ವಿಮರ್ಷಕಿ?

ವಿಮರ್ಷಕಿ?

ನಿಂತೆ ಕದಲದೆ ಮಿಸುಕದೆ
ಕಣ್ತುಂಬಿ ಬಂತು ಕಣ್ಣಂಚಲಿ ಕಂಬನಿ
ಸುರಿಯಿತು ಸಾಲುಸಾಲು ಧಾರಾಕಾರ ಹನಿ
ಕೆಂಪು ಗಲ್ಲಗಳಿಂದುರುಳುತ ಹರಿದು
ಎದೆಯನೆಲ್ಲ ಆವರಿಸಿ ತೋಯಿಸಿತು
ಭಾರವಾಯಿತು ಮನಸ್ಸಿಂದು!

ಹಿಯಾಳಿಸಿದಳವಳು ಮರ್ಕಟತನಕೆನ್ನ
ಸಾಕು ನಿಲ್ಲಿಸು ಸೋಗು ಎಂದೆನುತ
ನರವಿಲ್ಲದ ನಾಲಿಗೆಗೆ ಲಗಾಮು ಇಡು ನಿನ್ನ
ಪರರ ನಿಂದಿಸಲು ನೀನಾರೆಂದು ನುಡಿದಳು
ಅಲ್ಪಳು ನೀನೆಂದು ಮುನಿದಳೆನ್ನೊಡನೆ
ಭಾರವಾಯಿತು ಮನಸ್ಸಿಂದು!

ಕಠೋರ ನುಡಿಗಳಲಿ ಎದುರಾಗಿ ಹಳಿದಳಿಂದು
ಘಾಸಿಗೊಳಿಸಿದಕೆ ಮನವನೊಂದು
ಸಂತೈಸುವವರಲಿ ಸಹನೆ ಇಲ್ಲದಕೆಸಂಕಷ್ಟದಲಿ ಸಲಹೆ ನೀಡಿದಕೆ
ಏಳ್ಗೆ ಬಯಸುವ ಹೃದಯಕಿಂದು
ಬೆಲೆತೆತ್ತಲಾಗದ ಗೆಳೆತನವ ದೂರಿದಕೆ ಜರಿದಳೆನ್ನ!
ಭಾರವಾಯಿತು ಮನಸ್ಸಿಂದು!

ಅಡಿಯಿಂದ ಮುಡಿವರೆಗೆ
ಚಾಟಿ ಏಟಿನ ಮಾತುಗಳಿಂದೆ
ದೂರಿದಳೆನ್ನ ದೂರಾಲೋಚನೆಗೆ
ಕ್ಷುಲ್ಲಕ ವಿಚಾರದೊಳುಮತಿಹೀನಳಾದುದಕೆ
ಅಪರಾದಕೆ ಕ್ಷಮೆಇರಲಿ ಎಂದೆನುತ ನಾಚಿಕೆಯಿಂದಲಿ
ಸರಿದಳವಳು ಕನ್ನಡಿಯ ಮುಂದಿಂದಲಿ!

1 Comment

Leave a Reply