ನವನಾರಿ

ನವನಾರಿ

ಎಲ್ಲಕೂ ಸೈ ಈ ನವಯುಗ ನಾರಿ
ಕಣ್ಮಣಿ ಇವಳು ಆಗಳು ಭಾರಿ
ನಿಂತಿರಲು ಸಮನಾಗಿ ಎಲ್ಲದಕೂ
ಸಿದ್ಧಳು ಎಲ್ಲಾ ಸಾಹಸಕೂ
ಇತಿಹಾಸದಿ ಸಿಂಹಾಸನ ಏರಿದಳೀಕೆ
ಅಂತರಿಕ್ಷಲೂ ಮೆರೆದಾಡಿದಳೀಕೆ
ಸೈನ್ಯಕೂ ಸೈ ಗಗನಸಖಿಯೂ ಸೈ
ಅವಕಾಶಕೆ ವಂಚಿತೆಯಾಗಲು
ಸದೆ ಬಡಿಯುತ ನಿಲ್ಲುವ ಹೋರಾಟಕ್ಕೆ
ಮಾತೆಯು ಈಕೆ, ಮೈತ್ರಿಯು ಈಕೆ
ಕವಿ, ಕಲಾವಿದರಿಗೂ ಸ್ಫೂರ್ತಿಯ ಹಿನ್ನೆಲೆ ಈಕೆ
ಧ್ವನಿ ಎತ್ತಲು ದುರ್ಗಿ ಸ್ವರೂಪ ಮಲಾಳಳಂತೆ
ಗೆಲುವಿಗೆ ಗರಿಯು ಮೇರಿಕೊಂಳಂತೆ
ಕಚ್ಚೆಯ ತೊಡಲು ಓಬವ್ವ
ರೋಗಿಗೆ ಶುಶ್ರುಷೆಯಲಿ ಮಮತಾಮಯಿ
ಮದರ್ ಥೆರೆಸ್ಸಾಳಂತೆ
ಅರಿತರೆ ಒಳಿತು ನಾರಿಯು ಅಬಲೆಯಲ್ಲ
ಹೆಣ್ಣು ಗಂಡು ಭೇದವು ಸಲ್ಲ
ಬೆರೆತು ನಡೆದರೆ ಎಲ್ಲವೂ ಬೆಲ್ಲ.

Leave a Reply