ಕವನದ ಸಂದೇಶ

ಕವನದ ಸಂದೇಶ

ಕವನಗಳಿವು ಬರಿ ಬರಹಗಳಲ್ಲ
ಬರಿಯ ಸುಂದರ ಅಕ್ಷರಗಳಲ್ಲ
ಜೋಡಿ ಪದಗಳ ಸಾಲುಗಳಲ್ಲ
ಅಂತ್ಯದಿ ಪ್ರಾಸದ ಶಬ್ದಗಳಷ್ಟೆ ಅಲ್ಲ
ಅಂತರಾಳದ ಒಳ್ನುಡಿಗಳಿವು
ಅನುಭವದ ಅನುಭಾವಗಳಿವು
ಗಾಣದೊಳು ಕುದಿದ ಬೆಲ್ಲದಂತಿವು
ಸಿಹಿ ಸಜ್ಜಿಗೆಯ ನೀಡುವ ಸಗ್ಗವಿದು
ಕವನಗಳಿವು ಸ್ಫೂರ್ತಿಯ ಆಗರ
ಪ್ರೀತಿಯ ಬೆಸೆಯುವ ಹೂವಿನ ಹಂದರ
ಕದಡಿದ ಮನಗಳ ತಿಳಿಯಾಗಿಸುವ ಭವಸಾಗರ
ಭಾವನೆಗಳ ಬಿತ್ತಿಸುವವು ಸುಂದರ
ಕೇಳುತಿರೆ ಕರ್ಣಗಳಿಗಿದು ಸುಮಧುರ
ಸೋಲಲು ಗೆಲುವನು ಕಾಣಿಸುವ
ಅಪೂರ್ವ ಸಂದೇಶವ ಹೊತ್ತು ತರುವ
ಗೇಹಕೆ ನಿತ್ಯ ನವ ಚೇತನದ ಹೊಳೆ ಹರಿಸುವ
ಕವನಗಳಿವು ಬರಿ ಬರಹಗಳಲ್ಲ.
ದುಗುಡದಲಿ ಸ್ಪಂದಿಸುವವು
ನೋವಲು ನಗುವನು ಹೊಮ್ಮಿಸುವವು
ಚಿತ್ತವ ಹಗುರಾಗಿಸುವವು
ಹೃದಯದ ಬಾಗಿಲ ತಟ್ಟುವವು
ಕವನಗಳಿವು ಬರಿ ಬರವಣಿಗೆಯಲ್ಲ.

Leave a Reply