ನಾನಿದ್ದ ಬೋಗಿಯಲ್ಲಿ

ನಾನಿದ್ದ ಬೋಗಿಯಲ್ಲಿ

ಕೂಕೂ ಚುಕ್ ಬುಕ್ ರೈಲು ನಿಲ್ದಾಣ
ಓಡಿ ಹತ್ತುವುದರಲ್ಲಿ ಜನರ ಉಲ್ಬಣ
ಕೆಲವೇ ಕ್ಷಣಗಳ ಗುದ್ದಾಟ
ನಂತರ ಶುರು ಎಲ್ಲರ ಸ್ಥಳ ಹುಡುಕಾಟ

ತಿಳಿದಿರೆ ಶಾಶ್ವತ ಯಾವುದೂ ಇಲ್ಲ
ನಡೆದಿತ್ತು ಸ್ವಾರ್ಥ ಸುತ್ತಲೂ ಎಲ್ಲಾ
ಕಳೆವುದು ಕೆಲವೇ ಗಂಟೆಗಳು ಬೋಗಿಯಲ್ಲಿ
ಎಲ್ಲರೂ ತಿಳಿವರು ತಮ್ಮದೆ ನೆಲೆಯ ಇಲ್ಲಿ

ನಿಮಿಷ ನಿಮಿಷಕೂ ತಿನಿಸುಗಳ ಪ್ರವೇಶ
ತಿಂಡಿ ಪೋತರಿಗಿದೊ ಪರಮ ಸಂತೋಷ
ಉದರಕ್ಕಿದೊ ಶುರುವಾಯಿತು ಯುದ್ಧ
ತಿಳಿದರೂ ಕೂಡ ತಿನ್ನಲು ಎಲ್ಲರೂ ಸಿದ್ಧ

ಸ್ಥಳಕ್ಕಾಗಿ ಶುರು ಹಿರಿಯರ ಆಶಾನೋಟ
ಎದ್ದರು ಕೆಲವರು ಗುನುಗುತ ಬಂತಿದೋ ಸಂಕಷ್ಟ
ಕೆಲವರದಂತು ಬರಿಯ ವಾದ ವಿವಾದ
ತಿಳಿಯದು ಇವರಿಗೆ ಹೊಂದಾಣಿಕೆಯ ಸ್ವಾದ

ಇಲ್ಲೊಂದಿಬ್ಬರದು ತಾಂತ್ರಿಕ ಪ್ರೇಮ
ವಿಚಾರಿಸುವರು ಸುಮ್ಮನೆ ಎಲ್ಲರ ಕ್ಷೇಮ
ಮುಂದಿನವರದು ಎಲ್ಲರೊಟ್ಟಿಗೆ ಸಹಕಾರ
ಪಕ್ಕದವರದು ಒತ್ತಾಯದ ಉಪ್ಪುಖಾರ

ಅಂತೂದಾರಿ ಸಾಗುತಲಿತ್ತು
ಎಲ್ಲರಿಗೆ ನಶೆ ಏರುತಲಿತ್ತು
ಕೆಲವರದಂತೂ ಕುಣಿತ, ನಲಿತಗಳು ನಡೆದವೂ ಇಲ್ಲೆ
ಆಡಿ, ಹಾಡಿ, ಜಿಗಿದರು ಕೆಲಕ್ಷಣದಲ್ಲೇ
ಆಗಮಿಸುತಿತ್ತು ಮುಂದಿನ ಸ್ಟೇಷನ್
ಚದುರಿತು ಎಲ್ಲರ ಕೋ-ಆಪರೇಷನ್

2 Comments

  1. ನಿಜ. ಜೀವನವೂ ಒಂದು ಪ್ರಯಾಣ, ಅಲ್ಲಿಯೂ ಇದೆ ರೀತಿ ಹಲವಾರು ತರಹದ ಅನುಭವಗಳು ಸಿಗುತ್ತವೆ.

  2. ಕವನ ತುಂಬಾ ಚೆನ್ನಾಗಿದೆ. ಈ ಕವನ ನಿಜ ಜೀವನದ ಮುಖವಾಗಿದೆ.

Leave a Reply