ನಕ್ಕು ನಲಿದು

ನಕ್ಕು ನಲಿದು

ಅನ್ಯರ ಚಿಂತೆ ಏತಕೆ ತಮ್ಮ
ಮನದಲಿ ಪೊಕ್ಕುವುದು ಗುಮ್ಮ
ಪರಚಿಂತೆಯಲಿ ಗೆದ್ದಲ್ಹಿಡಿವುದು ಚಿತ್ತ
(ಜಗವಿಹುದು) ಜಗವೊಂದು ವಿಶಾಲ ಸಾಗುವ ಅದರತ್ತ
ಸುತ್ತಲ ಕಹಿ ಬೇಲಿಗಳ ಕತ್ತರಿಸಿ
ಶೃಂಗಾರದ ತರುಲತೆಗಳಿಂದಲಂಕರಿಸಿ
ಚಿಗುರಿಸುವ ಬಗೆಬಗೆಯ ಕುಸುಮ
ಚಿಮ್ಮಲಿ ನಿತ್ಯ ಚೈತನ್ಯದ ಸಂಭ್ರಮ
ಬಸವಳಿಯದಿರಿ ಗಲ್ಲಗಳ ಬಿಗಿದು
ಎಲ್ಲರೊಳಗೊಂದಾಗಿ ಬನ್ನಿ ನಕ್ಕು ನಲಿದು
ನಾ ನಕ್ಕು ತಾ ನಕ್ಕು ಮುತ್ತು ಸುರಿದು
ಖುಷಿಯ ಔತಣ ಹರುಷದಲಿ ಬರಲಿ ಹರಿದು.

Leave a Reply