ನಿಜ ಗೆಳತಿ

ನಿಜ ಗೆಳತಿ

ಇರುವರು ಹಲವು ಗೆಳತಿಯರೆನಗೆ
ಕೈಕೈ ಹಿಡಿದು ನಡೆದವರು
ಮಿಂಚಿ ಮಾಯವಾಗುವವರು
ಈಗಲೂ ಇರುವಳು ಒಬ್ಬಳೇ ಗೆಳತಿ
ಭಿನ್ನವಾದವಳು ಮಾಯಾಂಗನೆಯಂಥವಳು
ಕಂಡೊಡನೆ ಹೃದಯ ಮಿಡಿದವಳು
ಮೌನದಲ್ಲಿ ಭಾವದಲ್ಲಿ ಎಲ್ಲ ಅರಿತವಳು
ತೆರೆಯ ಹಿಂದೆ ಪರದೆ ಸರಿಸಿ
ಸಂತೈಸುವ ಕರುಣಾಳು ಇವಳು
ಕವಿದ ಕತ್ತಲೆಗೆ ಕಂಗೆಟ್ಟು ಕುಳಿತಾಗ
ಹಚ್ಚುವಳಿವಳು ಹಣತೆಯ
ಕಣ್ಣಂಚ ಕಂಬನಿ ಇಳಿದು
ಬಿಸಿಯುಸಿರು ಬಿಡುವಾಗ
ಹೊಸಗಾಳಿಯ ತಂಪು ಸೂಸುವ ಹೃದಯವಂತಳು
ಸದಾ ಪ್ರೇರಣೆಯ ಮಾತನಾಡಿ
ಲೇಸ ಬಯಸುವ ಮಾರ್ಗ ಸೂಚಿಯು
ಸಣ್ಣದೊಂದು ಗೆಲುವ ಕಂಡು
ಪ್ರತಿಭೆ ಅರಳಿಸುವ ಶಿಲ್ಪಿಯು
ಕಂಡು ಎನ್ನ ಜೀವನಕಥನ
ಕಣ್ಣುಗಳನ್ನು ಮಿಂದು
ನೀನೇ ಧನ್ಯಳೆಂದ ಧ್ಯಾನಿಯು
ನನ್ನ ಹೊಸ ಗೆಳತಿ ಇವಳು ನಿಜ ಗೆಳತಿಯು

Leave a Reply