ವಿಕಲಚೇತನರು

ವಿಕಲಚೇತನರು

ಅಂಧರಿವರೆಂದು ಹೆಸರಿಟ್ಟೆವು
ಹೊರಗಣ್ಣ ನೋಡಿ ಇವರ
ಅಂಧರಿವರಲ್ಲ
ಅಂತರಾಳದ ಒಳಗಣ್ಣ ತೆರೆದ
ಮಹಾನುಭಾವರು ಇವರು
ಕಣ್ಮುಚ್ಚಿ ಎರಡೇ ಹೆಜ್ಜೆಗೆ ಎಡವುವ ದುರ್ಬಲರಿವರಲ್ಲ
ಒಳಗಣ್ಣ ತೆರೆದು ಹೊರ
ಜಗತ್ತನ್ನೇ ತಿಳಿದ
ಸತ್ ಚಿತ್ತರು ಇವರು
ವಾದ್ಯ ಪ್ರವೀಣರು
ಸಂಗೀತದ ಸುರಪಾನ ಕುಡಿಸುವರು
ಬ್ರೈಲ್ ಲಿಪಿಯ ಬುದ್ಧಿವಂತರು
ನಿಷ್ಠೆ ಪ್ರಾಮಾಣಿಕತೆಯ ಪ್ರಚಂಡರು
ನಿರಂತರ ಸಾಧನೆಯ ಹಾದಿಯಲಿ
ಬೆಳೆಯುತಿಹರು ನೂರ್ಮಡಿ ಇವರು
ಹೊರಗಣ್ಣ ತೆರೆದು ಸದೃಢರಲಿ
ಚೇತನವ ತುಂಬಿ ಮೈಮನಗಳ
ರೋಮಾಂಚನಗೊಳಿಸುವ ವಿರಾಟರು
ಇವರು ವಿಕಲಚೇತನರು
ಸದಾ ಚೇತೋಹಾರಿಗಳು.

Leave a Reply