ಜೀವ ವೈವಿಧ್ಯ

ಜೀವ ವೈವಿಧ್ಯ

ಜಗವು ಮನುಜಗಷ್ಟೆ ಅಲ್ಲ
ತುಂಬಿಹುದು ಜೀವ ವೈವಿಧ್ಯವು
ಖುಷಿಯ ಗರಿಯು ಬಿಚ್ಚುವಂತ
ಹಲವು ಬಗೆಯ ಆಕರ್ಷಕ ಬಣ್ಣದಿ
ಹಾರುತಿಹವು ಪಕ್ಷಿಗಳು

ಮರದ ಒಂದೇ ಟೊಂಗೆಯಲ್ಲಿ
ಕೀಟ ಸೊಳ್ಳೆ, ಕಂಬಳಿ, ಕೆಂಜಗ, ಜೇನುಗೂಡೊಳು
ಸಮುದ್ರದ ಮನೆಯಲ್ಲಿ ತಿಮಿಂಗಲು
ನಕ್ಷತ್ರ ಮೀನು, ಗುರುತೇ ಸಿಗದ ಜೀವಿಗಳು

ಕಪ್ಪೆ ಚಿಪ್ಪಿನಲ್ಲೂ ಬಸವನ ಹುಳು
ಕಲ್ಲ ಬುಡಕು ಏಡಿ ಆಮೆ!
ಸಣ್ಣದೊಂದು ಕೆರೆಯಲ್ಲೆ ವಾಸ
ಜಿಗಣಿ, ಗೊಜು ಮೊಟ್ಟೆಗಳು

ಕೊಳೆತ ಮರದ ಟೊಂಗೆಯಲ್ಲಿ
ಪಾಚಿ ಕೊಳೆತೆನಿಗಳು
ನೆಲದ ಗುಮ್ಮನೆಂದೆ ಕರೆವ ಹೆಗ್ಗಣ ಇಲಿಗಳು
ಬಿಲದಲ್ಲಿ ಇರುವ ಹಾವು ಅದಾ ಹುತ್ತ ಕಟ್ಟುವ ಗೆದ್ದಲು

ಸಾಲು ಸೈನಿಕರಿಗೆ ಸವಾಲಾಗಿ ಇರುವೆ ಗೊದ್ದಗಳು
ರಕ್ತ ಹೀರಿ ಬೈಯಿಸಿ ಕೊಳುವ ಸೊಳ್ಳೆ ನೊರಜುಗಳು
ಕಥೆಗಳಲ್ಲಿ ಅರಸರಾಗಿ ಮೆರೆದ
ಹುಲಿ, ಸಿಂಹ, ಆನೆ, ಚಿರತೆ ಗೊರಿಲ್ಲಾಗಳು

ಸಿರಿವಂತರಂಗಿ ಆಗಿ ಮೆರೆವ ರೇಷ್ಮೆ ಹುಳುಗಳು
ಮೈಜುಂ ಎನ್ನಿಸುವ ಜಿರಳೆ, ಝರಿ, ಚೇಳುಗಳು
ಭೂಮಿಯೊಂದು ಕಾಯ್ದು ಕೊಳಲು ತನ್ನ
ಬೇಕು ಎಲ್ಲ ಜೀವಿಗಳು ಆಗ ಮಾತ್ರ
ಸಾಧ್ಯವಲ್ಲ ಪರಿಸರಕೆ ಸಮತೋಲನವು.

Leave a Reply