ಮಾಯೆ

ಮಾಯೆ 

ಮನುಜನೆ ಮಾಯೆಯ ಭಯವಿರಲಿ
ಅಂತರಗದಲ್ಲದು ಅವರಿಸದಿರಲಿ
ಮಾಯೆಯ ಬೆಂಬತ್ತಿದ ಮನುಜಗೆ
ಮಾಯಾ ಜಾಲವದು ಸುತ್ತುವುದು
ಮನುಜ ಬುದ್ಧಿಯ ಬದಿಗೊತ್ತುವುದು
ಚಿತ್ತವ ಜಾಲಾಡುವುದೀ ಮಾಯೆ
ಬಿಟ್ಟು ಬಿಡದೆ ಆಮಿಷ ಬಡ್ಡಿ
ಪರೀಕ್ಷೆಯ ಮಾಡುವುದೀ ಮಾಯೆ

ತಿಮ್ಮ ನಾಯ್ಕನಿಗೆ ಒದಗಿತು
ನಿಧಿರೂಪದಿ ಧರೆಯೊಳು ಮಾಯೆ
ಧನಕನಕಗಳ ಮಾಯೆಗೆ ಸಿಲುಕದೆ
ಜಯ ಸಾಧಿಸದನನ್ದು ತಿಮ್ಮನು
ಕನಕದಾಸನೆನ್ದೆನುತಲಿ ವಿಜ್ರಂಭಿಸಿದನು.

ಜಿಪುಣ ಶೆಟ್ಟಿ ಶ್ರೀನಿವಾಸ ನಾಯ್ಕನ ದೋ
ಬಿದ್ದಿರೆ ಹಣದ ಮಾಯೆಯಲಿ
ಮರುಗಳಿಗೆಯ ಜ್ಞಾನೋದಯದಲಿ
ಮಾಯೆ ಕ್ಷಣಿಕವೆಂದೆನುತಲಿ
ಸಕಲವೂ ದಾನವ ಮಾಡಿರಲು
ಶ್ರೀನಿವಾಸ ನಾಯಕನು ಪುರಂದರನಾಗಿರಲು .

ಅಲ್ಲ ಮಂಗಾವರಿಸಿತ್ತು
ಮಾಯಾದೇವಿಯ ಪ್ರೀತಿಯ ಮಾಯೆ
ಪ್ರಭುವಿನ ಜ್ವಾಲೆಗೆ ನಿಲುಕದೆ ನಲುಗಿತು
ಸೋಲುತ ಬಾಗಿತು ಮಾಯೆ
ಗೆದ್ದ ಪ್ರಭುವಾದನು ಪರಿಪೂರ್ಣನು
ಅಲ್ಲಮ ಪ್ರಭುವೆಂದೆನಿಸಿದನು.

ಮಹಾದೇವಿಗೆ ಬೆಂಬತ್ತಿರೆ
ಕೌಶಿಕನ ಸಿರಿಯಾ ಮಾಯೆ
ಮಥಿಸಿದಳಾ ತರಂಗಿಣಿ
ಶಿಲ್ಪಿ ತಾನಾದಳು ದೇವಿ
ಕಟಿದಳು ಅರಸನ ಸುಂದರ ಶಿಲ್ಪ
ಉರಿದಳು ಕರ್ಪೂರದಂದದಿ ಗಿರಿಯಲ್ಲೆ
ಮೋಕ್ಷವ ಕಾಣುತ ಚೆನ್ನಮಲ್ಲಿಕಾರ್ಜುನನಲ್ಲೆ

ಬಸಂಗೆ ಬಿಜ್ಜಳನಲಿ ಕಾಡಿತ್ತು
ಅಧಿಕಾರವೆಂಬೋ ಮಾಯೆ
ತ್ಯಜಿಸುತ ಸಾರಿದ ತತ್ವವ ಜಗಕೆ
ಅನ್ನವನಿಕ್ಕುತ ಕರೆ ನೀಡಲು ದಾಸೋಹಕೆ
ಗೆದ್ದು ಮಾಯೆಯ ಬಸವನು
ಆದನಲ್ಲವೆ ಜಗಜ್ಯೋತಿ ಬಸವೇಶ್ವರನು

ರೂಪಗಳು ಹಲವು ಹೊತ್ತಿದ ಮಾಯೆ
ಆಕರ್ಷಕ ಚಿತ್ತಾಕರ್ಷಕ ಬಣ್ಣದ ಮಾಯೆ
ಬುದ್ಧ, ಮಹಾವೀರ, ಪರಮಹಂಸ
ಮಹಾಪುರುಷರಾದಿ ಗೆದ್ದರು ಮಾಯೆಯ
ಪಡೆದರು ಅನಂತ ಅತೀತ ಅನುಭವವ
ಬಿಸುಟರೆ ಮನುಜನು ಮಾಯೆಯ
ಚಿತ್ತವು ಪಡೆವುದು ಶಾಂತಿ ನೆಮ್ಮದಿಯ .

1 Comment

  1. ಹೆಸರೇ ಮಾಯೆ,
    ವೈಚಾರಿಕ ಶಕ್ತಿಯ ಮಾಡುವುದು ಮಾಯೆ
    ಗೆದ್ದರೆ ಮಾಯೆಯ ಇರುವುದೆ ಸ್ವಾರಸ್ಯ
    ಗೆದ್ದವರ ಹೊಗಳುವರು ಜ್ಞಾನಿಯೆಂದು
    ಮಾಯೆಯೇ ಲೇಸೆಂದು ಜನರೆಂಬರು

Leave a Reply