ಯಾತ್ರೆ?

ಯಾತ್ರೆ?

ಯಾತ್ರೆ ಸಾಗಿದೆ ಇಂದು ಯಾತ್ರೆ ಸಾಗಿದೆ
ಒಬ್ಬೊಂಟಿಯಾಗಿ ದೇಹವಿಂದು ಹೊರಟಿದೆ
ಜೀವತೆತ್ತು ಹೆತ್ತ ತಾಯಿ, ಪ್ರೀತಿ ಮಮತೆಯ ತಂದೆ
ಏಳು ಜನ್ಮದ ನಂಟೆಂದು ಬಂದ ಮಡದಿ
ವಂಶಬೆಳೆಸಲೆಂದು ಬಂದ ಮಗನು
ಯಾರು ಇಹರು ಜೊತೆಯಲಿಂದು?
ಸತ್ಯಯಾವುದು ಅರಿಯದಾದೆನು ನಾನು,
ಯಾವುದು ಮಿಥ್ಯವೆಂದು ಅರಿಯದಾದೆನು

ಬಂಧು ಬಳಗ, ಸನಿಹದವರೆಲ್ಲ
ಅಕ್ಕ ಪಕ್ಕವಿರುತಿಹರೆಲ್ಲ ನಿಂತು ನೋಡುವವರು
ಎಡ ಬಲದೊಳು ನಿಂತು ಕಣ್ಣನೀರ ಹನಿಸುತಿಹರು
ಯಾರೇ ಏನೇ ಮಾಡಿದರೂನೂ ಜೀವ ಬಾರದು
ಕೂಡಿಟ್ಟ ಗಂಟು, ನನ್ನದು, ನನ್ನವರೆಂಬ ಭ್ರಮೆಯಲಿ
ಮೋಹ ಪಾಶದಲಿ ಸುಳಿದಾಡಿ ಸಾಧಿಸಿದ ವಿಜಯಕೆ
ಜೊತೆ ನಿನಗಾವುದಿದೆ ಹೇಳು? ನಿನ್ನ ಜೊತೆಗವುದಿದೆ ಹೇಳು?
ಆತ್ಮ, ದೇಹ ತೊರೆದು ಸಾಗುತಿಹುದು ಕಳಚಿ ಬಂಧನಗಳ ಇದುವೆ ಸತ್ಯವು.

1 Comment

  1. Nice manasu adhyatma kke valta ide. Bhaktiya badge bareyiri nice thank you

Leave a Reply