ಬುದ್ಧನ ಮೂರ್ತಿಯಾಗು!

ಬುದ್ಧನ ಮೂರ್ತಿಯಾಗು!
ಇರದ ನೆನೆದು ಅಶಾಂತನಾಗದಿರು ಮನುಜ
ಜೀವನದೋಣಿಯಲಿ ಏರುಪೇರು ಸಹಜ
ಇದ್ದಹಾಗೆ ಸಹಿಸಿ ಸಮರ್ಪಿಸು ಎಲ್ಲಾ
ಜೀವನವಾಗಿಸು ಸಿಹಿ ಬೆಲ್ಲಾ

ಮುಳ್ಳ ನಡುವೆ ಕಂಗೊಳಿಸುವ ಗುಲಾಬಿ ಸುಮವಾಗಿ
ಕಹಿ ಬೇವ ಬೀಜದೊಳಿರುವ ಔಷಧಿಯು ನೀನಾಗಿ
ವಿಶಾಲ ಹೃದಯ ಅರಳಿಮರದ ಟೊಂಗೆಯಲಿ ಒಂದಾಗಿ
ತಂಪು ಕಂಪನೀವ ಕಹಿಯಲಿ ಸಿಹಿಯಾಗಿ
ಮರುಭೂಮಿಯ ಒಂದು ಚಿಲುಮೆಯಾಗಿ
ಪರ್ವತ ಶಿಖರದಂತ್ಯದ ಚೈತನ್ಯದ ಸ್ಪೂರ್ತಿಯಾಗಿ
ಇರುವ ನಾಲ್ಕು ಗಳಿಗೆಯಲ್ಲಿ ಹುಟ್ಟುಸಾವು ಚಕ್ರದಲ್ಲಿ
ಆದರ್ಶ ನೀನಾಗು ಓ ಮನುಜ

ಶಾಂತದೂತ ಸಂದೇಶನೀವ ಬುದ್ಧ ಮೂರ್ತಿಯಾಗಿ
ಅನಂತ ಸಂದೇಶದ ಶಾಂತ ಚಿತ್ತನಾಗಿ
ಲೋಕ ಹಿತಕಾರಕನಾಗಿ
ಪ್ರಕೃತಿ ಮಡಿಲ ಸಕಲ ಜೀವ ಕಣಕಣಕೂ ದಾಸನಾಗಿ
ಬೆರೆತು ಬಾಳು ಓ ಮನುಜ.
ಬೆರೆತು ಬಾಳು ಓ ಮನುಜ.

                        -ಉಮಾಭಾತಖಂಡೆ.

2 Comments

  1. ಕವಿತೆ ಬಹಳ ಚೆನ್ನಾಗಿ ಮೂಡಿಬಂದಿದೆ.

  2. This is very nice.

Leave a Reply