮಲ್ಲಿಯೇ ಇದ್ದ ಪ್��ತಿಭೆಯನ್ನು ಗುರುತಿಸದೇ ಇರುವುದು ವಿಪರ್ಯಾಸದ ಸಂಗತಿ.

ಇಂದಿನವರಿಗೆ ಪ್ರಸಿದ್ಧಿ ಬಲು ಬೇಗ ಬೇಕು. ಸಿದ್ಧಿ ಬೆನ್ನಹತ್ತದ ಇವರು ಪ್ರಸಿದ್ಧಿ ಬೆನ್ನಹತ್ತಿದ್ದಾರೆ. ಶ್ರಮವಿಲ್ಲದ ಕೀರ್ತಿ ಶಾಶ್ವತವಲ್ಲ.ಸಂಗೀತ ಒಂದು ಶ್ರೇಷ್ಠ ಕಲೆ. ಅದೊಂದು ಉಪಾಸನಾ ಕ್ರಮ.ಅದನ್ನು ಗೌರವಿಸುವವರು ಎಂದೂ ದುಡ್ಡಿನ ಮುಖ ನೋಡುವುದಿಲ್ಲ.ಶ್ರದ್ಧೆ ಇದ್ದಲ್ಲಿ ಸಿದ್ಧಿ ಖಚಿತ.
-ಜಯಶ್ರೀ ಪಾಟ್ನೇಕರ್

Leave a Reply