ಮನಸ್ಸಾಕ್ಷಿ

ಮನಸ್ಸಾಕ್ಷಿ

ಎಡ ಬಲಗಳಲಿ ದ್ವಾರಪಾಲಕರಂತೆ
ಇಹವು ಎರಡು ಮನಗಳು
ಒಂದೊಂದೂ ಭಿನ್ನ ವಿಭಿನ್ನ
ಅಂತರಂಗದಲಿರುವವು

ನಿತ್ಯ ಸತ್ಯವು ಸಹಿಸದವಮಾನವು
ಕೃತ್ರಿಮ ಕಾಯಕಕೆ ನಿರ್ಭಂಧವು
ತೋರಿಕೆಯ ಅವಗುಣಗಳ ಸಹಿಸದು
ಅದುವೇ ಮನಸ್ಸಾಕ್ಷಿ

ಸುಗುಣ ಕಾರ್ಯ ನಡೆಯುತಿರಲು
ಅಡ್ಡಿ ಮಾಡಲಿಹುದು ಒಂದು ಮನವು
ಹರಿಹಾಯಲು ಬಿಡದೇ ಹಿಡಿದಿಡುವುದು
ಅದುವೇ ಮನಸ್ಸಾಕ್ಷಿ!

ಮಾಡು ಎನ್ನುವುದೊಂದು ಮನ
ಬೇಡವೆನುವುದಿನ್ನೊಂದು ಮನ
ಹೊಯ್ದಾಟದೊಳಿರುತಿರಲು ಸರಿ
ದಾರಿ ತೋರುವುದು ಮನಸ್ಸಾಕ್ಷಿ

ನಿರ್ದಯಿಯಾದೊಡೆ ಒಪ್ಪುವುದಿಲ್ಲ
ದಯೆತೋರು ಹಳಿಯದಿರೆನುವುದು
ಅಪಹಾಸ್ಯ ಅವಮಾನಗಳಲಿ ನಿನ್ನ
ನೀ ನೋಡೆನುವುದು ಮನಸ್ಸಾಕ್ಷಿ!

ದುರಾಲೋಚನೆಯೊಳಿರುತಿರಲು
ಬೆರಳು ಮಾಡಿ ಪರರ ತೋರಿಸುತಿರಲು
ಉಳಿದ ನಾಲ್ಕು ಬೆರಳ ಕಡೆ ನಿನ್ನ
ಲಕ್ಷ್ಯವಿರಲೆಂದು ಎಚ್ಚರಿಸುವುದು ಮನಸ್ಸಾಕ್ಷಿ!

1 Comment

  1. Super madam en ಬರೀತೀರಿ.

Leave a Reply