ದೀಪ ಬೆಳಗೋಣ!

ದೀಪ ಬೆಳಗೋಣ!

ದೀವಟಿಗೆ ಹಿಡಿದು ಬೆಳಕ ಚೆಲ್ಲೋಣ
ಮನದ ಬೆಳಕಿನ ಭಾವ ಬೆಳಗಿಸೋಣ
ಉಂಡುಟ್ಟು ಸಂತಸದ ಸವಿಯ ಸವಿಯೋಣ

ಸಂಸ್ಕತಿ ಪರಂಪರೆಯ ಎಂದೆಂದೂ ಸಾರೋಣ
ಉತ್ಸಾಹದಲಿ ಸಂಪ್ರೀತಿ ಸಮಾನತೆ ಎಲ್ಲರೊಳು ಬೆಸೆಯೋಣ
ಅರ್ಥೈಸಿ ಹಬ್ಬಗಳ ಮಹತ್ವ ತಿಳಿಯೋಣ

ಭಾಸ್ಕರನ ಕಿರಣಕೂ ಮಿಗಿಲಾದ ಆತ್ಮಜ್ಯೋತಿಯ ಹೊಮ್ಮಿಸೋಣ
ಬಾಹ್ಯ ಬೆಳಕಿಗೂ ನಿಲುಕದ ಕಿರಣದಿಂದ ಅಂತರಂಗವ ಶುದ್ಧಿಸೋಣ
ಮನವೆಂಬ ಗುಡಿಯಲಿ ನಿತ್ಯ ದೀಪಾವಳಿ ಆಚರಿಸೋಣ

Leave a Reply