ನಿನಗಾವ ಬಯಕೆಯೋ?

ನಿನಗಾವ ಬಯಕೆಯೋ?

ಬಯಸಿದ ಬದುಕು ಬರುವುದಿಲ್ಲ
ಬೇಡಿದ ಇಚ್ಛೆ ಈಡೇರುವುದಿಲ್ಲ
ಇರುವುದನ್ನು ಅನುಭವಿಸುವ ಮನಸ್ಸಿಲ್ಲ
ಇರದಿರುವುದ ನೆನೆದು ಪರಿತಪಿಸುವುದ ಬಿಡುವುದಿಲ್ಲ

ಭಗವಂತನಿಚ್ಛೆ ಆಸೆ ಬಿಡದಿರೆ ಕೊಡುವುದಿಲ್ಲ
ಆಸೆಗಳ ಬಿಟ್ಟೊಡೆ ಕೊಡುವುದ ಮರೆವುದಿಲ್ಲ
ಸೃಷ್ಟಿಕರ್ತನ ಜನನ ಮರಣ ಚಕ್ರದಲ್ಲಿ
ಸಾಗಬೇಕು ಏರಿಳಿತಗಳ ಜೀವನ ನೌಕೆಯಲ್ಲಿ

ಶ್ರದ್ಧೆ ,ಭಕ್ತಿ, ಧರ್ಮದಿಂದ ಉತ್ಸಾಹದಿ ಸಾಗುತಿರೆ
ಚೈತನ್ಯ, ಶಾಂತಿ, ಅರಿವಿಲ್ಲದೆ ಮೈದುಂಬುತಿರೆ
ದೋಣಿ ದಡವ ಸೇರುವುದು ಅಲೆಗಳ ಆರ್ಭಟಕೆ ಸಿಲುಕದಂತೆ
ದೈವ ಮೆಚ್ಚಿ ಸಲಹುವನು ಎಲ್ಲಿಯೂ ಬಿರುಕು ಬಾರದಂತೆ

   –  ಉಮಾ ಭಾತಖಂಡೆ .

Leave a Reply