ಆಸೆ

ಆಸೆ

ತಳಿರೆಲೆಯ ತೋರಣದ
ಚಿಗುರೆಲೆಯ ನಡುವೆ ಕುಡಿಯಾಗುವಾಸೆ
ಬರಡು ಭೂಮಿಯಲಿ ಅರಳಿದ
ಒಂದೇ ಹೂವಾಗುವಾಸೆ
ಅಂಬರದಿ ಹಾರುತಿಹ
ಹಕ್ಕಿಗಳ ಜೊತೆಗೂಡಿ
ಬಾನಲಿ ಹಾರುವಾಸೆ
ಪರ್ವತ ಶಿಖರದ
ಮೇಲು ಹೊದಿಕೆಯ
ಹಿಮವಾಗುವಾಸೆ
ಮೂಡಣದಿ ಉದಯಿಸುತಿಹ
ರವಿತೇಜನ ಬಂಗಾರದ
ಕಿರೀಟ ನಾನಾಗುವಾಸೆ
ಪಡುವಣದಿ ಮೂಡಿಹ
ಕೇಸರಿಯ ರಂಗು ನಾನಾಗುವಾಸೆ
ಕತ್ತಲಲು ಬೆಳಗುತಿಹ
ಹುಣ್ಣಿಮೆ ಚಂದಿರನಾಗುವಾಸೆ
ಕಬ್ಬಿನ ದಂಟಿನಲಡಗಿರುವ
ಸಿಹಿಬೆಲ್ಲ ನಾನಾಗುವಾಸೆ
ನೆರಳನೀವ ಹೆಮ್ಮರದ
ಒಂದೇ ಒಂದು ಟೊಂಗೆಯಲಿ
ನಾನಿರುವಾಸೆ
ಕೆರೆ ಕೊಳಗಳ ಬಿಳಿತಾವರೆ
ಆಗುವಾಸೆ
ಜೇನ ಗೂಡಿನಲಿ ಕಟ್ಟಿದ
ಸಿಹಿ ಜೇನು ನಾನಾಗುವಾಸೆ
ನಂದನವನದಲರಳಿದ
ಸೌಗಂಧಿಕ ಪಾರಿಜಾತ
ನಾನಾಗುವಾಸೆ
ಸ್ಫೂರ್ತಿಯ ನಲಿವಿನ
ಬಣ್ಣದ ಗರಿಗಳಲ್ಲೊಂದಾಗುವಾಸೆ
ವಿಶಾಲ ಸಾಗರದಾಳದಲಿ
ಕಪ್ಪೆಚಿಪ್ಪಲಿ ಅಡಗಿರುವ
ಒಂದೇ ಮುತ್ತು ನಾನಾಗುವಾಸೆ
ತಾಯ ಸೆರಗಲಿ ಬಚ್ಚಿಟ್ಟ
ಕಂದಮ್ಮನ ಗಲ್ಲದಲ್ಲಿನ
ನಗುವು ನಾನಾಗುವಾಸೆ
ನಿಜ ಮಮತೆಯ
ಸ್ವಚ್ಛ ಶುಭ್ರ ಮನ
ನಂದಾಗುವಾಸೆ
ಶುಭ್ರ ಮನ ನನ್ನದಾಗುವಾಸೆ.

1 Comment

  1. ಚಿಕ್ಕವರಿದ್ದಾಗ ಕೇಳಿದ ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ ಪದ್ಯ ನೆನೆಪಿಗೆ ಬಂತು. ಚೆನ್ನಾಗಿದೆ.

Leave a Reply