ಫಾಲ್ಗುಣನಿಗೆ ನಮನ

ಫಾಲ್ಗುಣನಿಗೆ ನಮನ

ಆಗಮಿಸಿತು ವಿನೂತನ ವರ್ಷ
ಮೂಡಿಸುತ ಸರ್ವರಲಿ ಹರ್ಷ
ಧರೆಗಿದೋ ತೋರಣಗಳ ಸ್ಪರ್ಷ

ಕೆಣಕಿ ಕರೆಯಿತು ಮತ್ತೆ ಋತುಗಳ ರಾಜನ
ಶುರುವಾಯಿತು ಕೂ..ಕೂ.. ಕೋಗಿಲೆ ಗಾಯನ
ಹಕ್ಕಿಗಳ ಚಿಲಿಪಿಲಿ ಕಲವರದ ಸೋಪಾನ

ಕಳೆದ ಕಾಲದ ಕಹಿಯ ಮರೆತು
ನವ ವರ್ಷಕೆ ಸಹಜ ಬೆರೆತು
ಮೂಡಲಿ ನವೋಲ್ಲಾಸವು ಹೊಸತು
ಹೊತ್ತು ಹಲವು ನಿರೀಕ್ಷೆಯ ಕನಸು
ಆಗುವುದಿದೆ ಮುಂದೆಲ್ಲವು ನನಸು
ಕೂಡಿ ಕುಣಿಯುವುದೇ ಬಲು ಸೊಗಸು

Leave a Reply