ದೈವದಾಟ

ದೈವದಾಟ

ನೂಕಿದ ದೈವ ಸಾಗರಕೆ ಈಜು ಬಾರದವನ
ನೋಡಲಿಷ್ಟ ಅವಗೆ ಈಜಿ ದಡವ ಸೇರುವವನ
ಬಿಡನು ಹಾಗೆ ಮುಳುಗುವಾಗ ದಾರಿ ತೋರುವುದ
ಮರೆಯನು ಬಂಡೆಗಳು ಬಡಿಯದಂತೆ ರಕ್ಷಿಸುವುದ

ಮುಳು ಮುಳುಗಿ ಏಳುವವ ಅನುಭವಿಯು ಆಗುವ
ಆತ್ಮಸ್ಥೈರ್ಯ ಕಳೆದುಕೊಳ್ಳಲು ಸಾಗರದ ತಳವ ಕಾಣುವ
ದಡಕಾಣುವುದರಲಿ ಪೆಟ್ಟುಉಂಟು ಸಹಿಸಬೇಕು ತಾಳ್ಮೆಯಿಂದಲಿ
ಕಲ್ಲುಬಂಡೆ, ವಿಷಜಂತು, ಜಲಚರಗಳಿಹವು ಸಾಗು ಎಚ್ಚರಿಂದಲಿ

ಕಂಡು ಮುಗುಳು ನಗುವನವನು ಎಮ್ಮ ಹೆಣಗಾಟವ
ಸೂತ್ರಧಾರಿ ಅವನೇ ತಾನೆ ಸೂತ್ರ ಹಿಡಿದು ಆಡಿಸುವವ
ಮುಳುಗಿಸುವವನು ಅವನೇ ಈಜಿ ದಡ ಸೇರಿಸುವವನು ಅವನೇ
ಕರೆಗೆ ಓಗೊಟ್ಟು ಹೋಗುವ ತೃಣ ಮಾತ್ರರು ನಾವು ಸೇರಬೇಕು ಅವನನೇ.

ಉಮಾ ಭಾತಖಂಡೆ.

1 Comment

  1. ತುಂಬಾ ಚೆನ್ನಾಗಿ ಮೂಡಿ ಬಂದಿದೆ.

Leave a Reply