ಕನ್ನಡ ಶಾಲಿ ಮಾಸ್ತರ್

. ಕನ್ನಡ ಶಾಲಿ ಮಾಸ್ತರ್

ಕನ್ನಡ ಶಾಲಿ ಮಾಸ್ತರ್ಗಿಂದು ಇಂಗ್ಲಿಷ್ ಕಲಿಬೇಕಾತು
ನನ್ನ್ ನೇಮ್ ಸೊಮಣ್ಣಾಂತಾ ಹೇಳಬೇಕಾತು
ಬೇಡ ಇವರ ಇಂಗ್ಲಿಷ್ ಕಲಿಯೋ ಪರದಾಟ
ನಡೆಸೇ ಬಿಟ್ಟರು ಹೋರಾಟ

ವಿದೇಶಿ ಒಬ್ಬ ಶಾಲಿ ನೋಡಾಕಂತ ಬಂದ
ಹೊಟ್ಟಿ ನೋವಾದ್ಹಾಂಗ ಮಾರಿಕಿವಚಿ ಕನ್ನಡ ಮಾಸ್ತರ್ ಎಂದ,
ವಾಟ್ ಆಗ್ಬೇಕು? ಹೂ ಯೀಜ್ ನೀವು ಅಂತ ಮಿಕಿಮಿಕಿ ನೋಡ್ದ
ಬಿಳಿ ಮಂಗ್ಯಾನಗತೆ ವಿದೇಶಿ ಹುಡುಗ ತಲಿಕೆರಕೋತ ಪಕ್ಕದ ಕೋಣೆಗೆ ಓಡ್ದಾ!

ಮುಖ್ಯೋಪಾಧ್ಯಾಯರು ಸಿಡಿಮಿಡಿಗೊಂಡು ಮಾಸ್ತರ್ಗೆ ಕರೆದಾ
ಇಸ್ಟವರುಶಾತು ಇಂಗ್ಲಿಷ್ ಯಾಕ್ ಕಲ್ತಿಲ್ಲಾಂತ ಟರ್ ಟರ್ ಒದರಾಡಿ ಹೋದ
ಆಯ್ ಕಲಿತೀನಿ ಯೂ ಗಿವ್ ಅವಕಾಶ ಅಂತ ಸರ್ ಹೇಳಿದ್ರು
ಮೊದಲು ಕನ್ನಡದಾಗೇ ಸರಿ ಹೇಳಂತಾ ಹೆಡ್ ಮಾಸ್ಟರ್ ಕೋಣೆಗೆ ಹೋದ್ರು

ಖರೀದಿ ಆಯ್ತು ಕಲಿಯಿರಿ ಇಂಗ್ಲಿಷ್ ಅನ್ನೋ ಪುಸ್ತಕ
ಸಿಂಗಲ್ ವರ್ಡ,ಜಂಬಲ್ ವರ್ಡ ಏರಲಿಲ್ಲ ಮಾಸ್ತರ್ ಮಸ್ತಕ
ನಾಲಿಗಿ ಹೊರಳಲಿ ಅಂತ ಎಲಿ ಅಡಿಕಿ ತಿನ್ನೋದ ಬಿಟ್ಟರಲ್ಲಾ
ಕಂಡು ಇವರ ಗೋಳಾಟ ಮನೆಯವರೆಲ್ಲ್ಲ ಕಿಸಿಕಿಸಿ ನಕ್ಕರಲ್ಲಾ

ಕನ್ನಡನಾಡ್ನಾಗ್ ಹುಟ್ಟಿನ್ನ್ ನಾನು ಕಲಿಯೋದಿಲ್ಲ ಆಂಗ್ಲ ಭಾಷಾ
ಎಲ್ಲೇ ಇದ್ರು ಮಾತಾಡತೀನಿ ಬಾಯಿತುಂಬ ಕನ್ನಡ ತಾಯಿ ಭಾಷಾ
ಹೃದಯದ ಮಾತು ಬರಬೇಕಂದ್ರೆ ಜನುಮದ ಭಾಷೆ ಬೇಕು
ಕನ್ನಡನಾಡ್ನಲ್ ಇದ್ದೀವಂದ್ರ ಇಂಗ್ಲಿಷ್ ಶಾಲಿ ಮುಚ್ಚಬೇಕು.

ಉಮಾ ಭಾತಖಂಡೆ.

Leave a Reply