ಅಳಿಸದೆ ಉಳಿಸಿ

ಅಳಿಸದೆ ಉಳಿಸಿ

ಪರಿಸರವಾಗಲು ಸಮತೋಲನ
ಪ್ರಾಣಿಪಕ್ಷಿ ಸಸ್ಯಗಳೊಂದಕ್ಕೊಂದು ಅವಲಂಬನ
ಹುಲಿಯೊಂದು ಬೆನ್ನಟ್ಟಿರೆ
ಹರಿಣಿಯ ಉದರಕ್ಕಾಗಿ
ಚಿರತೆಯೊಂದು ಕಾಡೆಮ್ಮೆಗಾಗಿ
ತೋಳವೊಂದು ಮೊಲವನಟ್ಟಿ
ಬೆಕ್ಕೊಂದು ಇಲಿಗೆ ಗುರಿಯನಿಟ್ಟಿ
ಉರಗವೊಂದು ಮಂಡೂಕವ
ನಾಯೊಂದು ವರಾಹವ
ಮುಂಗುಸಿಯೊಂದು ಹಾವಿಗೆ
ಹಲ್ಲಿಯದೋ ಕೀಟಗಳಿಗೆ
ಎತ್ತು, ಕುದುರೆ, ಒಂಟೆ, ಮಂಗ
ಆಕಳು, ಕತ್ತೆ ಕರಡಿ, ಪಕ್ಷಿ, ಸಲಗ
ಅಲೆದಾಡಿದವೆಲ್ಲ ಸಸ್ಯಕಾಗೆ
ಮೂಕ ಪ್ರಾಣಿ ಇಚ್ಛೆ ಉದರ ಮಾತ್ರವೆ
ಮಾತು ಬಲ್ಲ ಶ್ರೇಷ್ಠ ಪ್ರಾಣಿ
ಮನುಜ ಕೇಳು
ನೀನಟ್ಟುತಿಹೆ ಎಲ್ಲಾ ಜೀವಜಂತುಗಳ
ನಿರ್ವಂಶ ಮಾಡುತಿಹೆ ಎಲ್ಲಾ ವಂಶಗಳ
ಬುದ್ಧಿವಂತ ದಡ್ಡ ಮನುಜ
ಕೊಡಲಿ ಕಾಲ ಬುಡಕೆ ಇಟ್ಟು
ಅಭಿವೃದ್ಧಿಯ ನೆಪವ ಒಡ್ಡಿ
ಜಾಣ ನಿರಂಕುಶನಾಗಿ ವರ್ತಿಸುತ್ತಿಹೆ
ಅಂತ್ಯಕೆ ಆಹ್ವಾನವಿಡುತಿಹೆ
ಜೀವಿಗಳಂದಿದಿ ಮನುಜನೊಂದಂಶವೆನುತಲಿ
ಎಚ್ಚರವಿದೋ ಇಂದೇ, ಆಗಲಿ,
ಕಳಕಳಿಯು ಇರಲಿ ಸರ್ವಜೀವಿಗಳಲಿ
ಎಲ್ಲ ಬಾಳಿ ಬದುಕಲಿ
ಈ ಅನಂತ ಪೃಥ್ವಿ ಅಳಿಯದೆ ಉಳಿಯಲಿ

Leave a Reply