ಕೋತಿ, ಕನ್ನಡಿ ಸಂಗಮ

ಕೋತಿ, ಕನ್ನಡಿ ಸಂಗಮ

ಕೋತಿ ಕಂಡಿತೊಂದು ಕನ್ನಡಿ
ಬಿಗಿದ್ಹಿಡಿದಿದ್ದ ಪರಿಯನೊಮ್ಮೆ ನೋಡಿ
ಹಿಡಿದು ಆಚೆ-ಈಚೆ ಮಾಡಿ
ಏರಿತು ಮರವ ಛಂಗನೆ ಓಡಿ ಓಡಿ
ತಿರುವು ಮುರುವು ಮಾಡಿತೊಮ್ಮೆ
ದೂರ ಚಾಚಿ ನೋಡಿತೊಮ್ಮೆ
ಕಣ್ಪಿಳಿಕಿಸದೆ ದೃಷ್ಟಿ ಅಲ್ಲೆ ಬೀರಿ
ಕೈಲಿ ಹಿಡಿದು ಕಂಡು ತನ್ನ ಮಾರಿ
ಆಹಾ! ಸಿಕ್ಕ ಹೊಸ ಗೆಳೆಯ
ಮುದ್ದಿಸಿತು ಮತ್ತೆ ಮತ್ತೆ ಕನ್ನಡಿಯ
ಘಳಿಗೆ ಬಿಡದೆ ಬಿಗಿದು ಬಗಲನ್ನೆ
ಬಂಧಿಸಿತು ತೋಳಲಿ ಬಹಳ ಚೆನ್ನೆ
ನನ್ನಂತೆ ಇರುವ ಮಿತ್ರನಿವನು
ಮಾಡಿದಂತೆ ಮಾಡುವವನು
ಮುದ್ದಿಸಲು ಮುದ್ದಿಸುವವ
ಮುಖಕೆ ಮುಖವ ತಾಗಿಸುವವ
ಕೈ ಬೀಸಲು ಬೀಸುತ
ಕೋಪಕೆ ಪ್ರತಿ ಕೋಪ ತಾಳುತ
ಭಾವಕೆ ಭಾವ ತೋರುತ
ಸದಾ ನನ್ನೇ ನೋಡುತಾ
ಕರೆಯಿತಾ ಕೋತಿ ಬಳಗವ ಕೂಗಿ
ನೋಡಿದವೆಲ್ಲ ಕುಳಿತು ಸಾಲುಸಾಲಾಗಿ
ಕನ್ನಡಿ ಮಿತ್ರಳ ಪ್ರೀತಿ ವಿಪರೀತವಾಗಿ
ಹಿಡಿದು ಹಿಡಿದು ಬೇಸರವಾಗಿ
ಬಳಗ ತೊಡಗಿತು ಅನ್ವೇಷಣೆಗಾಗಿ
ಗೆಳತಿಯ ಪರಿಯ ಅರಿವಾಗಿ
ಮೆಲ್ಲನಿಟ್ಟರಾ ಗೆಳತಿಯ
ಮುದ್ದಿನ ಕನ್ನಡ ಗೆಳತಿಯ.

Leave a Reply