ಧಾರವಾಡ ಛಳಿ!

ಧಾರವಾಡ ಛಳಿ!

ಅಬ್ಬಬ್ಬಾ ಏನ ಛಳಿ ಬಿಟ್ಟೈತಿ ನೋಡ್ರಿ ಧಾರವಾಡದಾಗ
ನಡುಕ ಹುಟ್ಟೈತಿ ಮೈಯ್ಯಾಗ, ಭಯ ಹುಟ್ಟಿಸೈತಿ ಮನದಾಗ
ಕುಂತ್ರ ನಿಂತ್ರ ಹಲ್ಲು ಕಟಕಟ ಅನ್ನಾಕ ಹತ್ತೈತಿ
ನಡದಾಡೋಣ ಅಂದ್ರ ಕಾಲೇ ಸೊಟ್ಟ ಸೊಟ್ಟ ಹೋಗಾಕ್ಕತ್ತೈತಿ
ಜುಳು ಜುಳು ನೀರು ಮುಟ್ಟಾಕ ಒಲ್ಯಾಗ್ಯಾತಿ
ಬೆಚ್ಚಗ ಗಾದಿ ಮ್ಯಾಲ ಹೊತಕೊಂಡು ಕೂಡಂಗಾಗ್ಯೈತಿ
ಬಿಸಿ ಬಿಸಿ ಚಹಾ ಮಿರ್ಚಿ ಬಜ್ಜಿ ಬಾಯಿ ಚಪಲಾ ಆಗೈತಿ
ಏನ ಮಾಡ್ಲಿ ತರಾಕ ಹೋಗೋದು ಬ್ಯಾಡಾಗೈತಿ.

1 Comment

  1. Bangalore nagu hange agitri. Nice

Leave a Reply