ಭಾರವಾಗಿದೆ ಮನಸು?

ಭಾರವಾಗಿದೆ ಮನಸು?
ಮನಸ್ಸಿಂದು ಭಾರವಾಗಿದೆ ತಿಳಿಯೆ ಏಕೆಂದು
ಗತಿಸಿದ್ದೆಲ್ಲ ನೆನೆನೆನೆದು ಆಯ ತಪ್ಪಿದೆ ಇಂದು
ಕೂತರೆ ಕೂರಲಾಗದೆ, ನಿಂತರೆ ನಿಲ್ಲಲಾಗದೆ
ಇರದುದ ನೆನೆದು ಜಗವೆಲ್ಲ ಗಿರಿಗಿರಿ ತಿರುಗುತ್ತಿದೆ
ಬುದ್ದಿ ಭ್ರಮಣೆಯಾದಂತೆ ಮನವೆಲ್ಲೋ ಸೋತಂತೆ
ಭಾರವಾಗಿದೆ ಮನಸ್ಸು?

ಮೆಲುದನಿಯಲಿ ಯಾರೋ ಮಾತಾಡಿದಂತೆ
ಸನಿಸನಿಹವೇ ಯಾರೋ ಸುಳಿದಾಡಿದಂತೆ
ಸವಿಮಾತುಗಳೆಲ್ಲ, ಸಿಟ್ಟುಸಿಡುವುಗಳೆಲ್ಲ ನೆನಪುಗಳಾಗಿ
ಕಣ್ಮುಂದೆ ಜರಿಜರಿದು ಸಾಗುತ್ತಿವೆ ಚಿತ್ರಗಳಾಗಿ
ಮನದೊಳಗೆ ಅಡಗಿಕುಳಿತ ಪರದೆಗಳಾಗಿ
ಭಾರವಾಗಿದೆ ಮನಸ್ಸು?

ವಿಲಕ್ಷಣ ವಿಚಾರದೊಳು ಸಿಡಿಯುತ್ತಿದೆ ಶೂಲದಿ
ಅಪಚಾರವೋ ದೈವದಾಟವೋ ಅರಿಯದೆ ತಪದಿ
ಶೂನ್ಯ ಲೋಕದೊಳು ಯಾವುದು ಸತ್ಯ?
ಯಾವುದು ಮಿಥ್ಯ? ಎಂಬಿತ್ಯಾದಿ ಪ್ರಶ್ನೆಗಳು
ನುಗ್ಗುತ್ತಿವೆ ಸೀಳಿ ಎದೆಯಾಳದಿಂದ
ಭಾರವಾಗಿದೆ ಮನಸ್ಸು?

1 Comment

  1. Bahala chennagide

Leave a Reply